|| ಹರೇ ರಾಮ || ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ವಿಶಿಷ್ಟ ಕಲ್ಪನೆಯ ವಿಭಿನ್ನ ಕಾರ್ಯಗಳಲ್ಲಿ ಕಲಶಪ್ರಾಯವಾದದ್ದು ಶ್ರೀಚಂದ್ರಮೌಳೀಶ್ವರ ದೇವಸ್ಥಾನ. ಶ್ರೀರಾಮಚಂದ್ರಾಪುರಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ ಪರಶಿವನ ಈ ಪವಿತ್ರ ದೇಗುಲ ಅನನ್ಯವಾದದ್ದು. ಪುಣ್ಯನದಿ ಶರಾವತಿಯ ತಟದಲ್ಲಿ ದಿವ್ಯ ಸರೋವರದ ನಡುವೆ ಮಹಾ ಗಣಪತಿಯೊಂದಿಗೆ ಚಂದ್ರಮೌಳೀಶ್ವರನ ಸನ್ನಿಧಿ ಇಲ್ಲಿ ರಾರಾಜಿಸಲಿದೆ. ಭರದಿಂದ ಸಾಗಿದ ಸಹಸ್ರಮಾನದ ನಿರ್ಮಿತಿಯ ಕಾರ್ಯ… Continue Reading →
04, ಜೂನ್; 2011, ಶನಿವಾರ: ಹರೇರಾಮ e-ಮಠದಂಗಳ ಮತ್ತು ಹರೇರಾಮದ ಓದುಗರನ್ನೊಳಗೊಂಡ ಹರೇರಾಮ ತಂಡಕ್ಕೆ ಸಂಭ್ರಮದ ದಿನ. ಶ್ರೀ ಗುರುಗಳ ದಿವ್ಯ ಉಪಸ್ಥಿತಿಯಲ್ಲಿ, ಶ್ರೀ ಶ್ರೀ ರಾಘವೇಂದ್ರ ಭಾರತೀ ಸ್ವಾಮೀಜಿಗಳ ದಿವ್ಯ ಅನುಭೂತಿಯಿರುವ ಶ್ರೀ ರಾಮಾಶ್ರಮದ ಅಂಗಣದಲ್ಲಿ, ಶ್ರೀಮಠದ ಮುಖವಾಣಿಯಾದ, ಶ್ರೀ ಗುರುಗಳ ಅಂತರ್ಜಾಲ ತಾಣವಾದ ಹರೇರಾಮ e-ಮಠದಂಗಳದ ಶ್ರೀ ಗುರುಗಳ ಮತ್ತು ಶ್ರೀ ಗುರುಗಳ… Continue Reading →
ಶ್ರೀ ರಾಮಚಂದ್ರಾಪುರ ಮಠ,ಪೆರಾಜೆ ಈ ಮಠಕ್ಕೆ ಸ್ಥಳದ ಆಯ್ಕೆ: ಶ್ರೀಶ್ರೀರಾಘವೇಂದ್ರಭಾರತೀಮಹಾಸ್ವಾಮಿಗಳವರು ಕೈಂತಜೆ(ಕುಳ್ಳಜ್ಜೆ) ಮನೆಯಲ್ಲಿ ಮೊಕ್ಕಾಂ ಇರುವ ಸಂದರ್ಭ ಈ ಸ್ಥಳಕ್ಕೆ ಶ್ರೀಸಂಸ್ಥಾನದವರ ಆಗಮನವಾಗಿತ್ತು.ಈ ಪ್ರದೇಶದಲ್ಲಿ ಆಂಜನೇಯನ ವಾತಾವರಣವಿರುವ ಕಾರಣ ಇಲ್ಲಿ ಮಠ ನಿರ್ಮಿಸಬೇಕೆಂಬ ಗುರುಗಳ ಆಶಯ. 1967ನೇ ಇಸವಿ ಜೂನ್ ತಿಂಗಳಿನಲ್ಲಿ ಶ್ರೀ ಬಿ ಆರ್ ಕಾಮತರಿಂದ ಸುಮಾರು 20 ಎಕ್ರೆ ಸ್ಥಳ ಖರೀದಿ. 2005ರ… Continue Reading →
ಇಷ್ಟೋ ಅಷ್ಟೋ ಈಶ್ವರನಿಗೆ ಸಮರ್ಪಿಸಿ, ‘ನಾನೊಬ್ಬ ಮಹಾದಾನಿ’ ಎಂದು ಗರ್ವಪಡಬೇಡ..
ಏಕೆಂದರೆ ನಿನ್ನಲ್ಲಿರುವುದಷ್ಟೂ ಈಶ್ವರನದೇ ಆಗಿದೆ..
ತೋಟದ ಆಳು ಮಾಲೀಕನಿಗೆ ತೋಟದಿಂದ ನಾಲ್ಕು ಎಳನೀರು ಕಿತ್ತುಕೊಟ್ಟು, ಕೊಟ್ಟೆನೆಂದು ಬೀಗಲುಂಟೇ?
ತೋಟದಲ್ಲಿ ಬೆಳೆದುದೆಲ್ಲವನ್ನೂ ಕೊಟ್ಟು ವಿನಯದಿಂದ ತಲೆಬಾಗಬೇಕಾದುದಲ್ಲವೇ ಕರ್ತವ್ಯ ?
‘ಮೆರೆಯದಿರು ನಾ ಮಹಾದಾನಿಯೆಂದು
ಮರೆಯದಿರು ನೀ ಮಾಲಿ, ಅವನೇ ಮಾಲೀಕನೆಂದು’
॥ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೇ ॥