ಗೋಕರ್ಣ: ೧೩. ನಮ್ಮ ಈ ಬದುಕು ಭಗವಂತನ ಕೊಡುಗೆ. ಇಲ್ಲಿ ನಾವು ಕೇವಲ ಸಾಧನ ಮಾತ್ರ. ಯಾವ ಕಾರ್ಯದಲ್ಲಿಯೂ ನಮಗೆ ಸ್ವತಂತ್ರಕತೃತ್ವವಿಲ್ಲ. ಎಂದಾದರೂ ಇದು ನಮ್ಮದೇ ಸಾಧನೆಯೆಂಬ ಭಾವ ಬಲಿತರೆ ಅಹಂಕಾರ ಅಮರಿಕೊಂಡರೆ ನಮ್ಮ ಪತನಕ್ಕೆ ಹೆಚ್ಚು ಸಮಯವಿಲ್ಲ ಎಂದೇ ಅರ್ಥ. ಪ್ರಭು ಶ್ರೀರಾಮಚಂದ್ರ ಈ ವರ್ಷದ ಚಾತುರ್ಮಾಸ್ಯ ಕಾರ್ಯಕ್ರಮವನ್ನು ತುಂಬ ಸುಂದರವಾಗಿ ನಿರೂಪಿಸಿದ್ದಾನೆ. ಇದಕ್ಕೆ… Continue Reading →
ಗೋಕರ್ಣ: ೧೨.ನಾವು ನಮ್ಮ ಬದುಕಿನಲ್ಲಿ ನಾವು, ನಮ್ಮ ಶರೀರ, ಬಳಗ, ನಮ್ಮ ಕುಟುಂಬ ಎಂಬ ಸೀಮಿತವಾದ ಬೇಲಿಯನ್ನು ಹಾಕಿಕೊಂಡು ಜೀವಿಸುತ್ತೇವೆ. ಆದರೆ ಈ ಸೀಮೆಯನ್ನು ದಾಟಿ ಹೋಗಿ ಸಮಾಜದತ್ತ ಕಣ್ಣು ಹೊರಳಿಸಿದರೆ, ನಮ್ಮಾತ್ಮದ ವಿಸ್ತಾರವನ್ನು ಮಾಡಿಕೊಂಡು ವಿಶ್ವಕುಟುಂಬಿಯಾಗುವ ಪ್ರಯತ್ನವನ್ನು ಮಾಡಿದರೆ ಆಗುವ ಅನುಭೂತಿಯೇ ಬೇರೆ. ಎಲ್ಲರನ್ನೂ ನಮ್ಮವರೆಂದುಕೊಂಡು ವ್ಯವಹರಿಸಿದಾಗ ಆಗುವ ಸಂತೋಷ ಅನಿರ್ವಚನೀಯವಾದದ್ದು. ಸೀಮೋಲ್ಲಂಘನವು ಯತಿಗಳಿಗೆ… Continue Reading →
ಗೋಕರ್ಣ:೧೦ ಲೋಕಕ್ಕೇ ಬೆಳಕು ನೀಡುವ ಸೂರ್ಯನಿಂದ ಪ್ರಸಿದ್ಧವಾದ ವಂಶದಲ್ಲಿ ಹುಟ್ಟಿ ಮಾನವರಾಗಿ ಹೇಗೆ ಬಾಳಬೇಕು ಎಂಬುದನ್ನು ವಿಶ್ವಕ್ಕೆ ಆದರ್ಶಮಯವಾದ ತನ್ನ ಜೀವನದ ನಡೆನುಡಿಗಳಿಂದ ತೋರಿಸಿಕೊಟ್ಟವನು ಮರ್ಯಾದಾಪುರುಷೋತ್ತಮನೆಂದೇ ಖ್ಯಾತನಾದ ಪ್ರಭು ಶ್ರೀರಾಮಚಂದ್ರ. ದಿವಿಭುವಿಗಳಿಗೆ ಧರ್ಮದ ಸೇತುವನ್ನು ಕಟ್ಟಿ ಅವತಾರ ಕಾರ್ಯವನ್ನು ಪೂರೈಸಿದ ಆ ಮಹಾತ್ಮನೇ ಆರಾಧ್ಯದೈವವಾದ ನಮ್ಮ ಈ ಮಠದಲ್ಲಿ ಸದಾ ಆತನ ಅರ್ಚನೆ, ಸ್ಮರಣೆ… Continue Reading →
ಗೋಕರ್ಣ: ೮. ಪಕ್ವವಾಗದೆ ಹಣ್ಣು ಮರದಿಂದ ಬೀಳುವುದಿಲ್ಲ. ಇಳೆಯಲ್ಲಿ ಧಗೆಯಾಗದೆ ಮೋಡಗಟ್ಟಿ ಮಳೆ ಸುರಿಯುವುದಿಲ್ಲ. ಲೋಕದ ನಿಯಮವೇ ಹೀಗೆ. ಪ್ರತಿಯೊಂದಕ್ಕೂ ತನ್ನದೇ ಆದ ಕಾಲವಿದೆ. ನಮಗೆ ಬೇಕಾದಾಗ ಸೂಕ್ತವಾದ ಸಮಯವು ಒದಗಿ ಬರುವುದಿಲ್ಲ. ಅದಕ್ಕಾಗಿ ಕಾಯುವಿಕೆ ಅನಿವಾರ್ಯ. ಈ ನಿಯಮಕ್ಕೆ ಭಗವಂತನೂ ಅಪವಾದವಲ್ಲ. ವಿಶ್ವದಲ್ಲಿ ಲೋಕಪೀಡಕರ ಹಿಂಸೆ ಅತಿಯಾದಾಗ ಸಾಧು ಸತ್ಪುರುಷರು ಅತ್ಯಂತ ಸಂಕಟಕ್ಕೊಳಗಾದಾಗ ಜಗತ್ತೇ… Continue Reading →
ಗೋಕರ್ಣ: ೫, ಹಿಂದೆ ದೇವಾಸುರ ಸಂಗ್ರಾಮವು ನಡೆಯಿತೆಂದು ಪುರಾಣಗಳು ಉಲ್ಲೇಖಿಸುತ್ತವೆ. ದೇವತೆಗಳ ಹಾಗೂ ರಾಕ್ಷಸರ ನಡುವೆ ಮಾತ್ರ ನಡೆಯುವ ಯುದ್ಧ ಇದಲ್ಲ. ಈ ಯುದ್ಧ ನಮ್ಮ ಅಂತರಂಗದಲ್ಲಿ ಪಾಶವೀ ಶಕ್ತಿಗಳು ಹಾಗೂ ಸಾತ್ವಿಕಶಕ್ತಿಗಳ ನಡುವೆ ಸದಾ ನಡೆಯುತ್ತಿರುತ್ತಲೇ ಇರುತ್ತದೆ. ನಮ್ಮಲ್ಲಿ ದೇವತಾಂಶವೂ ಇದೆ, ಹಾಗೆಯೇ ರಾಕ್ಷಸಾಂಶವೂ ಸಹ. ಈ ಎರಡು ಸ್ವಬಾವಗಳ ಮಿಲನವೇ ಮನುಷ್ಯ. ಅಂತಿಮ… Continue Reading →
ಗೋಕರ್ಣ: ೪, ನಮ್ಮ ಬದುಕಿನಲ್ಲಿ ನಾವು ಎಷ್ಟೋ ಸಮಸ್ಯೆಗಳನ್ನು ಎದುರಿಸುತ್ತೇವೆ. ಎಡರು ತೊಡರುಗಳನ್ನು ದಾಟುತ್ತೇವೆ. ಅನೇಕ ವಿಚಾರಗಳಲ್ಲಿ ಗೆಲುವನ್ನೂ ಪಡೆಯುತ್ತೇವೆ. ಆದರೆ ಇದಾವುದೂ ನಿಜವಾದ ವಿಜಯವಲ್ಲ. ನಮ್ಮ ಅಂತರಂಗದ ಗೆಲುವೇ ನಮ್ಮ ಜೀವನವನ್ನು ಸಾರ್ಥಕತೆಯ ಗುರಿಯತ್ತ ಕೊಂಡೊಯ್ಯುತ್ತದೆ. ಆದ್ದರಿಂದ ಬಾಹ್ಯವಾದ ಜಯಕ್ಕಿಂತ ನಮ್ಮ ಮನಸ್ಸಿನ ಮೇಲೆ ಸಾಧಿಸುವ ನಿಯಂತ್ರಣವೇ ನೈಜವಾದ ಸಾಧನೆ ಎಂದು ಶ್ರೀ ರಾಮಚಂದ್ರಾಪುರಮಠದ… Continue Reading →
ಗೋಕರ್ಣ: ೩. ಉಪಕಾರಸ್ಮರಣೆ, ಕೃತಜ್ಞತೆಗಳು ಜೀವಿಯ ಮೂಲಭೂತ ಸ್ವಭಾವ. ಸಾಕುಪ್ರಾಣಿಗಳೂ ಕೂಡಾ ನಾವು ಎಂದೋ ಹಾಕಿದ ಆಹಾರವನ್ನು, ತೋರಿಸಿದ ಪ್ರೀತಿಯನ್ನು ಮರೆಯದೆ ಅದನ್ನು ವ್ಯಕ್ತಪಡಿಸುತ್ತವೆ. ಮಾನವನೆಂದೂ ಕೃತಘ್ನನಾಗಬಾರದು. ಅನ್ನ ಹಾಕಿದ ಮನೆಗೆ ಕನ್ನ ಹಾಕುವುದು ರಾಕ್ಷಸತ್ವದ ದ್ಯೋತಕ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ಇಂದು ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾಗಿದ್ದ ರಾಮಕಥಾದಲ್ಲಿ… Continue Reading →
ಗೋಕರ್ಣ: ಸ್ನೇಹ, ಪ್ರೀತಿಗಳು ಬದುಕಿನಲ್ಲಿ ಸಂತೋಷವನ್ನು ನೀಡುವ ಸಾಧನಗಳು. ವ್ಯಕ್ತಿತ್ವದ ಉತ್ತಮಿಕೆಗೆ ಅಭ್ಯುದಯಕ್ಕೆ ಕಾರಣವಾಗುವ ಉತ್ತಮ ಬಾಂಧವ್ಯವನ್ನು ಬೆಳೆಸುವ ಈ ಗುಣಗಳು ಜೀವನದಲ್ಲಿ ಅವಿನಾಭಾವಿಯಾಗಿದ್ದರೆ ನಮ್ಮ ಬಾಳು ಸಾರ್ಥಕವಷ್ಟೇ ಅಲ್ಲ, ಆದರ್ಶವೂ ಕೂಡ. ನಮಗಾಗಿ ಮಾತ್ರ ಬದುಕದೆ ಪರೋಪದ್ರವಿಯಾಗದೆ ಸುತ್ತೆಲ್ಲ ಸಂತಸವನ್ನು ಹಂಚುತ್ತ ಜೀವಿಸಿದರೆ ಅದಕ್ಕಿಂತ ಹೆಚ್ಚಿನದು ಬೇರೇನೂ ಇಲ್ಲ ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ… Continue Reading →