ಬದುಕು ಮುಂದೆ ಸಾಗಬೇಕು..
ಆದರೆ ಅದು ಸರಿಯಾದ ದಾರಿಯಲ್ಲಿ ಮುಂದೆ ಸಾಗಬೇಕು..
ಬದುಕು ಮುಂದೆ ಸಾಗಲು ಬೇಕು “ಪ್ರೀತಿ”
ಅದು ಸರಿಯಾದ ದಾರಿಯಲ್ಲಿ ಸಾಗಲು ಬೇಕು “ನೀತಿ”
ಬದುಕು ಚಲಿಸಲು ಬೇಕು ’ಪ್ರೀತಿ” ಎಂಬ ಚಾಲನಾಶಕ್ತಿ..
ಅದು ನಿಜವಾದ ಲಕ್ಷ್ಯದೆಡೆಗೆ ಚಲಿಸಲು ಬೇಕು “ನೀತಿ ’ಎಂಬ ಚಾಲಕ..
ಶೂರ್ಪಣಖೆಗೆ ರಾಮನ ಕುರಿತು, ಅವಳ ಅಣ್ಣನಿಗೆ ಸೀತೆಯ ಕುರಿತು ಇದ್ದಿದ್ದು ಪ್ರೀತಿಯಲ್ಲ..ಏಕೆಂದರೆ ಅಲ್ಲಿ ನೀತಿಯಿರಲಿಲ್ಲ..
ನೀತಿಗೆ ಸಲ್ಲದ ಪ್ರೀತಿಯು ಪ್ರೀತಿಯೇ ಅಲ್ಲ..!!
|| ಹರೇ ರಾಮ || ದೀಪ ಬೆಳಗಬೇಕು.. ದೀಪ ಬೆಳಗಬೇಕೆಂದರೆ ಬತ್ತಿಗಳು ಉರಿಯಬೇಕು.. ದೀಪವು ದೀರ್ಘಕಾಲ ಬೆಳಗಬೇಕೆಂದರೆ ಎಣ್ಣೆಯು ಸದ್ದಿಲ್ಲದೆಯೇ ಆತ್ಮಾರ್ಪಣೆ ಮಾಡಿಕೊಳ್ಳಬೇಕು.. ತಾನು ಆರಿ ದೀಪವನ್ನು ಉರಿಸಬೇಕು… ತನ್ನ ಆಯುಸ್ಸನ್ನು ಜ್ಯೋತಿಗೆ ಧಾರೆಯೆರೆಯಬೇಕು.. ದೀಪದ ಧವಲಪ್ರಭೆಗಾಗಿ ದೀಪಪಾತ್ರವು ತನ್ನ ಮೈಯೆಲ್ಲವನ್ನೂ ಮಸಿಯಾಗಿಸಿಕೊಳ್ಳಬೇಕು.. ದೀಪವು ಪ್ರಜ್ವಲಿಸಿ ಪ್ರಕಟಗೊಂಡರೆ ಇವು ಕಂಡೂ ಕಾಣಿಸದವು..!! ತಾವು ಮರೆಯಲ್ಲಿ ನಿಂತು… Continue Reading →
|| ಹರೇರಾಮ || ಕೆಲವರನ್ನು ಹಲವು ಕಾಲ ಮೆಚ್ಚಿಸಬಹುದು.. ಹಲವರನ್ನು ಕೆಲವು ಕಾಲ ಮೆಚ್ಚಿಸಬಹುದು.. ಬಹುಜನರನ್ನು ಬಹುಕಾಲ ಮೆಚ್ಚಿಸುವುದು ಬಲು ಕಠಿಣದ ಮಾತು.. ಆದರೆ ದಶರಥನಿಗಿದು ಕಠಿಣವೆನಿಸಲೇ ಇಲ್ಲ.. ನೀರಿನಲ್ಲಿ ಬೆರೆಸಿದ ಸಕ್ಕರೆ ಬಿಂದು- ಬಿಂದುವನ್ನೂ ಬಿಡದೆ ವ್ಯಾಪಿಸುವಂತೆ ದಶರಥನ ರಾಜ್ಯಭಾರ ಕೌಶಲದ ಸವಿಫಲ ವ್ಯಕ್ತಿ-ವ್ಯಕ್ತಿಗಳನ್ನೂ ತಲುಪಿತು… ಸೂರ್ಯನು ಒಂದು ಬಾರಿಗೆ ಭೂಮಿಯ ಒಂದು ಪಾರ್ಶ್ವವನ್ನು… Continue Reading →
|| ಹರೇರಾಮ || “ಉದ್ಧರಿಸುವೆನು ಜಗವನೆನ್ನುತಿಹ ಸಖನೆ ನಿನ್ನುದ್ಧಾರವೆಷ್ಟಾಯ್ತೋ ?” ಲೋಕವನ್ನು ಸುಧಾರಿಸಬಯಸುವವನು ಆ ಪ್ರಕ್ರಿಯೆಯನ್ನು ತನ್ನಿಂದಲೇ ಪ್ರಾರಂಭಿಸಬೇಕು.. ನಮ್ಮ ಪಾಲಿನ ಲೋಕದ ದ್ವಾರಗಳೆಂದರೆ ನಮ್ಮ ಶರೀರ-ಮನಸ್ಸುಗಳು ; ನಮ್ಮ ವ್ಯಕ್ತಿತ್ವ- ಬದುಕುಗಳು.. ಜಗತ್ತು ನಮ್ಮ ಮುಂದೆ ತೆರೆದುಕೊಳ್ಳುವುದು, ನಮಗೆ ಸ್ಪಂದಿಸುವುದು ಇವುಗಳ ಮೂಲಕವಾಗಿಯೇ…! ಇವುಗಳನ್ನು ಚೆನ್ನಾಗಿಟ್ಟುಕೊಳ್ಳದವನ ಪಾಲಿಗೆ ಜಗತ್ತು ಚೆನ್ನಾಗಿರಲು ಸಾಧ್ಯವೇ ಇಲ್ಲ.. ಮನೆ… Continue Reading →
|| ಹರೇರಾಮ || ಬೇರೆಯಾಗುವುದು ಸುಲಭ… ಬೆರೆಯುವುದು ಸುಲಭವಲ್ಲ..! ವಿಭಕ್ತಿ ಸುಲಭ.. ಭಕ್ತಿ ಸುಲಭವಲ್ಲ.. ಒಡೆಯಲು ಕ್ಷಣ… ಕೂಡಿಸಲು..? ವಿಶ್ವದ ಯಾವೆರಡು ವಸ್ತುಗಳು ಸೇರಬೇಕೆಂದರೂ ಅದು ಸುಲಭದ ಮಾತಲ್ಲ.. ಅದರಲ್ಲಿಯೂ ಹಿರಿದರಲ್ಲಿ ಹಿರಿದಾದ ವಸ್ತುಗಳೆರಡು ಸೇರಬೇಕೆಂದರೆ..? ಕೂಡಿಸುವ ಕೊಂಡಿಯೊಂದು ನಡುವೆ ಬೇಕೇ ಬೇಕು.. ಜೀವನು ದೇವನೊಡನೆ ಸೇರಬೇಕೆಂದರೆ ‘ಗುರು‘ವೆಂಬ ಕೊಂಡಿ ನಡುವೆ ಬೇಕೇ ಬೇಕಲ್ಲವೇ..? ದೇವನೇ… Continue Reading →
|| ಹರೇರಾಮ || ಗಂಗೆಗೆ ಗಂಗೆಯೆಂಬ ಹೆಸರು ಎಂದು ಬಂದಿತೋ, ಅಂದಿದ್ದ ಜಲಪ್ರವಾಹ ಇಂದಿಲ್ಲ… ಅದು ಹರಿದು ಸಮುದ್ರವನ್ನು ಸೇರಿ ಅದೆಷ್ಟೋ ಕಾಲವಾಯಿತು..! ಅಂದಿನಿಂದ ಇಂದಿನವರೆಗೆ ಗಂಗೋತ್ರಿಯಿಂದ ಗಂಗಾಸಾಗರಕ್ಕೆ ಅದೆಷ್ಟು ನೀರು ಹರಿದಿಲ್ಲ..? ಪ್ರತಿಕ್ಷಣವೂ ಹಳೆಯನೀರು ಹರಿದುಹೋಗಿ ಹೊಸನೀರು ಬರುತ್ತಿದ್ದರೂ ಗಂಗೆಯೆಂಬ ಹೆಸರು ಮಾತ್ರ ಬದಲಾಗಲೇ ಇಲ್ಲ.. ಏಕೆಂದರೆ, ಅಲ್ಲಿ ಹರಿದುಹೋದ ಹಳೆಯನೀರೂ ಗಂಗೆಯೇ, ಹರಿದು… Continue Reading →
“ಕಾರಣಗುಣಗಳು ಕಾರ್ಯಗಳಲ್ಲಿ ಕಾಣಿಸಿಕೊಳ್ಳುವುದು ನಿಸರ್ಗ ನಿಯಮ”..
ನೂಲಿನ ಬಣ್ಣ ಬಟ್ಟೆಯಲ್ಲಿ, ಬೀಜದ ಗುಣ ವೃಕ್ಷದಲ್ಲಿ, ತಾಯಿಯ ಸ್ವಭಾವ ಮಕ್ಕಳಲ್ಲಿ ಸಂಕ್ರಮಿಸುವುದು ಲೋಕದಲ್ಲಿ ನಿತ್ಯದರ್ಶನದ ವಿಷಯ…
ಅಂತೆಯೇ ಕಾರಣಪುರುಷನಾದ ಸೂರ್ಯದೇವನ ಗುಣಗಳೆಲ್ಲವೂ ಸೂರ್ಯವಂಶದ ರಾಜರುಗಳಲ್ಲಿ ಸೂರ್ಯನಷ್ಟೇ ಸ್ಪಷ್ಟವಾಗಿ ಗೋಚರಿಸಿದವು..
ಸೂರ್ಯನು ದಿವಿಯ ಮಧ್ಯದಲ್ಲಿ ನಿಂತು ಭುವಿಯನ್ನು ಬೆಳಗಿದರೆ, ಸೂರ್ಯವಂಶೀಯರು ಭುವಿಯ ಮಧ್ಯದಲ್ಲಿ ನಿಂತು ಜೀವರಾಶಿಗಳ ಜೀವನವನ್ನೇ ಬೆಳಗಿದರು..!
ಸೂರ್ಯನು ಕತ್ತಲೆಯ ವೈರಿಯಾದರೆ..
ಸೂರ್ಯವಂಶೀಯರು ಕೆಡುಕಿನ ವೈರಿಗಳು..