Author Sri Samsthana

ಕಲಾಪ ಗ್ರಾಮದ ಬಗ್ಗೆ ಮತ್ತಷ್ಟು ಮಾಹಿತಿ

ಈ ಕಲಾಪ ಗ್ರಾಮವು ಹಿಮಾಲಯದ ಬದರಿಕಾಶ್ರಮದ ಸಮೀಪದಲ್ಲಿದೆ. ಅನೇಕ ಯೋಗಿಗಳು ಈಗಲೂ ಇಲ್ಲಿ ಗುಪ್ತಸ್ವರೂಪದಲ್ಲಿ ಯೋಗಸಮಾಧಿಯಲ್ಲಿರುತ್ತಾರೆ ಎಂಬ ಪ್ರತೀತಿಯಿದೆ. ಊರ್ವಶಿಯು ಪುರೂರವನೊಡನೆ ಕೆಲಕಾಲ ಇಲ್ಲಿ ವಾಸಿಸಿದ್ದಳು.-ಕಲ್ಕಿಪುರಾಣ. ಕಲಾಪ ಗ್ರಾಮವು ಸರಸ್ವತೀ ಮೂಲದಲ್ಲಿ ‘ಅಲಕನಂದಾ-ಘರ್ ವಾಲ್ ‘ಗಳ ಮಧ್ಯದಲ್ಲಿದೆ -ಕ್ಯಾಪ್ಟನ್ ರೇಪರ್ ಬ್ರಿಟಿಶ್ ಸಂಶೋಧಕ. ದೇವಾಪಿ:ಪೌರವೋ ರಾಜಾ ಮರುಶ್ಚೆಕ್ಷ್ವಾಕು ವಂಶಜ: | ಮಹಾಯೋಗಬಲೋಪೇತೌ ಕಲಾಪಗ್ರಾಮಸಂಶ್ರಯೌ|| ಏತೌ ಕ್ಷಾತ್ರಪ್ರಣೇತಾರೌ… Continue Reading →

“ಕಲಾಪ” ಗ್ರಾಮದ ಬಗ್ಗೆ ಮತ್ತಷ್ಟು ಮಾಹಿತಿ….

ಮರುಮಹಾರಾಜನು ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವನ್ನು ಪುನಃ ಬೆಳಗಿಸುವವನಾದರೆ ಚಂದ್ರವಂಶದ ದೇವಾಪಿಯು ಈ ಯುಗಾಂತ್ಯದಲ್ಲಿ ಚಂದ್ರವಂಶವನ್ನು ಪುನಃ ಮುಂದುವರೆಸುವನು. ಶಂಭಲ ಎಂಬ ಗ್ರಾಮದಲ್ಲಿ  ವಿಷ್ಣುಯಶಸ ಎಂಬ ಮಹಾತ್ಮನಾದ ಬ್ರಾಹ್ಮಣನಮನೆಯಲ್ಲಿ ಪ್ರಾದುರ್ಭವಿಸುವ ಕಲ್ಕಿಯ ಆಜ್ಞೆಯಂತೆ ಮರು ಮಹಾರಾಜ ಹಾಗೂ ದೇವಾಪಿಯರೀರ್ವರೂ ಸತ್ಯಯುಗದಲ್ಲಿ ಸನಾತನಧರ್ಮವನ್ನು ಬೆಳೆಸುತ್ತಾರೆ. ಇವರಿಬ್ಬರು ಅದ್ಭುತ ಯೋಗಶಕ್ತಿಯನ್ನು ಪಡೆದವರಾಗಿದ್ದು ಈಗ “ಕಲಾಪ” ಗ್ರಾಮದಲ್ಲಿ ಗೋಪ್ಯವಾಗಿ ತಪಸ್ಸನ್ನಾಚರಿಸುತ್ತಿದ್ದಾರೆ.. ದೇವಾಪಿ :- ಭೀಷ್ಮಪಿತಾಮಹನ ತಂದೆಯಾದ… Continue Reading →

ಆರ್ಥಿಕತೆ – ಸಾರ್ಥಕತೆ

ಬದುಕು ಸಮೃದ್ಧವಾಗಬೇಕು..
ಬದುಕು ಸಾರ್ಥಕವೂ ಆಗಬೇಕು..
ಬದುಕು ಸಮೃದ್ಧವಾಗಲು ತಾಯಿ ಲಕ್ಷ್ಮಿಯ ಕೃಪೆ ಬೇಕು..
ಬದುಕು ಸಾರ್ಥಕವಾಗಲು ತಂದೆ ನಾರಾಯಣನ ಕೃಪೆ ಬೇಕು..
ಲಕ್ಷ್ಮಿಯು ಅರ್ಥದ ರೂಪದಲ್ಲಿ ಹರಿಯುತ್ತಿದ್ದರೆ ಬದುಕಿಗೆ ಸಮೃದ್ಧಿ..
ನಾರಾಯಣನು ಧರ್ಮದ ರೂಪದಲ್ಲಿ ನೆಲೆ ನಿಂತರೆ ಬದುಕಿಗೆ ಸಾರ್ಥಕತೆ..
ಧರ್ಮವು ನೆಲೆ ನಿಲ್ಲಬೇಕೆಂದರೆ ಅರ್ಥವು ಸರಿಯಾದ ದಾರಿಯಲ್ಲಿ ಹರಿಯುತ್ತಲೇ ಇರಬೇಕು..
ಅರ್ಥವು ಧರ್ಮದ ದಾರಿಯಲ್ಲಿ ಒಳಹರಿದು ಬರಬೇಕು..
ಅರ್ಥವು ಧರ್ಮದ ದಾರಿಯಲ್ಲಿಯೇ ಹೊರಹರಿದು ಹೋಗಬೇಕು..
ಇದು ಅಯೋಧ್ಯೆಯ ಅರ್ಥ ನೀತಿ..

ಪ್ರೀತಿಯೊಡನೆ ನೀತಿ, ಇದು ಅಯೋಧ್ಯೆಯ ರೀತಿ..!

ಬದುಕು ಮುಂದೆ ಸಾಗಬೇಕು..
ಆದರೆ ಅದು ಸರಿಯಾದ ದಾರಿಯಲ್ಲಿ ಮುಂದೆ ಸಾಗಬೇಕು..
ಬದುಕು ಮುಂದೆ ಸಾಗಲು ಬೇಕು “ಪ್ರೀತಿ”
ಅದು ಸರಿಯಾದ ದಾರಿಯಲ್ಲಿ ಸಾಗಲು ಬೇಕು “ನೀತಿ”
ಬದುಕು ಚಲಿಸಲು ಬೇಕು ’ಪ್ರೀತಿ” ಎಂಬ ಚಾಲನಾಶಕ್ತಿ..
ಅದು ನಿಜವಾದ ಲಕ್ಷ್ಯದೆಡೆಗೆ ಚಲಿಸಲು ಬೇಕು “ನೀತಿ ’ಎಂಬ ಚಾಲಕ..
ಶೂರ್ಪಣಖೆಗೆ ರಾಮನ ಕುರಿತು, ಅವಳ ಅಣ್ಣನಿಗೆ ಸೀತೆಯ ಕುರಿತು ಇದ್ದಿದ್ದು ಪ್ರೀತಿಯಲ್ಲ..ಏಕೆಂದರೆ ಅಲ್ಲಿ ನೀತಿಯಿರಲಿಲ್ಲ..
ನೀತಿಗೆ ಸಲ್ಲದ ಪ್ರೀತಿಯು ಪ್ರೀತಿಯೇ ಅಲ್ಲ..!!

ರಾಮನ ಬಳಿಕದ ರಘುವಂಶ..

 ಶ್ರೀರಾಮನ ನಂತರದ ಸೂರ್ಯವಂಶದ ಭವಿಷ್ಯದ ಕುರಿತು ಬಂದಿರುವ ಹಲವಾರು ಪ್ರಶ್ನೆಗಳಿಗೆ ಶ್ರೀ ಭಾಗವತದಲ್ಲಿ ಕಂಡುಬರುವ ಉತ್ತರವಿದು..

• ಪ್ರಭು ಶ್ರೀರಾಮಚಂದ್ರನಿಗೆ ಲವ-ಕುಶರೀರ್ವರು ಮಕ್ಕಳು..
• ಭರತನಿಗೆ ತಕ್ಷ-ಪುಷ್ಕಲರು..
• ಲಕ್ಷ್ಮಣನಿಗೆ ಅಂಗದ-ಚಂದ್ರಕೇತುಗಳು..
• ಶತ್ರುಘ್ನನಿಗೆ ಸುಬಾಹು-ಶತ್ರುಪಾತಿಗಳು..
• ಇವರಲ್ಲಿ ಹಿರಿಯವನಾದ ಕುಶನು ಕುಮುದ್ವತಿಯನ್ನು ವರಿಸಿ ಕುಶಾವತಿ ಅಥವಾ ಕುಶಸ್ಥಲಿಯಲ್ಲಿ ರಾಜ್ಯವಾಳುತ್ತಾನೆ..
• ಲವನು ಶ್ರಾವಸ್ತಿ ಅಥವಾ ಲವಸ್ಥಲಿಯಲ್ಲಿ, ತಕ್ಷನು ತಕ್ಷಶಿಲೆಯಲ್ಲಿ, ಪುಷ್ಕಲನು ಪುಷ್ಕಲಾವತದಲ್ಲಿ, ಅಂಗದನು ಕಾರುಪಥದಲ್ಲಿ,ಚಂದ್ರಕೇತುವು ಚಂದ್ರಕಾಂತದಲ್ಲಿ, ಸುಬಾಹು ಮಧುರಾನಗರಿಯಲ್ಲಿ, ಶತ್ರುಪಾತಿಯು ವಿದಿಶಾನಗರಿಯಲ್ಲಿ ರಾಜ್ಯವಾಳಿದರು..

ರಾಮಾವತಾರದ ಮುನ್ನ ಪ್ರೇಮಾವತಾರ….

॥ಹರೇ ರಾಮ॥

ಪ್ರೀತಿ..ನೀತಿ..ರೀತಿ…ಪರಿಣತಿ..
ಅಯೋಧ್ಯೆಯ ಮಂತ್ರಿಗಳನ್ನು ನಾಲ್ಕೇ ಪದಗಳಲ್ಲಿ ಬಣ್ಣಿಸಬಹುದಾದರೆ ಅದು ಹೀಗೆ…!!

ಪ್ರೀತಿ – ಈಶನಲ್ಲಿ..
ಪ್ರೀತಿ – ದೇಶದಲ್ಲಿ..
ಪ್ರೀತಿ – ನರೇಶನಲ್ಲಿ..
ಪ್ರೀತಿ – ಪರಸ್ಪರರಲ್ಲಿ..
ಪ್ರೀತಿ – ಕರ್ತವ್ಯದಲ್ಲಿ..

ಆತ್ಮದ ಅಂತರಾಳದಲ್ಲಿ ಉದಯಿಸಿ ಬರುವ ಪ್ರೀತಿ..
ಅದು ಬಗೆ ಬಗೆಯಲ್ಲಿ ವ್ಯಕ್ತವಾಗಿ ಎಲ್ಲೆಡೆ ಪಸರಿಸುವ ರೀತಿ..

ಅಮೃತ ತಿಥಿಯಿಂದು…

ಇಂದು ಆರಾಧನೆ.. ಆದಿಶಂಕರಾಚಾರ್ಯರ ಏಕಮಾತ್ರ ಅವಿಛ್ಛಿನ್ನ ಪರಂಪರೆಯ ಮೂವತ್ತೈದನೆಯ ಧರ್ಮಾಚಾರ್ಯರೂ, ನಮ್ಮ ಪೂರ್ವಾಚಾರ್ಯರೂ ಆದ ಬ್ರಹ್ಮಲೀನ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರು ಇಹದ ಬದುಕನ್ನು ಪೂರ್ಣಗೊಳಿಸಿದ ಅಮೃತ ತಿಥಿಯಿಂದು.. ನಮ್ಮೆಲ್ಲರ ಶ್ರೇಯಸ್ಸಿಗಾಗಿ ಗುರುಗಳ ಆರಾಧನೆ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಳ್ಳುತ್ತಿರುವ ಈ ಶುಭ ಸಮಯದಲ್ಲಿ ನಿಮ್ಮೆಲ್ಲರಿಗೂ ತೀರದ ಗುರುಕರುಣೆಯನ್ನು ಹಾರೈಸುವೆವು..

ಜೋಧಪುರದಲ್ಲಿ ರಾಮಕಥೆ..

ರಾಜಸ್ಥಾನದ  ಜೋಧಪುರದಲ್ಲಿ ರಾಮಕಥೆಯ ಸಂತೋಷವನ್ನು ನಿಮ್ಮೊಡನೆ ಹಂಚಿಕೊಳ್ಳುವ ಮನಸು… [audio:Ramakatha/Raamakathe_1.mp3]

ಸಾಕ್ಷೀಭಾವ – ಮುಂದುವರಿದ ಪ್ರಶ್ನೋತ್ತರ

ಶ್ರೀ ರಾಘವೇಂದ್ರ ನಾರಾಯಣ ಅವರ ಪ್ರಶ್ನೆ ಸಾಕ್ಷೀಭಾವ ಎಂದರೇನು? ಈ ಪ್ರಶ್ನೆಗೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನೀಡಿದ ಉತ್ತರದ ಮುಂದುವರಿದ ಭಾಗ ಇಲ್ಲಿದೆ. [audio:Prashnottara/November/Sakshibhava part2.mp3]

ಅಲ್ಪವಿರಾಮ

ಅನ್ಯಾನ್ಯ ಕಾರಣಗಳಿಂದ ಎರಡು-ಮೂರು ವಾರಗಳ ಕಾಲ ‘ರಾಮ‘ ಬ್ಲಾಗ್ ಹೊರತರಲು ಸಾಧ್ಯವಾಗುತ್ತಿಲ್ಲ.. ಈ ಸಮಯದಲ್ಲಿ ಶ್ರೀಮುಖದಲ್ಲಿ ಹೆಚ್ಚಿನ ಸಂವಹನವನ್ನು ನಿರೀಕ್ಷಿಸಿರಿ.. ಶೀಘ್ರದಲ್ಲಿ ರಾಮಕಥಾ ಪ್ರವಚನಮಾಲಿಕೆಯನ್ನು ಹಿಂದಿಯಲ್ಲಿ ನಿರೀಕ್ಷಿಸಿರಿ ..

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑