ಪ್ರತಿಭೆ ಹೊರಬರಲು ಹಣ ಅಡ್ಡಿಯಾಗಬಾರದು- ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕೆಲವರಲ್ಲಿ ಪ್ರತಿಭೆಗಳಿರತ್ತೆ, ಆದರೆ ಸಾಧನೆ ಮಾಡಲು ಹಣವಿರಲ್ಲ,ಪ್ರತಿಭೆ ಹೊರಬರಲು ಹಣ ಅಡ್ಡಿಯಾಗಬಾರದು ಎನ್ನುವ ಕಾರಣದಿಂದ ವಿದ್ಯಾನಿಧಿಯ ಕಲ್ಪನೆ ಮಾಡಲಾಗಿದೆ ಎಂದು ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು. ಅವರು ಇಂದು ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ “ಮುಕ್ರಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾ ಸಹಾಯಧನ ವಿತರಣಾ ಕಾರ್ಯಕ್ರಮ’ದಲ್ಲಿ ದಿವ್ಯಸಾನ್ನಿಧ್ಯ ವಹಿಸಿ… Continue Reading →
ಹರೇ ರಾಮ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಮಹಾಸಂಸ್ಥಾನಮ್ – ಶ್ರೀರಾಮಚಂದ್ರಾಪುರಮಠ ವಿದ್ಯಾ ವಿಭಾಗ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಮಾರ್ಚ್ 20, 2016 ಭಾನುವಾರದಂದು ಮಧ್ಯಾಹ್ನ 12.30 ಗಂಟೆಗೆ ಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಹಿಂದುಳಿದ ಪರಿಶಿಷ್ಠ ಜಾತಿಗೆ ಸೇರಿದ ಮುಕ್ರಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಕ್ರಿ ಸಮಾಜವು ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಮುಖವಾಗಿ ವಾಸವಾಗಿರುವ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಮುಕ್ರಿ ಸಮಾಜದ ವಿದ್ಯಾರ್ಥಿಗಳ… Continue Reading →
ಶ್ರೀಕ್ಷೇತ್ರ ಗೋಕರ್ಣ – ಶಿವರಾತ್ರಿ ಮಹೋತ್ಸವ ಪುರಾಣ ಪ್ರಸಿದ್ದ ಶ್ರೀಕ್ಷೇತ್ರ ಗೋಕರ್ಣದ ಸಾರ್ವಭೌಮ ಮಹಾಬಲೇಶ್ವರ ದೇವಾಲಯದಲ್ಲಿ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ದಿನಾಂಕ 02/03/2016 ರಿಂದ 09/03/2016ವರೆಗೆ ಹಲವಾರು ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ತಳಿಲುತೋರಣ – ವಿದ್ಯುದ್ದೀಪಾಲಂಕಾರಗಳಿಂದ ದೇವಾಲಯದ ಪರಿಸರವನ್ನು ಶೃಂಗರಿಸಲಾಗಿದೆ. ದಿನಾಂಕ 07/03/2016 ಸೋಮವಾರ ಶಿವರಾತ್ರಿಯ ಶಿವಯೋಗದ ಶುಭಪರ್ವದಂದು… Continue Reading →
ಅರಿವು, ಭಾವ ಹಾಗೂ ಸಾಹಸಕ್ಕೆ ಶ್ರೀರಾಮಚಂದ್ರಾಪುರಮಠದ ಸನ್ಮಾನ ಕಾಲ: 27/02/2016 ದೇಶ: ಶ್ರೀರಾಮಾಶ್ರಮ,ಬೆಂಗಳೂರು ನಮ್ಮ ಕಣ್ಣಮುಂದೆ ಅನ್ಯಾಯವಾಗುತ್ತಿದ್ದಾಗ ಸುಮ್ಮನೇ ಇರಬಾರದು, ಅನ್ಯಾಯವನ್ನು ತಡೆಯಬೇಕು, ಈ ದಿಶೆಯಲ್ಲಿ ಅಕ್ರಮವಾಗಿ ಸಾಗಾಟಮಾಡಲಾಗುತ್ತಿದ್ದ ಗೋವುಗಳನ್ನು ದಿಟ್ಟತನದಿಂದ ಸಂರಕ್ಷಿಸಿದ ರಿತಿಕಾಳ ಹೋರಾಟ ಸಮಾಜಕ್ಕೆ ಮಾದರಿ, ಹಾಗೆಯೇ ನಮ್ಮ ಸಂಸ್ಕತಿಯನ್ನು ಮರೆಯುತ್ತಿರುವ ಕಾಲಗಟ್ಟದಲ್ಲಿ ಇಸ್ಲಾಂ ಮತದ ಫಾತಿಮತ್ ರಾಮಾಯಣ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಪಡೆದಿರುವುದು… Continue Reading →
ಬೆಂಗಳೂರು ಮಂಡಲ ವ್ಯಾಪ್ತಿಯ ಮಾತೃ ವಿಭಾಗದಿಂದ “ವಾತ್ಸಲ್ಯ ಅಭಿಯಾನ” ಶ್ರೀರಾಮಚಂದ್ರಾಪುರಮಠದ ಬೆಂಗಳೂರ ಹವ್ಯಕ ಮಂಡಲ ವ್ಯಾಪ್ತಿಯ ಮಾತೃ ಮಂಡಲದಿಂದ “ವಾತ್ಸಲ್ಯ ಅಭಿಯಾನ” ಕಾರ್ಯಕ್ರಮವನ್ನು ಗಿರಿನಗರದ ರಾಮಾಶ್ರಮದಲ್ಲಿ ನಡೆಸಲಾಯಿತು. ದೀಪ ಬೆಳಗಿಸಿ ಗುರುವಂದನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ “ಬತ್ತಿ-ಭಜನಾ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಹಿಳೆಯರು ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ಗಣಪತಿಯ,ಗುರುವಿನ,ದೇವಿಯ, ಕೇಶವನ, ಶ್ರೀರಾಮನ, ಭೂತಾಯಿಯ ಕುರಿತಾದ ಭಜನೆಯನ್ನು ಮಾಡುತ್ತಾ ದೀಪದ… Continue Reading →
ಬೆಂಗಳೂರಿನ ಗಿರಿನಗರ ಶ್ರೀರಾಮಾಶ್ರಮದ ಪುಣ್ಯಪರಿಸರದಲ್ಲಿ ದಿನಾಂಕ 18/12/2015 ರಂದು ಬ್ರಹ್ಮ್ಯೆಕ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಂದ್ರ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವವು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಯಥೋಚಿತ ಧಾರ್ಮಿಕ ವಿಧಿವಿಧಾನಗಳೋಂದಿಗೆ ಸಂಪನ್ನವಾಗಲಿದೆ. ಆರಾಧನಾ ಮಹೋತ್ಸವದ ಅಂಗವಾಗಿ, ತೀರ್ಥರಾಜ ಪೂಜೆ, ಪೂರ್ವಾಚಾರ್ಯರ ಸಂಸ್ಮರಣೆ, ಧರ್ಮಸಭೆ, ಶ್ರೀ ರಾಘವೇಂದ್ರ್ರಭಾರತೀ ಪಾಂಡಿತ್ಯಪುರಸ್ಕಾರ ಹಾಗೂ ಶ್ರೀಗಳವರ ಆಶೀರ್ವಚನ ಕಾರ್ಯಕ್ರಮಗಳು ನೆರವೇರಲಿದೆ. ಹಾಗೂ… Continue Reading →
ಷಡ್ಯಂತ್ರ ಬೇಧಿಸಿ ನ್ಯಾಯ ಒದಗಿಸಿ : ಕಲ್ಬರ್ಗಿಯಲ್ಲಿ ರಾಘವೇಶ್ವರ ಶ್ರೀಗಳ ಪರ ಬೃಹತ್ ಪ್ರತಿಭಟನೆ 14/12/2015 ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಮೇಲಿನ ಮಿಥ್ಯಾರೋಪ ಖಂಡಿಸಿ, ನಕಲಿ ಅಶ್ಲೀಲ ಸಿಡಿ ಪ್ರಕರಣವನ್ನು ಸರ್ಕಾರ ಹಿಂಪಡೆಯಲು ನಿರ್ದೇಶಿಸಿರುವುದನ್ನು ವಿರೋಧಿಸಿ ಕಲ್ಬರ್ಗಿಯಲ್ಲಿ ಬೃಹತ್ ಪ್ರತಿಭಟನೆಯನ್ನು ನೆಡೆಸಲಾಯಿತು, ಶ್ರೀರಾಮಕಥಾ ಸಮಿತಿ ಆಯೋಜಿಸಿದ್ದ ಈ ಪ್ರತಿಭಟನೆಯು ಸೂಪರ್ ಮಾರ್ಕೇಟ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಜಾಥಾ ನೆಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿಸಲ್ಲಿಸಿ ನಂತರ… Continue Reading →