Author Sri Samyojaka

ಮಂಗಳೂರು ರಾಮಕಥೆ ಎರಡನೇ ದಿನ

ಶ್ರೀ ಗುರುಗಳು ಶ್ರೀ ಪರಿವಾರದ ಅಣ್ಣಂದಿರ ಮುಡಿಯಲ್ಲೇರಿದ ಆದಿ ಗ್ರಂಥದ ಜೊತೆಗೆ ವೇದಿಕೆಯ ಮೇಲೇರಿ ಬಂದು ಸೀತಾ ಸಹಿತ ಶ್ರೀ ರಾಮನಿಗೆ, ಹನುಮ ಸಾನ್ನಿಧ್ಯಕೆ, ಪುಷ್ಪಾರ್ಚನೆಗೈದು ಶ್ರೀ ಪೀಠ ಅಲಂಕರಿಸಿದರು. ಪ್ರಾಯೋಜಕರು ರಾಮಾಯಣ ಗ್ರಂಥ ಕೆ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿ ದರು. ಶ್ರೀ ರಾಮಾಯಣ ಗ್ರಂಥಕ್ಕೆ ಶ್ರೀ ಕರಾರ್ಚಿತ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ವಿದ್ವಾನ್… Continue Reading →

ನಂದನ ನಾಮ ಸಂವತ್ಸರದ ಶ್ರೀರಾಮೋತ್ಸವ

ನಂದನ ನಾಮ ಸಂವತ್ಸರದ ಶ್ರೀರಾಮೋತ್ಸವ

ರಾಮ ಕಥಾ ಕಿರಣ ಪುತ್ತೂರು

ರಾಮ ಕಥಾ ಕಿರಣ: ಪುತ್ತೂರು

ಕಾಮದ ದಹನವಾದರೆ ಬದುಕಿನಲ್ಲಿ ಕಲ್ಯಾಣ ಸಾಧ್ಯ– ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಗೋಕರ್ಣ.22: ಲೋಕದಲ್ಲಿ ಎತ್ತರಕ್ಕೆ ಪ್ರಸಿದ್ಧವಾದದ್ದು ಹಿಮಾಲಯ. ನಮ್ಮ ನಾಡಿನ ಹೆಮ್ಮೆಯ ಪ್ರದೇಶವಾದ ಅದು ನಮ್ಮೆಲ್ಲರ ಬದುಕಿನ ಔನ್ನತ್ಯಕ್ಕೆ ಸಂಕೇತವೂ ಹೌದು. ಜೀವನದ ಸಾರ್ಥಕತೆಗೆ ಪ್ರತೀಕವಾದ ಈ ಹಿಮಾಲಯ ಅಪಾರವಾದ ಅಂತಸ್ಸತ್ವ, ದೃಢತೆಗೆ ಆಧಾರವೂ ಸಹ. ವ್ಯಕ್ತಿಯೋರ್ವನ ಬಾಳಿಗೆ ಇದು ಮಾದರಿಯಾಗಬೇಕು ಎಂದು ಪೂಜ್ಯ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ. ಗೋಕರ್ಣದ ಸಾಗರತೀರದಲ್ಲಿ ನಿರ್ಮಿತವಾದ ಮಹರ್ಷಿ ದೈವರಾತ… Continue Reading →

ಲೋಕದ ಮೊದಲ ಕಲಾವಿದ ಪರಶಿವ – ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಗೋಕರ್ಣ.೨೨ ಶೂನ್ಯವಾದ ಭಿತ್ತಿಯಲ್ಲಿ ಶೂನ್ಯದಕುಂಚದಿಂದಲೇ ಈ ಜಗತ್ತಿನ ರೂಪ, ಆಕೃತಿಗಳನ್ನು ವಿರಚಿಸಿದ ಸೃಷ್ಟಿಯ ಆದಿಕಲಾವಿದ ಪರಶಿವ. ಅವನು ಕೇವಲ ಕಲಾವಿದ ಮಾತ್ರವಲ್ಲ. ಕಲಾಧರನೂ ಹೌದು. ಅವನ ಅನುಗ್ರಹದಿಂದಲೇ ಇಂದು ಲೋಕದ ಕಲಾಪ್ರಪಂಚವು ಉಳಿದು ಬೆಳೆದು ಬರುತ್ತಿದೆ. ಬದುಕಿಗೆ ಸಂತೋಷವನ್ನು ನೀಡುವಕಲೆಗಳೆಲ್ಲವೂ ಭಗವಂತನ ಆರಾಧನೆಯ ಸಾಧನಗಳೇ. ಲೋಕಪ್ರಸಿದ್ಧವಾದ ಯಕ್ಷಗಾನ ಕಲಾ ಪ್ರಪಂಚಕ್ಕೆ  ಮೊಟ್ಟಮೊದಲ “ಪದ್ಮಶ್ರೀ” ಪ್ರಶಸ್ತಿಯನ್ನು ತಂದುಕೊಡುವ… Continue Reading →

ಅಧಿಕಾರವೂ ಅಮಲಿಗೆ ಕಾರಣ – ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಗೋಕರ್ಣ 21: ಕೇವಲ ಹಣ,ಸಂಪತ್ತು ಮಾತ್ರ ಮನುಷ್ಯನನ್ನು ಅಧಃಪತನಕ್ಕೆ ಕಾರಣವಲ್ಲ. ಅಧಿಕಾರದ ಅಮಲೂ ಸಹ ವ್ಯಕ್ತಿಯನ್ನು ತಿಳಿಗೇಡಿಯನ್ನಾಗಿಸುತ್ತದೆ. ಬದುಕಿಗೆ ಇವೆಲ್ಲವೂ ಬೇಕು ಎಂಬುದು ನಿಜವಾದರೂ ಸಹ ಅಧಿಕಾರವೋ,ಸಂಪತ್ತೋ ಬಂದಾಗ ಅದನ್ನು ತಲೆಗೇರಿಸಿಕೊಳ್ಳದೆ ತನ್ನ ವಿವೇಕವನ್ನು ಉಳಿಸಿಕೊಳ್ಳುವವನೇ ಸಾರ್ಥಕತೆಯನ್ನು ಪಡೆಯುತ್ತಾನೆ. ಸಂಪತ್ತು ಎಂತಹ ವಿವೇಕಿಯನ್ನೂ ಭ್ರಮೆಗೊಳಿಸಬಲ್ಲುದು. ಅಧಿಕಾರದ ಮತ್ತತೆ ಮಸ್ತಕಕ್ಕೇರಿದರೆ ನಮ್ಮವರ ಪರಿಚಯ ಉಳಿಯುವುದಿಲ್ಲ.ಸಂಬಂಧಿಗಳ ಗುರುತು ದೂರವಾಗುತ್ತದೆ…. Continue Reading →

ಧರ್ಮರೂಪದ ಮಂಗಳದ ಮುಂಬೆಳಕೇ ಶಿವರಾತ್ರಿ – ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಗೋಕರ್ಣ.20. ನಮ್ಮ ಬದುಕಿನಲ್ಲಿ ಅನೇಕರಾತ್ರಿಗಳನ್ನು ನಾವು ಕಂಡಿದ್ದೇವೆ. ಆ ಎಲ್ಲ ರಾತ್ರಿಗಳಲ್ಲಿ ಪೂರ್ಣ ಕತ್ತಲೇ ತುಂಬಿದೆ. ಆದರೆ ಈ ಶಿವರಾತ್ರಿ ಮಾತ್ರ ಹಾಗಲ್ಲ. ಇದು ನಮ್ಮ ಜೀವನದಲ್ಲಿ ಮಂಗಳವನ್ನು ಶುಭವನ್ನು ಕೊಡುವ ರಾತ್ರಿ. ಇರುಳೆಲ್ಲ ಎಚ್ಚರವಾಗಿದ್ದು ಪರಶಿವನನ್ನು ಹೃದಯದಲ್ಲಿ ತುಂಬಿಕೊಂಡು ಅವನನ್ನು ಆರಾಧಿಸುವ ಪುಣ್ಯಪರ್ವವೇ ಶಿವರಾತ್ರಿ. ಲೋಕಹಿತಂಕರನಾದ ಶಂಕರ ಈ ಶಿವರಾತ್ರಿಯ ಸಂದರ್ಭದಲ್ಲಿ ಲೋಕದ ಎಲ್ಲ… Continue Reading →

ಶಿವ-ಪಾರ್ವತಿಯರ ದಾಂಪತ್ಯದ ಫಲವೇ ಲೋಕಸೃಷ್ಟಿ – ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಗೋಕರ್ಣ. 19: ಶಿವ-ಪಾರ್ವತಿಯರು ಈ ಲೋಕದ ಆದಿದಂಪತಿಗಳು. ಇವರ ಸಂಸಾರದ ಫಲವೇ ಈ ಪ್ರಪಂಚ. ಸನಾತನರು ಇದನ್ನೇ ಶಿವ-ಶಕ್ತಿ ಎಂದು ಉಲ್ಲೇಖಿಸಿದ್ದಾರೆ. ಶಿವನ ಮೊದಲ ಪತ್ನಿ ದಕ್ಷಪುತ್ರಿಯಾದ ಸತೀದೇವಿ. ತಂದೆಯು ಮಾಡಿದ ಅವಮಾನದಿಂದ ನೊಂದ  ಸತೀದೇವಿ ಯೋಗಾಗ್ನಿಯಲ್ಲಿ ತನ್ನನ್ನು ತಾನು ಸುಟ್ಟುಕೊಂಡಳು. ಶಿವ ಪತ್ನೀ ರಹಿತನಾದ.ಶಿವನ ದಾಂಪತ್ಯದ ಫಲರೂಪವಾಗಿ ಜನಿಸುವ ಸ್ಕಂದನಿಂದಲೇ ತಾರಕಾಸುರನ ಸಂಹಾರವಾಗಬೇಕಾದಾಗ ದೇವತೆಗಳು… Continue Reading →

ಗಂಗೆ ದಿವ್ಯಜ್ಞಾನದ ಪ್ರತೀಕ – ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಗೋಕರ್ಣ.19. ಲೋಕಪಾವನೆಯಾಗಿ ದೇವಲೋಕದಿಂದ ಇಳಿದುಬಂದ ಗಂಗೆ ಕೇವಲ ಜಲಸ್ವರೂಪಳಲ್ಲ. ನದಿಯಾಗಿ ನಾಡಿಗರಿಗೆ ಸಮೃದ್ಧವಾದ ಬದುಕನ್ನು ಕಟ್ಟಿಕೊಡುವ ಈ ನದಿ ನಾವು ಪಡೆಯುವ ಜ್ಞಾನಕ್ಕೆ ಸಂಕೇತವೂ ಆಗುತ್ತಾಳೆ ಎಂಬುದನ್ನು ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ತಮ್ಮ ಮಾತಿನಲ್ಲಿ ಉಲ್ಲೇಖಿಸುತ್ತಾರೆ. ಸೂರ್ಯವಂಶ ಸಂಜಾತರಾದ  ಸಗರಪುತ್ರರ ಸದ್ಗತಿಗಾಗಿ ರಾಜಾ ಭಗೀರಥನ ಪ್ರಯತ್ನದಿಂದ ಅವನನ್ನು ಅನುಸರಿಸಿದ ಗಂಗೆ ದಾರಿಯಲ್ಲಿ ಜಹ್ನು ಮಹರ್ಷಿಯ ಆಶ್ರಮವನ್ನು… Continue Reading →

ಪ್ರಕೃತಿ ತನ್ನ ಮೇಲಿನ ಅತ್ಯಾಚಾರವನ್ನು ಎಂದೂ ಸಹಿಸದು – ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಗೋಕರ್ಣ 17.  ನಮ್ಮ ಉದ್ಧಾರಕ್ಕಾಗಿ ನಮ್ಮಮೇಲಿನ ವಾತ್ಸಲ್ಯದಿಂದ ಪರಮಾತ್ಮ  ಲೋಕದಿಂದ ಇಳಿದು ಬಂದು ನಮ್ಮ ಕಷ್ಟಗಳನ್ನು ನೋವನ್ನು ಪರಿಹರಿಸಿ ಶಾಶ್ವತಸುಖವನ್ನು ಅನುಗ್ರಹಿಸುತ್ತಾನೆ. ಇದಕ್ಕೇ ಅವತಾರ ಎಂದು ಹೆಸರು. ಈ ರೀತಿಯಲ್ಲಿ ಲೋಕದ ಜನರ ಪಾಪವನ್ನು ತೊಳೆಯಲು ಕಳೆಯಲು ಕಾರಣವಾದ ದೇವಗಂಗೆಯೂ ಇಳಿದುಬಂದವಳೇ. ಲೋಕಕ್ಕೇ ಆದರ್ಶಪ್ರಾಯರಾದ ಸೂರ್ಯವಂಶದ ಚಕ್ರವರ್ತಿಗಳ ಕೊಡುಗೆ. ಮನುಕುಲಕ್ಕೇ ಇಂತಹ ತಾಯಿಯನ್ನು ನೀಡಿದ  ಅವರು… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑