#ಧಾರಾ_ರಾಮಾಯಣ ಪ್ರವಚನಾಮೃತದ ಹದಿಮೂರನೆಯ ದಿನ:

ಜಗತ್ತಿನಲ್ಲಿರುವ ಎಲ್ಲ ಅಸ್ತ್ರಗಳನ್ನು ರಾಮನಿಗೆ ಕೊಡಲು ಹೊರಟಿದ್ದಾರೆ ವಿಶ್ವಾಮಿತ್ರರು. ಈಗಾಗಲೇ ಸಕಲಶಾಸ್ತ್ರಪ್ರವೀಣ ಅವನು!

ರಾಮನಂಥವರ ಬಾಣ ಪ್ರಯೋಗದಿಂದ ಆ ಜೀವಕ್ಕೆ ಉತ್ಥಾನ!

ತಾಟಕೀಸಂಹಾರದಿಂದ ಆನಂದತುಲಿತರಾದ ವಿಶ್ವಾಮಿತ್ರರು ರಾಮನ ಕುರಿತು ಮುಧುರಾಕ್ಷರದ ಮಾತುಗಳನ್ನಾಡಿದರು,” ನೀ ಮಾಡಿದ‌ ಕಾರ್ಯದಿಂದ ಸಂತೋಷವಾಗಿದೆ, ಅಂತಹ ಧರ್ಮಕಾರ್ತವನ್ನು ನೀನು ಮಾಡಿರುವೆ, ಬಹುಮಾನವಾಗಿ ಎಲ್ಲ ಅಸ್ತ್ರಗಳನ್ನೂ ನೀಡುತ್ತೇನೆ. ಮತ್ತೆ ಯಾರು ನಿನ್ನೆದುರು ನಿಲ್ಲುವವರು? ದೇವತೆ, ಗಂಧರ್ವ, ಅಸುರರೆಲ್ಲರನ್ನೂ ಜಯಿಸಬಲ್ಲೆ” ಎನ್ನುತ್ತಾ ಸಕಲ ದಿವ್ಯಾಸ್ತ್ರಗಳನ್ನೂ ವಿಶ್ವಾಮಿತ್ರರು ರಾಮನಿಗೆ ಕೊಟ್ಟರು.

ಇಂದ್ರಾದಿ ದೇವತೆಗಳಲ್ಲಿಯೂ ಇಲ್ಲ, ಅಷ್ಟು ಅಸ್ತ್ರಗಳ ಸಂಗ್ರಹ! ಇವನಿಗೇಕೆ ಎಂದರೆ, ಮುಂಬರುವ ಮಹತ್ಕಾರ್ಯಗಳಿಗೆ ಇದೆಲ್ಲ ಅಸ್ತ್ರಗಳು ಬೇಕಾಗುತ್ತವೆ.

ಗಳಿಸುವುದು ಮುಖ್ಯವಲ್ಲ, ಉಳಿಸುವುದು ಮುಖ್ಯ.

ಅಸ್ತ್ರಗಳನ್ನು ಪಡೆದ ನಂತರ ಉಪಸಂಹಾರಗಳನ್ನೂ ತಿಳಿಯುವ ಬಯಕೆ ವ್ಯಕ್ತಪಡಿಸಿದ.. ರಾಮನೆಂತಹ ವಿವೇಕಿ!! ಅದಕ್ಕೆ ಸಿದ್ಧವಾಗಿದ್ದಂತೆ ವಿಶ್ವಾಮಿತ್ರರು ಎಲ್ಲ ಉಪಸಂಹಾರಗಳನ್ನು ಆತನಿಗೆ ಹೇಳಿಕೊಟ್ಟರು.

ರಾಮನಿಂದ ಕಲಿಯಬೇಕಾದ್ದೇನು?
ಮಹತ್ತೊಂದು ಸಿಕ್ಕಿದಾಗ ವಿವೇಕದಿಂದ ಇಟ್ಟುಕೊಳ್ಳಬೇಕು! ಸಂಪತ್ತು ಬಂದಾಗ ವಿಚಲಿತನಾಗಬಾರದು.

ವಿಶ್ವಾಮಿತ್ರರನ್ನು ಹಿಂಬಾಲಿಸುತ್ತಾ
ಕಾಡಿನ ದಾರಿಯಲ್ಲಿ ನಡೆದು ಸಿದ್ಧಾಶ್ರಮದತ್ತ ಆಗಮಿಸಿದರು ರಾಮ-ಲಕ್ಷ್ಮಣರು. ಆ ವಾತಾವರಣ ದೂರದಿಂದಲೇ ಹಿತವೆನಿಸಿತು ರಾಮನಿಗೆ.
ಒಂದು ಕಾಲದಲ್ಲಿ ಯುಗಯುಗಗಳ ಕಾಲ ಮಹಾವಿಷ್ಣುವೇ ತಪಸ್ಸು ಮಾಡಿದ್ದ ಪುಣ್ಯಾಶ್ರಮವಾದ
ಸಿದ್ಧಾಶ್ರಮದ ಕಥೆಯನ್ನು ವಿವರಸಿದ ವಿಶ್ವಾಮಿತ್ರರು ತಾವು ಯಜ್ಞ ಮಾಡಬೇಕಾದ ಸ್ಥಳವು ಇದೇ ಆಗಿದೆಯೆಂದು ತಿಳಿಸಿದರು.

ರಾಮ ಲಕ್ಷ್ಮಣರು ಅರೆಕ್ಷಣವೂ ವಿಶ್ರಾಂತಿ ಪಡೆಯದೆ ಕರ್ತವ್ಯಕ್ಕೆ ಅಣಿಯಾದರು. ಅವರು ದುಷ್ಟನಿಗ್ರಹ ಮಾಡಿ, ಯಜ್ಞರಕ್ಷಣೆ ನೀಡಿದ ಬಗೆ ಹೇಗೆ?

ಪ್ರವಚನವನ್ನು ಇಲ್ಲಿ ಕೇಳಿರಿ :


ಪ್ರವಚನವನ್ನು ನೋಡಲು :

Facebook Comments