ಸಂನ್ಯಾಸದ ಸೊಬಗು ‘ಪೂಜ್ಯ’ ಎಂಬ ಶಬ್ದಕ್ಕೆ ಸಂಸ್ಕೃತದಲ್ಲಿ ‘ಪೂಜನೀಯ’ ಎಂಬ ಅರ್ಥವಿರುವಂತೆ ಕನ್ನಡದಲ್ಲಿ ‘ಶೂನ್ಯ’ ಎಂಬ ಅರ್ಥವೂ ಇದೆ. ಸೊನ್ನೆಯಾಗಲಾರದವನು ಪೂಜ್ಯನಾಗಲಾರ. ಗಳಿಸಿದುದೆಲ್ಲವನ್ನೂ ಕಳೆದು, ಕಡೆಗೆ ಕಳೆಯಲಾರದುದೊಂದನ್ನು ಉಳಿಸಿಕೊಂಡು ಸೊನ್ನೆಯಾಗುವ ಪ್ರಕ್ರಿಯೆಗೇ ‘ಸಂನ್ಯಾಸ’ವೆಂದು ಹೆಸರು. ಕಳೆಯುವಷ್ಟು ಕಳೆದ ಮೇಲೆ ಉಳಿಯುವುದೇ ಸೊನ್ನೆ; ಏನು ಕಳೆದರೂ, ಎಷ್ಟು ಕಳೆದರೂ ಕಳೆಯದೇ ಉಳಿಯುವ ಸಂಖ್ಯೆಯೆಂದರೆ ಅದುವೇ; ಸಂನ್ಯಾಸವೂ ಹಾಗೆಯೇ!… Continue Reading →