12-12-2009 ರ ಕಾರ್ಯಕ್ರಮಗಳು
ಪ್ರಾತಃ ಪೂಜೆ ಯನ್ನು ಪೂನೆಯ ಆನಂದ್ ಭಟ್ ರವರ ಮನೆಯಲ್ಲಿ ಪೂರೈಸಿ ಮಧ್ಯಾಹ್ನ ಪ್ರಕಾಶ್ ಭಟ್ ರವರ ನೂತನ ಫ್ಯಾಕ್ಟರಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಟ ಸುರೇಶ ಒಬೆರಾಯ್, ಟಿ ಎನ್ ಸಿಂಗ್ ಮುಂತಾದವರು ಭಾಗವಹಿಸಿದ್ದರು..ಅಲ್ಲಿಂದ ಶ್ರೀಗಳು ಪುನಃ ಪೂನಾದ ಆನಂದ್ ಭಟ್ ರವರಲ್ಲಿಗೆ ಆಗಮಿಸಿ ಪೂಜೆ ಮುಗಿಸಿ ಸಂಜೆ ಪೂನಾದ ಪ್ರತಿಷ್ಠಿತ ಆಭರಣ ಮಳಿಗೆ ರಾಂಕ ಜುವೆಲ್ಲರ್ಸ್ ಗೆ ಭೇಟಿ ನೀಡಿ ಆಶೀರ್ವದಿಸಿದರು..
ಮುಂಬಯಿಯ ಥಾನಾ ದಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿದರು..
ಮುಂಬಯಿಯಂತಹ ಮಹಾನಗರಗಳಲ್ಲಿ ಇಂತಹ ಕಾರ್ಯಕ್ರಮ ಗಳು ನಡೆದರೆ ಗ್ರಾಮಗಳಿಗೆ ಇದರ ಸಂದೇಶ ತಲುಪುವುದು ಖಂಡಿತ.
ಗೋವು ಈಗ ನಮ್ಮ ಮನೆಯಿಂದ , ನಗರದಿಂದ,ಮನದಿಂದ ದೂರವಾಗಿದೆ..
ನಾವು ಸೆವಿಸುವ ಹಾಲು ಹಾಲಾಹಲವಾಗಿದೆ..ನಾವು ಈಗ ಸೇವಿಸುತ್ತಿರುವುದು ಬಿಳಿ ವಿಷ ಎಂದು ಬೇಸರದಿಂದ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ನುಡಿದರು..
ರಾತ್ರಿ ರಾಜಲಕ್ಷ್ಮಿ ಕಾಮೇಶ್ವರ ರವರ ಮನೆಗೆ ಭೇಟಿ ನೀಡಿದ ನಂತರ ದಾಧರ್ ನ ಇಮಾಮಿ ಗೆಸ್ಟ್ ಹೌಸ್ ಗೆ ತೆರಳಿದರು..

Facebook Comments