ಗೋಕರ್ಣ: ೮. ಪಕ್ವವಾಗದೆ ಹಣ್ಣು ಮರದಿಂದ ಬೀಳುವುದಿಲ್ಲ. ಇಳೆಯಲ್ಲಿ ಧಗೆಯಾಗದೆ ಮೋಡಗಟ್ಟಿ ಮಳೆ ಸುರಿಯುವುದಿಲ್ಲ. ಲೋಕದ ನಿಯಮವೇ ಹೀಗೆ. ಪ್ರತಿಯೊಂದಕ್ಕೂ ತನ್ನದೇ ಆದ ಕಾಲವಿದೆ. ನಮಗೆ ಬೇಕಾದಾಗ ಸೂಕ್ತವಾದ ಸಮಯವು ಒದಗಿ ಬರುವುದಿಲ್ಲ. ಅದಕ್ಕಾಗಿ ಕಾಯುವಿಕೆ ಅನಿವಾರ್ಯ. ಈ ನಿಯಮಕ್ಕೆ ಭಗವಂತನೂ ಅಪವಾದವಲ್ಲ. ವಿಶ್ವದಲ್ಲಿ ಲೋಕಪೀಡಕರ ಹಿಂಸೆ ಅತಿಯಾದಾಗ ಸಾಧು ಸತ್ಪುರುಷರು ಅತ್ಯಂತ ಸಂಕಟಕ್ಕೊಳಗಾದಾಗ ಜಗತ್ತೇ… Continue Reading →
ಗೋಕರ್ಣ: ೫, ಹಿಂದೆ ದೇವಾಸುರ ಸಂಗ್ರಾಮವು ನಡೆಯಿತೆಂದು ಪುರಾಣಗಳು ಉಲ್ಲೇಖಿಸುತ್ತವೆ. ದೇವತೆಗಳ ಹಾಗೂ ರಾಕ್ಷಸರ ನಡುವೆ ಮಾತ್ರ ನಡೆಯುವ ಯುದ್ಧ ಇದಲ್ಲ. ಈ ಯುದ್ಧ ನಮ್ಮ ಅಂತರಂಗದಲ್ಲಿ ಪಾಶವೀ ಶಕ್ತಿಗಳು ಹಾಗೂ ಸಾತ್ವಿಕಶಕ್ತಿಗಳ ನಡುವೆ ಸದಾ ನಡೆಯುತ್ತಿರುತ್ತಲೇ ಇರುತ್ತದೆ. ನಮ್ಮಲ್ಲಿ ದೇವತಾಂಶವೂ ಇದೆ, ಹಾಗೆಯೇ ರಾಕ್ಷಸಾಂಶವೂ ಸಹ. ಈ ಎರಡು ಸ್ವಬಾವಗಳ ಮಿಲನವೇ ಮನುಷ್ಯ. ಅಂತಿಮ… Continue Reading →
ಗೋಕರ್ಣ: ೪, ನಮ್ಮ ಬದುಕಿನಲ್ಲಿ ನಾವು ಎಷ್ಟೋ ಸಮಸ್ಯೆಗಳನ್ನು ಎದುರಿಸುತ್ತೇವೆ. ಎಡರು ತೊಡರುಗಳನ್ನು ದಾಟುತ್ತೇವೆ. ಅನೇಕ ವಿಚಾರಗಳಲ್ಲಿ ಗೆಲುವನ್ನೂ ಪಡೆಯುತ್ತೇವೆ. ಆದರೆ ಇದಾವುದೂ ನಿಜವಾದ ವಿಜಯವಲ್ಲ. ನಮ್ಮ ಅಂತರಂಗದ ಗೆಲುವೇ ನಮ್ಮ ಜೀವನವನ್ನು ಸಾರ್ಥಕತೆಯ ಗುರಿಯತ್ತ ಕೊಂಡೊಯ್ಯುತ್ತದೆ. ಆದ್ದರಿಂದ ಬಾಹ್ಯವಾದ ಜಯಕ್ಕಿಂತ ನಮ್ಮ ಮನಸ್ಸಿನ ಮೇಲೆ ಸಾಧಿಸುವ ನಿಯಂತ್ರಣವೇ ನೈಜವಾದ ಸಾಧನೆ ಎಂದು ಶ್ರೀ ರಾಮಚಂದ್ರಾಪುರಮಠದ… Continue Reading →
ಗೋಕರ್ಣ: ೩. ಉಪಕಾರಸ್ಮರಣೆ, ಕೃತಜ್ಞತೆಗಳು ಜೀವಿಯ ಮೂಲಭೂತ ಸ್ವಭಾವ. ಸಾಕುಪ್ರಾಣಿಗಳೂ ಕೂಡಾ ನಾವು ಎಂದೋ ಹಾಕಿದ ಆಹಾರವನ್ನು, ತೋರಿಸಿದ ಪ್ರೀತಿಯನ್ನು ಮರೆಯದೆ ಅದನ್ನು ವ್ಯಕ್ತಪಡಿಸುತ್ತವೆ. ಮಾನವನೆಂದೂ ಕೃತಘ್ನನಾಗಬಾರದು. ಅನ್ನ ಹಾಕಿದ ಮನೆಗೆ ಕನ್ನ ಹಾಕುವುದು ರಾಕ್ಷಸತ್ವದ ದ್ಯೋತಕ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ಇಂದು ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾಗಿದ್ದ ರಾಮಕಥಾದಲ್ಲಿ… Continue Reading →
ಗೋಕರ್ಣ: ಸ್ನೇಹ, ಪ್ರೀತಿಗಳು ಬದುಕಿನಲ್ಲಿ ಸಂತೋಷವನ್ನು ನೀಡುವ ಸಾಧನಗಳು. ವ್ಯಕ್ತಿತ್ವದ ಉತ್ತಮಿಕೆಗೆ ಅಭ್ಯುದಯಕ್ಕೆ ಕಾರಣವಾಗುವ ಉತ್ತಮ ಬಾಂಧವ್ಯವನ್ನು ಬೆಳೆಸುವ ಈ ಗುಣಗಳು ಜೀವನದಲ್ಲಿ ಅವಿನಾಭಾವಿಯಾಗಿದ್ದರೆ ನಮ್ಮ ಬಾಳು ಸಾರ್ಥಕವಷ್ಟೇ ಅಲ್ಲ, ಆದರ್ಶವೂ ಕೂಡ. ನಮಗಾಗಿ ಮಾತ್ರ ಬದುಕದೆ ಪರೋಪದ್ರವಿಯಾಗದೆ ಸುತ್ತೆಲ್ಲ ಸಂತಸವನ್ನು ಹಂಚುತ್ತ ಜೀವಿಸಿದರೆ ಅದಕ್ಕಿಂತ ಹೆಚ್ಚಿನದು ಬೇರೇನೂ ಇಲ್ಲ ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ… Continue Reading →
ಗೋಕರ್ಣ: ಲೋಕದಲ್ಲಿ ಸಾವಿರಾರು ವಸ್ತುಗಳಿವೆ. ಆದರೆ ಅವೆಲ್ಲವೂ ಸಾವನ್ನು ಹೊಂದಿದವೇ. ಆದರೆ ಸಾವಿರದ ಒಂದು ಸ್ಥಾನವಿದ್ದರೆ ಅದು ಭಗವಂತನ ಸಾನ್ನಿಧ್ಯ ಮಾತ್ರ. ಹಣಬಲದಿಂದಲೋ, ತೋಳಿನಶಕ್ತಿಯಿಂದಲೋ, ಅಧಿಕಾರದಿಂದಲೋ ಅದನ್ನು ಪಡೆಯಲು ಅಸಾಧ್ಯ. ಪರಮಾತ್ಮನ ಮೇಲಿನ ಅಸಾಧಾರಣ ಪ್ರೀತಿಯಿಂದ ಅನನ್ಯ ಶರಣತೆಯಿಂದ ಮಾತ್ರ ನಾವು ಆಸ್ಥಾನವನ್ನು ಸೇರಬಹುದು. ಅದಕ್ಕೆ ಅವನ ಕರುಣೆಯೂ ಬೇಕು ಎಂದು ಶ್ರೀ ರಾಮಚಂದ್ರಾಪುರಮಠದ ಪೂಜ್ಯ… Continue Reading →
ಗೋಕರ್ಣ: ಸಾಮಾಜಿಕವಾದ ಅನೇಕ ಋಣಗಳು ನಮ್ಮ ಮೇಲಿವೆ. ದೀನರ ಆರ್ತರ ಕಣ್ಣೊರೆಸುವುದೂ ಒಂದು ಭಗವತ್ಪ್ರೀತಿ ಸಾಧನವಾದ ಕಾರ್ಯವೇ. ಸಾಧ್ಯವಾದಷ್ಟರಮಟ್ಟಿಗೆ ನಮ್ಮಿಂದ ಇನ್ನೊಬ್ಬರಿಗೆ ಸಹಾಯ, ಸಹಕಾರಗಳು ಲಭ್ಯವಾಗುವ ರೀತಿಯಲ್ಲಿ ಬಾಳಬೇಕು. ಆಗ ಮಾತ್ರ ಬದುಕಿನ ಸಾರ್ಥಕತೆ ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ. ಇಂದು ಸಮೀಪದ ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಹೊರನಾಡಿನ ಚೆನ್ನೈ… Continue Reading →
ಗೋಕರ್ಣ. ಅಶೋಕೆಯಲ್ಲಿ ಚಾತುರ್ಮಾಸ್ಯವ್ರತವನ್ನು ಆಚರಿಸುತ್ತಿರುವ ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ತ್ರಯೋದಶಿಯ ಪ್ರದೋಷಪೂಜಾ ನಿಮಿತ್ತವಾಗಿ ಇಂದು ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಸಂದರ್ಶಿಸಿ ಸಾರ್ವಭೌಮನನ್ನು ವಿಶೇಷಪೂಜೆಯನ್ನು ಸಲ್ಲಿಸಿದರು. ಲಭ್ಯವಿರುವ ಮಾಹಿತಿಯಂತೆ ಇತ್ತೀಚಿನ ಶತಮಾನಗಳಲ್ಲಿ ಇದೇ ಮೊದಲಬಾರಿಗೆ ಪೂಜ್ಯಶ್ರೀಗಳು ಕ್ಷೇತ್ರಾಧೀಶ ಮಹಾಬಲೇಶ್ವರನಿಗೆ ಅಷ್ಟೋತ್ತರಶತ ಸುವರ್ಣ ನಾಣ್ಯಗಳು ಹಾಗೂ ರಜತ… Continue Reading →
ಗೋಕರ್ಣ: ಆಗಸ್ಟು 24: ನೂರು ಕಾನೂನುಗಳಿಂದ ತಪ್ಪಿಸಲು ಸಾಧ್ಯವಾಗದ ಕುಕೃತ್ಯವನ್ನು ಒಂದು ಪಾಪಭೀತಿ ತಡೆಯುತ್ತದೆ. ಅಂತಸ್ಸಾಕ್ಷಿಯಿಲ್ಲದ ಯಾವ ವ್ಯಕ್ತಿಯೂ ಇಲ್ಲ. ಸಾಮಾನ್ಯವಾಗಿ ತಾನು ಮಾಡಿದ ಪಾಪಪ್ರಜ್ಞೆಯು ವ್ಯಕ್ತಿಯನ್ನು ಕಾಡದೇ ಇರದು. ನಮ್ಮ ಪ್ರಾಚೀನರು ವ್ಯಕ್ತಿಯ ಅಭ್ಯುದಯ ಹಾಗೂ ಸಮಾಜದ ಸ್ವಾಸ್ಥ್ಯದ ಉದ್ದೇಶದಿಂದಲೇ ಹತ್ತು ಹಲವು ನಿಯಮಗಳನ್ನು ರೂಪಿಸಿ ಅವನ್ನು ಬದುಕಿನಲ್ಲಿ ಅಳವಡಿಸಿದರು. ಆದ್ದರಿಂದಲೇ ಹಿಂದಿನಕಾಲದಲ್ಲಿ ಇಂದು… Continue Reading →
ಗೋಕರ್ಣ: ಅಯೋಧ್ಯೆ ಒಂದು ಕಾಲದಲ್ಲಿ ಸಮಸ್ತ ಭಾರತದ ಕೇಂದ್ರ ಭೂಮಿ. ಸೂರ್ಯವಂಶದ ರಾಜರ ರಾಜಧಾನಿ. ವಿಶಾಲವಾದ ರಾಜಮಾರ್ಗಗಳು, ಭವನಗಳು, ಅಲ್ಲಲ್ಲಿ ಸುಂದರ ಉದ್ಯಾನಗಳು, ಭದ್ರವಾದ ಕೋಟೆಗಳು, ವ್ಯವಸ್ಥಿತವಾದ ಪೇಟೆ, ಶಿಲ್ಪಿಗಳು, ಚಿತ್ರಕಾರರು, ಕಲಾವಿದರಿಂದ ತುಂಬಿದ ನಗರ. ಅತ್ಯಂತ ಬಿಗುವಾದ ರಕ್ಷಣಾ ವ್ಯವಸ್ಥೆ. ಶತ್ರುಗಳ ಧಾಳಿಯನ್ನು ತಡೆಯಲು ಎಲ್ಲ ಬಗೆಯ ಯಂತ್ರಗಳು. ಇಂತಹ ಪರಿಪೂರ್ಣವಾದ ನಗರ ರಘುಕುಲತಿಲಕನಾದ… Continue Reading →