Author Info@HareRaama.in

ವಿದ್ಯಾರ್ಥಿವೇತನ ವಿತರಣಾ ಸಮಾರಂಭ – ಆಮಂತ್ರಣ

ಪರಿಶಿಷ್ಟ ಪಂಗಡಕ್ಕೆ ಸೇರಿದ ಮುಕ್ರಿಸಮಾಜದ ವಿದ್ಯಾರ್ಥಿಗಳಿಗೆ ಶ್ರೀರಾಮಚಂದ್ರಾಪುರಮಠದ ವಿದ್ಯಾವಿಭಾಗದಿಂದ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಶ್ರೀಸಂಸ್ಥಾನದವರ ದಿವ್ಯಸಾನ್ನಿಧ್ಯದಲ್ಲಿ ಮಾರ್ಚ್ ೨೦ರಂದು ಭಾನುವಾರ, ಮಧ್ಯಾಹ್ನ ೧೨-೩೦ಕ್ಕೆ ಗಿರಿನಗರದ ಶ್ರೀರಾಮಶ್ರಮದಲ್ಲಿ ನಡೆಯಲಿದೆ. ತಮಗೆಲ್ಲರಿಗೂ ಆದರದ ಸ್ವಾಗತ.

ಫೆ.29 ರಿಂದ : Praja TVಯಲ್ಲಿ ಶ್ರೀಗಳ ‘ಸತ್ಯ ಸೂರ್ಯೋದಯ’ ಕಾರ್ಯಕ್ರಮ ಸರಣಿ

ನಾಡಿನ ಜನತೆ ನಿತ್ಯ ‘ಸತ್ಯ ಸೂರ್ಯೋದಯ’ದೊಂದಿಗೆ ದಿನಾರಂಭಿಸಿ ಧನ್ಯರಾಗಬಹುದಾಗಿದ್ದು, ಜನತೆಗೆ ಈ ಕಾರ್ಯಕ್ರಮದ ಕುರಿತು ತಮ್ಮ ಮಾಧ್ಯಮದ ಮೂಲಕ ತಿಳಿಸಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ.

07-02-2016 : ಮುಳ್ಳೇರಿಯ ಮಂಡಲ ಎಣ್ಮಕಜೆ ವಲಯ ಸಭೆ – Report

ಮಂಡಲಾಧ್ಯಕ್ಷರಾದ ಬಿ ಜಿ ರಾಮಭಟ್ಟರು ಮೂಲಮಠದ ಮಾಹಿತಿಯಿತ್ತು ವಲಯಗಳೆಲ್ಲ ಇನ್ನಷ್ಟು ಸೇವಾನಿರತರಾಗಬೇಕೆಂದು ಅಪೇಕ್ಷಿಸಿದರು. ಕಾರ್ಯದರ್ಶಿಗಳಾದ ಶಂಕರ ಪ್ರಸಾದ ಕುಂಚಿನಡ್ಕ ಇವರು ಧನ್ಯವಾದವನ್ನಿತ್ತರು.
ರಾಮತಾರಕ, ಶಾಂತಿಮಂತ್ರ, ಧ್ವಜ ಅವರೋಹಣ, ಶಂಖನಾದದೊಂದಿಗೆ ಸಭೆ ಮುಕ್ತಾಯಗೊಂಡಿತು.

07-02-2016: ದಿಶಾದರ್ಶಿ & ಅಂತರ್ಜಾಲ ಪ್ರಸ್ತುತಿ ಕಾರ್ಯಾಗಾರ, ಶ್ರೀರಾಮಾಶ್ರಮ – Report

ದಿನಾಂಕ 07-02-2016, ಶ್ರೀ ರಾಮಾಶ್ರಮ – ಗಿರಿನಗರ: ಉದ್ಯೋಗಾರ್ಥಿಗಳಿಗೆ ಉದ್ಯೋಗವನ್ನು ಅರಸಲು ಸಹಕರಿಸಿ, ಮುಂದಿನ ಬಾಳಿಗೆ ಏಳ್ಗೆಯನ್ನು ಹಾರೈಸುವ ಶ್ರೀಮಠದ ವಿಭಾಗವಾದ “ದಿಶಾದರ್ಶಿ” ಹಾಗೂ ಅಂತರ್ಜಾಲ-ಪ್ರಸ್ತುತಿ ವಿಭಾಗದಿಂದ ಅಂತರಜಾಲ ಪ್ರಸ್ತುತಿ ಕಾರ್ಯಾಗಾರವು ಇಂದು ನಡೆಯಿತು. ಕಾರ್ಯಾಗಾರದಲ್ಲಿ ಶ್ರೀಕಾರ್ಯದರ್ಶಿಗಳಾದ ಮೋಹನ ಭಾಸ್ಕರ ಹೆಗಡೆಯವರು Social Spiritual Responsibility -ಎಂಬ ವಿಚಾರದಲ್ಲಿ Stress Management ಮತ್ತು ಧಾರ್ಮಿಕ ತೊಡಗುವಿಕೆಗಳ… Continue Reading →

ಆಮಂತ್ರಣ – ಶ್ರೀ ಉಮಾಶಿವ ಕ್ಷೇತ್ರ, ಕಲ್ಲಡ್ಕ ದೇವಾಲಯದ ಪ್ರತಿಷ್ಠಾಬ್ರಹ್ಮಕಲಶದ ತೃತೀಯ ವರ್ಧಂತ್ಯುತ್ಸವ

ಭಾರತ ಗಣರಾಜ್ಯೋತ್ಸವದ ಶುಭಾಶಯಗಳು

ಭಾರತ ಗಣರಾಜ್ಯೋತ್ಸವದ ಶುಭಾಶಯಗಳು…
Happy Republic Day

24-01-2015: ಕೊಡಗಿನ ಗೌರಮ್ಮ ಸ್ಮಾರಕ ಕಥಾ ಸ್ಪರ್ಧೆ: ಪ್ರಶಸ್ತಿ ಪ್ರದಾನ ಮತ್ತು ಹತ್ತೆಸಳು-2 ಕಥಾ ಸಂಕಲನದ ಲೋಕಾರ್ಪಣೆ

ಮನಸ್ಸಿನಲ್ಲಿ ಬಂದ ಭಾವನೆಗಳಿಗೆ ಬರಹ ರೂಪ ಕೊಡಿ: ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಘವೇಶ್ವರ ಶ್ರೀ. ಬರಹ ಒಂದು ಸುಂದರವಾದ ಸಂಗತಿ. ಎಲ್ಲರ ಮನಸ್ಸಿಗೆ ಅದೆಷ್ಟೋ ಒಳ್ಳೆಯ ಭಾವನೆಗಳು ಬಂದು ಹೋಗುತ್ತಿರುತ್ತದೆ. ಅಂತಹ ಭಾವನೆಗಳು ಉಳಿಯಬೇಕು ಅಂದರೆ ಅವುಗಳಿಗೆ ಬರಹ ರೂಪವನ್ನು ಕೊಡಬೇಕು ಎಂದು ರಾಘವೇಶ್ವರ ಶ್ರೀಗಳು ಹೇಳಿದರು. ಅವರು ಬೆಂಗಳೂರಿನ ರಾಮಚಂದ್ರಾಪುರಮಠದಲ್ಲಿ ನಡೆದ… Continue Reading →

19-ಜನವರಿ-2016: ಮುಜುಂಗಾವಿನ ಶ್ರೀ ಭಾರತೀ ವಿದ್ಯಾಪೀಠದಲ್ಲಿ “ಸಂಸ್ಕೃತ ವಾಗ್ವರ್ಧನ ಕಾರ್ಯಾಗಾರ” – Report

ಮುಂಬಯಿ IIT ಯ ಸಂಶೋಧನಾ ವಿಜ್ಞಾನಿಗಳಾದ ಡಾ. ಮಹೇಶ್ ಕೂಳಕ್ಕೂಡ್ಳು, ಪೆರ್ಲದ ನಿವೃತ್ತ ಸಂಸ್ಕೃತ ಅಧ್ಯಾಪಕರಾದ ಡಾ. ಸದಾಶಿವ ಭಟ್ ಹಾಗೂ ಬೆಂಗಳೂರಿನ ಧರ್ಮಭಾರತೀ ಪತ್ರಿಕೆಯ ಸಹ ಸಂಪಾದಕರಾದ ಶ್ರೀ ಲೋಹಿತ ಶರ್ಮಾ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಶಿಬಿರವನ್ನು ನಡೆಸಿಕೊಟ್ಟರು.

ಸಂಕ್ರಾಂತಿ ದಿನವನ್ನು “ಗೋ ದಿನ”ವನ್ನಾಗಿ ಆಚರಿಸಬೇಕು: ಶ್ರೀ ಶ್ರೀ ರಾಘವೇಶ್ವರಭಾರತಿ ಸ್ವಾಮೀಜಿ ಅಭಿಮತ

ವಿಶ್ವ ಯೋಗಾ ದಿನ, ಫಾದರ್ಸ್ ಡೇಗಳು ಇರುವ ಹಾಗೆ ಗೋವಿಗೂ ಒಂದು ದಿನವನ್ನು ಆಚರಿಸಬೇಕು, ಸಂಕ್ರಾಂತಿಯ ದಿನವನ್ನೇ ಗೋ ದಿನ ಎಂದು ಆಚರಿಸಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕಾರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಗೋ ಆಲಯ @ ನೀರ್ಚಾಲು : ಗೋಮಾತೆ ರಾಷ್ಟ್ರಮಾತೆಯಾಗಲಿ – ಗಣೇಶ್ ಭಟ್ ಮುಣ್ಚಿಕ್ಕಾನ

ಕುಮಾರಮಂಗಲ ಧನುಪೂಜೆಯಲ್ಲಿ ಗೋಪೂಜೆ : ಬೆಳಗಿನ ಜಾವ ಧನುಪೂಜೆಯ ಸಂದರ್ಭದಲ್ಲಿ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರದಲ್ಲಿ ಸೇರಿದ ಭಕ್ತಜನರು ಚಲಿಸುವ ಗೋ ಆಲಯಕ್ಕೆ ಆರತಿಯನ್ನು ಬೆಳಗಿದ್ದರು. ಸಂಜೆ ನೀರ್ಚಾಲು ಪೇಟೆಯಲ್ಲಿ ವ್ಯಾಪಾರಿಗಳು ಹಾಗೂ ನೀರ್ಚಾಲು ಹವ್ಯಕ ವಲಯದ ವತಿಯಿಂದ ಪೂಜೆಯನ್ನು ಸಲ್ಲಿಸಲಾಯಿತು.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑