“ಗೋಧೂಳಿ” 19/04/2016

ಉತ್ತರ ಪ್ರದೇಶದ ಖ್ಯಾತ ಗೋ ಕಥಾ ನಿರೂಪಕ ಫೈಜ್ ಖಾನ್ ಅವರಿಂದ “ಗೋಧೂಳಿ” ಎಂಬ ವಿಶಿಷ್ಟವಾದ ಕಾರ್ಯಕ್ರಮ ಗಿರಿನಗರದ ಶ್ರೀರಾಮಾಶ್ರಮದಲ್ಲಿ ದಿನಾಂಕ 19/04/2016(ನಾಳೆ) ಮಧ್ಯಾನ್ಹ 3.00 ಗಂಟೆಗೆ ನಡೆಯಲಿದೆ.

ಗೋವಿನ ಕುರಿತಾದ ಈ ವಿಶೇಷ ಕಾರ್ಯಕ್ರಮದಲ್ಲಿ ಗೋ ಸಂರಕ್ಷಕರಾದ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯವಹಿಸಲಿದ್ದು, ಗೋ ಕಥಾ ನಿರೂಪಕರಾದ ಫೈಜ್ ಖಾನ್ ಗೋಧೂಳಿ ಕಾರ್ಯಕ್ರಮವನ್ನು ನೆಡೆಸಿಕೊಡಲಿದ್ದಾರೆ. ಯುವ ಬ್ರೀಗೇಡಿನ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಸಂಪನ್ನವಾಗಲಿದ್ದು ಖ್ಯಾತ ಚಿಂತಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು ಉಪಸ್ಥಿತರಿರಲಿದ್ದಾರೆ.

 

 

ಕಾಲ: 19/04/2016, ಮಧ್ಯಾಹ್ನ 3.00 ಗಂಟೆಗೆ

ದೇಶ: ಶ್ರೀರಾಮಾಶ್ರಮ,ಗಿರಿನಗರ, ಬೆಂಗಳೂರು

 

 

ಬನ್ನಿ… ಗೋವಿನ ಕುರಿತಾದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಗ್ಯಶಾಲಿಗಳಾಗೋಣ…

Goudhuli - Invitation

Goudhuli – Invitation

 

Facebook Comments