ವಡೋಧರ(ಗುಜರಾತ್), ಡಿ. ೧೯: ‘ಶ್ರೀ ರಾಮಚಂದ್ರಾಪುರ ಮಠದ ವಿರುದ್ಧ ಕೆಲ ವಿದ್ರೋಹಿ ಶಕ್ತಿಗಳು ಮಾದ್ಯಮಗಳ ಮೂಲಕ ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಶಿಷ್ಯ-ಭಕ್ತ ಸಮುದಾಯ ಇದಕ್ಕೆ ಕಿವಿಗೊಡದೇ ಸಂಘಟಿತವಾಗಿ ಮುನ್ನಡೆಯಬೇಕು’ ಎಂದು ಗೋಕರ್ಣ ಮಂಡಲಾಧೀಶ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದ್ದಾರೆ. ‘ದೇಶೀಯ ಗೋ ತಳಿಗಳ ಸಂರಕ್ಷಣೆಯ ಮಹಾ ಆಂದೋಲನದ ಮಹತ್ಕಾರ್ಯದ ಅಂಗವಾಗಿ… Continue Reading →
ಸಹಸ್ರಾರು ವರ್ಷಗಳ ಪೂರ್ವದಲ್ಲಿ ಶ್ರೀ ಆದಿ ಶಂಕರಾಚಾರ್ಯರು ಗೋಕರ್ಣದ ಅಶೋಕೆಯೆಂಬ ಯಾವ ಪುಣ್ಯಸ್ಥಲದಲ್ಲಿ ‘ನಮ್ಮ’ ಮಠವನ್ನು ಸ್ಥಾಪಿಸಿದರೋ,
ಕಾಲಪ್ರವಾಹದಲ್ಲಿ ಯಾವುದು ಮಸುಕಾಗಿ-ಮಲಿನವಾಗಿ-ಮರೆಯಾಗಿಬಿಟ್ಟಿತ್ತೋ..
ಅಂತಹಾ ನಮ್ಮ ಮೂಲ ಮಠವನ್ನು ಅದರ ಮೂಲಸ್ಥಾನದಲ್ಲಿಯೇ ಮತ್ತೊಮ್ಮೆ ನಿರ್ಮಿಸುವ ಮಹಾಸಂಕಲ್ಪವನ್ನು ಪರಂಪರೆಯ ೩೬ನೆಯ ಧರ್ಮಾಚಾರ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಮ್ಮ ಅನಂತಶಿಷ್ಯ ಸ್ತೋಮದೊದಗೂಡಿ ಕೈಗೊಂಡರು..