Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್-ಶ್ರೀಸಂಸ್ಥಾನಗೋಕರ್ಣ ಶ್ರೀರಾಮಚಂದ್ರಾಪುರಮಠ ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳವರ ಗೋಚಾತುರ್ಮಾಸ್ಯ ಗೋವನ್ನು ಜೀವನದೊಂದಿಗೆ ಜೋಡಿಸಿ, ಮೃತ್ಯುವಿನೊಂದಿಗಲ್ಲ. ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳ ಚಾತುರ್ಮಾಸ್ಯ ಸಂದೇಶ ಬೆಂಗಳೂರು : ಇಂದು ಗೋವನ್ನು ಮೃತ್ಯುವಿನೊಂದಿಗೆ ಜೋಡಿಸಿರುವುದೇ ಸಮಸ್ಯೆಗಳಿಗೆ ಕಾರಣವಾಗಿದ್ದು, ನಮ್ಮ ಜೀವನದೊಂದಿಗೆ ಗೋವನ್ನು ಜೋಡಿಸುವುದೇ ಪರಿಹಾರವಾಗಿದೆ. ಗೋವು ತನ್ನ ಜೀವಿತಾವಧಿಯಲ್ಲಿ ಪ್ರೀತಿಯಿಂದ ನೀಡುವ ವಸ್ತುಗಳನ್ನು ಬಳಸಿಕೊಂಡರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ… Continue Reading →
ಪ್ರತಿಭೆ ಹೊರಬರಲು ಹಣ ಅಡ್ಡಿಯಾಗಬಾರದು- ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕೆಲವರಲ್ಲಿ ಪ್ರತಿಭೆಗಳಿರತ್ತೆ, ಆದರೆ ಸಾಧನೆ ಮಾಡಲು ಹಣವಿರಲ್ಲ,ಪ್ರತಿಭೆ ಹೊರಬರಲು ಹಣ ಅಡ್ಡಿಯಾಗಬಾರದು ಎನ್ನುವ ಕಾರಣದಿಂದ ವಿದ್ಯಾನಿಧಿಯ ಕಲ್ಪನೆ ಮಾಡಲಾಗಿದೆ ಎಂದು ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು. ಅವರು ಇಂದು ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ “ಮುಕ್ರಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾ ಸಹಾಯಧನ ವಿತರಣಾ ಕಾರ್ಯಕ್ರಮ’ದಲ್ಲಿ ದಿವ್ಯಸಾನ್ನಿಧ್ಯ ವಹಿಸಿ… Continue Reading →
Watch: Samskruta Asheervachana by Sri Sri Raghaveshwara Bharati Maha Swamiji youtu.be/xNbOhroIjnI Sri Sri Raghaveshwara Bharati MahaSwamiji blessing with Video-Asheervachana for “Samskruta Vāgvarďhana Kāryāgāra” held at SriBharati Vidyapeetha, Mujungavu on 19-Jan-2016. Video Link: youtu.be/xNbOhroIjnI
||ಹರೇ ರಾಮ||
ರಾಜನೆಂದರೆ ರಾಜ್ಯದ ಆತ್ಮ..
ಮಂತ್ರಿಯೆಂದರೆ ರಾಜ್ಯದ ಬುದ್ಧಿ..
ಯಾವುದರ ಪರಿವೆ ಇಲ್ಲದೆಯೂ ಆತ್ಮವು ಇರಬಹುದು…ಆದರೆ ಬುದ್ಧಿಯು ಸದಾ ಎಚ್ಚರವಾಗಿರಲೇಬೇಕು…ಶರೀರದ, ಮನಸ್ಸಿನ,ಇಂದ್ರಿಯಗಳ,ಹೆಚ್ಚೇಕೆ ಬದುಕಿನ ಸಮಸ್ತ ಆಗು-ಹೋಗುಗಳನ್ನು ಗಮನಿಸುವ-ನಿಯಂತ್ರಿಸುವ ಹೊಣೆಗಾರಿಕೆ ಅದರದ್ದೇ ಅಲ್ಲವೇ..?
ಮನನವೆಂದರೆ ಅರಿಯುವುದು..
ತ್ರಾಣವೆಂದರೆ ಪೊರೆಯುವುದು…
ಮನನ-ತ್ರಾಣಗಳೆರಡೂ ಹುದುಗಿವೆ ಮಂತ್ರದಲ್ಲಿ..
ಮಂತ್ರವುಳ್ಳವನು ಮಂತ್ರಿಯೆಂದಾದಮೇಲೆ ಆತನಿಗೆ ಎರಡೇ ಮುಖ್ಯಕಾರ್ಯಗಳು..
ಅರಿಯುವುದು ಮತ್ತು ಪೊರೆಯುವುದು…
ಎಲ್ಲವನ್ನೂ ಅರಿಯುವ, ತನ್ಮೂಲಕ ಎಲ್ಲರನ್ನೂ ಪೊರೆಯುವ ಕರ್ತವ್ಯವವನದ್ದು..
ಅರಿವು ಪೊರೆಯುವಂತೆ ಮತ್ಯಾವುದು ತಾನೇ ಪೊರೆಯಲು ಸಾಧ್ಯ..?
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.