ಚಿಟ್ಟಾಣಿಯವರು ಬೀಸಣಿಗೆಯವನ ಬಳಿ ಸಾರಿ ‘ಇತ್ತ ತಾ ಬೀಸಣಿಗೆಯನ್ನು’ ಎಂದು ಪ್ರೇಮಾಧಿಕಾರವಾಣಿಯಲ್ಲಿ ಕೇಳಿಯಾಯಿತು; ಅವನು ನೀಡಲು ಹಿಂದೆ ಮುಂದೆ ನೋಡುವಾಗ, ಪ್ರೇಮಬಲಪ್ರಯೋಗದಲ್ಲಿ ಬೀಸಣಿಗೆಯನ್ನು ಸೆಳೆದು ಕೈವಶಗೈದೂ ಆಯಿತು! ಮುಂದೆ ನರ್ತನಲೋಕದ ನಿತ್ಯಚಕ್ರವರ್ತಿಯಿಂದ ತನ್ನ ಗುರುವಿಗೆ “ಚಾಮರಸೇವಾಂ ಅವಧಾರಯ!”.
ಗುರುವಿಗೋ, ಬೀಸಿ ಬರುವ ಗಾಳಿಯಲ್ಲಿ ಆ ಮಹಾಮೇರುಶೃಂಗದ ವಿನಮ್ರ~ವಿನಯಾನುಭೂತಿ! ಮುಂದೆ ಓದಿ >>