ಗೋಕರ್ಣ: ಸಾತ್ವಿಕತೆ ದೈವೀಗುಣ. ಇದು ಲೋಕೋಪಕಾರಕ. ಆದರೆ ಕಾಲದ ಮಹಿಮೆಯಿಂದಲೋ ಅಥವಾ ವ್ಯಕ್ತಿಯ ಪೂರ್ವದೋಷಗಳಿಂದಲೋ ಒಮ್ಮೊಮ್ಮೆ ಸಾತ್ವಿಕ ಕುಲದಲ್ಲಿ ಹುಟ್ಟಿದ ವ್ಯಕ್ತಿಗಳೂ ಆಸುರೀ ಸ್ವಭಾವವನ್ನು ಹೊಂದಿ ಲೋಕಕಂಟಕರಾಗಿ ಪರಿವರ್ತನೆ ಹೊಂದುವುದುಂಟು. ವಿಷ್ಣುವಿನ ಅಂತರಂಗಭಕ್ತರಾಗಿದ್ದೂ ತಮ್ಮ ಅಪರಾಧದಿಂದ ಶಾಪಗ್ರಸ್ತರಾಗಿ ಭೂಮಿಗೆ ಬಿದ್ದು ರಾವಣ, ಕುಂಭಕರ್ಣರಾಗಿ ಜನಿಸಿದ ಜಯವಿಜಯರೇ ಇದಕ್ಕೆ ಉದಾಹರಣೆ. ತಂದೆ ಪರಮತಪಸ್ವಿಯಾದ ವಿಶ್ರವಸ್. ಅಣ್ಣ ಮಾನವನಾಗಿ… Continue Reading →
ಗೋಕರ್ಣ: ಪರಮಾತ್ಮನ ಅನುಗ್ರಹದಿಂದ ಈ ಲೋಕದಲ್ಲಿ ಜನಿಸಿದ ಜೀವಿ ಕೇವಲ ತನಗಾಗಿ ಬದುಕದೆ ಅನ್ಯರ ನೋವು, ನಲಿವುಗಳಲ್ಲಿಯೂ ಪಾಲ್ಗೊಳ್ಳಬೇಕು. ಸಮಾಜದ ಋಣವನ್ನು ತೀರಿಸಬೇಕು. ಮರಗಿಡಗಳೂ. ನದಿ, ಗೋವುಗಳೂ ಇಂತಹ ಆದರ್ಶಕ್ಕೆ ಮಾದರಿಯಾಗಿವೆ. ಯಾವ ನದಿಯೂ ತನ್ನ ನೀರನ್ನು ತಾನೇ ಕುಡಿಯುವುದಿಲ್ಲ. ಲೋಕದಲ್ಲಿ ಯಾವ ಮರವೂ ತನ್ನ ಹಣ್ಣನ್ನು ತಾನೇ ತಿನ್ನುವುದಿಲ್ಲ. ಇಂತಹ ಪರೋಪಕಾರಿ ಬದುಕು ನಮ್ಮದಾದರೆ ಜೀವನ… Continue Reading →
ಗೋಕರ್ಣ. ಜು. ೧೮: ವೈಕುಂಠ ವೆಂದರೆ ಗಮನದ ಕೊನೆ. ಅದನ್ನು ಸೇರಿದ ಮೇಲೆ ಮುಂದೆ ಗತಿಯಿಲ್ಲ. ಸರ್ವಜೀವಿಗಳ ಶಾಶ್ವತಾನಂದದ ಚರಮಲಕ್ಷ್ಯವದು. ಜೀವರು ಸತತಸಾಧನೆಯ ಬಲದಿಂದ ತದೇಕಪ್ರವಣತೆಯಿಂದ ಪಡೆಯಬಹುದಾದ ಪರಮಪದ. ಸುಖದ ಪರ್ಯಾಯವಾದ ಆನಂದದ ಅನ್ವೇಷಣೆಯೇ ನಮ್ಮ ಬದುಕು. ನಮ್ಮ ಮೂಲನೆಲೆಯಾದ ಅದನ್ನು ಪಡೆಯುವವರೆಗೂ ನಮ್ಮ ಹುಡುಕಾಟ, ಚಡಪಡಿಕೆ ತಪ್ಪುವುದಿಲ್ಲ. ಯಾವಾಗ ಬಿಂದುರೂಪರಾದ ನಾವು ಮಹಾಸಿಂಧುಸದೃಶವಾದ ಆ… Continue Reading →