ಶ್ರೀಗಳು ಪ್ರಾತಃ ಪೂಜೆಯನ್ನು ಪಂಢರಾಪುರದ ಸಂಜಯ್ ಆನಂದ್ ತಾಠೆ ರವರ ಮನೆಯಲ್ಲಿ ನೆರವೇರಿಸಿದರು.. ಅಲ್ಲಿಂದ ವಿಠೋಬ ಮತ್ತು ರುಕ್ಮಿಣಿಯರ ದರ್ಶನ ಪಡೆದರು.. ಅಪರಾಹ್ನ ಪಲ್ಟನ್( ಮಹಾರಾಷ್ಟ್ರ) ದಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ ದಲ್ಲಿ ದಿವ್ಯ ಸಾನಿಧ್ಯವನ್ನಿತ್ತು ಮಾರ್ಗದರ್ಶನ ನೀಡಿದರು.. ಕಾರ್ಯಕ್ರಮದಲ್ಲಿ ಸ್ವಾಮೀ ಧಾರೇಶ್ವರ ಮಹಾರಾಜ್ ಮುಂತಾದವರು ಭಾಗವಹಿಸಿದ್ದರು.. ನಾವು ಶಂಕರಾಚಾರ್ಯರಾಗಿ ಇಲ್ಲಿಗೆ… Continue Reading →
||ಹರೇ ರಾಮ|| 21 ನವೆಂಬರ್ 2009: ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಇಂದು ಸಂಜೆ ನಡೆಯುವ ಸಂಗೀತ ರಸಮಂಜರಿ ಕಾರ್ಯಕ್ರಮ ’ಭಾವಸಂಗಮ’ ವನ್ನು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಉದ್ಘಾಟನೆ ನಡೆಸಿ ದಿವ್ಯ ಸಾನ್ನಿಧ್ಯವಹಿಸಲಿದ್ದಾರೆ. ಉತ್ತರ ಕರ್ನಾಟಕದ ನೆರೆಸಂತ್ರಸ್ತರಿಗೆ ಸಹಾಯ ಹಸ್ತವನ್ನು ಚಾಚುವ ಸಲುವಾಗಿ ನಡೆಸುವ ಈ ಕಾರ್ಯಕ್ರಕ್ಕೆ ಚಿತ್ರನಟ ವಿವೇಕ್ ಒಬೆರಾಯ್, ಕನ್ನಡದ ಮೇರುನಟ… Continue Reading →
ನವೆಂಬರ್ ೧೪, ೨೦೦೯: ನೆರೆ ಸಂತ್ರಸ್ಥರಿಗೆ ಸಹಾಯ ಹಸ್ತಚಾಚುವ ನಿಟ್ಟಿನಲ್ಲಿ ಶ್ರೀ ರಾಮಚಂದ್ರಾಪುರ ಮಠವು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಈ ಪ್ರಯುಕ್ತ ಇದೇ ಬರುವ ೨೧ರಂದು ಬೆಂಗಳೂರಿನಲ್ಲಿ ನಡೆಯುವ ಭಾವಸಂಗಮ’ ಕಾರ್ಯಕ್ರಮದ ವರದಿ, ೧೪-ನವೆಂಬರ್೨೦೦೯ ರ ಕನ್ನಡಪ್ರಭಾ’ ದ ೨ನೇ ಪುಟದಲ್ಲಿ: Click here to enlarge the image: https://hareraama.in/wp-content/uploads/2009/11/FloodReleifFromRamachandrapuraMatha-KannadaPrabha-14Nov09.png
ಧಾರವಾಡ, ಅಕ್ಟೋಬರ್ ೨೫: “ನೀವು ಅಸಹಾಯಕರಲ್ಲ, ಅನಾಥರಲ್ಲ, ಈ ಸಂಕಟದ ಸಮಯದಲ್ಲಿ ನಾಡು ನಿಮ್ಮೊಂದಿಗಿದೆ, ನಾವು ನಿಮ್ಮೊಂದಿಗಿದ್ಡೇವೆ ” ಇದು ನೆರೆಪೀಡಿತರನ್ನು ಕಂಡಾಗ ಶ್ರೀಗಳವರ ಮುಖದಿಂದ ಹೊರಹೊಮ್ಮಿದ ಉದ್ಗಾರ! ಧಾರವಾಡದ ಸಮೀಪದ ನೆರೆಪೀಡಿತ ಕಬ್ಬಾನೂರಿಗೆ ಭೇಟಿಯಿತ್ತಿದ್ದ ಅವರು ಸಂತ್ರಸ್ತರನ್ನುದ್ಡೇಶಿಸಿ ಮಾತನಾಡುತ್ತಿದ್ದರು. ಜಿಲ್ಲೆಯೊಂದನ್ನು ದತ್ತು ತೆಗೆದುಕೊಳ್ಳುವ ಮತ್ತು ಸಂತ್ರಸ್ತರಿಗಾಗಿ ೫೦೦೦ ಮನೆಗಳನ್ನು ದಾನಿಗಳ ಮೂಲಕ ನಿರ್ಮಿಸಿಕೊಡುವ ಅಭಿಪ್ರಾಯವನ್ನು… Continue Reading →
ಅಕ್ಟೋಬರ್ ೨೫, ೨೦೦೯: ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಇಂದಿನ ಪ್ರವಾಸದ ಮುಖ್ಯಾಂಶಗಳು: ಪ್ರವಾಹಪೀಡಿತ ಪ್ರದೇಶಗಳಿಗೆ ಶ್ರೀಗಳವರ ಭೇಟಿ ಸಂತ್ರಸ್ತರಿಗೆ ಅಭಯವಾಣಿ ೫೦೦೦ ಮನೆಗಳ ನಿರ್ಮಾಣದ ಗುರಿ ಗೋವು-ಮೇವುಗಳ ಪೂರೈಕೆ ಅಗತ್ಯವಿರುವಲ್ಲಿ ಗೋಶಾಲೆಗಳ ನಿರ್ಮಾಣ ಗೋಕರ್ಣದಲ್ಲಿ ಅಷ್ಟಬಂಧ -ಕೋಟಿರುದ್ರ ೧ ವರ್ಷ ಮುಂದಕ್ಕೆ ವಿಶ್ವಮಂಗಲ-ಗೋಗ್ರಾಮಯಾತ್ರೆಯ ಕರ್ನಾಟಕ-ಉತ್ತರಪ್ರಾಂತ ಸಭೆಯಲ್ಲಿ ಆಶೀರ್ವಚನ
ಬೆಂಗಳೂರು; ಅಕ್ಟೋಬರ್ ೨೫; ” ಸಂತ್ರಸ್ತರ ಬದುಕು ಹಾಗು ಜಾನುವಾರುಗಳ ಬದುಕು ಸಂಕಟಕ್ಕೆ ಸಿಲುಕಿರುವದಕ್ಕೆ ತಾವು ಅತಿಯಾಗಿ ನೊಂದಿದ್ದೀವೆ. ಅಂತವರು ಬದುಕಿನಲ್ಲಿ ಭರವಸೆ ಹಾಗು ಸಮಾದಾನ ಹೊಂದಿರುವಂತೆ ಮಾಡುವುದು ಉಳ್ಳವರ ಕರ್ತವ್ಯ, ಅದಕ್ಕಾಗಿ ಸಾವಿರ ಕಂಬಳಿ ನೀಡಲು ಯೋಚಿಸಿದ್ದು, ನಾಳೆ ಧಾರವಾಡದ ನೆರೆಪೀಡಿತ ಪ್ರದೇಶಕ್ಕೆ ಹೋಗುತ್ತಿದ್ದೇವೆ. ಉಳ್ಳವರ ಹಾಗು ಉದ್ಯಮಿಗಳ ನೆರವು ಪಡೆದು ಶಕ್ತಿಮೀರಿ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಯೋಜನೆ… Continue Reading →