ಗೋಕರ್ಣ: ವಿರೂಪವೆಂಬುದು ಶರೀರಕ್ಕೆ ಮಾತ್ರ ಸೀಮಿತವಲ್ಲ. ಅದು ಮನಸ್ಸಿನಲ್ಲಿಯೂ ಇರಲು ಸಾಧ್ಯ. ದೇಹದ ವಿರೂಪತೆ ಸಮಾಜಕ್ಕೆ ಕೇಡಲ್ಲ. ಆದರೆ ಮನಸ್ಸಿನಲ್ಲಿ ಮೂಡುವ ವಿರೂಪತೆ ಮಾತ್ರ ಆತಂಕಕಾರಿ. ಕೆಲವು ರೋಗಗಳನ್ನು ಔಷಧದಿಂದ ಕಡಿಮೆ ಮಾಡಬಹುದು. ಇನ್ನು ಕೆಲವಕ್ಕೆ ಪ್ರಯತ್ನದಿಂದ ಚಿಕಿತ್ಸೆಮಾಡಿ ಗುಣಪಡಿಸಬಹುದು. ಆದರೆ ಅಸಾಧ್ಯರೋಗಗಳಲ್ಲಿ ಯಾವ ಔಷಧವೂ ಪ್ರಯೋಜನಕ್ಕೆ ಬರುವುದಿಲ್ಲ. ಮನಸ್ಸಿನ ವಿರೂಪತೆ ಇಂತಹ ಅಸಾಧ್ಯರೋಗವರ್ಗಕ್ಕೆ ಸೇರಿದ್ದು…. Continue Reading →
ಗೋಕರ್ಣ: ಅಗಸ್ಟ್.೨೦: ವಿನಯ, ಸೌಜನ್ಯಗಳು ಮಾನವನ ಸಹಜಗುಣ. ಸಾಮಾನ್ಯ ವ್ಯವಹಾರದಲ್ಲಿಯೇ ಗುರುಹಿರಿಯರ ವಿಷಯದಲ್ಲಿ ಇವುಗಳಿಗೆ ಅಪಾರ ಮಹತ್ವವಿದೆ. ಶಕ್ತಿಯಿದ್ದರೆ ಅದರ ಜೊತೆ ವಿನಯವೂ ಇದ್ದರೆ ಮಾತ್ರ ಶೋಭೆ. ದೈವಭೀರುವಲ್ಲದವನ ಸಾಮರ್ಥ್ಯ ಪರರಹಿಂಸೆಯಲ್ಲಿಯೇ ಸಾರ್ಥಕವಾಗಿಬಿಡುವ ಅಪಾಯವಿದೆ. ಇದು ಜೀವನೋತ್ಕರ್ಷಕ್ಕೆ ಸಲ್ಲದ್ದು. ನಮ್ಮಲ್ಲಿರುವ ಶಕ್ತಿಯು ಪರೋಪಕಾರಕ್ಕಾಗಿ, ವಿದ್ಯೆಯು ಜ್ಞಾನಕ್ಕಾಗಿ ಹಾಗೂ ಸಂಪತ್ತು ದಾನಕ್ಕಾಗಿ ಉಪಯುಕ್ತವಾಗಬೇಕು. ಮಹಾತ್ಮರ ವಿಷಯದಲ್ಲಿ ಎಂದೂ… Continue Reading →
ಗೋಕರ್ಣ: ದೇಹಭಾವವಿರುವ ನಮ್ಮೊಳಗೆ ದೇವಭಾವವೂ ಇದೆ. ಆದರೆ ದೇಹಾಭಿಮಾನದ ಕೈಮೇಲಾದಾಗ ಆ ದೇವಭಾವ ಮರೆಯಾಗುತ್ತದೆ. ನಮ್ಮೊಳಗಿನ ಅಂತರಾತ್ಮ ಸದಾ ನಮಗೆ ಎಚ್ಚರವನ್ನು ನೀಡುತ್ತಲೇ ಇರುತ್ತಾನೆ. ಆದರೆ ಅದು ಹೆಚ್ಚಾಗಿ ನಮಗೆ ಕೇಳುವುದೇ ಇಲ್ಲ. ಎಲ್ಲೋ ಅಪರೂಪಕ್ಕೊಮ್ಮೆ ಕೇಳಿದರೂ ಅದನ್ನು ಪಾಲಿಸುವ ಸ್ವಭಾವ ನಮ್ಮದಾಗಿರುವುದಿಲ್ಲ. ರಾಮಾಯಣ ನಮ್ಮ ಬದುಕಿಂದ ಬೇರೆಯಾದದ್ದಲ್ಲ. ಅದು ಸದಾ ಪ್ರಸ್ತುತವೇ. ಕೆಡುಕು ಸದಾ… Continue Reading →
ಗೋಕರ್ಣ: ಹರಿಯುವ ತಿಳಿನೀರಿನ ನದಿಯಲ್ಲಿ ಯಾವ ಕೊಳೆಯೂ ಇರದು. ಸ್ವಚ್ಛ ಮತ್ತು ಶುದ್ಧವಾದ ನೀರು ಸಾತ್ವಿಕಗುಣದ ದ್ಯೋತಕ. ಸದಾ ಪರಹಿತವನ್ನೇ ಬಯಸುತ್ತ ಬದುಕಿನಲ್ಲಿ ಒಳಿತನ್ನೇ ಕಾಣುತ್ತ ಜೀವಿಸುವ ವ್ಯಕ್ತಿಗೆ ಪರಮಾತ್ಮಪ್ರಾಪ್ತಿಗೆ ಬೇರಾವ ತಪಸ್ಸೂ ಬೇಡ. ಅವನ ಲೋಕಹಿತಂಕರಕಾರ್ಯವನ್ನು ಅರಸುತ್ತ ಸುಖವೇ ಅವನ ಬಳಿ ಬರುತ್ತದೆ. ಪರಿಶುದ್ಧ ಮನಸ್ಸು ಭಗವಂತನ ಕೊಡುಗೆ ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ… Continue Reading →
ಗೋಕರ್ಣ: ನಾವು ಆಚರಿಸಿದ ಧರ್ಮವೇ ನಮ್ಮ ಬದುಕಿಗೆ ಔನ್ನತ್ಯಕಾರಕ. ಧರ್ಮವು ಜೀವನದಲ್ಲಿ ಸ್ಥಾಯಿಯಾದಾಗ ಅದು ಭಗವತ್ಪ್ರಾಪ್ತಿಗೆ ಸೇತುವೆಯೂ ಆಗುತ್ತದೆ. ಭಗವಂತನಲ್ಲಿ ಯಾವುದನ್ನೂ ಬೇಡದಿದ್ದಾಗ ನಾವು ಬಯಸುವುದಕ್ಕಿಂತಲೂ ಹೆಚ್ಚಿನ ಅನುಗ್ರಹ ದೊರೆಯುತ್ತದೆ ಎಂಬುದಕ್ಕೆ ರಾಮಾಯಣದ ಕುಬೇರನೇ ಶ್ರೇಷ್ಠ ಉದಾಹರಣೆ. ಆತ ತಂದೆಯಿಂದ ಪ್ರಾಪ್ತವಾಗಿದ್ದ ಲಂಕಾನಗರವನ್ನು ರಾವಣನು ಬಯಸಿದನೆಂಬ ಕಾರಣಕ್ಕಾಗಿ ಅದನ್ನು ಅವನಿಗೇ ಬಿಟ್ಟುಕೊಟ್ಟು ದಕ್ಷಿಣದ ತುದಿಯನ್ನು ಬಿಟ್ಟು… Continue Reading →
ಗೋಕರ್ಣ: ತಮ್ಮ ಸತತ ಸಾಧನೆಯಿಂದ ದಿವ್ಯತೆಯನ್ನು ಪಡೆದು ವೈಕುಂಠ ಲೋಕವನ್ನು ಪ್ರವೇಶಿಸಿದರೂ ಎಲ್ಲಿಯೋ ಸ್ವಲ್ಪ ಉಳಿದಿದ್ದ ಅಥವಾ ಗಳಿಸಿದ್ದ ದೋಷದ ಪರಿಣಾಮವಾಗಿ ಜಯವಿಜಯರು ಶಾಪಗ್ರಸ್ತರಾಗಿ ಧರೆಗುರುಳಿದರು. ಅಲ್ಲಿಯೂ ಅವರು ಪರಮಾತ್ಮನ ಮಿತ್ರತೆಯನ್ನು ಕೇಳದೆ ಶತ್ರುತ್ವವನ್ನೇ ಪ್ರಾರ್ಥಿಸಿದರು. ರಾವಣ, ಕುಂಭಕರ್ಣರಾಗಿ ಜನಿಸಿ ತಪಸ್ಸನ್ನಾಚರಿಸಿ ವರ ಪಡೆದರೂ ಅಲ್ಲಿಯೂ ಅವರ ರಾಜಸ ಹಾಗೂ ತಾಮಸೀ ಪ್ರವೃತ್ತಿ ದೂರಾಗಲಿಲ್ಲ. ಬದುಕಿನುದ್ದಕ್ಕೂ… Continue Reading →
ಗೋಕರ್ಣ: ನಾವು ಬದುಕಿನಲ್ಲಿ ಬೇಡಿದ್ದನ್ನೆಲ್ಲ ಭಗವಂತ ನೀಡುವುದಿಲ್ಲ. ಪರಮಾತ್ಮ ವಾತ್ಸಲ್ಯಮಯಿಯಾದ ತಾಯಿಯಂತೆ. ನಮ್ಮ ಒಳಿತನ್ನು ನಮಗಿಂತಲೂ ಚೆನ್ನಾಗಿ ಬಲ್ಲವನಾತ. ಆದ್ದರಿಂದಲೇ ನಮಗೆ ನಾವು ಕೇಳಿದೆವೆಂದು ಪ್ರಿಯವಾದುದನ್ನು ನೀಡದೆ ಹಿತವಾದುದನ್ನೇ ಕೊಡುತ್ತಾನೆ. ಹೀಗೆ ಪರಮಾತ್ಮನ ಪ್ರಸಾದರೂಪವಾದ ಜೀವನದಲ್ಲಿ ನಮಗೆ ಸಿಕ್ಕಿದ್ದಷ್ಟಕ್ಕೇ ತೃಪ್ತರಾದರೆ ನಮ್ಮ ಬದುಕು ಆನಂದಮಯವಾಗುತ್ತದೆಯೆಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ. ಇಂದು ಅಶೋಕೆಯಲ್ಲಿ… Continue Reading →
ಗೋಕರ್ಣ: ದನವೇ ಧನವಾಗಿದ್ದ ಕಾಲವೊಂದಿತ್ತು. ಗೋವುಗಳ ಮೂಲಕವೇ ವ್ಯಕ್ತಿಯೋರ್ವನ ಆರ್ಥಿಕಸ್ಥಿತಿಯನ್ನು ಅಳೆಯುವ ಕಾಲವೂ ಇತ್ತು. ಆದರೆ ಭಾರತೀಯರಾದ ನಾವು ವಿಶ್ವಜನನಿಯಾದ ಗೋಮಾತೆಯನ್ನು ಮರೆತಿದ್ದೇವೆ. ನಮ್ಮ ಬದುಕಿನಲ್ಲಿ ಹೆತ್ತ ತಾಯಿಯಷ್ಟೇ ಶ್ರೇಷ್ಠಸ್ಥಾನವನ್ನು ಹೊಂದಿದ ಗೋವಿಗೆ ನಮ್ಮ ಸೇವೆಯನ್ನು ಸಲ್ಲಿಸುವುದು ಮಕ್ಕಳಾದ ನಮ್ಮ ಕರ್ತವ್ಯವಾಗಿದೆಯೆಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ. ಚಾತುರ್ಮಾಸ್ಯದ ನಿಮಿತ್ತ ಇಂದು ಅಶೋಕೆಯಲ್ಲಿ… Continue Reading →
ಗೋಕರ್ಣ: ಮಾನವರಾದ ನಮಗೆ ಹುಟ್ಟು, ಸಾವುಗಳು ತಪ್ಪಿದ್ದಲ್ಲ. ನಿರಂತರವಾಗಿ ಒಂದಾದ ನಂತರ ಮತ್ತೊಂದು ಸಾಗರದ ಅಲೆಗಳಂತೆ ಬಂದೆರಗುತ್ತಲೇ ಇರುತ್ತದೆ. ಸಾವಿನಷ್ಟೇ ಹುಟ್ಟೂ ಸಹ ದುಃಖಕರ. ಶ್ರೀಮದಾಚಾರ್ಯ ಶಂಕರ ಭಗವತ್ಪಾದರೂ ಕೂಡಾ ಪುನರಪಿ ಜನನಂ ಪುನರಪಿ ಮರಣಂ ಎಂಬ ಮಾತಿನ ಮೂಲಕ ಸತ್ಯವನ್ನು ಹೇಳಿ ನಮ್ಮನ್ನು ಎಚ್ಚರಿಸುತ್ತಾರೆ. ಜೀವನದ ಅಸ್ಥಿರತೆಯ ಅರಿವಿದ್ದರೆ ಮಾತ್ರ ಸ್ವಲ್ಪಮಟ್ಟಿಗಿನ ನೆಮ್ಮದಿಯನ್ನು ಕಾಣಬಹುದು…. Continue Reading →
ಗೋಕರ್ಣ: ನಮ್ಮ ಬದುಕಿನ ಮಾರ್ಗದರ್ಶನಕ್ಕೆ ಗುರು ಬೇಕು. ಗುರು ಎಂದರೆ ಕೇವಲ ವ್ಯಕ್ತಿಯಲ್ಲ. ಅದೊಂದು ತತ್ವ. ಶಿಷ್ಯಸಮುದಾಯವು ಪರಂಪರೆಯಿಂದ ಗುರುವನ್ನು ಆರಾಧಿಸುತ್ತ ಜೀವನದ ಸಾರ್ಥಕತೆಗೆ ಗುರುವನ್ನು ಅವಲಂಬಿಸಿದಂತೆ ಸ್ವತಃ ಗುರುವೂ ತನ್ನ ಗುರುಪರಂಪರೆಯನ್ನು ಅರ್ಚಿಸುತ್ತಾನೆ. ಆದಿಗುರುವಿನಲ್ಲಿ ಈ ಪಂಕ್ತಿ ಕೊನೆಗೊಳ್ಳುತ್ತದೆ. ಕೋಣೆಯಲ್ಲಿ ಎಷ್ಟೋ ವಸ್ತುಗಳು ತುಂಬಿರುತ್ತವೆ. ಅದರಲ್ಲಿ ಅತ್ಯಮೂಲ್ಯವಾದ ಪದಾರ್ಥಗಳೂ ಇರಬಹುದು. ಆದರೆ ಅದರ ಸಮ್ಯಗ್ದರ್ಶನಕ್ಕೆ… Continue Reading →