ಗೋಕರ್ಣ. ಅಶೋಕೆಯಲ್ಲಿ ಚಾತುರ್ಮಾಸ್ಯವ್ರತವನ್ನು ಆಚರಿಸುತ್ತಿರುವ ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ತ್ರಯೋದಶಿಯ ಪ್ರದೋಷಪೂಜಾ ನಿಮಿತ್ತವಾಗಿ ಇಂದು ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಸಂದರ್ಶಿಸಿ ಸಾರ್ವಭೌಮನನ್ನು ವಿಶೇಷಪೂಜೆಯನ್ನು ಸಲ್ಲಿಸಿದರು. ಲಭ್ಯವಿರುವ ಮಾಹಿತಿಯಂತೆ ಇತ್ತೀಚಿನ ಶತಮಾನಗಳಲ್ಲಿ ಇದೇ ಮೊದಲಬಾರಿಗೆ ಪೂಜ್ಯಶ್ರೀಗಳು ಕ್ಷೇತ್ರಾಧೀಶ ಮಹಾಬಲೇಶ್ವರನಿಗೆ ಅಷ್ಟೋತ್ತರಶತ ಸುವರ್ಣ ನಾಣ್ಯಗಳು ಹಾಗೂ ರಜತ… Continue Reading →
ಗೋಕರ್ಣ: ಆಗಸ್ಟು 24: ನೂರು ಕಾನೂನುಗಳಿಂದ ತಪ್ಪಿಸಲು ಸಾಧ್ಯವಾಗದ ಕುಕೃತ್ಯವನ್ನು ಒಂದು ಪಾಪಭೀತಿ ತಡೆಯುತ್ತದೆ. ಅಂತಸ್ಸಾಕ್ಷಿಯಿಲ್ಲದ ಯಾವ ವ್ಯಕ್ತಿಯೂ ಇಲ್ಲ. ಸಾಮಾನ್ಯವಾಗಿ ತಾನು ಮಾಡಿದ ಪಾಪಪ್ರಜ್ಞೆಯು ವ್ಯಕ್ತಿಯನ್ನು ಕಾಡದೇ ಇರದು. ನಮ್ಮ ಪ್ರಾಚೀನರು ವ್ಯಕ್ತಿಯ ಅಭ್ಯುದಯ ಹಾಗೂ ಸಮಾಜದ ಸ್ವಾಸ್ಥ್ಯದ ಉದ್ದೇಶದಿಂದಲೇ ಹತ್ತು ಹಲವು ನಿಯಮಗಳನ್ನು ರೂಪಿಸಿ ಅವನ್ನು ಬದುಕಿನಲ್ಲಿ ಅಳವಡಿಸಿದರು. ಆದ್ದರಿಂದಲೇ ಹಿಂದಿನಕಾಲದಲ್ಲಿ ಇಂದು… Continue Reading →
ಗೋಕರ್ಣ: ಅಯೋಧ್ಯೆ ಒಂದು ಕಾಲದಲ್ಲಿ ಸಮಸ್ತ ಭಾರತದ ಕೇಂದ್ರ ಭೂಮಿ. ಸೂರ್ಯವಂಶದ ರಾಜರ ರಾಜಧಾನಿ. ವಿಶಾಲವಾದ ರಾಜಮಾರ್ಗಗಳು, ಭವನಗಳು, ಅಲ್ಲಲ್ಲಿ ಸುಂದರ ಉದ್ಯಾನಗಳು, ಭದ್ರವಾದ ಕೋಟೆಗಳು, ವ್ಯವಸ್ಥಿತವಾದ ಪೇಟೆ, ಶಿಲ್ಪಿಗಳು, ಚಿತ್ರಕಾರರು, ಕಲಾವಿದರಿಂದ ತುಂಬಿದ ನಗರ. ಅತ್ಯಂತ ಬಿಗುವಾದ ರಕ್ಷಣಾ ವ್ಯವಸ್ಥೆ. ಶತ್ರುಗಳ ಧಾಳಿಯನ್ನು ತಡೆಯಲು ಎಲ್ಲ ಬಗೆಯ ಯಂತ್ರಗಳು. ಇಂತಹ ಪರಿಪೂರ್ಣವಾದ ನಗರ ರಘುಕುಲತಿಲಕನಾದ… Continue Reading →
ಗೋಕರ್ಣ: ವಿರೂಪವೆಂಬುದು ಶರೀರಕ್ಕೆ ಮಾತ್ರ ಸೀಮಿತವಲ್ಲ. ಅದು ಮನಸ್ಸಿನಲ್ಲಿಯೂ ಇರಲು ಸಾಧ್ಯ. ದೇಹದ ವಿರೂಪತೆ ಸಮಾಜಕ್ಕೆ ಕೇಡಲ್ಲ. ಆದರೆ ಮನಸ್ಸಿನಲ್ಲಿ ಮೂಡುವ ವಿರೂಪತೆ ಮಾತ್ರ ಆತಂಕಕಾರಿ. ಕೆಲವು ರೋಗಗಳನ್ನು ಔಷಧದಿಂದ ಕಡಿಮೆ ಮಾಡಬಹುದು. ಇನ್ನು ಕೆಲವಕ್ಕೆ ಪ್ರಯತ್ನದಿಂದ ಚಿಕಿತ್ಸೆಮಾಡಿ ಗುಣಪಡಿಸಬಹುದು. ಆದರೆ ಅಸಾಧ್ಯರೋಗಗಳಲ್ಲಿ ಯಾವ ಔಷಧವೂ ಪ್ರಯೋಜನಕ್ಕೆ ಬರುವುದಿಲ್ಲ. ಮನಸ್ಸಿನ ವಿರೂಪತೆ ಇಂತಹ ಅಸಾಧ್ಯರೋಗವರ್ಗಕ್ಕೆ ಸೇರಿದ್ದು…. Continue Reading →