Category ಸುದ್ದಿ

Get tuned to the latest news related to Sri Swamiji

ಸರ್ವ ಸಮರ್ಪಣೆಯೇ ಭಗವತ್ಸಾನ್ನಿಧ್ಯದ ಮೆಟ್ಟಿಲು – ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು

ಗೋಕರ್ಣ: ಲೋಕದಲ್ಲಿ ಸಾವಿರಾರು ವಸ್ತುಗಳಿವೆ. ಆದರೆ ಅವೆಲ್ಲವೂ ಸಾವನ್ನು ಹೊಂದಿದವೇ. ಆದರೆ ಸಾವಿರದ ಒಂದು ಸ್ಥಾನವಿದ್ದರೆ ಅದು ಭಗವಂತನ ಸಾನ್ನಿಧ್ಯ ಮಾತ್ರ. ಹಣಬಲದಿಂದಲೋ, ತೋಳಿನಶಕ್ತಿಯಿಂದಲೋ, ಅಧಿಕಾರದಿಂದಲೋ ಅದನ್ನು ಪಡೆಯಲು ಅಸಾಧ್ಯ. ಪರಮಾತ್ಮನ ಮೇಲಿನ ಅಸಾಧಾರಣ ಪ್ರೀತಿಯಿಂದ ಅನನ್ಯ ಶರಣತೆಯಿಂದ ಮಾತ್ರ ನಾವು ಆಸ್ಥಾನವನ್ನು ಸೇರಬಹುದು. ಅದಕ್ಕೆ ಅವನ ಕರುಣೆಯೂ ಬೇಕು ಎಂದು ಶ್ರೀ ರಾಮಚಂದ್ರಾಪುರಮಠದ ಪೂಜ್ಯ… Continue Reading →

ಸಮಾಜವು ಭಗವಂತನ ರೂಪ- ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಗೋಕರ್ಣ: ಸಾಮಾಜಿಕವಾದ ಅನೇಕ ಋಣಗಳು ನಮ್ಮ ಮೇಲಿವೆ. ದೀನರ ಆರ್ತರ ಕಣ್ಣೊರೆಸುವುದೂ ಒಂದು ಭಗವತ್ಪ್ರೀತಿ ಸಾಧನವಾದ ಕಾರ್ಯವೇ. ಸಾಧ್ಯವಾದಷ್ಟರಮಟ್ಟಿಗೆ ನಮ್ಮಿಂದ ಇನ್ನೊಬ್ಬರಿಗೆ ಸಹಾಯ, ಸಹಕಾರಗಳು ಲಭ್ಯವಾಗುವ ರೀತಿಯಲ್ಲಿ ಬಾಳಬೇಕು. ಆಗ ಮಾತ್ರ ಬದುಕಿನ ಸಾರ್ಥಕತೆ ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ. ಇಂದು ಸಮೀಪದ ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ  ಹೊರನಾಡಿನ ಚೆನ್ನೈ… Continue Reading →

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಸಾರ್ವಭೌಮನಿಗೆ ಸುವರ್ಣಾರ್ಚನೆ.

ಗೋಕರ್ಣ. ಅಶೋಕೆಯಲ್ಲಿ ಚಾತುರ್ಮಾಸ್ಯವ್ರತವನ್ನು ಆಚರಿಸುತ್ತಿರುವ ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ತ್ರಯೋದಶಿಯ ಪ್ರದೋಷಪೂಜಾ ನಿಮಿತ್ತವಾಗಿ ಇಂದು ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಸಂದರ್ಶಿಸಿ ಸಾರ್ವಭೌಮನನ್ನು ವಿಶೇಷಪೂಜೆಯನ್ನು ಸಲ್ಲಿಸಿದರು. ಲಭ್ಯವಿರುವ ಮಾಹಿತಿಯಂತೆ ಇತ್ತೀಚಿನ ಶತಮಾನಗಳಲ್ಲಿ ಇದೇ ಮೊದಲಬಾರಿಗೆ ಪೂಜ್ಯಶ್ರೀಗಳು ಕ್ಷೇತ್ರಾಧೀಶ ಮಹಾಬಲೇಶ್ವರನಿಗೆ ಅಷ್ಟೋತ್ತರಶತ ಸುವರ್ಣ ನಾಣ್ಯಗಳು ಹಾಗೂ ರಜತ… Continue Reading →

ಪಾಪ ಭೀತಿಯಿದ್ದರೆ ಸಮಾಜಕ್ಕೆ ಸ್ವಾಸ್ಥ್ಯ- ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಗೋಕರ್ಣ: ಆಗಸ್ಟು 24: ನೂರು ಕಾನೂನುಗಳಿಂದ ತಪ್ಪಿಸಲು ಸಾಧ್ಯವಾಗದ ಕುಕೃತ್ಯವನ್ನು ಒಂದು ಪಾಪಭೀತಿ ತಡೆಯುತ್ತದೆ. ಅಂತಸ್ಸಾಕ್ಷಿಯಿಲ್ಲದ ಯಾವ ವ್ಯಕ್ತಿಯೂ ಇಲ್ಲ. ಸಾಮಾನ್ಯವಾಗಿ ತಾನು ಮಾಡಿದ ಪಾಪಪ್ರಜ್ಞೆಯು ವ್ಯಕ್ತಿಯನ್ನು ಕಾಡದೇ ಇರದು. ನಮ್ಮ ಪ್ರಾಚೀನರು ವ್ಯಕ್ತಿಯ ಅಭ್ಯುದಯ ಹಾಗೂ ಸಮಾಜದ ಸ್ವಾಸ್ಥ್ಯದ ಉದ್ದೇಶದಿಂದಲೇ ಹತ್ತು ಹಲವು ನಿಯಮಗಳನ್ನು ರೂಪಿಸಿ ಅವನ್ನು ಬದುಕಿನಲ್ಲಿ ಅಳವಡಿಸಿದರು. ಆದ್ದರಿಂದಲೇ ಹಿಂದಿನಕಾಲದಲ್ಲಿ ಇಂದು… Continue Reading →

ನಮ್ಮ ಹೃದಯವು ಅಯೋಧ್ಯೆಯಾಗಬೇಕು- ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಗೋಕರ್ಣ: ಅಯೋಧ್ಯೆ ಒಂದು ಕಾಲದಲ್ಲಿ ಸಮಸ್ತ ಭಾರತದ ಕೇಂದ್ರ ಭೂಮಿ. ಸೂರ್ಯವಂಶದ ರಾಜರ ರಾಜಧಾನಿ. ವಿಶಾಲವಾದ ರಾಜಮಾರ್ಗಗಳು, ಭವನಗಳು, ಅಲ್ಲಲ್ಲಿ ಸುಂದರ ಉದ್ಯಾನಗಳು, ಭದ್ರವಾದ ಕೋಟೆಗಳು, ವ್ಯವಸ್ಥಿತವಾದ ಪೇಟೆ, ಶಿಲ್ಪಿಗಳು, ಚಿತ್ರಕಾರರು, ಕಲಾವಿದರಿಂದ ತುಂಬಿದ ನಗರ. ಅತ್ಯಂತ ಬಿಗುವಾದ ರಕ್ಷಣಾ ವ್ಯವಸ್ಥೆ. ಶತ್ರುಗಳ ಧಾಳಿಯನ್ನು ತಡೆಯಲು ಎಲ್ಲ ಬಗೆಯ ಯಂತ್ರಗಳು. ಇಂತಹ ಪರಿಪೂರ್ಣವಾದ ನಗರ ರಘುಕುಲತಿಲಕನಾದ… Continue Reading →

ಕೆಟ್ಟ ಮನಸ್ಸಿಗೆ ಹತ್ತುಮುಖಗಳು – ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಗೋಕರ್ಣ: ವಿರೂಪವೆಂಬುದು ಶರೀರಕ್ಕೆ ಮಾತ್ರ ಸೀಮಿತವಲ್ಲ. ಅದು ಮನಸ್ಸಿನಲ್ಲಿಯೂ ಇರಲು ಸಾಧ್ಯ. ದೇಹದ ವಿರೂಪತೆ ಸಮಾಜಕ್ಕೆ ಕೇಡಲ್ಲ. ಆದರೆ ಮನಸ್ಸಿನಲ್ಲಿ ಮೂಡುವ ವಿರೂಪತೆ ಮಾತ್ರ ಆತಂಕಕಾರಿ. ಕೆಲವು ರೋಗಗಳನ್ನು ಔಷಧದಿಂದ ಕಡಿಮೆ ಮಾಡಬಹುದು. ಇನ್ನು ಕೆಲವಕ್ಕೆ ಪ್ರಯತ್ನದಿಂದ ಚಿಕಿತ್ಸೆಮಾಡಿ ಗುಣಪಡಿಸಬಹುದು. ಆದರೆ ಅಸಾಧ್ಯರೋಗಗಳಲ್ಲಿ ಯಾವ ಔಷಧವೂ ಪ್ರಯೋಜನಕ್ಕೆ ಬರುವುದಿಲ್ಲ. ಮನಸ್ಸಿನ ವಿರೂಪತೆ ಇಂತಹ ಅಸಾಧ್ಯರೋಗವರ್ಗಕ್ಕೆ ಸೇರಿದ್ದು…. Continue Reading →

ಪರಮಾತ್ಮನ ಸನ್ನಿಧಿಯಲ್ಲಿ ಅಹಂಭಾವ ಸಲ್ಲ- ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಗೋಕರ್ಣ: ಅಗಸ್ಟ್.೨೦: ವಿನಯ, ಸೌಜನ್ಯಗಳು ಮಾನವನ ಸಹಜಗುಣ. ಸಾಮಾನ್ಯ ವ್ಯವಹಾರದಲ್ಲಿಯೇ ಗುರುಹಿರಿಯರ ವಿಷಯದಲ್ಲಿ ಇವುಗಳಿಗೆ ಅಪಾರ ಮಹತ್ವವಿದೆ. ಶಕ್ತಿಯಿದ್ದರೆ ಅದರ ಜೊತೆ ವಿನಯವೂ ಇದ್ದರೆ ಮಾತ್ರ ಶೋಭೆ. ದೈವಭೀರುವಲ್ಲದವನ ಸಾಮರ್ಥ್ಯ ಪರರಹಿಂಸೆಯಲ್ಲಿಯೇ ಸಾರ್ಥಕವಾಗಿಬಿಡುವ ಅಪಾಯವಿದೆ. ಇದು ಜೀವನೋತ್ಕರ್ಷಕ್ಕೆ ಸಲ್ಲದ್ದು. ನಮ್ಮಲ್ಲಿರುವ ಶಕ್ತಿಯು ಪರೋಪಕಾರಕ್ಕಾಗಿ, ವಿದ್ಯೆಯು ಜ್ಞಾನಕ್ಕಾಗಿ ಹಾಗೂ ಸಂಪತ್ತು ದಾನಕ್ಕಾಗಿ ಉಪಯುಕ್ತವಾಗಬೇಕು. ಮಹಾತ್ಮರ ವಿಷಯದಲ್ಲಿ ಎಂದೂ… Continue Reading →

ಕೆಡುಕಿನ ಸಂಭ್ರಮ ಕೆಲಕಾಲ ಮಾತ್ರ- ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಗೋಕರ್ಣ: ದೇಹಭಾವವಿರುವ ನಮ್ಮೊಳಗೆ ದೇವಭಾವವೂ ಇದೆ. ಆದರೆ ದೇಹಾಭಿಮಾನದ ಕೈಮೇಲಾದಾಗ  ಆ ದೇವಭಾವ ಮರೆಯಾಗುತ್ತದೆ. ನಮ್ಮೊಳಗಿನ ಅಂತರಾತ್ಮ ಸದಾ ನಮಗೆ ಎಚ್ಚರವನ್ನು ನೀಡುತ್ತಲೇ ಇರುತ್ತಾನೆ. ಆದರೆ ಅದು ಹೆಚ್ಚಾಗಿ ನಮಗೆ ಕೇಳುವುದೇ ಇಲ್ಲ. ಎಲ್ಲೋ ಅಪರೂಪಕ್ಕೊಮ್ಮೆ ಕೇಳಿದರೂ ಅದನ್ನು ಪಾಲಿಸುವ ಸ್ವಭಾವ ನಮ್ಮದಾಗಿರುವುದಿಲ್ಲ. ರಾಮಾಯಣ ನಮ್ಮ ಬದುಕಿಂದ ಬೇರೆಯಾದದ್ದಲ್ಲ. ಅದು ಸದಾ ಪ್ರಸ್ತುತವೇ. ಕೆಡುಕು ಸದಾ… Continue Reading →

ಪರಿಶುದ್ಧ ಮನಸ್ಸು ಭಗವಂತನ ವರ- ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಗೋಕರ್ಣ: ಹರಿಯುವ ತಿಳಿನೀರಿನ ನದಿಯಲ್ಲಿ ಯಾವ ಕೊಳೆಯೂ ಇರದು. ಸ್ವಚ್ಛ ಮತ್ತು ಶುದ್ಧವಾದ ನೀರು ಸಾತ್ವಿಕಗುಣದ ದ್ಯೋತಕ. ಸದಾ ಪರಹಿತವನ್ನೇ ಬಯಸುತ್ತ ಬದುಕಿನಲ್ಲಿ ಒಳಿತನ್ನೇ ಕಾಣುತ್ತ ಜೀವಿಸುವ ವ್ಯಕ್ತಿಗೆ ಪರಮಾತ್ಮಪ್ರಾಪ್ತಿಗೆ ಬೇರಾವ ತಪಸ್ಸೂ ಬೇಡ. ಅವನ ಲೋಕಹಿತಂಕರಕಾರ್ಯವನ್ನು ಅರಸುತ್ತ ಸುಖವೇ ಅವನ ಬಳಿ ಬರುತ್ತದೆ. ಪರಿಶುದ್ಧ ಮನಸ್ಸು ಭಗವಂತನ ಕೊಡುಗೆ ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ… Continue Reading →

ಧರ್ಮವು ಪರಮಾತ್ಮಪ್ರಾಪ್ತಿಗೆ ಸೇತು- ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಗೋಕರ್ಣ: ನಾವು ಆಚರಿಸಿದ ಧರ್ಮವೇ ನಮ್ಮ ಬದುಕಿಗೆ  ಔನ್ನತ್ಯಕಾರಕ. ಧರ್ಮವು ಜೀವನದಲ್ಲಿ ಸ್ಥಾಯಿಯಾದಾಗ ಅದು ಭಗವತ್ಪ್ರಾಪ್ತಿಗೆ ಸೇತುವೆಯೂ ಆಗುತ್ತದೆ. ಭಗವಂತನಲ್ಲಿ ಯಾವುದನ್ನೂ ಬೇಡದಿದ್ದಾಗ ನಾವು ಬಯಸುವುದಕ್ಕಿಂತಲೂ ಹೆಚ್ಚಿನ ಅನುಗ್ರಹ ದೊರೆಯುತ್ತದೆ ಎಂಬುದಕ್ಕೆ ರಾಮಾಯಣದ ಕುಬೇರನೇ ಶ್ರೇಷ್ಠ ಉದಾಹರಣೆ. ಆತ ತಂದೆಯಿಂದ ಪ್ರಾಪ್ತವಾಗಿದ್ದ ಲಂಕಾನಗರವನ್ನು ರಾವಣನು ಬಯಸಿದನೆಂಬ ಕಾರಣಕ್ಕಾಗಿ ಅದನ್ನು ಅವನಿಗೇ ಬಿಟ್ಟುಕೊಟ್ಟು ದಕ್ಷಿಣದ ತುದಿಯನ್ನು ಬಿಟ್ಟು… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑