ಪೆರಾಜೆ-ಮಾಣಿಮಠಃ 27-7-2013, ಶನಿವಾರ ವೇಣೂರು, ಉಜಿರೆ ಮತ್ತು ಉರುವಾಲು ವಲಯಗಳ ಗುರುಭಿಕ್ಷಾಸೇವಾ ಕಾರ್ಯಕ್ರಮ ವಿಜಯ ಚಾತುರ್ಮಾಸ್ಯದ ಈ ಪುಣ್ಯಸಮಯದಲ್ಲಿ ನಡೆಯಿತು. ಶ್ರೀಕರಾರ್ಚಿತ ದೇವರುಗಳ ಪೂಜೆಯ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ಮೂರು ವಲಯಗಳ “ವಲಯ ಸಭೆ”ಯಲ್ಲಿ ವಿಷಯಗಳನ್ನು ಶ್ರೀಪೀಠದೆದುರು ಮಂಡಿಸಿದರು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಹಾಸಭೆಯಲ್ಲಿ ವಲಯಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು … Continue Reading →
ಪೆರಾಜೆ-ಮಾಣಿ ಮಠಃ 26-7-2013, ಶುಕ್ರವಾರ ಇಂದಿನ ಗುರುಭಿಕ್ಷಾಸೇವಾ ಕಾರ್ಯಕ್ರಮ ಪುತ್ತೂರು, ದರ್ಬೆ ಹಾಗೂ ಬೆಟ್ಟಂಪಾಡಿ ವಲಯದ ಶಿಷ್ಯರಿಂದ ನಡೆಯಿತು. ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಮೂರೂ ವಲಯಗಳ “ವಲಯ ಸಭೆ”ಯಲ್ಲಿ ವಲಯದ ಆಗು ಹೋಗುಗಳನ್ನು ಪೀಠದ ಮುಂದಿಡಲಾಯಿತು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಹಾಸಭೆಯಲ್ಲಿ ಪುತ್ತೂರು, ದರ್ಬೆ ಹಾಗೂ ಬೆಟ್ಟಂಪಾಡಿ… Continue Reading →
ಪೆರಾಜೆ-ಮಾಣಿ ಮಠ: 25-07-2013 ಮಾಣಿ ಮಠದಲ್ಲಿ ವಿಜಯ ಚಾತುರ್ಮಾಸ್ಯದ ನಾಲ್ಕನೇ ದಿನ ಡಾ||ಭೀಮೇಶ್ವರ ಜೋಷಿ, ಧರ್ಮಕರ್ತರು, ಶ್ರೀಕ್ಷೇತ್ರ ಹೊರನಾಡು– ಇವರಿಂದ ಸರ್ವಸೇವೆ ನಡೆಯಿತು. ಶ್ರೀಮಠದ ಪದಾಧಿಕಾರಿಗಳು, ಶ್ರೀಮತಿ ಉಷಾ ಅಗರ್ ವಾಲ್, ಅಲ್ಕಾ ಪಟೇಲ್ ಉಪಸ್ಥಿತರಿದ್ದರು. ಚಾತುರ್ಮಾಸ್ಯದ ಈ ವಿಶೇಷ ದಿನದಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕತೃಗಳಾದ ಶ್ರೀ ಭೀಮೇಶ್ವರ ಜೋಷಿ ಹಾಗೂ ಕುಟುಂಬದವರು ಶ್ರೀ… Continue Reading →
ಪೆರಾಜೆ-ಮಾಣಿಃ 24.7.2013, ಬುಧವಾರ. ವಿಜಯ ಚಾತುರ್ಮಾಸ್ಯದ ಮೂರನೇ ದಿನದ ಗುರುಭಿಕ್ಷಾ ಸೇವೆಯನ್ನು ನಡೆಸಿಕೊಟ್ಟವರು ಮಾಣಿ, ಕಬಕ ಮತ್ತು ಉಪ್ಪಿನಂಗಡಿ ವಲಯದವರು. ಬೆಳಗ್ಗೆ ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ, ಮಹಿಳೆಯರಿಂದ ಕುಂಕುಮಾರ್ಚನೆ ನಡೆದು ನಂತರ ಮೂರು ವಲಯಗಳ “ವಲಯ ಸಭೆ” ಜರುಗಿತು. ವಲಯದ ಆಗುಹೋಗುಗಳ ಪಟ್ಟಿ ಪೀಠದ ಮುಂದಿರಿಸಿ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಹಾಸಭೆಯಲ್ಲಿ ಮಾಣಿ, ಕಬಕ… Continue Reading →
ಮೀನಾಕ್ಷೀ ಪಂಚರತ್ನಮ್ ಹರೇರಾಮ. ಶ್ರೀ ಆದಿ ಶಂಕರಾಚಾರ್ಯ ಭಗವತ್ಪಾದರಿಂದ ರಚಿತವಾದ ಮೀನಾಕ್ಷೀ ಪಂಚರತ್ನಮ್ ಸ್ತೋತ್ರ. ತಾಯಿ ಮೀನಾಕ್ಷಿಯ ಅಪ್ರತಿಮ ಸೌಂದರ್ಯದ ವರ್ಣನೆಯಿರುವ ಈ ಸ್ತೋತ್ರವನ್ನು ಪಠಿಸಿ ದೇವಿಯ ಕೃಪೆಗೆ ಪಾತ್ರರಾಗಿ ಎಂಬ ಆಶಯ. ~ ದ್ವನಿಃ ದೀಪಿಕಾ ಭಟ್, ಬೆಂಗಳೂರು ರಚನೆಃಶ್ರೀ ಶಂಕರಾಚಾರ್ಯ ಭಗವತ್ಪಾದರು ಉದ್ಯದ್ಭಾನುಸಹಸ್ರಕೋಟಿಸದೃಶಾಂ ಕೇಯೂರಹಾರೋಜ್ವಲಾಂ ಬಿಂಬೋಷ್ಠೀಂ ಸ್ಮಿತದಂತಪರಕ್ತಿರುಚಿರಾಂ ಪೀತಾಂಬರಾಲಂಕೃತಾಮ್ | ವಿಷ್ಣುಬ್ರಹ್ಮಸುರೇಂದ್ರಸೇವಿತಪದಾಂ ತತ್ತ್ವಸ್ವರೂಪಾಂ… Continue Reading →
ಪೆರಾಜೆ-ಮಾಣಿ ಮಠಃ 23.7.2013 ಮಂಗಳವಾರ ಶ್ರೀಗುರುಗಳು ಚಾತುರ್ಮಾಸ್ಯದ ವ್ರತ ಸ್ವೀಕಾರ ಮಾಡಿದ ಮರುದಿನ ಶ್ರೀಪರಿವಾರದ ದಿನ. ಶ್ರೀಪರಿವಾರದ ಬಂಧುಗಳು ತಮ್ಮ ನಿತ್ಯಸೇವೆಯ ಜೊತೆಗೆ ಶ್ರೀಗುರುಗಳ ವಿಶೇಷ ಸೇವೆಯಲ್ಲಿ ಭಾಗಿಗಳಾಗುವ ದಿನ. ಈ ದಿನದ ಕಾರ್ಯಕ್ರಮದಲ್ಲಿ ಗುರುಸೇವಾ ಧುರಂಧರ ವೇದಮೂರ್ತಿ ಉಂಚಗೇರಿ ಸುಬ್ರಹ್ಮಣ್ಯ ಶಿವರಾಮಶಾಸ್ತ್ರಿ ದಂಪತಿಗಳನ್ನು ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ… Continue Reading →
ಗುರುಪೂರ್ಣಿಮೆಯ ದಿನ ನಡೆದ ಕಾರ್ಯಕ್ರಮಗಳುಃ ಪೆರಾಜೆ-ಮಾಣಿ ಮಠಃ 22.7.2013 ಸೋಮವಾರ “ಚಾತುರ್ಮಾಸ್ಯದ ಕಾಲ ಸತತವಾಗಿ ವರ್ಷಧಾರೆ ಸುರಿಯುತ್ತಿದೆ. ಜೀವಸಂಕುಲವು ಮಾರ್ಗವನ್ನೆಲ್ಲಾ ವ್ಯಾಪಿಸಿರುವ ಈ ಕಾಲ ಸಂಚಾರಯೋಗ್ಯವಲ್ಲ. ಅದರಲ್ಲಿಯೂ ವಿಶೇಷವಾಗಿ ಯತಿಗಳಿಗೆ ನಿರಂತರವಾಗಿ ವಸತಿ ಮಾಡತಕ್ಕಂತ ಕಾಲ. ಹಾಗಾಗಿ ಈ ಬಾರಿಯ ಚಾತುರ್ಮಾಸ್ಯದ ವ್ರತವನ್ನು ಶ್ರೀ ಮಠದ ನಿಷ್ಠ ಶಿಷ್ಯಭಕ್ತರೆಂದು ಪ್ರಾಪ್ತವಾಗತಕ್ಕಂತಹ ಮಂಗಳೂರು ಹೋಬಳಿಯ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನಿಮಗೆ ಯಾರಿಗೂ… Continue Reading →