ವಿಕೃತಿನಾಮ ಸಂವತ್ಸರದ ಚಾಂದ್ರಮಾನ ಯುಗಾದಿಯಾದ ಇಂದು ಹಾರಕೆರೆಯ ನಾರಾಯಣ ಭಟ್ ರವರ ಮನೆಯಲ್ಲಿ ಶ್ರೀಮಠದ ಶಾಸ್ತ್ರಿಗಳಿಂದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಪಂಚಾಂಗ ಶ್ರವಣ ವಿಧಿ ನೆರವೇರಿತು..
ಮಧ್ಯಾಹ್ನ ಸುಮಾರು ೧.೩೦ ಕ್ಕೆ ಶ್ರೀರಾಮಾಶ್ರಮದಿಂದ ಹೊರಟು ಶ್ರೀ ಸಂಸ್ಥಾನದವರು ಸುಮಾರು ೬.೨೫ ಕ್ಕೆ ಹಾರಕೆರೆಯ ಮೊಕ್ಕಾಂ ಸ್ಥಳಕ್ಕೆ ಆಗಮಿಸಿದರು..
ಧೂಲೀಪೂಜಾ ಸೇವೆಯನ್ನು ಸ್ವೀಕರಿಸಿದ ಶ್ರೀಗಳು ವಿಕೃತಿ ಸಂವತ್ಸರದ ಶುಭಾ-ಶುಭ ಫಲಗಳನ್ನು ಶ್ರವಣಮಾಡಿದರು..
ರಾತ್ರಿ ಮಹಿಳೆಯರಿಂದಲೇ ವಿಶೇಷವಾಗಿ ಕರ್ಣಾವಸಾನ ತಾಳಮದ್ದಲೆ ಕಾರ್ಯಕ್ರಮ ನೆರವೇರಿತು..


Facebook Comments