Category ಬ್ಲಾಗ್

Sri Swamiji will blog here with a live and current topic. Blog would be either spiritual or general. Pick your interest.

ಕಣ್ತೆರೆದನೇ ಕಡಲಶಯನ !!

ಕಣ್ಮುಚ್ಚಿ ಕಲ್ಪಿಸಿಕೊಳ್ಳಿ. ವಿಮಾನವೊಂದರಲ್ಲಿ ನೀವು ಪ್ರಯಾಣಿಸುತ್ತಿದ್ದೀರಿ. ಒಂದು ವೇಳೆ ವಿಮಾನವನ್ನು ನಡೆಸುವಾತ ದೀರ್ಘ ನಿದ್ರೆಗೆಳಿದರೆ ಪರಿಣಾಮವೇನಾದೀತು? ದೇಶವನ್ನು ಕಾಯುವ ಸೈನಿಕ ಮೈಮರೆತು ಮಲಗಿದರೆ ಪ್ರಜೆಗಳ ಪಾಡೇನು? ಒಂದಡಿ ಮುಂದಿಟ್ಟು ಕಲ್ಪಿಸಿಕೊಳ್ಳಿ. ಬ್ರಹ್ಮಾಂಡವನ್ನು ನಡೆಸುವಾತ/ಕಾಯುವಾತ ನಾಲ್ಕುತಿಂಗಳುಗಳ ಕಾಲ ನಿದ್ರಿಸಿದರೆ…? ಹೀಗೂ ಉಂಟೇ?

ತಿದ್ದಿಕೊಳೋ ನಿನ್ನ ನೀ.. ಜಗವ ತಿದ್ದುವುದಿರಲಿ……

ದಬ್ಬಾಳಿಕೆಯ ಆದಿ ಯಾವುದು..? ವಿನಾಶದ ಪ್ರಾರಂಭ ಎಲ್ಲಿಂದ..? ವ್ಯಕ್ತಿ-ವ್ಯಕ್ತಿಗಳ ಮಧ್ಯೆ ಕಲಹಗಳು.. ಸಮೃದ್ಧ ಕುಟುಂಬಗಳಲ್ಲಿ ವಿರಸ-ವಿಚ್ಛೇದನಗಳು.. ದೇಶ-ದೇಶಗಳ ಮಧ್ಯೆ ಸಂಗ್ರಾಮಗಳು..ಹೀಗೇಕೆ..? ಉತ್ತರವನ್ನು ನಾವಿಲ್ಲಿ ಕಂಡೆವು….. ಒಂದಾನೊಂದು ಊರು, ಆ ಊರಿಗೊಬ್ಬ ಜಮೀನ್ದಾರ, ಊರಿಗೆ ಆತ ತುಂಡರಸನಂತಿದ್ದ, ಆತನ ಅಪ್ಪಣೆಯಿಲ್ಲದೆ ಆ ಊರಿನಲ್ಲಿ ಹುಲ್ಲು ಕಡ್ಡಿಯೂ ಅಲುಗಾಡುವನ್ತಿರಲಿಲ್ಲ.. ಕಾಲದ ಮಹಿಮೆಯಿಂದಾಗಿ ಆತನನ್ನು ವಿಚಿತ್ರ ಕಾಯಿಲೆಯೊಂದು ಆವರಿಸಿಕೊಂಡಿತು.. ಪರೀಕ್ಷಿಸಿದ… Continue Reading →

ದಿವಿ-ಭುವಿಗಳ ಸಂಗಮ “ಹರೇರಾಮ”

‘ಹರಿ’ ಎಂದರೆ ದಿವಿಯಲ್ಲಿ ನಿತ್ಯ ಬೆಳಗುವ “ನಾರಾಯಣ-ತತ್ವ”
ಅದು ನರನಾಗಿ ಭುವಿಗಿಳಿದು ಬಂದಾಗ ‘ರಾಮ’ನೆಂಬ ಅಭಿಧಾನ..
ದಿವಿಯಿಂದ ಭುವಿಗಿಳಿದು ಬಂದು ಭುವಿಯನ್ನು ದಿವಿಯಾಗಿಸಿದ ಮಹಾಚೇತನದ ಉಭಯರೂಪಗಳನ್ನು ಕಂಡ ಪುಣ್ಯ ಚಕ್ಷುಗಳ ಉದ್ಗಾರವೇ ” ಹರೇರಾಮ “

ಅನಾವರಣಗೊಂಡಿತು ಹರೇರಾಮ !!

ಬಹುನಿರೀಕ್ಷಿತವಾದ ನಮ್ಮೆಲ್ಲರ E-ಮಠ ‘ಹರೇರಾಮ’ ಬೆಳಕಿನ ಹಬ್ಬದಂದು ಬೆಳಕನ್ನು ಕಂಡಿದೆ.ಇದರೊಂದಿಗೆ ನಿಮ್ಮೆಲ್ಲರೊಡನೆ ಮತ್ತೆ ಮತ್ತೆ ಮಾತನಾಡುವ ನಮ್ಮ ತುಡಿತ ಸಫಲಗೊಂಡಿದೆ.ಎಲ್ಲ ವಿಧದ ದೂರಗಳನ್ನು ಮೀರಿ ನಿಲ್ಲುವ ಶಕ್ತಿ ಪ್ರೀತಿಗಿದೆ.ಬ್ರಹ್ಮಾಂಡದ ಎರಡು ತುದಿಗಳನ್ನು ಒಂದುಗೂಡಿಸಬಲ್ಲುದು ಪ್ರೀತಿ.ಗುರುಶಿಷ್ಯರ ಪರಸ್ಪರ ಪ್ರೀತಿಯ ಪ್ರಕಟ ರೂಪವೇ ಈ ಅಂತರ್ಜಾಲ ತಾಣ ಅಥವಾ ಅಂತರಂಗ ತಾಣ.ಅಂತರಂಗಗಳನ್ನು ಅಂತರವಿಲ್ಲದಂತೆ ಬೆಸೆಯುವ ತಾಣ.ಇಲ್ಲಿಯವರೆಗೆ ಬಹಿರಂಗದಲ್ಲಿ ದೂರವಿದ್ದಾಗ… Continue Reading →

Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑