LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ನಿಜವಾಗಿ ಶೋಷಣೆಗೆ ಒಳಗಾಗಿರುವವರು ಯಾರು?

Author: ; Published On: ಬುಧವಾರ, ಅಕ್ತೂಬರ 15th, 2014;

Switch to language: ಕನ್ನಡ | English | हिंदी         Shortlink:

ಲೇಖಕಿ ಶ್ರೀಮತಿ ಲಕ್ಷ್ಮೀ ಮಂಜುನಾಥ್ ಇವರು ಮೂಲತಃ ತುಮಕೂರಿನವರು. ಸಂಪ್ರದಾಯಸ್ಥ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಕುಟುಂಬಸ್ಥರು. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಗೋಸೇವಾ ಚಟುವಟಿಕೆಗಳು ಹಾಗೂ ಇತರ ಸಮಾಜ ಮುಖೀ ಕಾರ್ಯಗಳಿಂದ ಆಕರ್ಷಿತರಾಗಿ ಶ್ರೀಗಳವರ ಶಿಷ್ಯವರ್ಗಕ್ಕೆ ಸೇರಿಕೊಂಡು ಸಮಾಜಕ್ಕೆ ಸೇವೆಸಲ್ಲಿಸುತ್ತಿದ್ದಾರೆ. ತಮ್ಮ ಮನದಾಳದ ಪ್ರಶ್ನೆಗಳನ್ನು ಈ ಲೇಖನದ ಮೂಲಕ ಹೊರಹಾಕಿದ್ದಾರೆ ಲೇಖಕಿ. ಅವರ ಕುಟುಂಬಕ್ಕೆ ಶ್ರೀರಾಮಾನುಗ್ರಹವಾಗಲೆಂದು ನಮ್ಮ ಹಾರೈಕೆ.
~
ಸಂ.

ನೀವು ಸ್ವಾಮೀಜಿಯವರ ಮೇಲೆ ಮಾಡಿರುವ ಆಪಾದನೆ ನಮಗೆ ಕೇವಲ ಕಪೋಲಕಲ್ಪಿತದಂತೆ ಮತ್ತು ದ್ವೇಷದ ಪರಮಾವಧಿಯಂತೆ ತೋರುತ್ತಿದೆ.
ನಾನು ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದವಳು, ನೀವೂ ಸಹ ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದವಳೆಂದು ಹೇಳಿಕೊಂಡಿರುತ್ತೀರಿ.
ಆದರೆ ನೀವು ಹೇಳಿರುವಂತೆ ನೀವು ಯಾವ ರೀತಿ ಸಂಪ್ರದಾಯಸ್ಥ ಕುಟುಂಬದವರು ಎಂದು ನನಗೆ ಗೊಂದಲವಾಗಿದೆ.
ಏಕೆಂದರೆ ನೀವು ಮಾಡುತ್ತಿರುವ ಆಪಾದನೆಗಳು ಯಾವುದೂ ಸಹ ಸತ್ಯವಾಗಿರುವಂತೆ ತೋರುತ್ತಿಲ್ಲ.
ನಿಮಗೆ ನಿಜವಾಗಿಯೂ ಅನ್ಯಾಯವಾಗಿದ್ದರೆ ನಿಮ್ಮ ಪರವಾಗಿ ಎಲ್ಲಾ ಹೆಂಗಸರೂ ಹೋರಾಡುವಲ್ಲಿ ಅರ್ಥವಿದೆ ಹಾಗೂ ಅಗತ್ಯವಿದೆ. ಆದರೆ ನನಗೆ ಕಾಡುತ್ತಿರುವ ಪ್ರಶ್ನೆ ಎಂದರೆ ನಿಮಗೆ ನಿಜವಾಗಿಯೂ ಅನ್ಯಾಯವಾಗಿದೆಯಾ? ನೀವು ಹೇಳಿರುವುದನ್ನು ಗಮನಿಸಿದಾಗ ಸುಮಾರು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಕಾಡುತ್ತಿದೆ.
ಏಕೆಂದರೆ:-

ಲೇಖಕಿ: ಶ್ರೀಮತಿ ಲಕ್ಷ್ಮೀ ಮಂಜುನಾಥ್, ತುಮಕೂರು

ಲೇಖಕಿ: ಶ್ರೀಮತಿ ಲಕ್ಷ್ಮೀ ಮಂಜುನಾಥ್, ತುಮಕೂರು

ಅತ್ಯಾಚಾರ ಎಂದರೆ: ಯಾವುದೇ ಹೆಣ್ಣು ತನ್ನ ಸಹಮತವಿಲ್ಲದೆ ಪುರುಷರಿಂದ (ತನ್ನ ಗಂಡನಿಂದಲೂ ಸಹ) ಬಲಾತ್ಕಾರವಾಗಿಸಲ್ಪಟ್ಟರೆ ಅದು ಅತ್ಯಾಚಾರವೆನಿಸುತ್ತದೆ. ಆದರೆ ಯಾರಿಗಾದರೂ ಅತ್ಯಾಚಾರ ಆದರೆ ಒಬ್ಬರಿಂದ ಒಮ್ಮೆ ಮಾತ್ರ ಆಗಬಹುದು. ನೀವು 9೦ ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದೀನಿ ಎಂದು ಹೇಳಿಕೊಂಡ್ಡಿದ್ದೀರಿ.
9೦ ಬಾರಿ ಅತ್ಯಾಚಾರ ಎಸಗುವಾಗ ನಿಮ್ಮನ್ನು ಯಾರಿಗೂ ತಿಳಿಯದಂತೆ ಬಂಧನದಲ್ಲಿಟ್ಟಿದ್ದರಾ? ನಿಮಗೆ ಸಮಾಜದ ಹಾಗೂ ಹೊರ ಜಗತ್ತಿನ ಸಂಪರ್ಕ ಇರಲಿಲ್ಲವಾ? ಆಗ ನಮ್ಮ ದೇಶದಲ್ಲಿ ಪ್ರಧಾನ ಮಂತ್ರಿಗಳಿರಲಿಲ್ಲವೇ? ಸುಪ್ರೀಂ ಕೋರ್ಟ್ ಇರಲಿಲ್ಲವೇ?, ಮಹಿಳಾ ಸಂಘಟನೆಗಳು ಇರಲಿಲ್ಲವೇ? ರಾಷ್ಟ್ರೀಯ ಮಹಿಳಾ ಆಯೋಗ ಇರಲಿಲ್ಲವೇ?, ರಾಷ್ಟ್ರಪತಿಗಳು ಇರಲಿಲ್ಲವೇ?, ಸುದ್ದಿಪತ್ರಿಕೆಗಳು ಇರಲಿಲ್ಲವೇ? ಟಿ.ವಿ. ಮಾಧ್ಯಮಗಳು ಇರಲಿಲ್ಲವೇ? ನೀವು ಈಗ ದೂರು ನೀಡಿದಂತೆ ಆಗಲೇ ದೂರು ನೀಡಬಹುದಿತ್ತಲ್ಲವೇ?
ಸ್ವಾಮೀಜಿಯವರು ರಾಮನ ಮೇಲೆ ಆಣೆ ಹಾಕಿದ್ದರು ಎಂದಿದ್ದೀರಿ, ಒಬ್ಬ ಭಾರತೀಯ ಹಿಂದೂ ನಾರಿಗೆ ಶೀಲವೇ ಮುಖ್ಯ ಅಲ್ಲವೇ?,
ಶ್ರೀರಾಮ ಧರ್ಮ ಪಕ್ಷಪಾತಿ, ನ್ಯಾಯ ಪಕ್ಷಪಾತಿ, ಅಂತಹದ್ದರಲ್ಲಿ ರಾಮನ ಆಣೆ ಹಾಕಿದ್ದರೆ ನೀವು ನ್ಯಾಯಕ್ಕಾಗಿ ರಾಮನ ಆಣೆಯನ್ನೂ ಸಹ ಅಂದೇ ಮೀರಬಹುದಿತ್ತು ಅಲ್ಲವೇ?
ಅಂದು ಕಾಡಿದ ರಾಮನ ಆಣೆಯ ಭಯ ಇಂದು ನಿಮಗೆ ಕಾಡಲಿಲ್ಲವೇ?

ನಿಮ್ಮ ಮೇಲೆ ಮೊದಲ ಬಾರಿ ಅತ್ಯಾಚಾರ ಆದ ತಕ್ಷಣ ನೀವು ದಿಗ್ಬ್ರಾಂತರಾಗಲಿಲ್ಲವೇ?
ನಿಮ್ಮ ಮೇಲೆ ಅತ್ಯಾಚಾರವಾದಾಗ ನೀವು ಮೊದಲು ನಿಮ್ಮ ಪತಿಗೆ ತಿಳಿಸುವುದನ್ನು ಬಿಟ್ಟು, ಎಷ್ಟು ಬಾರಿ ಆಯಿತು ಎಂದು ಲೆಕ್ಕ ಇಡುತ್ತಾ ಕುಳಿತಿರೇಕೆ?
ನೀವು ರಾಮದೇವರ ಹೆಸರಿಗೆ ಹೆದರುವ ಮುಗ್ದೆ ಎನ್ನುತ್ತೀರಿ ಆದರೆ ನೀವು ಮಠದ ಸಂಪರ್ಕ ಬಿಟ್ಟು ಹೋಗಿದ್ದವರು ಮತ್ತೆ ಮಠಕ್ಕೆ ಏಕೆ ಬಂದಿರಿ? ನಿಮಗೆ ಇಷ್ಟವಿಲ್ಲದ, ನಿಮಗೆ ಅನ್ಯಾಯವಾಗುವ ಅಂತಹ ಜಾಗಕ್ಕೆ ಹೋಗುವ ಅಗತ್ಯತೆ ಏನಿತ್ತು? ನೀವು ನಿಮ್ಮ ಈ ವಿಚಾರವನ್ನು ಗಂಡನ ಬಳಿ ಮಾತ್ರ ಹೇಳಿಕೊಳ್ಳುವಂತಹ ಖಾಸಗಿ ವಿಚಾರವನ್ನು ಯಾವುದೇ ಕಾದಂಬರಿಗೆ ಕಡಿಮೆ ಇಲ್ಲದಂತೆ ಅದಕ್ಕಿಂತ ಹೀನವಾಗಿ ಇಡೀ ಪ್ರಪಂಚಕ್ಕೆ ವಿವರಿಸಿದ್ದೀರಿ, ನೀವೂ ಒಬ್ಬ ಸಂಪ್ರದಾಯಸ್ಥ ಮಹಿಳೆ?
ಇದೆಲ್ಲಾ ಕೇವಲ ಕಟ್ಟು ಕಥೆಯಂತೆ ನನಗೆ ಅನಿಸುತ್ತಿದೆ.
ಒಂದು ಪ್ರಾಣಿ ತಾನು ಒಂದು ಸ್ಥಳಕ್ಕೆ ಹೋದರೆ ಅಲ್ಲಿ ತನಗೆ ಹಿಂಸೆ, ತೊಂದರೆ ಆಗುತ್ತದೆ ಎಂದೆನಿಸಿದಾಗ ತಾನು ಅಲ್ಲಿ ಹೋಗಲು ನಿರಾಕರಿಸುತ್ತದೆ, ಅಲ್ಲಿಗೆ ಹೋಗುವುದೇ ಇಲ್ಲ.
ಆದರೆ ಮನುಷ್ಯರಾದ ವಿದ್ಯಾವಂತೆಯಾದ ನಿಮಗೆ ಹಾಗೆ ಅನಿಸಲಿಲ್ಲವೇ? ತನ್ನ ಮೇಲೆ ಅಲ್ಲಿ ಹೇಯ ಕೃತ್ಯ ನಡೆಯುತ್ತದೆ ಎಂದು ಗೊತ್ತಿದ್ದರೂ ಸಹ ಪ್ರತಿನಿತ್ಯ ರಾಮನ ಪ್ರಸಾದ ತೆಗೆದುಕೊಳ್ಳಲು ಏಕೆ ಹೋದಿರಿ?
ನೀವು ರಾಮನ ಭಕ್ತೆ ಎನ್ನುತ್ತೀರಿ ಸರಿ, ಆದರೆ ರಾಮನ ದೇವಸ್ಥಾನ ಇಡೀ ಭಾರತದಲ್ಲಿ ಅದರಲ್ಲಿಯೂ ಬೆಂಗಳೂರಿನಲ್ಲಿ ಎಲ್ಲಿಯೂ ಇರಲಿಲ್ಲವೇ? ನೀವೇ ಹೇಳಿ? ಬೇರೆ ರಾಮನ ದೇವಸ್ಥಾನಕ್ಕೆ ಹೋಗಬಹುದಿತ್ತು ಅಲ್ಲವೇ? ನೀವು ಇದೇ ರಾಮನ ಭಕ್ತೆ ಆದರೆ, ಸುಮ್ಮನೆ ರಾಮನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ, ನಮಸ್ಕಾರ ಹಾಕಿ ಮನೆಗೆ ಹೊರಡಬಹುದಿತ್ತಲ್ಲ? ಅದು ಬಿಟ್ಟು ರಾಮ ಕಥಾ ತಂಡಕ್ಕೇ ಏಕೆ ಹೋದಿರಿ?

ನೀವು ನಿಮ್ಮ ಕಪೋಲಕಲ್ಪಿತ ಕಥೆಯಲ್ಲಿ (ದೂರಿನಲ್ಲಿ) ಎಲ್ಲಾ ಪುಣ್ಯ ಕ್ಷೇತ್ರಗಳಲ್ಲೂ ನಿಮ್ಮ ಮೇಲೆ ಅತ್ಯಾಚಾರ ಆಗಿದೆ ಎಂದಿರುತ್ತೀರಿ. ನಿಮಗೆ ಈ ಹಿಂದೆ ಅತ್ಯಾಚಾರ ಆಗಿದ್ದರೂ ನೀವು ಏಕೆ ಸ್ವಾಮೀಜಿಯವರ ಜೊತೆ ಅಲ್ಲಿಗೆಲ್ಲಾ ಹೋಗಬೇಕಾಗಿತ್ತು? ಉತ್ತರ ಭಾರತ ಪ್ರವಾಸಕ್ಕೆ ಹೋದಾಗ ನಿಮ್ಮ ಅನುಕೂಲಕ್ಕೆ ಜೀನ್ಸ್ ಪ್ಯಾಂಟ್ ಹಾಕಿದ್ದೆ ಎನ್ನುತ್ತೀರಿ ಜೀನ್ಸ್ ಪ್ಯಾಂಟ್ ಇಲ್ಲದೆ ಯಾರೂ ಉತ್ತರ ಭಾರತ ಪ್ರವಾಸ ಮಾಡಲು ಸಾದ್ಯವಿಲ್ಲವೇ? ನಿಮಗಿಂತ ಚಿಕ್ಕ ವಯಸ್ಸಿನ ಸಂಪ್ರದಾಯಸ್ಥ ಕುಟುಂಬದವರು ಜೀನ್ಸ್ ತೊಡಲು ಇಷ್ಟಪಡುವುದಿಲ್ಲ, ಆದರೆ ನೀವು ಜೀನ್ಸ್ ಹಾಕಿಕೊಂಡು ಸ್ವಾಮೀಜಿಯವರ ಬಳಿ ಹೋದಿರೇಕೆ? ಸಂಪ್ರದಾಯಸ್ಥ ಕುಟುಂಬದವರು ಸ್ವಾಮೀಜಿಯವರ ಬಳಿಗೆ ಯಾವ ಉಡುಪಿನಲ್ಲಿ ಹೋಗಬೇಕೆಂಬುದು ನಿಮಗೆ ತಿಳಿದಿಲ್ಲವೇ? ಸ್ವಾಮೀಜಿಯವರು ನಿಮ್ಮನ್ನು ಕರೆದು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ನಡೆದಾಡು ಎಂದು ಹೇಳಿದರು ಎಂದು ಹೇಳಿರುತ್ತೀರಿ. ಅವರು ಹೀಗೆ ಓಡಾಡಲು ಹೇಳಿದಾಗ ನೀವು ಏಕೆ ಓಡಾಡಬೇಕಿತ್ತು? ನಿರಾಕರಿಸಿ ಹೊರಗೆ ಬರಬಹುದಾಗಿತ್ತಲ್ಲವೇ? ಆಗ ನಿಮಗೆ ಮತ್ತು ಬರಿಸುವಂತಹ ರಾಮ ಪ್ರಸಾದವನ್ನು ಕೊಟ್ಟಿರಲಿಲ್ಲ ಅಲ್ಲವೇ?
ನಿಮಗಿಂತ ಸುಂದರವಾದ ಹಾಗೂ ಚಿಕ್ಕ ವಯಸ್ಸಿನ ಎಷ್ಟೋ ಹೆಣ್ಣು ಮಕ್ಕಳು ಮಠಕ್ಕೆ ಬರುವುದನ್ನು ನಾನು ನೋಡಿದ್ದೇನೆ ಅವರಿಗೆ ಯಾರಿಗೂ ಕೊಡದ ರಾಮ ಪ್ರಸಾದವನ್ನು ನಿಮಗೊಬ್ಬರಿಗೇ ಹೇಗೆ ಕೊಡುತ್ತಾರೆ. ಸ್ವಾಮೀಜಿಗಳು ಸರಿ ಇಲ್ಲ ಎಂದು ನಿಮಗೆ ತಿಳಿದಿತ್ತಾದರೂ ನೀವು ನಿಮ್ಮ ಮಗಳನ್ನು ಕರೆದುಕೊಂದು ಸ್ವಾಮೀಜಿಯವರೊಂದಿಗೆ ಏಕೆ ಪ್ರವಾಸಕ್ಕೆ ಹೋಗಿದ್ದೀರಿ? ಅಲ್ಲಿ ಸ್ವಾಮೀಜಿಯವರು ನಿಮ್ಮ ಮಗಳಿಗೆ ರಾಮ ಪ್ರಸಾದವನ್ನು ಕೊಡಲಿಲ್ಲವೇ? ಅವಳಿಗೂ ಕೊಟ್ಟು ಅವಳ ಮೇಲೂ ಅತ್ಯಾಚಾರ ಮಾಡಬಹುದಿತ್ತಲ್ಲವೇ?

ಹೆಣ್ಣನ್ನು ಕ್ಷಮಯಾ ಧರಿತ್ರಿ, ಸಹನಾ ಶೀಲಳು ಎನ್ನುತ್ತಾರೆ ಆದರೆ ಪುರಾಣದಲ್ಲಾಗಲೀ, ಇತಿಹಾಸದಲ್ಲಾಗಲೀ ಹೆಣ್ಣಿನ ಶೀಲಕ್ಕೆ ಧಕ್ಕೆ ಬಂದಾಗ ಯಾವ ಹೆಣ್ಣೂ ಅದನ್ನು ಸಹಿಸಿಕೊಂಡಿಲ್ಲ, ಸಿಡಿದೆದ್ದಿದ್ದಾಳೆ.
ಆದರೆ ನೀವು 9೦ ಸಾರಿ ಅತ್ಯಾಚಾರ ಆದಾಗಲೂ ಸುಮ್ಮನಿದ್ದೀರಿ ಏಕೆ?. ನೀವು ಈ ಅತ್ಯಾಚಾರ ಸಹಿಸಿಕೊಂಡು ಇಷ್ಟು ದಿನ ಸುಮ್ಮನಿದ್ದದ್ದು ನೀವು ನಿಮ್ಮ ಗಂಡನಿಗೆ ದ್ರೋಹ ಮಾಡಿದಂತಾಗುವುದಿಲ್ಲವೆ?
ಅಥವಾ ಈಗ ನೀವು ಮಾಡುತ್ತಿರುವ ಸುಳ್ಳು ಆಪಾದನೆ ಸ್ವಾಮೀಜಿಯವರಿಗೆ ದ್ರೋಹ ಮಾಡಿದಂತಾಗುವುದಿಲ್ಲವೇ?
ಇವೆರಡರಲ್ಲಿ ನೀವು ನಿಜವಾಗಿ ಯಾರಿಗೆ ದ್ರೋಹ ಮಾಡಲು ಹೊರಟಿದ್ದೀರಾ?
ಶೋಷಿತ ಹಾಗೂ ಸಂತ್ರಸ್ತ ಮಹಿಳೆಯರಿಗೆ ಸರ್ಕಾರದಿಂದ ನೀಡಲಾಗುವ ಸಹಾಯ ಸವಲತ್ತುಗಳನ್ನು ನೀವು ಉಪಯೋಗಿಸಿಕೊಂಡು ಒಬ್ಬ ಶುದ್ಧ, ಸಾತ್ವಿಕ ಹಾಗೂ ಸಮಾಜದ ಏಳಿಗೆಗಾಗಿ ಮತ್ತು ಗೋವುಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ಸ್ವಾಮೀಜಿಯವರಿಗೆ ತೊಂದರೆ ಕೊಡುತ್ತಿದ್ದೀರಲ್ಲಾ, ಸರಿಯೇ?

ಇಲ್ಲಿ ನಿಜವಾಗಿಯೂ ಶೋಷಣೆಗೆ ಒಳಗಾಗಿರುವವರು ಸ್ವಾಮೀಜಿಯವರೇ ವಿನಃ ನೀವಲ್ಲ. ನಿಮ್ಮ ಆತ್ಮ ಸಾಕ್ಷಿಯನ್ನು ನೀವೇ ಒಮ್ಮೆ ಕೇಳಿಕೊಳ್ಳಿ ನೀವು ಮಾಡುತ್ತಿರುವುದು ಸರಿಯೇ ಎಂದು. ಇದೇ ನನಗೆ ಕಾಡುತ್ತಿರುವ ದೊಡ್ಡ ಪ್ರಶ್ನೆ. ಈ ರೀತಿಯ ಗೊಂದಲ ಎಷ್ಟು ಜನರನ್ನು ಕಾಡುತ್ತಿದೆಯೋ ನನಗೆ ಗೊತ್ತಿಲ್ಲ.

ಆದಷ್ಟು ಬೇಗ ಸತ್ಯಕ್ಕೆ ಜಯ ಸಿಗಲೆಂದು ನಾನು ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ.
ಸತ್ಯಮೇವ ಜಯತೇ.

64 Responses to ನಿಜವಾಗಿ ಶೋಷಣೆಗೆ ಒಳಗಾಗಿರುವವರು ಯಾರು?

 1. veena

  ಸತ್ಯ ಸತ್ಯ! ನಮ್ಮ ಮನದ ಭಾವನೆಗಳು ನಿಮ್ಮ ಅಕ್ಷರಗಳಲ್ಲಿ ತುಂಬಾ ಸುಂದರವಾಗಿ ಮನದಟ್ಟುವಂತೆ ಬರೆದಿದ್ದೀರಿ. ಅಯ್ಯೋ! ನಮ್ಮ ಮಾಧ್ಯಮಗಳಿಗೆ, ಇನ್ನು ಕೆಲವು ಕುಬುದ್ಧಿ ಜೀವಿಗಳಿಗಿದು ಅರ್ಥವಾಗದೇ ಹೋಯಿತಲ್ಲ!

  [Reply]

  LakshmiManjunath Reply:

  ಧನ್ಯವಾದಗಳು,.
  ಹರೇರಾಮ

  [Reply]

 2. Ramakrishna T. Hegde

  ಲೇಖಕಿ ಶ್ರೀಮತಿ ಲಕ್ಷ್ಮೀ ಮಂಜುನಾಥ್ ಹೇಳಿರುವುದು ತುಂಬಾ ಸಮಂಜಸವಾಗಿದೆ. ದೂರು ನೀಡಿರುವವರ ಕಪೋಲಕಲ್ಪಿತ ಕಥೆಯಲ್ಲಿ ಏನು ಹುರುಳಿಲ್ಲವೆಂದು ಎಲ್ಲರಿಗೂ ಗೊತ್ತಾಗುತ್ತದೆ. ತುಂಬಾ ದುಃಖದ ಸಂಗತಿ ಎನೆದಂದರೆ ನಮ್ಮೆಲ್ಲರ ಅತಿ ನೆಚ್ಚಿನ ಪ್ರೀತಿಯ ನಿರಪರಾದಿಯಾದ ಶ್ರೀ ಶ್ರೀ ಸ್ವಾಮೀಜಿಯವರನ್ನು ಅಪರಾದಿ ಎಂದು ಪರಿಗಣಿಸಿ ತನಿಕೆ ಮಾಡುವದನ್ನು ನೋಡಿದರೆ ಸಂಕಟ ವಾಗುತ್ತದೆ. ಶ್ರೀ ರಾಮನ ಮತ್ತು ಚಂದ್ರಮೌಳೇಶ್ವರನ ಕ್ರಪೆ ನಮ್ಮ ಸ್ವಾಮಜಿಯವರನ್ನು ಖಂಡಿತ ಕಾಪಾಡುತ್ತದೆ. ಸತ್ಯ ಹರಿಶ್ಚ೦ಚಂದ್ರನನ್ನು ನೆನಪಿಸಿಕೊಳ್ಳಿ. ಯಾವಾಗಲು ಸತ್ಯಕ್ಕೆ ಜಯ.

  [Reply]

  LakshmiManjunath Reply:

  ಧನ್ಯವಾದಗಳು,.
  ಹರೇರಾಮ

  [Reply]

 3. Vanitha Hegde

  ನಮಗೆಲ್ಲಾ ಗೊತ್ತು ನಮ್ಮ ಶ್ರೀ ಶ್ರೀ ಸ್ವಾಮಿಜಿಯವರು ನಿರಪರಾದಿಎಂದು. ತನಿಖೆಯಿಂದ ಇಡಿ ಜಗತ್ತಿಗೆ ನಮ್ಮ ಶ್ರೀ ಶ್ರೀ ಸ್ವಾಮಿಜಿಯರವರು ನಿರಪರಾದಿ ಎಂದು ಗೊತ್ತಾಗಲಿ ಎಂದು ಶ್ರೀ ರಾಮನಲ್ಲಿ ಬೇಡಿಕೊಳ್ಳುತ್ತೇನೆ. ಸತ್ಯಕ್ಕೆ ಜಯ. ಸತ್ಯಮೇವ ಜಯತೆ.

  [Reply]

  LakshmiManjunath Reply:

  ಧನ್ಯವಾದಗಳು,.
  ಹರೇರಾಮ

  [Reply]

 4. Ganapathi Hegde, Dharwad

  I feel Sister Lakshmi Manjunath’s this open letter to ‘her’ who has made false allegations against our Samsthan should have come little earlier to avoid the confusions being created by some hostile Medias. This open letter contains legal aspect, psychological aspect, religious aspect and social aspect. Her presentations are very logical and convincing. She has also revealed some new facts about that ‘woman’ who has made false allegations. I appreciate and compliment Smt. Lakshmi Manjunath, Tumkur for her effort to remove the confusions in the minds of some of the general public, about our Samsthan. Hare Raama !

  [Reply]

 5. Anjali Bhat

  Harerama
  Shrimati Laxmi Manjunath avare tumba dhanyavadagalu. Chennagi barediddira. Inta prashnegalu namma nimmantavarige (samanya janaru) kadide andamele mahila ayoga hagu CID police adhikarigaligu kadirabahudallave? Adaru innu yake satya horabaruttilla. Innu Namma Gurugalige yake himse? Idondu shudda Blackmail. Court bega parisheelisi namma Gurugalige bega nyaya vadagisi kodali.

  [Reply]

  LakshmiManjunath Reply:

  ಧನ್ಯವಾದಗಳು,.
  ಹರೇರಾಮ

  [Reply]

 6. Shridevi Sabhahit, Ambica Bhat

  Harerama…….
  Shrigalalli nannadondu vinanti. Tavu Ramana poojege bhanga baradante tanna vicharane nadeyali endu heliddiri. Tamage Ramana pooje hege mukhyavo hage namagella tavu, tamma arogya ashte mukhya. Higagi tavu e sullu aropada saluvagi, ahara nidre ella bidabaradu. Tamma arogyavannu kapadikollabeku. Tavu tumba upavasa madutiddiri endu kelibandu namagella tumba novuntagide. Tavu chennagiruvudu namage mukhya. Namma Rama upavasaviruvaga navella uta madidare namagella papa tattuvudallave? Tamma bhaktara aaseyannu neraverisikoduvirendu nambiruttene.
  Harerama…..

  [Reply]

 7. Geetha Manjappa

  ನಮ್ಮೆಲ್ಲರ ಭಾವನೆಗಳನ್ನೂ ನೀವು ವ್ಯಕ್ತಪಡಿಸಿದ್ದೀರಿ ..
  ಧನ್ಯವಾದಗಳು.

  [Reply]

 8. bhagyashri hegde

  plz. publish this news in all papers…….

  [Reply]

 9. k shridhara bhat

  SATHYAMEVA JAYATHE

  [Reply]

 10. Aruna K.S.Bhat

  || ಹರೇ ರಾಮ ||
  ಶ್ರೀಮತಿ ಲಕ್ಷ್ಮಿಯವರೆ, ನೀವು ನನಗೆ ಅಕ್ಕನೋ ತಂಗಿಯೋ ಗೊತ್ತಿಲ್ಲ. ಆದರೆ ಒಂದು ಮಾತ್ರ ನಿಜ. ನನ್ನ ಹಾಗೂ ಇತರರ ಮನದ ಭಾವನೆ, ಅನಿಸಿಕೆಗಳನ್ನು ನೀವು ಸ್ಪಷ್ಟವಾಗಿ ಹೊರಹಾಕಿದ್ದೀರಿ. ಧನ್ಯವಾದಗಳು. ಆದರೆ, ಒಂದೇ ಒಂದು ಆಶ್ಚರ್ಯ ಎಂದರೆ ಈ ಮಹಿಳಾ ಆಯೋಗಗಳಿಗೆ, ತನಿಖಾ ತಂಡಕ್ಕೆ, ಸರ್ಕಾರಕ್ಕೆ ಈ ಸತ್ಯ ಯಾಕೆ ಗೋಚರಿಸಲಿಲ್ಲ. ಈ ಹುರುಳಿಲ್ಲದ ಕಥೆಗೆ ಯಾಕೆ ಇಷ್ಟು ಖರ್ಚು ಮಾಡುತ್ತಾರೋ? ಒಟ್ಟಿನಲ್ಲಿ, ನಮ್ಮ ನೆಚ್ಚಿನ ಶ್ರೀ ಶ್ರೀಗಳಿಗೆ ತೊಂದರೆ ಕೊಡುವುದು ನೋಡಿದರೆ ತುಂಬಾ ಸಂಟಕವಾಗುತ್ತಿದೆ. ಇದು ಸತ್ಯದ ಧರ್ಮದ ದಮನದ ಪ್ರಯತ್ನವೇ ಎಂದೆನಿಸುತ್ತದೆ. ಶ್ರೀರಾಮನ ದಯದಿಂದ ಶ್ರೀ ಗುರುಗಳ ವಿರುದ್ಧದ ಆರೋಪವು ಕರಗಿ ಹೋಗಿ ನಾವೆಲ್ಲಾ ನಿರಾಳರಾಗುವ ದಿನವು ಬೇಗನೇ ಬರಲಿ ಎಂದು ಆ ಭಗವಂತನಲ್ಲಿ ನನ್ನ ನಿವೇದನೆ.

  [Reply]

 11. ಸ್ಮಿತಾ ಹೆಗಡೆ

  ಹರೇರಾಮ

  ನಾವೆಂದು ಶ್ರೀ ಸಂಸ್ಥಾನದ ಜೋತೆ

  ಸುಳಿನ ಕಂತೆಯನ್ನು ಸಾವಿರ ಪುಟಗಳಲ್ಲಿ ಬರೆದರು
  ಸತ್ಯ. ಸತ್ಯವೇ……
  ನಮ್ಮ ಭಾವನೆಗಳನ್ನು ಎಂದೆಂದೂ ಅಳಿಸಲಾರದು….

  [Reply]

 12. varenya

  she can’t answer…

  [Reply]

 13. Shrikant Hegde Raja Rajeshwir Nagar, Bangalore

  Hare Raama!

  Yes, these are right set of questions that arose in every human mind that can think logically! Any one who has a little bit of common sense can see where the TRUTH is!
  Swamiji is like a mother to all of us! No one believes or even can imagine all these cock and bull stories / allegations against HIS HOLINESS!

  ಆದಷ್ಟು ಬೇಗ ಸತ್ಯಕ್ಕೆ ಜಯ ಸಿಗಲೆಂದು ನಾನು ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ.
  ಸತ್ಯಮೇವ ಜಯತೇ
  Hare Raama

  [Reply]

 14. Sandesha Talakalakoppa

  ಹರೇರಾಮ,

  ನಿಜ, ಶೋಷಣೆ ಆಗುತ್ತಿರುವುದು ನಮ್ಮ ಪ್ರೀತಿಯ ಸಂಸ್ಥಾನದವರ ಮೇಲೆ ಹಾಗೂ ಭಕ್ತರ ಭಾವನೆಗಳಮೇಲೆ.

  ನಿಜಕ್ಕೂ ಇದು ಗುರುವಿನ ಕರುಣೆ ಹಾಗೂ ಶಿಷ್ಯರ ಭಾವನೆಗಳ ಮೇಲಿನ ಅತ್ಯಾಚಾರ.

  [Reply]

 15. Nagaratna Bhat

  Namma Rama Gurugalu. Avaru namage beku. Enadaru agali satya bega hora bandu namma Gurugalu e caseninida mukthavagali. Harerama….

  [Reply]

 16. Subramanya

  very true ….we are always with you samsthaana

  [Reply]

 17. ಸ್ಮಿತಾ ಹೆಗಡೆ

  ಹರೇರಾಮ

  ನಾವೆಂದು ಶ್ರೀ ಸಂಸ್ಥಾನದ ಜೊತೆ

  ಸುಳ್ಳಿನ ಕಂತೆಯನ್ನು ಸಾವಿರ ಪುಟಗಳಲ್ಲಿ ಬರೆದರೂ

  ಸತ್ಯ ಸುಳ್ಳಾಗದು

  ಸತ್ಯ. ಸತ್ಯವೆ

  [Reply]

 18. prakash bhat

  namma samajavannu odeyabekitthu adu aagtha ide. aste bekagiddu janarige. ee prakarana shudda sullu ennuvudu ellarigu gotthide, aadaru namma peetakke ondu ketta hesaru tharuva praythna.

  [Reply]

 19. Pratima Bhat

  ನಮ್ಮೆಲ್ಲರದ್ದು ಇದೇ ಅನಿಸಿಕೆಯಾಗಿದೆ.

  [Reply]

 20. H.S.Prema

  ನಿಮ್ಮ ವಿಶ್ಲೇಷಣೆ ಒಪ್ಪುವಂತಿದೆ

  [Reply]

 21. shobha

  ಅಕ್ಕಾ..ನಮ್ಮೆಲರ ಭಾವನೆಗಳನ್ನೂ ಪ್ರಶ್ಣೆಗಳನ್ನೂ ನೀವು ಸುಂದರವಾಗಿ ಬರೆದಿದ್ದೀರಿ..ಧನ್ಯವಾದಗಳು..
  ಗಮನಿದ್ದೀರಾ? ಇಷ್ಟೆಲ್ಲಾ ಆರೋಪ ಹೊರಿಸಿ,,ತಾನೆಲ್ಲಾ ಕಳಕೊಂಡೆ..ಅನ್ಯಾಯ ಆಗಿದೆ…ಏಂದು ಚೀರುತ್ತಿರುವವಳು,,,
  ನಾ ಅಂದು ಕೊಡಿದ್ದೆ..ಎಲ್ಲೋ ಆಸ್ಪತ್ರೆಯಲ್ಲೋ ಅಥವಾ ತಾಯಿ ಮನೆಯಲ್ಲೋ ಅಳುತ್ತಾ ಇರಬಹುದೆಂದು..
  ಆದರೆ ಮೊನ್ನೆ ಮಾಧ್ಯಮದವರೆದುರು ತನ್ನ ಗಂಡನ ಕೈ ಹಿಡಿದುಕೊಂಡು, ಹೊಸ ಮದುವೆಆದ ಆದರ್ಷ ದಂಪತಿಗಳಂತೆ ಬರುತ್ತಿದ್ದರು..
  ನೋದವಳ ನಡವಳಿಕೆಯೇ…ನೋವಿನ ಛಾಯೆ ಅವಳ ಮುಖದಲ್ಲಿ ಎಲ್ಲೂ ಕಂಡಿಲ್ಲ,,ಹೋಗಲಿ..
  ಅವಳ ಗಂಡ,,ತನ್ನ ಹೆಂಡತಿ ಹೇಳುತ್ತಿರುವದು ಸತ್ಯ ವಾಗಿದ್ದರೆ ಹೇಗೆ ಒಟ್ಟಿಗೆ ಸಂಸಾರ ಮಾಡುತ್ತಿರುವನೋ? ಅವನ ಮುಖದಲ್ಲಿ ಅವಳ ಬಗ್ಗೆ ಹೇಸಿಗೆ ಭಾವವೇ ಇಲ್ಲ.. ಇಬ್ಬರಿಗೂ ಗೊತ್ತು ಸುಳ್ಳು ಹೇಳುತ್ತಿದ್ದೇವೆ ಎ೦ದು..ಯಾರು ನಂಬುವುದಿಲ್ಲ ಎಂದೂ ಗೊತ್ತಿರಬಹುದು…

  [Reply]

 22. bsadithi

  Hare raama, Nammellara bhavane iduve aagide.Thanks for you.

  [Reply]

 23. Laxman Shanbhag Kadtoka Sirsi

  Idu dodda shadyantra. Navu heluvadoo idanne. Idara hinde yarayara kaiwadavide embudu sheeghravagi bahirangagollali. Adastu bega satya horabeelali. Navella Shreegala jotege iddeve. Hareram.

  [Reply]

 24. Radhakrishna

  Hare Rama.. For this MEANINGLESS, unnessary fight, third person killed in Puttur!!!!!!!! May his soul rest in peace…

  [Reply]

 25. Shridhara Avabhrath

  Thanks a lot Mrs. Laxmi Manjunath. We are all with Swamiji.
  Sathyameva Jayathe

  [Reply]

 26. ಶಿವಕುಮಾರ, ಮೈಸೂರು

  ಇವು ಅತ್ಯಂತ ಸಮಂಜಸವಾದ ಪ್ರಶ್ನೆಗಳು. ಸ್ತ್ರೀಯರ ರಕ್ಷಣೆಗಾಗಿ ರೂಪಿಸಿದ ಕಾನೂನಿನ ಮೂಲಕ ನಮ್ಮ ಶ್ರೀ ಗುರುಗಳ ಮೇಲೆ ಸುಳ್ಳು ಆರೋಪ ಹೊರಿಸಿ ಅವರನ್ನು ಹಿಂಸಿಸಲಾಗುತ್ತಿದೆ. ಶ್ರೀಗಳು ಪ್ರಸಿದ್ಧಿಗೆ ಬರುತ್ತಿರುವುದನ್ನು ಸಹಿಸಲಾಗದವರು ಈ ಷಡ್ಯಂತ್ರ ರೂಪಿಸಿರಲೂಬಹುದು. ಅಳಿವಿನಂಚಿನಲ್ಲಿರುವ ಭಾರತೀಯ ಗೋತಳಿಗಳ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಶ್ರೀಗಳಿಗೆ ವೃಥಾರೋಪ, ವಿಚಾರಣೆಯ ಮೂಲಕ ಆಗುತ್ತಿರುವ ಹಿಂಸೆಯನ್ನು ನೋಡಿದರೆ, ಗೋಮಾತೆ ಕಟುಕರ ಕೈಯಲ್ಲಿ ಹಿಂಸೆಗೊಳಗಾಗುತ್ತಿರುವ ಚಿತ್ರಣ ಮನಕ್ಕೆದುರಾಗುತ್ತಿದೆ. ಶ್ರೀರಾಮನ ಆದರ್ಶಗಳನ್ನು ಜನಸಾಮಾನ್ಯರ ಕಣ್ಣಿಗೆ ಕಟ್ಟಿದಂತೆ ಮಾಡುವ, ಮನಮುಟ್ಟುವ ಅದ್ಭುತ ಕಾರ್ಯಕ್ರಮ ‘ರಾಮಕಥೆ’ ಯಲ್ಲಿ ವೇದಿಕೆಯಲ್ಲಿದ್ದೂ, ಶೂರ್ಪನಖಿಗಿಂತಲೂ ಕೆಟ್ಟ ಪಾತ್ರವಹಿಸಲು ಹೊರಟ ವ್ಯಕ್ತಿ ತನ್ನ ಈ ಆವುಟದಿಂದ ಶ್ರೀಗಳ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಉಂಟುಮಾಡುತ್ತಿರುವ ಅಡ್ಡಿ, ಶಿಷ್ಯಕೋಟಿಗೆ ತಂದಿರುವ ಆತಂಕ ಅಕ್ಷಮ್ಮ್ಯ. ದೂರಿನಲ್ಲಿರುವ ಇಷ್ಟು ಸ್ಪಷ್ಟ ಸುಳ್ಳಿನ ಕಂತೆಯ ಹೊರತಾಗಿಯೂ ಶ್ರೀಗಳ ಬಂಧನದ ಯತ್ನ ನೋಡಿದರೆ ಕಾನೂನಿಗೆ ಕಣ್ಣಿಲ್ಲವೆನಿಸುವುದಲ್ಲವೇ?

  [Reply]

 27. ಶ್ರೀಶ ಭಟ್

  ಹರೇ ರಾಮ.
  ಶ್ರೀಗಳ ಮೇಲೆ ದಾಖಲಾಗಿರುವ ದೂರಿನ ಪ್ರತಿ ಯಾರಿಂದಾದರೂ ದೊರಕಬಹುದೇ? ಯಾವ ರೀತಿ ಆಪಾದನೆ ಹೊರಿಸಲಾಗಿದೆ ಎಂಬುದರ ಬಗ್ಗೆ ಸಂದೇಹ ನನ್ನ ಸಂದೇಹ ದೂರವಾದೀತು.

  [Reply]

 28. sadanand

  I was seen since 10 years somany young girls & ladies are comming in muth & Ramkatha, they says such a great Guruji we never seen any were in india, once you seen Guruji all your probleums will be get clear, She is blaimed Guruji, i want to ask her, if she is a great women then why it will takes 4 years to disclose this matter, if 90 times wrong will happnd with her then why not you went earlier with “Mahila Ayog”, why not “Mahila Ayog” asked her if 90 times worng is happened then why not informed anybody, great womens if once such wrong thing is happened they will raise complaint to police station & other places, it means you will cheated “Mahila Ayog” family & husband.

  [Reply]

 29. Pallavi

  Hareraama,lekhana thumba chennagidhe. Idu ellarigu kaaduva prashne.pramaanikavaadha thanikeyaagi sathya aadastu bega horabarali,sathyakke jaya sigali endu ellara aashayavaagidhe.

  [Reply]

 30. Pallavi

  Hareraama,lekhana arthapoornavaagi barediddeeri. ‘yaaro maadida thappige yaarigo shiksheyaagabaradhu’ tappithastharige maatra shiksheyaagbeku’ embudhe ellara aashayavaagidhe.esto jana mahileyaru e reethi sullu aaropa maadi kaanunanna durbalike maadikollodrinda nijwaaglu amaayakarige, anyaya aadha mahileyaru kastavannu edurisuvanthagutte.adke kaanunu saha nishpakshavaadha thanike nadisi sathya maatra horage bandu tappithastharige maatra shikshe koduvanthe aagali endu ellara aashayavaagidhe.

  [Reply]

 31. Pallavi

  Haraama,srigalu raamana aaradhakaru,raamana aadharshagalannu paalisuvavaru. yavaaglu raamakatheyalli helidha kelvu maathu nenapige barutte.sathyakke jaya bega sigali.Hareraama..

  [Reply]

 32. raveendrakn

  ಶ್ರೀ ಮತಿ ಲಕ್ಷ್ಮಿ ಮಂಜುನಾಥ್ ಅವರ ಲೇಖನ ಮತ್ತು ಕಳಕಳಿ ಮೆಚ್ಚುವಂತಹದ್ದು.ನಮ್ಮ ಸಮಾಜದ ಒಳಗಿನ ಮತ್ತು ಹೊರಗಿನ ಭಕ್ತ ಸಮುದಾಯಕ್ಕೆ ಈ ಪ್ರಕರಣ ಆಘಾತವನ್ನುಂಟುಮಾಡಿದೆ.ಇಲ್ಲಿ ಕಾನೂನಿನ ದುರ್ಬಳಿಕೆಯಾಗುತಿರುವುದು ಖೇದಕರ ಸಂಗತಿ.ನಮ್ಮಲ್ಲಿ ಶೋಷಿತರು,ಅಶಕ್ತರು,ಬಡವರ,ಅವಿದ್ಯಾವಂತರ ಮೇಲೆ ನಿರಂತರ ಅತ್ಯಾಚಾರವಾಗುತಿದ್ದರು ಯಾವ ಮಹಿಳಾ ಸಂಘಟನೆಗಳು/ಮಹಿಳಾ ಆಯೋಗಗಳು ತಲೆಕೆಡಿಸಿಕೊಳ್ಳುವುದಿಲ್ಲ.ಇತೀಚೆಗೆ ಸಮಾಜದ ಪ್ರತಿಷ್ಟಿತ ವ್ಯಕ್ತಿಗಳ ಮೇಲೆ ಅತ್ಯಾಚಾರದ ದೂರು ದಾಖಲಿಸುವುದು ಸಾಮಾನ್ಯವಾಗಿದೆ.ಕಾನೂನು ಮತ್ತು ಅದರ ಪ್ರಕ್ರಿಯೆಗಳ ಲೋಪದೋಷಗಳನ್ನು ತಿದ್ದುಪಡಿ ಮಾಡುವುದು ಅವಶ್ಯವಾಗಿದೆ.ಹರೇರಾಮ.

  [Reply]

 33. Siddarameshwara H.N

  Right said Madam, Applause

  [Reply]

 34. ಸುಬ್ರಾಯ ಹೆಗಡೆ,

  ಹರೇ ರಾಮ,
  ಶ್ರೀಮತಿ ಲಕ್ಷ್ಮಿಯವರೇ, ನಿಮ್ಮ ವಿಶ್ಲೇಶಣೆಯಲ್ಲಿ ನಮ್ಮ ವಕೀಲರು ಗಮನಿಸಬೇಕಾದ ಅಂಶ ಬಹಳಷ್ಟಿದೆ. ವಕೀಲರು ಗಮನಿಸಬೇಕಾದ ಇನ್ನೂ ಒಂದು ಅಂಶವೆಂದರೆ ಹಲವು ಬಾರಿ ಗುರುಗಳಿಂದ ಪೀಡಿತಳಾದ ತಾನು ತುಂಬಾ ರಕ್ತಸ್ರಾವದಿಂದ ಬಳಲಿ ಮಾನಸಿಕ ಸಮತೋಲನವನ್ನೂ ಕಳೆದುಕೊಂಡು 2-3 ಕಡೆ ಟೂರಿನಲ್ಲಿರುವಾಗ ಡಾಕ್ಟ್ರನ್ನು ಭೆಟ್ಟಿಯಾಗಿ ಚಿಕಿತ್ಸೆಯನ್ನೂ ಪಡೆದಿದ್ದೇನೆ ಎನ್ನುತ್ತ ಡಾಕ್ಟರುಗಳ ಹೆಸರುಗಳನ್ನೂ ಬರೆದಿದ್ದಾಳೆ. ಹೆಂಗಸರಿಗೆ ಮುಟ್ಟು ನಿಲ್ಲುವಾಗ ಈ ಥರದ ತೊಂದರೆ (ಮೆನೊಪಾಸ್ ) ಸಹಜ. ಆದರೆ ಅದನ್ನು ಅಸಹಜವೆಂಬಂತೆ ಬಿಂಬಿಸಿರುವುದು ತನಿಖೆಯ ಹಾದಿ ತಪ್ಪಿಸುವ ಕುತಂತ್ರವಾಗಿರಬಹುದಲ್ಲವೇ ? ಇದೆಲ್ಲವನ್ನು ನೀವು ನಮ್ಮ ವಕೀಲರಿಗೆ ತಿಳಿಸಿ.
  ಜೈಶ್ರೀರಾಮ್ !

  [Reply]

 35. Shwetha Shasthry

  ಮನದಾಳದ ಮಾತುಗಳು ಲಕ್ಷ್ಮಿ ಅಕ್ಕ! ಗುರುವಿನೊಡನೆ ಸಾಗುತಾ ಬೆಳಕಿನೆಡೆಗೆ ಸಾಗುವ..

  [Reply]

 36. Ravish Bhat Pedamale

  Excellent article. Perhaps, everyone should read this. I request this to be publish in Dharma Bharathi, so that it reaches each house.

  [Reply]

 37. ಎಲ್.ಎಮ್. ಹೆಗಡೆ ಸಾಗರ

  ಶ್ರೀಮತಿ ಲಕ್ಷ್ಮಿ ಮಂಜುನಾಥರವರೆ ತಮ್ಮ ಲೇಖನದಲ್ಲಿ ಉಲೇಖಿತವಾದ ವಿಷಯಗಳು ಪ್ರಾಮಾಣಿಕವಾಗಿದ್ದು ಕಪೋಲಕಲ್ಪಿತವಾಗಿ ಮಾತನಾಡುವವರಿಗೆ ಸಮಂಜಸವಾದ ಮಾಹಿತಿಯನ್ನು ತಮ್ಮ ಲೇಖನದಲ್ಲಿ ನೀಡಿರುವಿರಿ. ಧನ್ಯವಾದಗಳು.
  ಸತ್ಯ ಮೇವ ಜಯತೆ.

  [Reply]

 38. vijayasubrahmanya, kumble

  ಶ್ರೀಮತಿ ಲಕ್ಶ್ಮಿ ಮಂಜುನಾಥರವರು ನಮ್ಮ ಶ್ರೀಗುರುಗಳ ಕೋಟಿ,ಕೋಟಿ ಭಕ್ತರ ಭಾವನೆಯನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ. ಅವರಿಗೆ ಧನ್ಯವಾದ ಗಳು, ಯಾವುದೇ ಆಮಿಷಕ್ಕೆ ಬಲಿಯಾಗಿ ಸುಳ್ಳು ಸತ್ಯವಾಗದಿರಲಿ ಎಂದು ಶ್ರೀರಾಮದೇವರಲ್ಲಿ ನಾವೆಲ್ಲರೂ ಒಕ್ಕೊರಲಿನಿಂದ ಪ್ರಾರ್ಥಿಸುತ್ತಾ ಇರೋಣ. ಶ್ರೀರಾಮ ಜಯರಾಮ ಜಯ ಜಯ ರಾಮ|

  [Reply]

 39. Santhosh H K

  ನಮ್ಮೆಲ್ಲರದ್ದು ಇದೇ ಅನಿಸಿಕೆಯಾಗಿದೆ.

  [Reply]

 40. DATTU

  Hareraama,

  One of the best article. Hence please give this in the paper. Because this sight all people are not not able to read as everybody do not have computer or net facility. Hence we request you to give3 this article in the paper with the consent of writer.

  Dattu & Jayalaxmi,

  [Reply]

 41. shashiprabha hegde

  Hare Ram Lakshmi akka.Nimma lekhana oduvaga anandashru banthu.Havyaka samaja matravalla,idee samajave namma gurugalondigiddarall…Mana thumbi banthu.Thank u s..o.. much.

  [Reply]

 42. M.SHIVARAMA BHAT

  What Smt.Lakshmi Manjunath has written is correct. All those questions may not have the answar from the Lady who has made the allegations against our beloved Shree Raghaweshwar Mha Swamijee. I trust that the same questions will be put by the investigating authorities and the Learned Judge who hears the case. I am sure that the prayers made by the millions of devotees of our Holy Mutt and Gurujee, will certainly have a positive result. More over those who have hurt the feelings of these devotees will be certainly cursed by Karunalu Shree Ramachndra, for all their future seven Janma (elelu elelu jaanma)

  [Reply]

 43. Bhagya, San Diego

  Hare Rama.

  [Reply]

 44. L.B.PERNAJE

  ಪ್ರಶ್ನೆಗಳು ಹಲವು ಮೂಡುತ್ತಿವೆ ಅಕ್ಕ! ಆದರೆ ನಮ್ಮ ದೇಶದ ಕಾನೂನು ಒಬ್ಬ ನಿರಪರಾಧಿಯನ್ನು ಅಪರಾಧಿಯನ್ನಾಗಿಸಲು ಏನೆಲ್ಲಾ ಮಾಡಬೇಕೋ ಅವೆಲ್ಲವನ್ನೂ ಮಾಡಲು ಅವಕಾಶವಿತ್ತಿದೆ.ಒಬ್ಬ ನೀಡುವ ದೂರು ಸತ್ಯವೋ ಅಸತ್ಯವೋ ಎಂದು ನಿರ್ಧರಿಸದೆ ಆರೋಪಿಯನ್ನು ಅಪರಾಧಿಯನ್ನಾಗಿಸಲು ಎಷ್ಟೆಲ್ಲಾ ತನಿಕೆ? ಎಷ್ಟೆಲ್ಲಾ ಪರೀಕ್ಷೆ? ವೈದ್ಯಕೀಯ ಪರೀಕ್ಷೆ ! ಮಂಪರು ಪರೀಕ್ಷೆ! ಈ ಪರೀಕ್ಷೆಗಳನ್ನು ಮೊದಲು ದೂರುದಾರರಿಗೆ ಮಾಡಿ ದೂರಿನ ಸತ್ಯಾಸತ್ಯತೆಯನ್ನು ನಿರ್ಧರಿಸಲು ಕಾನೂನು ಅವಕಾಶವಿತ್ತಿಲ್ಲ !!ಮುಂದೊಂದು ದಿನ ಆರೋಪಿ ನಿರಪರಾಧಿ ಎಂದು ಕಾನೂನು ಬದ್ಧವಾಗಿ ಘೋಷಿಸಲ್ಪಟ್ಟಾಗ ಆತ ತನ್ನದೆಲ್ಲವನ್ನೂ ಕಳಕೊಂಡಿರುತ್ತಾನೆ.ಇದಕ್ಕೆ ಕಾನೂನಿನಲ್ಲಿ ಪರಿಹಾರವಿದೆಯೇ?ಒಬ್ಬ ನಿರಪರಾಧಿ ಕಾನೂನಿನ ಹೆಸರಿನಲ್ಲಿ ಆತನ ಮೇಲೆ ನಡೆಸಿದ ಹಿಂಸೆಗೆ /ಆತನ ಭಾವನೆಗಳ ಮೇಲಾದ ಧಕ್ಕೆಗೆ / ಆತ ಕಾಯ್ದುಕೊಂಡು ಬಂದಂತಹಾ ಮಾನಕ್ಕೆ ಒದಗಿದ ಹಾನಿಗೆ ಯಾವುದಾದರೂ ಅಯೋಗಗಳು / ಯಾವುದಾದರೂ ನ್ಯಾಯಾಲಯಗಳು ಪರಿಹಾರ ನೀಡಬಲ್ಲವೇ ? ಈ ಪ್ರಕರಣದಲ್ಲಿ ಸಹಸ್ರ ಸಹಸ್ರ ಮಂದಿಯ ಭಾವನೆಗಳಿಗೆ /ನಂಬುಗೆಗಳಿಗೆ ಧಕ್ಕೆಯಾಗುತ್ತಲಿದೆ.ಸಹಸ್ರ ಸಹಸ್ರ ಮಂದಿಯ ಆರಾಧ್ಯ ಪೀಠದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಲಿದೆ.ಇದಕ್ಕೇನಾದರೂ ಪರಿಹಾರವಿದೆಯೇ ಕಾನೂನಿನಲ್ಲಿ ?

  ಅಕ್ಕ! ಬರಹ ಸೊಗಸಾಗಿ ಮೂಡಿಬಂದಿದೆ. ಬಹಳಷ್ಟು ಮಂದಿಯ ಭಾವನೆಗಳು ನಿಮ್ಮ ಲೇಖನಿಯಿಂದ ಹೊರಬಂದಿವೆ. ನಿಮಗಿದೋ ನನ್ನ ನಮನಗಳು.

  [Reply]

  Ganapathi Hegde, Dharwad Reply:

  The ‘system’ had arrested and prosecuted Kanchi Kamakoti Swameeji and his Junior Swameeji on murder charges. Both suffered arrest and trial for more than eleven (11) years. Senior Swameeji had to suffer arrest, trial and prosecution for eleven years for no fault of him. Ultimately, the Court acquitted them holding them not guilty. The concerned Government has also taken decision not to prefer any appeal to the Supreme Court challenging their acquittal ! We must remember, eleven years back, the entire Indian Media had held their own trial 24 X 7 and had held two Swameejis guilty without waiting for the Court decision ! Now, who is to compensate these two Swameejis sufferings, humiliations, loss of dignity, loss of reputation, mental torture, agony etc., ? Can the Media or the Government restore them to these two Swameejis ? Now, these prejudiced Medias are doing the same to our Swameeji also.

  [Reply]

 45. Manjunath Kulkarni

  Excellent Article I request all the people who read this article to share with their friends, family, etc.
  HARE RAAMA
  RAM KATHA TEAM GULBARGA.

  [Reply]

 46. Manjunath

  ಹರೇ ರಾಮ
  ನಮ್ಮ ಗುರುಗಳು ಶುದ್ದ ಚಿನ್ನದಂತೆ, ಚಿನ್ನವು ಬೆಂಕಿಯಲ್ಲಿ ಬೆಂದಷ್ಟೂ ಹೊಳಪು ಜಾಸ್ತಿ. ನಮ್ಮ ಸಂಸ್ಥಾನ ಮಾತಿನಲ್ಲಿ ಎಷ್ಟು ಮೃದುವೋ ತಪಶ್ಯಕ್ತಿಯಲ್ಲಿ ಅಷ್ಟೇ ಬಲಾಡ್ಯರು. ಅವರು ಗೆದ್ದೇ ಗೆಲ್ಲುತ್ತಾರೆ. ಪೀಠಕ್ಕೆ ಕಷ್ಟ ಬರುವುದೇ ಇಲ್ಲ. ನಮ್ಮಂಥವರಿಗೆ ಹಾಗೆ ತೋರುತ್ತದೆ ಅಷ್ಟೇ. ಇಂಥ ಸಮಯದಲ್ಲಿ ಎಷ್ಟು ಜನರು ಜೊತೆಯಲ್ಲಿ ಇರುತ್ತಾರೆ ಎನ್ನುವುದಕ್ಕೆ ಶಿಷ್ಯರಿಗೆ ಒಂದು ಪರೀಕ್ಷೆ ಇದು ಅಷ್ಟೇ. ನಾವು ಎಂದೆಂದಿಗೂ ಸಂಸ್ಥಾನದವರ ಜೊತೆಗೇ ಇರುತ್ತೇವೆ. ಬೆಟ್ಟದಂತೆ ಬಂದಿರುವ ಆರೋಪ ಮಂಜಿನಂತೆ ಕರಗಿಹೋಗಲಿ ಎಂದು ನಾವು ಶ್ರೀರಾಮನಲ್ಲಿ ಪ್ರಾರ್ಥಿಸೋಣ.

  ಹರೇರಾಮ
  ಮಂಜುನಾಥ್. ತುಮಕೂರು.

  [Reply]

 47. Ramakrishna T Hegde

  ನಿಮ್ಮ ಲೇಖನವನ್ನು ಮತ್ತೆ ಮತ್ತೆ ಓದುತ್ತಿರಬೇಕು ಅನ್ನಿಸುತ್ತಿರುತ್ತದೆ. ಅದೆಷ್ಟು ಸೊಗಸಾಗಿ ಪ್ರಶ್ನೆಯನ್ನ ಕೇಳಿದ್ದಿರೀ ನಿeವು. ಅವರಿಗೆ ಕೋಣನ ಮುಂದೆ ಕಿನ್ನಿರು ಬಾರಿಸಿದಂತೆ. ಕತ್ತೆಗೆeನುಗೊತ್ತು ಕಸ್ತೂರಿ ಪರಿಮಳ. ಸಜ್ಜನರ ಸಂಗ ಹೆಜ್ಜೆನುಸವಿದಂತೆ ಎಂದು ಗೊತ್ತಿದ್ದರೆ ಹೀಗೆ ಮಾದುತ್ತಿದ್ದರೇ? ನಮ್ಮ ಪರಮಪೂಜ್ಯ ಶ್ರೀ ಶ್ರೀ ಸ್ವಾಮಿಜಿಯವರ ಹತ್ತಿರ ಇರುವುದೇ ನಮ್ಮೆಲ್ಲರ ಸ್ವರ್ಗ. ಅವರು ನರಕವೇ ಸ್ವರ್ಗ ಎಂದು ಅಂದುಕ್ಕೊಂಡುಬಿಟ್ಟಿದ್ದಾರೆ. ಅವರಿಗೆ ಕಾನೂನು ಶಿಕ್ಷೆಕೊಡದ್ದಿದ್ದರೆ ದೈವ ಅವರನ್ನು ಬಿಡುವುದೇ?

  [Reply]

 48. Kavya Bhat

  Shreemathi Lakshmi avare, olleya lekhana.. Navu endiddaroo Shreegala bembalakke idde irutteve..

  [Reply]

 49. ಬೆಣ್ಣೆ ಬಾಲು,

  ಹರೇ ರಾಮ ! ಎಲ್ಲವು ನಿಜ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ನಾವು ನಮ್ಮನಮ್ಮಲ್ಲಿ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು. ಶ್ರೀ ರಾಮನು ದುಷ್ಟ್ತಶಕ್ತಿಗೆ ಒಳ್ಳ್ಳೆಬುದ್ಧಿ ಕೊಟ್ಟು ಶ್ರೀಯುತರ ಕಾಲಿಗೆ ಬಿದ್ದು ಕ್ಷಮೆ ಯಾಚಿಸಲಿ.

  [Reply]

 50. Venugopal Bhat M

  Hare Raama, Thanks a lot to Smt. Lakshmi Akka, you have written wonderfully well. The media doesn’t want the truth, they need only TRP aiding news, several instances had happened where media gave onesided ‘judgement’ before the court did. Now with the way in which CID is handling the things, it’s clear that there is a bigger than thought ‘ghost interference’!!. The things are happening very adverse, ofcourse Court is still has a balanced approach. I really appreciate the impartiality of the court judgments/observations. Let’s pray and hope better days ahead for the community, Raama bhakthas, followers of Shree Matha and Shree Samsthana. Be united and awakened, be prepared for a struggle for justice in a short call.

  [Reply]

 51. drdpbhat

  hareraama.
  sathyameva jayate. naanrutham.
  hareraama.

  [Reply]

 52. pakalakunja gopalakrishna bhat

  ನಮ್ಮೆಲ್ಲರ ಭಾವನೆಗಳನ್ನೂ ನೀವು ವ್ಯಕ್ತಪಡಿಸಿದ್ದೀರಿ ..
  ಧನ್ಯವಾದಗಳು.

  [Reply]

 53. ShivaKumari

  nanna bhavanegalannu shabda roopadalli heliddiri. SATHYAMEVA JAYATE.

  [Reply]

 54. Shridhar Hegde, Sirsi

  Hare Raama,

  Very well written point by point. All of us know that Our Swamiji is innocent. We are so fortunate to have such a nice Swamiji in our life time. I am sure sooner or later truth will come out and end of the fight our Swamiji will bounce back much stronger than before. Because of these greedy people our Swamiji has to go through this hassle and loose very valuable time. Actually this is big loss for society. SATHYAMEVA JAYATE

  [Reply]

 55. shree

  satysmeeva jayathe, satya sullagabaradu sullu satyavagabaaradu, vicharanege hinjarike, tada eeke? havyaka samaja summaniruvudeeke? anumaanave? havyaka samaja odedide annnisuttide sri ramane kapadu? ninna shakti torisu?

  [Reply]

 56. Shridhar Bhat

  Namma Preethiya swamiji aaropa muktharaguttare adu katu sathya…. adare inneshtu dina ee yaatane? munde sathya horabandadamele, namma swamiji haagu asankyatha bhaktharige ada ee novu, sahisalarada yaathanege yaaru hone? aa shree ramane uttarisali….

  naayi kodeyante habbiruva drashya madhyamagalige avu torisuttiruva haasyaspada charchegalige ondu dhikkara…. bittarisalu, charchisalu bere suddi illadiddare bagilu mucchi manege hogali..

  [Reply]

 57. pallathadka mohana (mohananna, harihar)

  P. Mohana, Harihar (Mohananna, Harihar 09448924022)
  Sodari Laxmi Manjunath, thaavu baredaddu sari ide. Ee ghataneyannu avalokisidaga sullannu sathya maadalu horatanthide. sullu indu drushya matthu patrika madhyamagalalli raarajisuttide. Idu durdiva. Inthaha namma pujya gurugalada Sri Sri Sri Raghaveshvararannu padediruva naave dhanyaru. Mahathmara huttu manukuloddarakke embudu ithihaasa nodidavarige / odidavarige adara hirime, pramukhyathe arthavagutthade. Naanu helabayasuvudishte. Mahathmarannu nadskoli, mahathmarige nadkoli. idarinda avaravara uddara nishchita.
  Manthralaya Sri Raghavendra Gurugali iddaga hege nadkondru andina jana, haage Sri Shiradi Saibabaravarannu nadesikonda reethi shochaneeya. Aadare, eega prathi oorinallu Rayaramatha ide, Shrirdi Saimandira ide. Itheechanaddu thegondre, Varadahalli Sri Sridharaswamigalu. Eega Varadahallige doudayisuva bhakthara sankye yenu kammi illa. Adkke heluvudu, iddaga nadkoli, nadskoli, paavanaragiri, endu. Hare Raam.

  [Reply]

 58. suma hegde

  ಹರ ಮುನಿದರೆ ಗುರು ಕಾಯ್ವ.. ಆದರೆ ಕಾಯುವ ಗುರುವಿಗೆ ಕಳಂಕ ತಂದಿಟ್ಟಿದ್ದು ಒಂದು ಹೆಣ್ಣು ಎಂದರೆ ಅದೆಂಥ ಅವಮಾನ ನಮ್ಮ ಹೆಣ್ಣು ಕುಲಕ್ಕೆ…. ಹೆಣ್ಣು ಎಂದರೆ “ಮಾತೆ” ಎಂದ ಗುರುವಿಗೆ ಇಂದು ಅಂಥ ಒಬ್ಬ ಮಾತೆಯಿಂದ ಇಂಥದೊಂದು ಅಪವಾದ… ಯಾವುದೇ ತನಿಖೆಯಿಲ್ಲದೆ ಮೇಲ್ನೋಟದಲ್ಲೇ ಸಾವಿರ ಸಾವಿರ ಅನುಮಾನ, ಪ್ರಶ್ನೆಗಳನ್ನು ಹುಟ್ಟು ಹಾಕುವ ಆಕೆಯ ಸುಳ್ಳು ಆರೋಪದ ಕಂತೆಯನ್ನು ಕಟ್ಟಲು ಅದೆಷ್ಟು ಜನ ಅದೆಷ್ಟು ರಾತ್ರಿ ನಿದ್ದೆಗೆತ್ತರೋ ….. ಪಾಪ…
  ನಾರಿಗೆ ಮಾನವೇ ಮುಖ್ಯ ಎಂದರು ಹಿರಿಯರು.. ಆದರೆ, ನಮ್ಮ ಇಂದಿನ ಹೆಣ್ಣು ಮಕ್ಕಳಿಗೆ ಅದರಲ್ಲೂ ನಮ್ಮ ಸಮಾಜದ ಹೆಣ್ಣು ಮಗಳಿಗೆ ಮಾನ ಕೂಡ ಸಾಮಾನ್ಯ ಸಂಗತಿಯಾದದ್ದು ಮಾತ್ರ ಖೇದನೀಯ…
  ಆದಷ್ಟು ಬೇಗ ನಮ್ಮ ಶ್ರೀ ಸಂಸ್ಥಾನ ಆರೋಪ ಮುಕ್ತರಾಗಬೇಕು, ಗುರುನಿಂದೆಯಂತಾ ಮಹಾ ಪಾಪದ ಶಾಪ ಆಕೆಯಂಥ ಪಾಪಿಗಳಿಗೆ ಆದಷ್ಟು ಬೇಗ ಅರಿವಾಗಬೇಕು….
  ಹರೇ ರಾಮ…

  [Reply]

 59. sylendrajois

  namma manadha maathu…..

  [Reply]

Leave a Reply

Highslide for Wordpress Plugin