ಪ್ರಾತಃ ಪೂಜೆಯನ್ನು ಸಿರೋಇಯಲ್ಲಿ ಪೂರೈಸಿ,
ಮಧ್ಯಾಹ್ನ ಪಾಲಿಯಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮದಲ್ಲಿ ಶ್ರೀಗಳು ದಿವ್ಯಸಾನಿಧ್ಯ ವಹಿಸಿದ್ದರು..
ಕಾರ್ಯಕ್ರಮದಲ್ಲಿ ಸ್ವಾಮೀ ಅಖಿಲೇಶಾನಂದ ಜಿ, ಶಂಕರಲಾಲ್ ಅಗರ್ವಾಲ್ ಮುಂತಾದವರು ಭಾಗವಹಿಸಿದ್ದರು..
ಅಲ್ಲಿಂದ ಅಪರಾಹ್ನ ರೋಹತ್ ನಲ್ಲಿ ಜರುಗಿದ ಯಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು..
ಸಂಜೆ ಜೋಧಪುರ ದಲ್ಲಿ ನೆರವೇರಿದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾರ್ಗದರ್ಶನ ನೀಡಿದರು..
ಶಂಕರಾಚಾರ್ಯರು ೧೬ನೇ ವರ್ಷದಲ್ಲಿಯೇ ಏಕಾಂಗಿಯಾಗಿ ಹೋರಾಟನೆಡೆಸಿದರು..
ಆಗ ಅವರೊಂದಿಗೆ ಯಾರೂ ಇರಲಿಲ್ಲ..
ಕೇವಲ ೧೬ ವರ್ಷದಲ್ಲಿ ಭಾರತವರ್ಷವನ್ನು ಬದಲಿಸಿದರು..
ಅಂದು ಶಂಕರರು ಇಲ್ಲದಿದ್ದರೆ ಇಂದು ಹಿಂದೂ ಧರ್ಮವಿರುತ್ತಿರಲಿಲ್ಲ..
ಇಂದು ಕೂಡ ಅಂತಹುದೇ ಪರಿಸ್ಥಿತಿ ಇದೆ..
ಸೂರ್ಯನಗರದ ಬಂಧುಗಳೇ,
ಪ್ರತಿದಿನ ಪ್ರತಿ ಕ್ಷಣ ಭಾರತೀಯ ಗೋ ಸಂತತಿ ನಶಿಸುತ್ತಿದೆ..
ಸರ್ಕಾರದ ಅಂಕಿ ಅಂಶಗಳೇ ಹೇಳುವ ಪ್ರಕಾರ ೨೦೧೧ ನೇ ಇಸವಿಯಲ್ಲಿ ೧೦೦೦ ಜನರಿಗೆ ೨೦ ಗೋವುಗಳು ಮಾತ್ರ ಉಳಿಯುತ್ತವೆ..
ಗೋವು ನಮ್ಮ ಜೀವನದ ಜೀವಾಳ..
ಇಂದು ಗೋವು ಸಾಯುತ್ತಿದೆ..
ಗೋವು ಭಾರತದ ಪ್ರಾಣಿಯಲ್ಲ ಭಾರತದ ಪ್ರಾಣ..
ನಾವು ಸುದರ್ಶನ್ ಜಿ ರವರನ್ನು ಮೊದಲಸಲ ಭೇಟಿಯಾದಾಗ ಒಂದು ಮಾತನ್ನು ಹೇಳಿದ್ದರು..
गई बचीतो मरेगा कौन ..गाय मारीतो बचेगा कौन ..?
ಗೋವು ಇರುವ ತನಕ ಭಾರತ ಶಿವ ವಾಗಿರುತ್ತದೆ..ಗೋವಿಲ್ಲದ ಭಾರತ “ಶವ” ವಾಗುತ್ತದೆ..
ಗೋ ಹತ್ಯೆ ಅನ್ನದ ಹತ್ಯೆ .. ಗೋ ಹತ್ಯೆಯಿಂದ ಅನ್ನ ವಿಷವಾಗುತ್ತದೆ..
ಗೋ ಹತ್ಯೆ ಗ್ರಾಮ ಹತ್ಯೆ..
ಹಲವು ಸಮಸ್ಯೆಗಳಿಗಿರುವ ಏಕೈಕ ಸಮಾಧಾನ ಗೋವು..
ಎಂದು ಜೋಧಪುರ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳು ನುಡಿದರು..

Facebook Comments Box