Author Info@HareRaama.in

ರಾಷ್ಟ್ರಾಧ್ಯಕ್ಷರಿಗೆ ಸಹಿ ಹಸ್ತಾಂತರಿಸಿದ ಕುರಿತ ವರದಿ

ಹರೇ ರಾಮ ನವ ದೆಹಲಿ, ಜನವರಿ ೩೧: ವಿಶ್ವ ಮಂಗಳ ಗೋಗ್ರಾಮ ಯಾತ್ರೆಯ ವೇಳೆಯಲ್ಲಿ ಗೋಹತ್ಯೆ ನಿಷೇಧ ಆಗಲೇಬೇಕೆಂದು ಒತ್ತಾಯಿಸಿ ಸಂಗ್ರಹಿಸಿದ್ದ ಸಹಿಗಳನ್ನು ರಾಷ್ಟ್ರಾಧ್ಯಕ್ಷರಿಗೆ ಹಸ್ತಾಂತರಿಸಿದ ಕುರಿತು ರಾಷ್ಟ್ರೀಯ ಪತ್ರಿಕೆಗಳಲ್ಲಿ ಬಂದ ವರದಿ. ಕಾರ್ಯಕ್ರಮದ ಛಾಯಾಚಿತ್ರಗಳಿಗಾಗಿ ಇಲ್ಲಿ ನೋಡಿ. https://hareraama.in/photogallery/?album=VishwamangalaGouGramaYatra http://eng.gougram.org/photo-gallery/?album=31Jan10HastaksharaSamarpanaSamaroh

ಗೋಗ್ರಾಮ ಯಾತ್ರಾ ಮಾಹಿತಿ

ಹರೇ ರಾಮ ಶಿವಮೊಗ್ಗ, ಜನವರಿ 29: ವಿಶ್ವ ಮಂಗಳ ಗೋಗ್ರಾಮ ಯಾತ್ರೆಯ ವೇಳೆಯಲ್ಲಿ ಗೋಹತ್ಯೆ ನಿಷೇಧ ಆಗಲೇಬೇಕೆಂದು ಒತ್ತಾಯಿಸಿ ಸಹಿ ಸಂಗ್ರಹಿಸಿದ್ದು ಆ ಬಗ್ಗೆ ಮಾಹಿತಿಯು ನಾವಿಕ ದಿನಪತ್ರಿಕೆಯಲ್ಲಿ ಬಂದಿದ್ದು ಆ ವರದಿಯನ್ನು ಇಲ್ಲಿ ನೀಡಲಾಗಿದೆ

1-9-2010 – ಮಧ್ಯಪ್ರದೇಶ – ಪನ್ನಾದಿಂದ ಜಬಲಪುರಕ್ಕೆ ಯಾತ್ರೆ

ಜ.೦೯ – ಇಂದು ಯಾತ್ರೆ ಪನ್ನಾ ನಗರದಿಂದ ಹೊರಟು ಸತನಾ ನಗರ, ಕಟ್ನೀ ಪಟ್ಟಣದ ಮೂಲಕ ಜಬಲಪುರವನ್ನು ತಲುಪಿತು. ಇಂದು ಯಾತ್ರೆ ಅಂದಾಜು 270 ಕಿಮೀ ದೂರವನ್ನು ಕ್ರಮಿಸಿತು. ಸತನಾ ನಗರ ಪನ್ನಾದಿಂದ 70 ಕಿಮೀ ದೂರದಲ್ಲಿದೆ. ಸತನಾ ಜಿಲ್ಲಾ ಕೇಂದ್ರ. ಜಿಲ್ಲೆಯ ಮೈಹರಿನಲ್ಲಿ ಶಾರದಾ ದೇವಿಯ ದೇವಸ್ಥಾನವಿದೆ. ಈ ದೇವಾಲಯ ಬಹಳ ಪ್ರಸಿದ್ಧ ಯಾತ್ರಾ… Continue Reading →

1-10-2010 – ಮಧ್ಯಪ್ರದೇಶದಿಂದ ಛತ್ತೀಸಘರ್ – ಜಬಲಪುರದಿಂದ ಕವರ್ಧಾ ಯಾತ್ರೆ

ಜ.೧೦ – ಯಾತ್ರೆಯ ೧೦೧ನೆಯ ದಿನ ಇಂದು. ಯಾತ್ರೆಯ ಪರಿಭ್ರಮಣ ಇಂದು ಜಾಬಾಲಿಪುರಂ-ಜಬಲ್ಪುರದಿಂದ ಹೊರಟು ಮಧ್ಯಪ್ರದೇಶದ ಕೊನೆಯ ಸಭಾಸ್ಥಾನ ಮಂಡಲಾ ಮತ್ತು ಅಲ್ಲಿಂದ ಮುಂದುವರೆದು ಛತ್ತೀಸಗಢದ ಕವರ್ಧಾವನ್ನು ತಲುಪಿತು. ದಾರಿಯಲ್ಲಿ ನಾರಾಯಿಗಂಜಿನಲ್ಲಿ ಗ್ರಾಮೀಣ ಜನರಿಂದ ಪಾರಂಪರಿಕ ಸ್ವಾಗತ-ಆತಿಥ್ಯ ದೊರೆಯಿತು. ಮಂಡಲಾ-ಮಾಹಿಷ್ಮತೀ ನಗರ-ಸಭೆಯ ವೇದಿಕೆಯಲ್ಲಿ ಪೂಜ್ಯ ಅಖಿಲೇಶ್ವರಾನಂದ ಗಿರೀ ಜೀ ಮತ್ತು ಪೂ. ಹರೇಶ್ವರೀ ಮಹಾರಾಜ್ ಅವರು… Continue Reading →

8-1-2010 – ಮಧ್ಯಪ್ರದೇಶದಲ್ಲಿ ಯಾತ್ರೆ – ಸಾಗರದಿಂದ ಪನ್ನಾ

ಜ.೦೮ – ಯಾತ್ರೆ ಇಂದು ಸಾಗರದಿಂದ ಹೊರಟು ದಲೋಡ್ ಮೂಲಕ ಪನ್ನಾ ನಗರವನ್ನು ತಲುಪಿತು. ದಾರಿಯಲ್ಲಿ ಹಲವಾರು ಕಡೆ ಹೃದಯ ತಟ್ಟುವ ರೀತಿಯ ಸ್ವಾಗತ ದೊರೆಯಿತು. ದಾರಿಯ ಮಧ್ಯೆ ಗಧಾರಿ ಮತ್ತು ಸೋನಾರ್ ನದಿಗಳು ದೊರೆಯುತ್ತವೆ. ಚಿಕ್ಕ ನದಿಗಳಾದರೂ ನೀರಿನಿಂದ ತುಂಬಿದ್ದವು. ಸೇತುವೆ ತುಂಬ ತಗ್ಗಿನಲ್ಲಿತ್ತು. ಮಳೆಗಾಲದಲ್ಲಿ ನೆರೆ ಬರುವುದು ಇಲ್ಲಿ ಸಾಮಾನ್ಯ ಮತ್ತು ಆಗದ… Continue Reading →

1-7-2010 – ಮಧ್ಯಪ್ರದೇಶದಲ್ಲಿ ಯಾತ್ರೆ – ಭೋಪಾಲಿನಿಂದ ಸಾಗರಕ್ಕೆ

ಜ. 7 – ಯಾತ್ರೆಯ 98ನೆಯ ದಿನ ಇಂದು. ಯಾತ್ರೆ ಸಮಾಪನಗೊಳ್ಳಲು ಇನ್ನು ಕೇವಲ ೧೦ ದಿನಗಳು ಉಳಿದಿವೆ. ಇಂದು ಯಾತ್ರೆ ಭೋಪಾಲದಿಂದ ಹೊರಟು ಒಂದು ಭಾಗ ವಿದಿಶ ನಗರಿಗೆ ತೆರಳಿದರೆ ಇನ್ನೊಂದು ಭಾಗ ಗೈರತ್ಗಂಜ್ ಪಟ್ಟಣಕ್ಕೆ ತೆರಳಿತು. ಗೈರತ್ಗಂಜ್ ಪುಟ್ಟ ಪಟ್ಟಣ. ಭೋಪಾಲಿನಿಂದ ಅಂದಾಜು 85 ಕಿಮೀ ದೂರದಲ್ಲಿದೆ. ಮಾರ್ಗಮಧ್ಯೆ ರಾಯಸೇನಾ ಪಟ್ಟಣ ಬರುತ್ತದೆ…. Continue Reading →

1-6-2010 – ಮಧ್ಯಪ್ರದೇಶದಲ್ಲಿ ಯಾತ್ರೆ – ಭೋಪಾಲದಲ್ಲಿ ಸಭೆ

ಭೋಪಾಲ, ಜನವರಿ ೦೬ : ಇಂದು ಯಾತ್ರೆ ಭೋಪಾಲದಲ್ಲಿ ವಿಶ್ರಾಂತಿ ತೆಗೆದುಕೊಂಡಿತ್ತು. ಗಾಯತ್ರೀ ಶಕ್ತಿ ಪೀಠದಲ್ಲಿ ಯಾತ್ರಾರ್ಥಿಗಳಿಗೆ ತಂಗಲು ವ್ಯವಸ್ಥೆ ಮಾಡಿದ್ದರು. ಯಾತ್ರೆಯ ಪ್ರವರ್ತಕರಲ್ಲಿ ಗಾಯತ್ರೀ ಪರಿವಾರದ ಸಂಸ್ಥಾಪಕರಾದ ಡಾ. ಪ್ರಣವ ಪಂಡ್ಯಾ ಅವರೂ ಒಬ್ಬರು. ಇಂದು ಮಧ್ಯಾಹ್ನ 12 ಗಂಟೆಗೆ ಪ.ಪೂ. ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪತ್ರಿಕಾ ಸಮ್ಮೇಳನವನ್ನು… Continue Reading →

5-1-2010 – ಮಧ್ಯಪ್ರದೇಶದಲ್ಲಿ ಯಾತ್ರೆ – ಬ್ಯಾವರಾದಿಂದ ಬೈರಾಗಢ

ಬೈರಾಗಢ, ಜನವರಿ 05 : ಇಂದು ಯಾತ್ರೆ ಬ್ಯಾವರಾದಿಂದ ಹೊರಟು ಬೈರಸಿಯಾ, ಸಿಹೋರ್ ಮೂಲಕವಾಗಿ ಭೋಪಾಲದ ಹೊರವಲಯದ ಬೈರಾಗಢವನ್ನು ತಲುಪಿ, ಸಭೆ ಮುಗಿಸಿ, ರಾತ್ರಿಯ ವಿಶ್ರಾಂತಿಗಾಗಿ ಭೋಪಾಲದ ಗಾಯತ್ರೀ ಪೀಠವನ್ನು ತಲುಪಿತು. ಬೈರಾಸಿಯಾದ ದಶರಾ ಮೈದಾನದಲ್ಲಿ ಸಭೆಯ ವ್ಯವಸ್ಥೆ ಮಾಡಲಾಗಿತ್ತು. ಬೈರಾಸಿಯ ಒಂದು ಚಿಕ್ಕ ಪಟ್ಟಣ. ಗ್ರಾಮೀಣ ಇಲಾಖೆಗಳಿಂದ ಜನ ಆಗಮಿಸುತ್ತಿದ್ದರು. ಯಾತ್ರೆಯ ಪಶ್ಚಿಮ ಮತ್ತು… Continue Reading →

4-1-2010 – ಮಧ್ಯಪ್ರದೇಶದ ಯಾತ್ರೆ – ಇಂದೋರಿನಿಂದ ಬ್ಯಾವರಾ

ಜ.೪ – ಇಂದು ಯಾತ್ರೆ ಇಂದೋರಿನಿಂದ ಹೊರಟು ದೇವಸ್, ಉಜ್ಜೈನಿ, ಶಾಜಾಪುರ ಮೂಲಕ ಬ್ಯಾವರಾ ನಗರವನ್ನು ತಲುಪಿತು. ದೇವಸ್ (ದೇವಾವಾಸ) ನಗರ ಮಾತಾ ಚಾಮುಂಡಾ ದೇವಿಯ ಆವಾಸವಿರುವ ಪ್ರಸಿದ್ಧ ಸ್ಥಳ. ಮೈಸೂರಿನ ಚಾಮುಂಡೀ ಬೆಟ್ಟದಂತೆ, ಊರಮಧ್ಯೆಯಲ್ಲಿ ಬೆಟ್ಟ ಮೇಲೆ ಚಾಮುಂಡಾ ಮಂದಿರವಿದೆ. ವೇದಿಕೆಯನ್ನು ದೇವಗಿರಿಯ ಮುಂಭಾಗದಲ್ಲಿ ಶಿವಾಜಿ ಪ್ರತಿಮೆ ಇರುವ ಪ್ರಸಿದ್ಧ ಮೈದಾನದಲ್ಲಿ ವ್ಯವಸ್ಥೆ ಮಾಡಿದ್ದರು…. Continue Reading →

3-1-2010 – ಮಧ್ಯಪ್ರದೇಶದ ಯಾತ್ರೆ – ರತ್ಲಾಮಿನಿಂದ ಇಂದೋರ್

ಜ.೩ – ಇಂದು ಯಾತ್ರೆ ರತ್ಲಾಮಿನಿಂದ ಹೊರಟು ಧಾರ್ (ಧಾರಾ), ಬೇಟ್ಮಾ ಮೂಲಕ ಇಂದೋರನ್ನು ತಲುಪಿತು. ಧಾರ್ – ಧಾರಾನಗರಿ, ಭೋಜರಾಜನ ಆಸ್ಥಾನವಾಗಿದ್ದ ಸ್ಥಳ. ಕಾಲಿದಾಸ ತನ್ನ ಕಾವ್ಯಗಳಿಂದ ರಂಜಿಸಿದ ನಾಡು. ಇದು ವನವಾಸಿ ಕ್ಷೇತ್ರ. ಶ್ರೀ ಮಧುರ ಭಾಯ್ ಕುಲಕರ್ಣಿ ಅವರು ಪ್ರಮುಖ ಭಾಷಣ ಮಾಡಿದರು. ಅವರು ರಾ.ಸ್ವ.ಸೇ.ಸಂ.ದ ರಾಷ್ಟ್ರೀಯ ಸಮಿತಿ ಸದಸ್ಯರು. ಕೋಪನ್… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑