ವೇದಮೂರ್ತಿ ಶ್ರೀ ಮಣಿಮುಂಡ ವಿಶ್ವೇಶ್ವರ ಶಾಸ್ತ್ರಿಗಳ ನೇತೃತ್ವದಲ್ಲಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ಆರಂಭವಾದ ಶ್ರೀ ಶಂಕರ ವಸಂತ ವೇದಪಾಠ ಶಿಬಿರದ ಸಮಾರೋಪ ಕಾರ್ಯಕ್ರಮವು 14.05.2011 ಶನಿವಾರ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಸಭಾಂಗಣದಲ್ಲಿ ಜರುಗಿತು. ಮುಜಂಗಾವು ಶ್ರೀ ಕ್ಷೇತ್ರದ ಆಡಳಿತ ಕಾರ್ಯದರ್ಶಿ ಎಂ. ಸುಬ್ರಾಯ ಭಟ್, ಕಾನ-ಮೂಡಕರೆ ಇವರು ವಿಶ್ವೇಶ್ವರ ಶಾಸ್ತ್ರಿಗಳನ್ನು ಗೌರವಿಸಿದರು. ಸಂಸ್ಕೃತ ತರಗತಿಗಳನ್ನು ನಡೆಸಿಕೊಟ್ಟ ಮಂಜೇಶ್ವರ ಶ್ರೀ ಅನಂತೇಶ್ವರ ಪ್ರೌಢಶಾಲಾ ವಿಭಾಗದ ಸಂಸ್ಕೃತ ಶಿಕ್ಷಕ ನಾರಾಯಣ ಜಿ. ಹೆಗಡೆ ಇವರನ್ನು ಸೀತಾಂಗೋಳಿ ವಲಯ ಕಾರ್ಯದರ್ಶಿ ಹೆಚ್. ಸತ್ಯಶಂಕರ ಭಟ್ ಹಿಳ್ಳೆಮನೆ ಸನ್ಮಾನಿಸಿದರು. ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಎಂ. ಶ್ಯಾಮ ಭಟ್, ದರ್ಬೆ-ಮಾರ್ಗ ಸ್ವಾಗತಿಸಿ ವಂದಿಸಿದರು.

Facebook Comments