ಲೇಖಕಿ ಶ್ರೀಮತಿ ಲಕ್ಷ್ಮೀ ಮಂಜುನಾಥ್ ಇವರು ಮೂಲತಃ ತುಮಕೂರಿನವರು. ಸಂಪ್ರದಾಯಸ್ಥ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಕುಟುಂಬಸ್ಥರು. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಗೋಸೇವಾ ಚಟುವಟಿಕೆಗಳು ಹಾಗೂ ಇತರ ಸಮಾಜ ಮುಖೀ ಕಾರ್ಯಗಳಿಂದ ಆಕರ್ಷಿತರಾಗಿ ಶ್ರೀಗಳವರ ಶಿಷ್ಯವರ್ಗಕ್ಕೆ ಸೇರಿಕೊಂಡು ಸಮಾಜಕ್ಕೆ ಸೇವೆಸಲ್ಲಿಸುತ್ತಿದ್ದಾರೆ. ತಮ್ಮ ಮನದಾಳದ ಪ್ರಶ್ನೆಗಳನ್ನು ಈ ಲೇಖನದ ಮೂಲಕ ಹೊರಹಾಕಿದ್ದಾರೆ ಲೇಖಕಿ. ಅವರ ಕುಟುಂಬಕ್ಕೆ ಶ್ರೀರಾಮಾನುಗ್ರಹವಾಗಲೆಂದು ನಮ್ಮ ಹಾರೈಕೆ.
~
ಸಂ.

ನೀವು ಸ್ವಾಮೀಜಿಯವರ ಮೇಲೆ ಮಾಡಿರುವ ಆಪಾದನೆ ನಮಗೆ ಕೇವಲ ಕಪೋಲಕಲ್ಪಿತದಂತೆ ಮತ್ತು ದ್ವೇಷದ ಪರಮಾವಧಿಯಂತೆ ತೋರುತ್ತಿದೆ.
ನಾನು ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದವಳು, ನೀವೂ ಸಹ ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದವಳೆಂದು ಹೇಳಿಕೊಂಡಿರುತ್ತೀರಿ.
ಆದರೆ ನೀವು ಹೇಳಿರುವಂತೆ ನೀವು ಯಾವ ರೀತಿ ಸಂಪ್ರದಾಯಸ್ಥ ಕುಟುಂಬದವರು ಎಂದು ನನಗೆ ಗೊಂದಲವಾಗಿದೆ.
ಏಕೆಂದರೆ ನೀವು ಮಾಡುತ್ತಿರುವ ಆಪಾದನೆಗಳು ಯಾವುದೂ ಸಹ ಸತ್ಯವಾಗಿರುವಂತೆ ತೋರುತ್ತಿಲ್ಲ.
ನಿಮಗೆ ನಿಜವಾಗಿಯೂ ಅನ್ಯಾಯವಾಗಿದ್ದರೆ ನಿಮ್ಮ ಪರವಾಗಿ ಎಲ್ಲಾ ಹೆಂಗಸರೂ ಹೋರಾಡುವಲ್ಲಿ ಅರ್ಥವಿದೆ ಹಾಗೂ ಅಗತ್ಯವಿದೆ. ಆದರೆ ನನಗೆ ಕಾಡುತ್ತಿರುವ ಪ್ರಶ್ನೆ ಎಂದರೆ ನಿಮಗೆ ನಿಜವಾಗಿಯೂ ಅನ್ಯಾಯವಾಗಿದೆಯಾ? ನೀವು ಹೇಳಿರುವುದನ್ನು ಗಮನಿಸಿದಾಗ ಸುಮಾರು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಕಾಡುತ್ತಿದೆ.
ಏಕೆಂದರೆ:-

ಲೇಖಕಿ: ಶ್ರೀಮತಿ ಲಕ್ಷ್ಮೀ ಮಂಜುನಾಥ್, ತುಮಕೂರು

ಲೇಖಕಿ: ಶ್ರೀಮತಿ ಲಕ್ಷ್ಮೀ ಮಂಜುನಾಥ್, ತುಮಕೂರು

ಅತ್ಯಾಚಾರ ಎಂದರೆ: ಯಾವುದೇ ಹೆಣ್ಣು ತನ್ನ ಸಹಮತವಿಲ್ಲದೆ ಪುರುಷರಿಂದ (ತನ್ನ ಗಂಡನಿಂದಲೂ ಸಹ) ಬಲಾತ್ಕಾರವಾಗಿಸಲ್ಪಟ್ಟರೆ ಅದು ಅತ್ಯಾಚಾರವೆನಿಸುತ್ತದೆ. ಆದರೆ ಯಾರಿಗಾದರೂ ಅತ್ಯಾಚಾರ ಆದರೆ ಒಬ್ಬರಿಂದ ಒಮ್ಮೆ ಮಾತ್ರ ಆಗಬಹುದು. ನೀವು 9೦ ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದೀನಿ ಎಂದು ಹೇಳಿಕೊಂಡ್ಡಿದ್ದೀರಿ.
9೦ ಬಾರಿ ಅತ್ಯಾಚಾರ ಎಸಗುವಾಗ ನಿಮ್ಮನ್ನು ಯಾರಿಗೂ ತಿಳಿಯದಂತೆ ಬಂಧನದಲ್ಲಿಟ್ಟಿದ್ದರಾ? ನಿಮಗೆ ಸಮಾಜದ ಹಾಗೂ ಹೊರ ಜಗತ್ತಿನ ಸಂಪರ್ಕ ಇರಲಿಲ್ಲವಾ? ಆಗ ನಮ್ಮ ದೇಶದಲ್ಲಿ ಪ್ರಧಾನ ಮಂತ್ರಿಗಳಿರಲಿಲ್ಲವೇ? ಸುಪ್ರೀಂ ಕೋರ್ಟ್ ಇರಲಿಲ್ಲವೇ?, ಮಹಿಳಾ ಸಂಘಟನೆಗಳು ಇರಲಿಲ್ಲವೇ? ರಾಷ್ಟ್ರೀಯ ಮಹಿಳಾ ಆಯೋಗ ಇರಲಿಲ್ಲವೇ?, ರಾಷ್ಟ್ರಪತಿಗಳು ಇರಲಿಲ್ಲವೇ?, ಸುದ್ದಿಪತ್ರಿಕೆಗಳು ಇರಲಿಲ್ಲವೇ? ಟಿ.ವಿ. ಮಾಧ್ಯಮಗಳು ಇರಲಿಲ್ಲವೇ? ನೀವು ಈಗ ದೂರು ನೀಡಿದಂತೆ ಆಗಲೇ ದೂರು ನೀಡಬಹುದಿತ್ತಲ್ಲವೇ?
ಸ್ವಾಮೀಜಿಯವರು ರಾಮನ ಮೇಲೆ ಆಣೆ ಹಾಕಿದ್ದರು ಎಂದಿದ್ದೀರಿ, ಒಬ್ಬ ಭಾರತೀಯ ಹಿಂದೂ ನಾರಿಗೆ ಶೀಲವೇ ಮುಖ್ಯ ಅಲ್ಲವೇ?,
ಶ್ರೀರಾಮ ಧರ್ಮ ಪಕ್ಷಪಾತಿ, ನ್ಯಾಯ ಪಕ್ಷಪಾತಿ, ಅಂತಹದ್ದರಲ್ಲಿ ರಾಮನ ಆಣೆ ಹಾಕಿದ್ದರೆ ನೀವು ನ್ಯಾಯಕ್ಕಾಗಿ ರಾಮನ ಆಣೆಯನ್ನೂ ಸಹ ಅಂದೇ ಮೀರಬಹುದಿತ್ತು ಅಲ್ಲವೇ?
ಅಂದು ಕಾಡಿದ ರಾಮನ ಆಣೆಯ ಭಯ ಇಂದು ನಿಮಗೆ ಕಾಡಲಿಲ್ಲವೇ?

ನಿಮ್ಮ ಮೇಲೆ ಮೊದಲ ಬಾರಿ ಅತ್ಯಾಚಾರ ಆದ ತಕ್ಷಣ ನೀವು ದಿಗ್ಬ್ರಾಂತರಾಗಲಿಲ್ಲವೇ?
ನಿಮ್ಮ ಮೇಲೆ ಅತ್ಯಾಚಾರವಾದಾಗ ನೀವು ಮೊದಲು ನಿಮ್ಮ ಪತಿಗೆ ತಿಳಿಸುವುದನ್ನು ಬಿಟ್ಟು, ಎಷ್ಟು ಬಾರಿ ಆಯಿತು ಎಂದು ಲೆಕ್ಕ ಇಡುತ್ತಾ ಕುಳಿತಿರೇಕೆ?
ನೀವು ರಾಮದೇವರ ಹೆಸರಿಗೆ ಹೆದರುವ ಮುಗ್ದೆ ಎನ್ನುತ್ತೀರಿ ಆದರೆ ನೀವು ಮಠದ ಸಂಪರ್ಕ ಬಿಟ್ಟು ಹೋಗಿದ್ದವರು ಮತ್ತೆ ಮಠಕ್ಕೆ ಏಕೆ ಬಂದಿರಿ? ನಿಮಗೆ ಇಷ್ಟವಿಲ್ಲದ, ನಿಮಗೆ ಅನ್ಯಾಯವಾಗುವ ಅಂತಹ ಜಾಗಕ್ಕೆ ಹೋಗುವ ಅಗತ್ಯತೆ ಏನಿತ್ತು? ನೀವು ನಿಮ್ಮ ಈ ವಿಚಾರವನ್ನು ಗಂಡನ ಬಳಿ ಮಾತ್ರ ಹೇಳಿಕೊಳ್ಳುವಂತಹ ಖಾಸಗಿ ವಿಚಾರವನ್ನು ಯಾವುದೇ ಕಾದಂಬರಿಗೆ ಕಡಿಮೆ ಇಲ್ಲದಂತೆ ಅದಕ್ಕಿಂತ ಹೀನವಾಗಿ ಇಡೀ ಪ್ರಪಂಚಕ್ಕೆ ವಿವರಿಸಿದ್ದೀರಿ, ನೀವೂ ಒಬ್ಬ ಸಂಪ್ರದಾಯಸ್ಥ ಮಹಿಳೆ?
ಇದೆಲ್ಲಾ ಕೇವಲ ಕಟ್ಟು ಕಥೆಯಂತೆ ನನಗೆ ಅನಿಸುತ್ತಿದೆ.
ಒಂದು ಪ್ರಾಣಿ ತಾನು ಒಂದು ಸ್ಥಳಕ್ಕೆ ಹೋದರೆ ಅಲ್ಲಿ ತನಗೆ ಹಿಂಸೆ, ತೊಂದರೆ ಆಗುತ್ತದೆ ಎಂದೆನಿಸಿದಾಗ ತಾನು ಅಲ್ಲಿ ಹೋಗಲು ನಿರಾಕರಿಸುತ್ತದೆ, ಅಲ್ಲಿಗೆ ಹೋಗುವುದೇ ಇಲ್ಲ.
ಆದರೆ ಮನುಷ್ಯರಾದ ವಿದ್ಯಾವಂತೆಯಾದ ನಿಮಗೆ ಹಾಗೆ ಅನಿಸಲಿಲ್ಲವೇ? ತನ್ನ ಮೇಲೆ ಅಲ್ಲಿ ಹೇಯ ಕೃತ್ಯ ನಡೆಯುತ್ತದೆ ಎಂದು ಗೊತ್ತಿದ್ದರೂ ಸಹ ಪ್ರತಿನಿತ್ಯ ರಾಮನ ಪ್ರಸಾದ ತೆಗೆದುಕೊಳ್ಳಲು ಏಕೆ ಹೋದಿರಿ?
ನೀವು ರಾಮನ ಭಕ್ತೆ ಎನ್ನುತ್ತೀರಿ ಸರಿ, ಆದರೆ ರಾಮನ ದೇವಸ್ಥಾನ ಇಡೀ ಭಾರತದಲ್ಲಿ ಅದರಲ್ಲಿಯೂ ಬೆಂಗಳೂರಿನಲ್ಲಿ ಎಲ್ಲಿಯೂ ಇರಲಿಲ್ಲವೇ? ನೀವೇ ಹೇಳಿ? ಬೇರೆ ರಾಮನ ದೇವಸ್ಥಾನಕ್ಕೆ ಹೋಗಬಹುದಿತ್ತು ಅಲ್ಲವೇ? ನೀವು ಇದೇ ರಾಮನ ಭಕ್ತೆ ಆದರೆ, ಸುಮ್ಮನೆ ರಾಮನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ, ನಮಸ್ಕಾರ ಹಾಕಿ ಮನೆಗೆ ಹೊರಡಬಹುದಿತ್ತಲ್ಲ? ಅದು ಬಿಟ್ಟು ರಾಮ ಕಥಾ ತಂಡಕ್ಕೇ ಏಕೆ ಹೋದಿರಿ?

ನೀವು ನಿಮ್ಮ ಕಪೋಲಕಲ್ಪಿತ ಕಥೆಯಲ್ಲಿ (ದೂರಿನಲ್ಲಿ) ಎಲ್ಲಾ ಪುಣ್ಯ ಕ್ಷೇತ್ರಗಳಲ್ಲೂ ನಿಮ್ಮ ಮೇಲೆ ಅತ್ಯಾಚಾರ ಆಗಿದೆ ಎಂದಿರುತ್ತೀರಿ. ನಿಮಗೆ ಈ ಹಿಂದೆ ಅತ್ಯಾಚಾರ ಆಗಿದ್ದರೂ ನೀವು ಏಕೆ ಸ್ವಾಮೀಜಿಯವರ ಜೊತೆ ಅಲ್ಲಿಗೆಲ್ಲಾ ಹೋಗಬೇಕಾಗಿತ್ತು? ಉತ್ತರ ಭಾರತ ಪ್ರವಾಸಕ್ಕೆ ಹೋದಾಗ ನಿಮ್ಮ ಅನುಕೂಲಕ್ಕೆ ಜೀನ್ಸ್ ಪ್ಯಾಂಟ್ ಹಾಕಿದ್ದೆ ಎನ್ನುತ್ತೀರಿ ಜೀನ್ಸ್ ಪ್ಯಾಂಟ್ ಇಲ್ಲದೆ ಯಾರೂ ಉತ್ತರ ಭಾರತ ಪ್ರವಾಸ ಮಾಡಲು ಸಾದ್ಯವಿಲ್ಲವೇ? ನಿಮಗಿಂತ ಚಿಕ್ಕ ವಯಸ್ಸಿನ ಸಂಪ್ರದಾಯಸ್ಥ ಕುಟುಂಬದವರು ಜೀನ್ಸ್ ತೊಡಲು ಇಷ್ಟಪಡುವುದಿಲ್ಲ, ಆದರೆ ನೀವು ಜೀನ್ಸ್ ಹಾಕಿಕೊಂಡು ಸ್ವಾಮೀಜಿಯವರ ಬಳಿ ಹೋದಿರೇಕೆ? ಸಂಪ್ರದಾಯಸ್ಥ ಕುಟುಂಬದವರು ಸ್ವಾಮೀಜಿಯವರ ಬಳಿಗೆ ಯಾವ ಉಡುಪಿನಲ್ಲಿ ಹೋಗಬೇಕೆಂಬುದು ನಿಮಗೆ ತಿಳಿದಿಲ್ಲವೇ? ಸ್ವಾಮೀಜಿಯವರು ನಿಮ್ಮನ್ನು ಕರೆದು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ನಡೆದಾಡು ಎಂದು ಹೇಳಿದರು ಎಂದು ಹೇಳಿರುತ್ತೀರಿ. ಅವರು ಹೀಗೆ ಓಡಾಡಲು ಹೇಳಿದಾಗ ನೀವು ಏಕೆ ಓಡಾಡಬೇಕಿತ್ತು? ನಿರಾಕರಿಸಿ ಹೊರಗೆ ಬರಬಹುದಾಗಿತ್ತಲ್ಲವೇ? ಆಗ ನಿಮಗೆ ಮತ್ತು ಬರಿಸುವಂತಹ ರಾಮ ಪ್ರಸಾದವನ್ನು ಕೊಟ್ಟಿರಲಿಲ್ಲ ಅಲ್ಲವೇ?
ನಿಮಗಿಂತ ಸುಂದರವಾದ ಹಾಗೂ ಚಿಕ್ಕ ವಯಸ್ಸಿನ ಎಷ್ಟೋ ಹೆಣ್ಣು ಮಕ್ಕಳು ಮಠಕ್ಕೆ ಬರುವುದನ್ನು ನಾನು ನೋಡಿದ್ದೇನೆ ಅವರಿಗೆ ಯಾರಿಗೂ ಕೊಡದ ರಾಮ ಪ್ರಸಾದವನ್ನು ನಿಮಗೊಬ್ಬರಿಗೇ ಹೇಗೆ ಕೊಡುತ್ತಾರೆ. ಸ್ವಾಮೀಜಿಗಳು ಸರಿ ಇಲ್ಲ ಎಂದು ನಿಮಗೆ ತಿಳಿದಿತ್ತಾದರೂ ನೀವು ನಿಮ್ಮ ಮಗಳನ್ನು ಕರೆದುಕೊಂದು ಸ್ವಾಮೀಜಿಯವರೊಂದಿಗೆ ಏಕೆ ಪ್ರವಾಸಕ್ಕೆ ಹೋಗಿದ್ದೀರಿ? ಅಲ್ಲಿ ಸ್ವಾಮೀಜಿಯವರು ನಿಮ್ಮ ಮಗಳಿಗೆ ರಾಮ ಪ್ರಸಾದವನ್ನು ಕೊಡಲಿಲ್ಲವೇ? ಅವಳಿಗೂ ಕೊಟ್ಟು ಅವಳ ಮೇಲೂ ಅತ್ಯಾಚಾರ ಮಾಡಬಹುದಿತ್ತಲ್ಲವೇ?

ಹೆಣ್ಣನ್ನು ಕ್ಷಮಯಾ ಧರಿತ್ರಿ, ಸಹನಾ ಶೀಲಳು ಎನ್ನುತ್ತಾರೆ ಆದರೆ ಪುರಾಣದಲ್ಲಾಗಲೀ, ಇತಿಹಾಸದಲ್ಲಾಗಲೀ ಹೆಣ್ಣಿನ ಶೀಲಕ್ಕೆ ಧಕ್ಕೆ ಬಂದಾಗ ಯಾವ ಹೆಣ್ಣೂ ಅದನ್ನು ಸಹಿಸಿಕೊಂಡಿಲ್ಲ, ಸಿಡಿದೆದ್ದಿದ್ದಾಳೆ.
ಆದರೆ ನೀವು 9೦ ಸಾರಿ ಅತ್ಯಾಚಾರ ಆದಾಗಲೂ ಸುಮ್ಮನಿದ್ದೀರಿ ಏಕೆ?. ನೀವು ಈ ಅತ್ಯಾಚಾರ ಸಹಿಸಿಕೊಂಡು ಇಷ್ಟು ದಿನ ಸುಮ್ಮನಿದ್ದದ್ದು ನೀವು ನಿಮ್ಮ ಗಂಡನಿಗೆ ದ್ರೋಹ ಮಾಡಿದಂತಾಗುವುದಿಲ್ಲವೆ?
ಅಥವಾ ಈಗ ನೀವು ಮಾಡುತ್ತಿರುವ ಸುಳ್ಳು ಆಪಾದನೆ ಸ್ವಾಮೀಜಿಯವರಿಗೆ ದ್ರೋಹ ಮಾಡಿದಂತಾಗುವುದಿಲ್ಲವೇ?
ಇವೆರಡರಲ್ಲಿ ನೀವು ನಿಜವಾಗಿ ಯಾರಿಗೆ ದ್ರೋಹ ಮಾಡಲು ಹೊರಟಿದ್ದೀರಾ?
ಶೋಷಿತ ಹಾಗೂ ಸಂತ್ರಸ್ತ ಮಹಿಳೆಯರಿಗೆ ಸರ್ಕಾರದಿಂದ ನೀಡಲಾಗುವ ಸಹಾಯ ಸವಲತ್ತುಗಳನ್ನು ನೀವು ಉಪಯೋಗಿಸಿಕೊಂಡು ಒಬ್ಬ ಶುದ್ಧ, ಸಾತ್ವಿಕ ಹಾಗೂ ಸಮಾಜದ ಏಳಿಗೆಗಾಗಿ ಮತ್ತು ಗೋವುಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ಸ್ವಾಮೀಜಿಯವರಿಗೆ ತೊಂದರೆ ಕೊಡುತ್ತಿದ್ದೀರಲ್ಲಾ, ಸರಿಯೇ?

ಇಲ್ಲಿ ನಿಜವಾಗಿಯೂ ಶೋಷಣೆಗೆ ಒಳಗಾಗಿರುವವರು ಸ್ವಾಮೀಜಿಯವರೇ ವಿನಃ ನೀವಲ್ಲ. ನಿಮ್ಮ ಆತ್ಮ ಸಾಕ್ಷಿಯನ್ನು ನೀವೇ ಒಮ್ಮೆ ಕೇಳಿಕೊಳ್ಳಿ ನೀವು ಮಾಡುತ್ತಿರುವುದು ಸರಿಯೇ ಎಂದು. ಇದೇ ನನಗೆ ಕಾಡುತ್ತಿರುವ ದೊಡ್ಡ ಪ್ರಶ್ನೆ. ಈ ರೀತಿಯ ಗೊಂದಲ ಎಷ್ಟು ಜನರನ್ನು ಕಾಡುತ್ತಿದೆಯೋ ನನಗೆ ಗೊತ್ತಿಲ್ಲ.

ಆದಷ್ಟು ಬೇಗ ಸತ್ಯಕ್ಕೆ ಜಯ ಸಿಗಲೆಂದು ನಾನು ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ.
ಸತ್ಯಮೇವ ಜಯತೇ.

Facebook Comments Box