Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 20: ಸ್ಮರಣೆಯೊಂದೇ ಸಾಲದೇ ಭಗವಂತನ ದಿವ್ಯಮಂಗಲ ವಿಗ್ರಹ ಒಮ್ಮೆ ನಮ್ಮ ಹೃದಯದಲ್ಲಿ ಹಾದು ಹೋದರೆ ಎಂತಹ ಪರಿವರ್ತನೆಯನ್ನು ನಮ್ಮಲ್ಲಿ ತರಬಲ್ಲುದೆಂಬುದಕ್ಕೆ ರಾಮಾಯಣದ ಒಂದು… Continue Reading →
“ಕಾರಣಗುಣಗಳು ಕಾರ್ಯಗಳಲ್ಲಿ ಕಾಣಿಸಿಕೊಳ್ಳುವುದು ನಿಸರ್ಗ ನಿಯಮ”..
ನೂಲಿನ ಬಣ್ಣ ಬಟ್ಟೆಯಲ್ಲಿ, ಬೀಜದ ಗುಣ ವೃಕ್ಷದಲ್ಲಿ, ತಾಯಿಯ ಸ್ವಭಾವ ಮಕ್ಕಳಲ್ಲಿ ಸಂಕ್ರಮಿಸುವುದು ಲೋಕದಲ್ಲಿ ನಿತ್ಯದರ್ಶನದ ವಿಷಯ…
ಅಂತೆಯೇ ಕಾರಣಪುರುಷನಾದ ಸೂರ್ಯದೇವನ ಗುಣಗಳೆಲ್ಲವೂ ಸೂರ್ಯವಂಶದ ರಾಜರುಗಳಲ್ಲಿ ಸೂರ್ಯನಷ್ಟೇ ಸ್ಪಷ್ಟವಾಗಿ ಗೋಚರಿಸಿದವು..
ಸೂರ್ಯನು ದಿವಿಯ ಮಧ್ಯದಲ್ಲಿ ನಿಂತು ಭುವಿಯನ್ನು ಬೆಳಗಿದರೆ, ಸೂರ್ಯವಂಶೀಯರು ಭುವಿಯ ಮಧ್ಯದಲ್ಲಿ ನಿಂತು ಜೀವರಾಶಿಗಳ ಜೀವನವನ್ನೇ ಬೆಳಗಿದರು..!
ಸೂರ್ಯನು ಕತ್ತಲೆಯ ವೈರಿಯಾದರೆ..
ಸೂರ್ಯವಂಶೀಯರು ಕೆಡುಕಿನ ವೈರಿಗಳು..
ಬದುಕಿನ ಸಕಲ ಸಂಗತಿಗಳೂ ಮೊದಲು ಅಂತರಂಗದಲ್ಲಿ ನಿರ್ಮಾಣವಾಗುತ್ತವೆ..
ಆಮೇಲೆ ಬಹಿರಂಗದಲ್ಲಿ ಆಕಾರ ತಾಳಿ ಪ್ರಕಟಗೊಳ್ಳುತ್ತವೆ..
ಎಲ್ಲೆಡೆ ಎದ್ದು ಕಾಣುವ ತಥ್ಯವಿದು..
ಮನದಲ್ಲಿ ಮೊದಲು ಮೂಡಿದ ಭಾವಗಳಲ್ಲವೇ ಮತ್ತೆ ಮುಖದಲ್ಲಿ ಮಾತಾಗಿ ವ್ಯಕ್ತವಾಗುವುದು..!?
ಮಹಾಮಾನವರ ಮಸ್ತಿಷ್ಕದ ಮನೆಯಲ್ಲಿ ಮೂಡಿಬರುವ ಯೋಜನೆಗಳಲ್ಲವೆ,
ಮಹತ್ಕೃತಿಗಳಾಗಿ ಈ ಜಗದಲ್ಲಿ ತೋರಿ ಬರುವುದು..!?
ಕದನಗಳು ಮೊದಲಾಗುವುದು ಮನಸಿನಲ್ಲಿ ..
ಪತನಗಳು ಮೊದಲಾಗುವುದು ಮನಸಿನಲ್ಲಿ..
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.