Tag gokarna

07-01-2010 Camp

||hare raama|| 07-01-2010 CampSigar {madyapradesha}Phoo:094495952010944959520409449595215

ಘೋಷಣೆ : ಮೂಲಮಠದ ಪುನನಿರ್ಮಾಣ

ಸಹಸ್ರಾರು ವರ್ಷಗಳ ಪೂರ್ವದಲ್ಲಿ ಶ್ರೀ ಆದಿ ಶಂಕರಾಚಾರ್ಯರು ಗೋಕರ್ಣದ ಅಶೋಕೆಯೆಂಬ ಯಾವ ಪುಣ್ಯಸ್ಥಲದಲ್ಲಿ ‘ನಮ್ಮ’ ಮಠವನ್ನು ಸ್ಥಾಪಿಸಿದರೋ,
ಕಾಲಪ್ರವಾಹದಲ್ಲಿ ಯಾವುದು ಮಸುಕಾಗಿ-ಮಲಿನವಾಗಿ-ಮರೆಯಾಗಿಬಿಟ್ಟಿತ್ತೋ..
ಅಂತಹಾ ನಮ್ಮ ಮೂಲ ಮಠವನ್ನು ಅದರ ಮೂಲಸ್ಥಾನದಲ್ಲಿಯೇ ಮತ್ತೊಮ್ಮೆ ನಿರ್ಮಿಸುವ ಮಹಾಸಂಕಲ್ಪವನ್ನು ಪರಂಪರೆಯ ೩೬ನೆಯ ಧರ್ಮಾಚಾರ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಮ್ಮ ಅನಂತಶಿಷ್ಯ ಸ್ತೋಮದೊದಗೂಡಿ ಕೈಗೊಂಡರು..

11-12-2009 ರ ಕಾರ್ಯಕ್ರಮಗಳು..

ಶ್ರೀಗಳು ಪ್ರಾತಃ ಪೂಜೆಯನ್ನು ಪಂಢರಾಪುರದ ಸಂಜಯ್ ಆನಂದ್ ತಾಠೆ ರವರ ಮನೆಯಲ್ಲಿ ನೆರವೇರಿಸಿದರು.. ಅಲ್ಲಿಂದ ವಿಠೋಬ ಮತ್ತು ರುಕ್ಮಿಣಿಯರ ದರ್ಶನ ಪಡೆದರು.. ಅಪರಾಹ್ನ ಪಲ್ಟನ್( ಮಹಾರಾಷ್ಟ್ರ) ದಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ ದಲ್ಲಿ ದಿವ್ಯ ಸಾನಿಧ್ಯವನ್ನಿತ್ತು ಮಾರ್ಗದರ್ಶನ ನೀಡಿದರು.. ಕಾರ್ಯಕ್ರಮದಲ್ಲಿ ಸ್ವಾಮೀ ಧಾರೇಶ್ವರ ಮಹಾರಾಜ್ ಮುಂತಾದವರು ಭಾಗವಹಿಸಿದ್ದರು.. ನಾವು ಶಂಕರಾಚಾರ್ಯರಾಗಿ ಇಲ್ಲಿಗೆ… Continue Reading →

ಬೆಂಗಳೂರಿನ ಶ್ರೀ ವಿವೇಕಾನಂದ ಆದರ್ಶ ಯೋಗ ಕೇಂದ್ರದಲ್ಲಿ ಶ್ರೀಗಳು..

ಗೋಕರ್ಣ ದೀಪೋತ್ಸವ : ಕರಾವಳಿ ಮುಂಜಾವು : 03-ನವೆಂಬರ್-2009

03 ನವೆಂಬರ್, 2009 : ಸ್ಥಳೀಯ ಜನಪ್ರಿಯ ಪತ್ರಿಕೆ ಕರಾವಳಿ ಮುಂಜಾವು ಪತ್ರಿಕೆಯಲ್ಲಿ ಗೋಕರ್ಣದಲ್ಲಿ ನಡೆದ ತ್ರಿಪುರ ದೀಪೋತ್ಸವದ ವರದಿ. (ಪೂರ್ಣ ಪ್ರಮಾಣದ ಚಿತ್ರಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ.)

30 ಅಕ್ಟೋಬರ್ 2009 – ದಿನಚರಿ

ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ದಿನಚರಿ: ವಸತಿ: ಶ್ರೀ ದೇವಶ್ರವ ಶರ್ಮ, ಅಶೋಕೆ, ಗೋಕರ್ಣ ಶ್ರೀಭಿಕ್ಷೆ ; ರಾಘವೇಂದ್ರ ಬನದಕೊಪ್ಪ ದಿನವಿಶೇಷ: ಸೂರ್ಯೋದಯಕ್ಕೆ ಸರಿಯಾಗಿ ಗೋಕರ್ಣದ ಶ್ರೀಮಹಾಗಣಪತಿಗೆ ಶ್ರೀಕರಗಳಿಂದ ಪೂಜೆ.. ಶ್ರೀ ಆತ್ಮಲಿಂಗಕ್ಕೆ ರುದ್ರಾಭಿಷೇಕಪೂರ್ವಕ ಪೂಜೆ.. ಶ್ರೀ ತಾಮ್ರಗೌರಿಯ ಪೂಜೆ.. ಶ್ರೀ ಕೋಟಿತೀರ್ಥದ ಉತ್ತರ ತೀರದಲ್ಲಿ ಶೋಭಿಸುವ ಶ್ರೀ ರಘೂತ್ತಮ… Continue Reading →

ದಿನದ ಮುಖ್ಯಾಂಶಗಳು : ಅಕ್ಟೋಬರ್ ೨೫, ೨೦೦೯

ಅಕ್ಟೋಬರ್ ೨೫, ೨೦೦೯: ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಇಂದಿನ ಪ್ರವಾಸದ ಮುಖ್ಯಾಂಶಗಳು: ಪ್ರವಾಹಪೀಡಿತ ಪ್ರದೇಶಗಳಿಗೆ ಶ್ರೀಗಳವರ ಭೇಟಿ ಸಂತ್ರಸ್ತರಿಗೆ ಅಭಯವಾಣಿ ೫೦೦೦ ಮನೆಗಳ ನಿರ್ಮಾಣದ ಗುರಿ ಗೋವು-ಮೇವುಗಳ ಪೂರೈಕೆ ಅಗತ್ಯವಿರುವಲ್ಲಿ ಗೋಶಾಲೆಗಳ ನಿರ್ಮಾಣ ಗೋಕರ್ಣದಲ್ಲಿ ಅಷ್ಟಬಂಧ -ಕೋಟಿರುದ್ರ ೧ ವರ್ಷ ಮುಂದಕ್ಕೆ ವಿಶ್ವಮಂಗಲ-ಗೋಗ್ರಾಮಯಾತ್ರೆಯ ಕರ್ನಾಟಕ-ಉತ್ತರಪ್ರಾಂತ ಸಭೆಯಲ್ಲಿ ಆಶೀರ್ವಚನ

ಸಂತ್ರಸ್ತರ ನೆರವಿಗೆ ಸರ್ಕಾರದೊಡನೆ ನಾವಿದ್ದೇವೆ – ಶ್ರೀ ರಾಘವೇಶ್ವರ ಸ್ವಾಮಿಜೀ ಭರವಸೆ

ಬೆಂಗಳೂರು; ಅಕ್ಟೋಬರ್ ೨೫; ” ಸಂತ್ರಸ್ತರ ಬದುಕು ಹಾಗು ಜಾನುವಾರುಗಳ ಬದುಕು ಸಂಕಟಕ್ಕೆ ಸಿಲುಕಿರುವದಕ್ಕೆ ತಾವು ಅತಿಯಾಗಿ ನೊಂದಿದ್ದೀವೆ. ಅಂತವರು ಬದುಕಿನಲ್ಲಿ ಭರವಸೆ ಹಾಗು ಸಮಾದಾನ ಹೊಂದಿರುವಂತೆ ಮಾಡುವುದು ಉಳ್ಳವರ ಕರ್ತವ್ಯ, ಅದಕ್ಕಾಗಿ ಸಾವಿರ ಕಂಬಳಿ ನೀಡಲು ಯೋಚಿಸಿದ್ದು, ನಾಳೆ ಧಾರವಾಡದ ನೆರೆಪೀಡಿತ ಪ್ರದೇಶಕ್ಕೆ ಹೋಗುತ್ತಿದ್ದೇವೆ. ಉಳ್ಳವರ ಹಾಗು ಉದ್ಯಮಿಗಳ ನೆರವು ಪಡೆದು ಶಕ್ತಿಮೀರಿ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಯೋಜನೆ… Continue Reading →

ಅನಾವರಣಗೊಂಡಿತು ಹರೇರಾಮ !!

ಬಹುನಿರೀಕ್ಷಿತವಾದ ನಮ್ಮೆಲ್ಲರ E-ಮಠ ‘ಹರೇರಾಮ’ ಬೆಳಕಿನ ಹಬ್ಬದಂದು ಬೆಳಕನ್ನು ಕಂಡಿದೆ.ಇದರೊಂದಿಗೆ ನಿಮ್ಮೆಲ್ಲರೊಡನೆ ಮತ್ತೆ ಮತ್ತೆ ಮಾತನಾಡುವ ನಮ್ಮ ತುಡಿತ ಸಫಲಗೊಂಡಿದೆ.ಎಲ್ಲ ವಿಧದ ದೂರಗಳನ್ನು ಮೀರಿ ನಿಲ್ಲುವ ಶಕ್ತಿ ಪ್ರೀತಿಗಿದೆ.ಬ್ರಹ್ಮಾಂಡದ ಎರಡು ತುದಿಗಳನ್ನು ಒಂದುಗೂಡಿಸಬಲ್ಲುದು ಪ್ರೀತಿ.ಗುರುಶಿಷ್ಯರ ಪರಸ್ಪರ ಪ್ರೀತಿಯ ಪ್ರಕಟ ರೂಪವೇ ಈ ಅಂತರ್ಜಾಲ ತಾಣ ಅಥವಾ ಅಂತರಂಗ ತಾಣ.ಅಂತರಂಗಗಳನ್ನು ಅಂತರವಿಲ್ಲದಂತೆ ಬೆಸೆಯುವ ತಾಣ.ಇಲ್ಲಿಯವರೆಗೆ ಬಹಿರಂಗದಲ್ಲಿ ದೂರವಿದ್ದಾಗ… Continue Reading →

Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑