||ಹರೇರಾಮ|| ಸಸ್ನೇಹ ವಂದನೆಗಳು. ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಮಾರ್ಚ್ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚುತ್ತಿದ್ದೇವೆ. ಮಾರ್ಚ್ -2021 ಮಾಸದ ಧರ್ಮಭಾರತೀ ಸಂಚಿಕೆಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ ಸೂ: ಧರ್ಮಭಾರತೀ ಚಂದಾದಾರರಾಗಲು ನಿಮ್ಮ ಶಿಷ್ಯಮಾಧ್ಯಮವನ್ನು ಸಂಪರ್ಕಿಸಿ, ಅಥವಾ ಈ ಕೆಳಗಿನ ಅಕೌಂಟ್ ಗೆ ₹700/- ಮಾತ್ರ ತಲುಪಿಸಿ ವಿಳಾಸವನ್ನು… Continue Reading →
Statement today: “I will give whatever you ask!” Statement tomorrow: “I never said so!” When an ordinary mortal does this his life will be in misery; when a King, for whom the entire country is his home, retracts his words,… Continue Reading →
||ಹರೇ ರಾಮ||
ರಾಜನೆಂದರೆ ರಾಜ್ಯದ ಆತ್ಮ..
ಮಂತ್ರಿಯೆಂದರೆ ರಾಜ್ಯದ ಬುದ್ಧಿ..
ಯಾವುದರ ಪರಿವೆ ಇಲ್ಲದೆಯೂ ಆತ್ಮವು ಇರಬಹುದು…ಆದರೆ ಬುದ್ಧಿಯು ಸದಾ ಎಚ್ಚರವಾಗಿರಲೇಬೇಕು…ಶರೀರದ, ಮನಸ್ಸಿನ,ಇಂದ್ರಿಯಗಳ,ಹೆಚ್ಚೇಕೆ ಬದುಕಿನ ಸಮಸ್ತ ಆಗು-ಹೋಗುಗಳನ್ನು ಗಮನಿಸುವ-ನಿಯಂತ್ರಿಸುವ ಹೊಣೆಗಾರಿಕೆ ಅದರದ್ದೇ ಅಲ್ಲವೇ..?
ಮನನವೆಂದರೆ ಅರಿಯುವುದು..
ತ್ರಾಣವೆಂದರೆ ಪೊರೆಯುವುದು…
ಮನನ-ತ್ರಾಣಗಳೆರಡೂ ಹುದುಗಿವೆ ಮಂತ್ರದಲ್ಲಿ..
ಮಂತ್ರವುಳ್ಳವನು ಮಂತ್ರಿಯೆಂದಾದಮೇಲೆ ಆತನಿಗೆ ಎರಡೇ ಮುಖ್ಯಕಾರ್ಯಗಳು..
ಅರಿಯುವುದು ಮತ್ತು ಪೊರೆಯುವುದು…
ಎಲ್ಲವನ್ನೂ ಅರಿಯುವ, ತನ್ಮೂಲಕ ಎಲ್ಲರನ್ನೂ ಪೊರೆಯುವ ಕರ್ತವ್ಯವವನದ್ದು..
ಅರಿವು ಪೊರೆಯುವಂತೆ ಮತ್ಯಾವುದು ತಾನೇ ಪೊರೆಯಲು ಸಾಧ್ಯ..?