ಮಹಾಪುರುಷರ ನಡೆನುಡಿಗೆ ಸಾಮಾನ್ಯರ ಲೆಕ್ಕಾಚಾರಕ್ಕೂ ಮೀರಿದ ಅರ್ಥವ್ಯಾಪ್ತಿಯಿರುತ್ತದೆ. ಸಾಮಾನ್ಯರಿಗೂ ಮಹಾತ್ಮರಿಗೂ ಇರುವ ವ್ಯತ್ಯಾಸವೇ ಅದು. ರಾಮಲಕ್ಷ್ಮಣರನ್ನು ವಿಶ್ವಾಮಿತ್ರರು ಕರೆತರುವಾಗ ಇದ್ದ ಲೆಕ್ಕಾಚಾರ ಯಜ್ಞರಕ್ಷಣೆಯಾಗಬೇಕು, ರಾಕ್ಷಸರನ್ನು ಶಿಕ್ಷಿಸಬೇಕು. ಹಾಗಿದ್ದರೆ ಯಾಗ ಮುಗಿದಮೇಲೆ ಅವರಬ್ಬರು ಮರಳಬೇಕಿತ್ತಲ್ಲ, ಆದರೆ ಹಾಗಾಗಲಿಲ್ಲ. ವಿಶ್ವಾಮಿತ್ರರ ಬಳಿಸಾರಿ ಕಿಂಕರರು ನಾವು ಆಜ್ಞಾಪಿಸಿ. ನಿಮ್ಮ ಯಾವ ಅಪ್ಪಣೆ ಪಾಲಿಸಬೇಕು ಎಂದು ವಿನಮ್ರವಾಗಿ ಕೇಳಿದಾಗ ವಿಶ್ವಾಮಿತ್ರರೊಡಗೂಡಿ ಅಲ್ಲಿಯ… Continue Reading →
#ಧಾರಾ_ರಾಮಾಯಣ ಪ್ರವಚನಾಮೃತದ ಹದಿಮೂರನೆಯ ದಿನ: ಜಗತ್ತಿನಲ್ಲಿರುವ ಎಲ್ಲ ಅಸ್ತ್ರಗಳನ್ನು ರಾಮನಿಗೆ ಕೊಡಲು ಹೊರಟಿದ್ದಾರೆ ವಿಶ್ವಾಮಿತ್ರರು. ಈಗಾಗಲೇ ಸಕಲಶಾಸ್ತ್ರಪ್ರವೀಣ ಅವನು! ರಾಮನಂಥವರ ಬಾಣ ಪ್ರಯೋಗದಿಂದ ಆ ಜೀವಕ್ಕೆ ಉತ್ಥಾನ! ತಾಟಕೀಸಂಹಾರದಿಂದ ಆನಂದತುಲಿತರಾದ ವಿಶ್ವಾಮಿತ್ರರು ರಾಮನ ಕುರಿತು ಮುಧುರಾಕ್ಷರದ ಮಾತುಗಳನ್ನಾಡಿದರು,” ನೀ ಮಾಡಿದ ಕಾರ್ಯದಿಂದ ಸಂತೋಷವಾಗಿದೆ, ಅಂತಹ ಧರ್ಮಕಾರ್ತವನ್ನು ನೀನು ಮಾಡಿರುವೆ, ಬಹುಮಾನವಾಗಿ ಎಲ್ಲ ಅಸ್ತ್ರಗಳನ್ನೂ ನೀಡುತ್ತೇನೆ. ಮತ್ತೆ… Continue Reading →
“ಈ ಶ್ಲೋಕವನ್ನು ಕೇಳದವರು ಯಾರು? ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ | ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೇವಮಾಹ್ನಿಕಮ್ ||” ಗುರು ವಿಶ್ವಾಮಿತ್ರರು, ಪ್ರಭು ~ ಮಗು ಶ್ರೀರಾಮನನ್ನು ಉತ್ಥಾನಗೊಳಿಸಲು ಮಾಡಿದ ಸುಪ್ರಭಾತವಿದು. ಜೀವಮಾನದಲ್ಲಿ ಮೊದಲ ಬಾರಿಗೆ ಎಲೆಯ ಹಾಸಿಗೆಯಲ್ಲಿ ಮಲಗಿರುವ ರಾಮನನ್ನು ಬೆಳಗಿನ ಜಾವ ಎಬ್ಬಿಸ್ತಾರೆ ವಿಶ್ವಾಮಿತ್ರರು.. ಶ್ಲೋಕದ ಸರಳಾರ್ಥ ಹೀಗೆ: ಹೇ… Continue Reading →
ಪ್ರೀತಿ ಇರಬೇಕು, ಮೋಹ ಇರಬಾರದು. ಪ್ರೀತಿ ನಂಟು, ಮೋಹ ಅಂಟು. ಪ್ರೀತಿಯು ಸುಖಪ್ರದ. ಮೋಹ ದುಃಖಪ್ರದ. ಮೋಹ ಅಧರ್ಮ. ಮೋಹದಿಂದ ಕೂಡಿದವನಿಗೆ ಯಾವುದು ಸರಿ , ಯಾವುದು ತಪ್ಪು ಎಂದು ಯೋಚಿಸುವ ವಿವೇಕ ಇರುವುದಿಲ್ಲ. ವಸ್ತು ಅಥವಾ ವ್ಯಕ್ತಿ ಮೇಲೆ ಮೋಹ ಉಂಟಾದಾಗ ಏನಾಗುತ್ತದೆ ಎಂಬುದಕ್ಕೆ ದಶರಥ ಉದಾಹರಣೆ. ರಾಮನ ಮೇಲೆ ಮೋಹ ಬಂದಾಗ ದಶರಥನಿಗೆ… Continue Reading →
ಕಷ್ಟಗಳು ಬರುವಾಗ ಸಾಲುಸಾಲಾಗಿ ಬರುತ್ತವೆ. ಇದು ಕಷ್ಟ ಕಂಡವರ ಮಾತು.. ಯುಕ್ತಿ ಹೇಳುತ್ತದೆ, ಅದು ಸತ್ಯ ಅಂತಾದರೆ ಶ್ರೇಯಸ್ಸೂ ಕೂಡ ಹಾಗೆಯೇ, ಸಾಲುಸಾಲಾಗಿ ಬರುತ್ತವೆ. ನವಮಿ ತಿಥಿ, ಪುನರ್ವಸು ನಕ್ಷತ್ರ, ಕರ್ಕಾಟಕ ಲಗ್ನದಲ್ಲಿ – ಶ್ರೀರಾಮ ಪುಷ್ಯ ನಕ್ಷತ್ರ, ಮೀನ ಲಗ್ನದಲ್ಲಿ – ಭರತ ಪಂಚಮದಲ್ಲಿ ಗುರು ಮತ್ತು ಚಂದ್ರ.. ಪಂಚಮ ಅಂದ್ರೆ ಮನಸ್ಸು, ಮನಸಲ್ಲಿ… Continue Reading →
ದೀಪದ ಜ್ವಾಲೆ ಬೇಕು ನಿಜ ಅದರರ್ಥ ಎಣ್ಣೆ, ಬತ್ತಿ, ಪಾತ್ರ ಬೇಡ ಎಂಬುದಲ್ಲ; ಮಸ್ತಿಷ್ಕವೇ ಪ್ರಧಾನ ಎಂಬುದು ನಿಜ, ಆದರೆ ಕಣ್ಣು, ಕೈಕಾಲುಗಳು, ಜಠರ, ಹೃದಯಗಳು ಇಲ್ಲದಿದ್ದರೆ ಮಸ್ತಿಷ್ಕವು ಇಲ್ಲ; ಅವುಗಳಿದ್ದರೆ ಮಾತ್ರ ಮಸ್ತಿಷ್ಕ ಇರುತ್ತದೆ.. ದೇವಸ್ಥಾನದಲ್ಲಿ ದೇವರು ಪ್ರಧಾನ, ಆದರೆ ಪೂಜಾರಿ,ದೀಪಗಳು ಇವೆಲ್ಲ ಅಂಗಗಳು! ಕೇಂದ್ರ ಹೇಗೆ ಮುಖ್ಯವೋ, ಅಂಗಗಳೂ ಅಷ್ಟೇ ಮುಖ್ಯ, ಒಂದಕ್ಕೊಂದು… Continue Reading →
ದಶರಥನ ಪುತ್ರ ಕಾಮೇಷ್ಠಿಯಲ್ಲಿ ಹವಿರ್ಭಾವಕ್ಕಾಗಿ ನೆರೆದರು ದೇವತೆಗಳು ದೇವತೆಗಳೆಂದರೆ ದೇವರ ತುಣುಕುಗಳು, ದೇವರಷ್ಟೇ ವ್ಯಾಪ್ತಿ ಇರುವ ದೇವರ ತುಣುಕುಗಳು, ದೇವರೇ ತುಣುಕು ತುಣುಕುಗಳಾಗಿ ತನನ್ನು ದೇವತೆಗಳಾಗಿ ವಿಂಗಡಿಸಿಕೊಂಡು ಲೋಕವನ್ನು ಪಾಲನೆ ಮಾಡ್ತಿದ್ದಾನೆ. ದೇವತೆಗಳು ಎಂದರೆ ಬೆಳಕು, ದೇವತೆಗಳು ಹೋದಲ್ಲಿ ಕತ್ತಲ ನಿವಾರಣೆ; ದೇವತೆಗಳೆಂದರೆ ಒಳಿತುಗಳು, ಕೆಡುಕುಗಳ ಕಾಟದಿಂದ ಜೀವಗಳ ರಕ್ಷಣೆ ಅವರದೇ; ದೇವತೆಗಳೆಂದರೆ ಚೈತನ್ಯ… ಚೈತನ್ಯ… Continue Reading →
ಬ್ರಹ್ಮಾಂಡದಲ್ಲಿ ಅನಂತ ಕೋಟಿ ಜೀವಗಳು ಬದುಕುತ್ತಿದ್ದಾವೆ, ಆ ಎಲ್ಲ ಜೀವಿಗಳು ಪ್ರತಿಕ್ಷಣವೂ ಒಂದಿಲ್ಲೊಂದನ್ನು ಬಯಸುತ್ತಲೇ ಇರುತ್ತವೆ, ಇಷ್ಟಾರು ಅನಂತ ಕೋಟಿ ಜೀವಗಳ ಬಯಕೆಗಳನ್ನು ಸಂಗ್ರಹಿಸಿ ಹೇಳೋದಾದರೆ, ಕೆಲವು ಇಷ್ಟ ಪ್ರಾಪ್ತಿ, ಕೆಲವು ಕಷ್ಟ ಪರಿಹಾರಗಳು.. ಕೆಲವು ಬೇಕುಗಳು, ಕೆಲವು ಬೇಡಗಳು.. ಈ ಎಲ್ಲ ಬೇಕು,ಬೇಡಗಳ ಈಡೇರಿಕೆಗೆ ಯಾವುದಾದರೂ ಭದ್ರವಾದ ವ್ಯಕ್ತಿ ಅಥವಾ ಶಕ್ತಿಯನ್ನು ಆಶ್ರಯಿಸಬೇಕು. *ಸೂಕ್ತವಾದ… Continue Reading →
ಸೃಷ್ಟಿಯಲ್ಲಿ ಸರಳರೇಖೆಯಾಗಿ ಯಾವುದೂ ಇಲ್ಲ, ಜಡ ಪ್ರಪಂಚ..ಉದಾಹರಣೆಗೆ ಭೂಮಿ, ಸೂರ್ಯ, ನಕ್ಷತ್ರಗಳು, ಮರಗಿಡಗಳು, ಪ್ರಾಣಿ ಪಕ್ಷಿಗಳು, ಕೊನೆಗೆ ಮನುಷ್ಯನೂ ಸರಳ ರೇಖೆಯಲ್ಲ, ಸೀದಾ ಅಲ್ಲ.. ಅಂಕುಡೊಂಕು ಇಲ್ಲದ ಬದುಕೆಲ್ಲಿ, ಕೊರತೆಯಿಲ್ಲದ ಬದುಕೆಲ್ಲಿ. ಇದು ಭೂಮಿಯ ಸಹಜತೆಯೂ ಹೌದು, ವಿಶೇಷವೂ ಹೌದು.. *ಕೊರತೆಯಿಲ್ಲದ ಬದುಕು ಇಲ್ಲವೇ ಇಲ್ಲ, ಇದ್ದರೆ ಅದು ಬದುಕಿನ ಆಚೆಗಿನ ಮುಕ್ತಿ ಮಾತ್ರ ~… Continue Reading →
“ರಾಮಾಯಣವನ್ನು ಕೇಳುವುದರಿಂದ ಏನು ಪ್ರಯೋಜನವೆಂದರೆ, ಕಳೆದುಹೋದ ಅಮೂಲ್ಯವಾದ ಎಲ್ಲಾ ಸ್ವತ್ತಿನ ಪುನಃಪ್ರಾಪ್ತಿ. ರಾಮಾಯಣ ಕಥನ-ಶ್ರವಣದಿಂದ ಕಳೆದುಹೋದ ಅಮೂಲ್ಯ ಸ್ವತ್ತು ಪುನಃಪ್ರಾಪ್ತಿಯಾಗುತ್ತದೆ, ಅದಕ್ಕೆ ಉದಾಹರಣೆ ರಾಮನಿಗೆ ಲವಕುಶರು, ಸೀತೆ ಹಾಗೂ ರಾಜ್ಯದ ಪುನಃಪ್ರಾಪ್ತಿ – ಶ್ರೀಸೂಕ್ತಿ. ~~~~~ ರಾಮನು ಎಲ್ಲಿ ಅವತರಿಸಿದನು? ಎಂಬ ಪ್ರಶ್ನೆಗೆ ಉತ್ತರ ಇದು: ಈ ಭೂಮಂಡಲದ ಮೊದಲು ಯಾರದ್ದಾಗಿತ್ತೋ, ಕಶ್ಯಪ ಪರಂಪರೆಯಿಂದ ಪ್ರಾರಂಭವಾಗಿ,… Continue Reading →