ಅವಿಚ್ಛಿನ್ನ ಪರಂಪರೆ :
ಶ್ರೀಗುರುಪೀಠದ ಆಚಾರ್ಯ ಪರಂಪರೆಯು ಗುರುವಿನಿಂದ ಶಿಷ್ಯನಿಗೆ ದಿವ್ಯಸನ್ಯಾಸಮಂತ್ರೋಪದೇಶ ನೀಡುವುದರ ಮೂಲಕ ಭಿನ್ನವಾಗದೇ ಮುಂದುವರಿದು ಬರಬೇಕಾದುದು ನಿಯಮ.
ಅದರಂತೆ ಶ್ರೀಗುರುಗಳು ಸಮಾಧಿ ಹೊಂದುವ ಮುನ್ನ ತಮ್ಮ ಉತ್ತರಾಧಿಕಾರಿಯಾಗಿ ಶಿಷ್ಯನನ್ನು ಸ್ವೀಕರಿಸಿ ಮಂತ್ರೋಪದೇಶ ನೀಡಿ ಗುರುಪರಂಪರೆಯನ್ನು ಬೆಳೆಸುತ್ತಾರೆ.
ಶ್ರೀಗುರುಗಳು ಶಿಷ್ಯಸ್ವೀಕಾರವಾಗುವ ಮೊದಲೇ ಸಮಾಧಿ ಆದರೆ ಆ ಪೀಠದಲ್ಲಿ ಆದಿಗುರುಪರಂಪರೆಯ ಮಹಾಶಕ್ತಿ ಪ್ರವಾಹ ಕುಂಠಿತವಾಗುತ್ತದೆ. ಹೀಗೆ ಶ್ರೀಗುರುಪೀಠದಲ್ಲಿ ಗುರು-ಶಿಷ್ಯ ಪರಂಪರೆ ಕುಂಠಿತವಾಗದೇ ಮುಂದುವರಿದು ಸಾಗುವುದನ್ನು ಅವಿಚ್ಛಿನ್ನ ಪರಂಪರೆ ಎನ್ನುವುದಾಗಿದೆ.
ಶ್ರೀಮದ್ರಾಮಚಂದ್ರಾಪುರಮಠದ ಗುರುಪೀಠದ ಸಂಪ್ರದಾಯವು ಶ್ರೀ ಜಗದ್ಗುರು ಶಂಕರಭಗವತ್ಪಾದಾಚಾರ್ಯರಿಂದ ಪ್ರಾರಂಭಿಸಲ್ಪಟ್ಟು ಅಂದಿನಿಂದ ಇಂದಿನ ತನಕ ಕುಂಠಿತವಾಗದೇ ಸಾಗಿ ಬಂದಿದೆ ಎಂಬುದು ಇಲ್ಲಿ ಸ್ಮರಣೀಯ.– ಆತ್ಮವಿದ್ಯಾ ಆಖ್ಯಾಯಿಕಾ
(ಪರಮಪೂಜ್ಯ ಪರಮಹಂಸಪರಿವ್ರಾಜಕಾಚಾರ್ಯ ಜಗದ್ಗುರು ಶ್ರೀಶಂಕರಾಚಾರ್ಯ ಶ್ರೀರಾಘವೇಂದ್ರಭಾರತೀಸ್ವಾಮೀನಾಂ ‘ಆತ್ಮವಿದ್ಯಾ ಆಖ್ಯಾಯಿಕಾ’)
~
ವಿಶ್ವಕ್ಕೊಡೆಯ ಒಬ್ಬನೇ – ರಾಮ.
ವಿಶ್ವಕ್ಕೊಂದೇ ಅವಿಚ್ಛಿನ್ನ ಪರಂಪರೆ- ಶ್ರೀರಾಮಚಂದ್ರಾಪುರಮಠದ ಗುರುಪರಂಪರೆ.
ಮರ್ಯಾದಾಪುರುಷೋತ್ತಮನಾದ, ಆದರ್ಶ ರಾಜ್ಯಪಾಲನಾದ ಶ್ರೀರಾಮ ತನ್ನ ಪರಿವಾರದೊಡನೆ ಪೂಜೆಗೊಳ್ಳುತ್ತಿರುವುದು ನಮ್ಮ ಮಠದ ಶ್ರೀಗುರುಗಳ ಕರಗಳಲ್ಲಿ.
ಶ್ರೀಶಂಕರಾಚಾರ್ಯರಾದಿಯಾಗಿ ಪೀಠದಲ್ಲಿ ವಿರಾಜಮಾನರಾದ ಎಲ್ಲಾ ಗುರುಗಳು ಅಂದಿನಿಂದ ಇಂದಿನವರೆಗೂ ನಿತ್ಯವೂ ಪೂಜಿಸುತ್ತಿದ್ದಾರೆ.
ಶ್ರೀರಾಮಾನುಗ್ರಹದ ಈ ಗುರುಪೀಠದ ಎಲ್ಲಾ ಗುರುಗಳ ಹೆಸರುಗಳು ಸ್ತೋತ್ರರೂಪದಲ್ಲಿ ಈ ಕೆಳಗೆ ಕೊಟ್ಟಿದೆ.
~*~
ಶ್ರೀಮದ್ರಾಮಚಂದ್ರಾಪುರಮಠೀಯ ಗುರುಪರಂಪರಾ ಸ್ತೋತ್ರಮ್:
ಶ್ರೀಮಠದ ಗುರುಪರಂಪರಾ ಸ್ತೋತ್ರದ ಶಬ್ಧರೂಪದ ಮೂಲ –
ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”
ನಾರಾಯಣಂ ಪದ್ಮಭವಂ ವಸಿಷ್ಠಂ
ಶಕ್ತಿಂ ಚ ತತ್ಪುತ್ರಪರಾಶರಂ ಚ |
ವ್ಯಾಸಂ ಶುಕಂ ಗೌಡಪದಂ ಮಹಾಂತಂ
ಗೋವಿಂದಯೋಗೀಂದ್ರಮಥಾsಸ್ಯ ಶಿಷ್ಯಂ ||1||
ಶ್ರೀಶಂಕರಾಚಾರ್ಯಮಥಾsಸ್ಯ ಪದ್ಮ-
ಪಾದಂ ಚ ಹಸ್ತಾಮಲಕಂ ಚ ಶಿಷ್ಯಂ |
ತಂ ತ್ರೋಟಕಂ ವಾರ್ತಿಕಕಾರಮನ್ಯಾ-
ನಸ್ಮದ್ಗುರೂನ್ ಸಂತತಮಾನತೋsಸ್ಮಿ ||2||
ನಮಾಮ್ಯಸ್ಮದ್ಗುರುಂ ನಿತ್ಯಂ ಗೋವಿಂದಂ ಭಗವದ್ಗುರುಂ |
ಶಂಕರಾಚಾರ್ಯವರ್ಯಂ ಚ ಜಗದ್ವಿಖ್ಯಾತಸ್ವಾಮಿನಂ ||3||
ತಸ್ಯ ಶಿಷ್ಯಂ ಸುರಶ್ರೇಷ್ಠಂ ವಿದ್ಯಾನಂದಂ ಜಗದ್ಗುರುಂ |
ಚಿದ್ಬೋಧೇಂದ್ರಂ ಚ ಸದ್ರೂಪಂ ನಿತ್ಯಾನಂದಂ ಮಹಾಮುನಿಂ ||4||
ನಿತ್ಯಬೋಧಘನೇಂದ್ರಾಯ ಜಗದ್ವಿಖ್ಯಾತಮೂರ್ತಯೇ |
ಭಾರತೀಸಚ್ಚಿದಾನಂದತೀರ್ಥಾಯ ಗುರವೇ ನಮಃ ||5||
ಚಿದ್ಘನೇಂದ್ರಾಯ ಗುರವೇ ಸೀತಾರಾಮೇಂದುಮೂರ್ತಯೇ |
ಚಿದ್ಬೋಧಾಯ ಪ್ರಶಾಂತಾಯ ರಾಘವೇಶ್ವರಮೂರ್ತಯೇ ||6||
ರಾಮಚಂದ್ರಾಯ ಗುರವೇ ರಾಘವೇಶ್ವರಮೂರ್ತಯೇ |
ರಾಮಯೋಗೀಂದ್ರಗುರವೇ ನೃಸಿಂಹಾಯ ನಮೋ ನಮಃ ||7||
ಅನಂತೇಂದ್ರಾಯ ಶಾಂತಾಯ ರಾಮಭದ್ರಾಯ ಯೋಗಿನೇ |
ರಾಘವೇಶ್ವರದೇವಾಯ ಯತೀಂದ್ರಾಯ ನಮೋ ನಮಃ ||8||
ವಿದ್ಯಾಧನೇಂದ್ರಗುರವೇ ರಘುನಾಥಾಯ ತೇ ನಮಃ |
ರಾಮಚಂದ್ರಾಯ ಗುರವೇ ಸರ್ವವಿದ್ಯಾಸ್ವರೂಪಿಣೀ ||9||
ರಘೂತ್ತಮಾಯ ದೇವಾಯ ಪರಮೇಶ್ವರಮೂರ್ತಯೇ |
ರಾಘವೇಶ್ವರದೇವಾಯ ಭಾರತೀಪದಯೋಗಿನೇ ||10||
ರಘೂತ್ತಮಾಯ ದೇವಾಯ ಭಾರತೀಪದಯೋಗಿನೇ |
ಇಮ್ಮಡಿಪ್ರೌಢದೇವಾಯ ಶ್ರೀರಘೂತ್ತಮಮೂರ್ತಯೇ ||11||
ರಾಘವೇಶ್ವರದೇವಾಯ ಗುರವೇ ತೇ ನಮೋ ನಮಃ |
ಇಮ್ಮಡಿಪ್ರೌಢಗುರವೇ ರಾಘವೇಶ್ವರಮೂರ್ತಯೇ ||12||
ತಸ್ಯ ಶಿಷ್ಯಾಯ ದೇವಾಯ ರಾಮಚಂದ್ರಾಯ ತೇ ನಮಃ |
ತಸ್ಯ ಶಿಷ್ಯಾಯ ಗುರವೇ ರಾಘವೇಂದ್ರಾಯ ತೇ ನಮಃ ||13||
ಸರ್ವಶಾಸ್ತ್ರಪ್ರಬೋಧಾಯ ರಾಘವೇಶ್ವರಮೂರ್ತಯೇ |
ರಾಮಚಂದ್ರಾಯ ದೇವಾಯ ಗುರವೇ ತೇ ನಮೋ ನಮಃ ||14||
ತಪಸ್ವಿನೇ ಬ್ರಹ್ಮವಿದೇ ನಿಗಮಾಗಮಬೋಧಿನೇ |
ಗುರವೇ ರಾಘವೇಂದ್ರಾಯ ಮಹತೇ ಯೋಗಿನೇ ನಮಃ ||15||
October 11, 2012 at 6:09 PM
………
vande guru paramparam……
October 20, 2012 at 4:43 PM
ವಂದೇ ಗುರೂಣಾಂ ಚರಣಾರವಿಂದೇ
ಸಂದರ್ಶಿತ ಸ್ವಾತ್ಮ ಸುಖಾವಬೋಧೇ |
ನಿಶ್ರೇಯಸ್ಸೇ ಜಂಗಾಲಿಕಮಾನೆ
ಸಂಸಾರ ಹಾಲಾಹಲ ಮೋಹಶಾಂತಯೈ ||
|| ಹರೇ ರಾಮ ||
September 7, 2013 at 11:42 AM
very good collection