ಶ್ರೀ ಗುರುಗಳು ಶ್ರೀ ಪರಿವಾರದ ಅಣ್ಣಂದಿರ ಮುಡಿಯಲ್ಲೇರಿದ ಆದಿ ಗ್ರಂಥದ ಜೊತೆಗೆ ವೇದಿಕೆಯ ಮೇಲೇರಿ ಬಂದು ಸೀತಾ ಸಹಿತ ಶ್ರೀ ರಾಮನಿಗೆ, ಹನುಮ ಸಾನ್ನಿಧ್ಯಕೆ, ಪುಷ್ಪಾರ್ಚನೆಗೈದು ಶ್ರೀ ಪೀಠ ಅಲಂಕರಿಸಿದರು. ಪ್ರಾಯೋಜಕರು ರಾಮಾಯಣ ಗ್ರಂಥ ಕೆ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿ ದರು. ಶ್ರೀ ರಾಮಾಯಣ ಗ್ರಂಥಕ್ಕೆ ಶ್ರೀ ಕರಾರ್ಚಿತ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ವಿದ್ವಾನ್ ಶ್ರೀ ಜಗದೀಶ ಶರ್ಮರು ಪೀಠಿಕೆ ಪ್ರಸ್ತುತ ಪಡಿಸಿ ದೊಡ್ಡ ದೊಡ್ಡ ವಿಚಾರಗಳನ್ನು ಸುಲಲಿತವಾಗಿ ವಿವರಿಸಿದರು.

ಗೋಕರ್ಣ ಗಣಪತಿ ಮತ್ತು ಮಹಾಬಲನನ್ನು ಧ್ಯಾನಿಸಿ ಪ್ರವಚನವನ್ನು ಆರಂಭಿಸಿದ ಶ್ರೀಗುರುಗಳು ರಾವಣನ ಅಂತರಾಳದಲ್ಲಿ ನೆಲೆಸಿದ ಜಯವಿಜಯರ ಕಥಾನಕವನ್ನು ಪ್ರಾರಂಭಿಸಿದರು. “ಹೊರಗಿನಿಂದ ಕಾಣುವುದನ್ನು ನೋಡಿ ಅವರು ಹೀಗೆ ಹಾಗೆ ಎನ್ನ ಬಾರದು. ಅವರ ಅಂತರಾಳದಲ್ಲಿ ಏನಿದೆ ಎಂದು ತಿಳಿಯುವ ಪ್ರಯತ್ನ ಮಾಡಬೇಕು. ಹಲಸಿನ ಹಣ್ಣಿನಲ್ಲಿ ಹೊರಗೆ ಮುಳ್ಳು ತುಂಬಿದೆ ಒಳಗಡೆ ಮೇಣ, ಗುಂಜು ಇತ್ಯಾದಿ ಇದೆ. ಅದನ್ನು ತೆಗೆಯುವ ತಾಳ್ಮೆ ಇರುವವನಿಗೆ ಮಾತ್ರವೇ ಹಣ್ಣು ಸಿಗಬಹುದಷ್ಟೇ. ಅಂಗುಲಿ ಮಾಲನ ಲ್ಲಿದ್ದ ಒಳ್ಳೆಯ ಗುಣವನ್ನು ಬುದ್ಧನೇ ಗುರುತಿಸಬೇಕಾಯಿತು. ವಾಲ್ಮೀಕಿ ಕಾಡು ಬೇಡ ನಾಗಿದ್ದವನ ಗುಣವನ್ನು ನಾರದ ಗುರುತಿಸಬೇಕಾಯಿತು. ಹೀಗೆ ಅನೇಕ ವಿಷಯಗಳಿವೆ. ತಪ್ಪು ಮಾಡದ ವರು ಯಾರೂ ಇಲ್ಲ. ಹಾಗಾಗಿ ತಪ್ಪು ಮಾಡುವವರನ್ನು ದೂರ ಮಾಡದೆ ಅವರನ್ನು ತಿದ್ದುವ ಪ್ರಯತ್ನ ಮಾಡಬೇಕು. ನಾವು ದಿಲ್ಲಿಗೆ ಹೋಗಲು ವಿಮಾನ ಉಪಯೋಗಿಸುತ್ತೇವೆ. ಹೊರದೇಶ ಗಳಿಗೆ ಕೂಡಾ ವಿಮಾನದಲ್ಲಿ ಹೋಗುತ್ತಾರೆ. ಆದರೆ ಎಂಟು ಕೋಟಿ ಯೋಜನಾ ದೂರದಲ್ಲಿರುವ ಸತ್ಯಲೋಕ, ಅಲ್ಲಿಂದ ಹತ್ತು ಕೋಟಿ ಯೋಜನಾ ದೂರದಲ್ಲಿರುವುದು ವೈಕುಂಠ. ಅಲ್ಲಿಗೆ ಮುಟ್ಟ ಬೇಕೆಂದರೆ ನಮ್ಮ ಭಕ್ತಿ ಸಾಧನೆ ಆ ಮಟ್ಟದಲ್ಲಿರಬೇಕು. ಮದ್ಯಾಹ್ನದ ಹೊತ್ತು ಮಲಗಿದ ಸನ್ಯಾಸಿಯ ನಿದ್ದೆ ನಿದ್ದೆಯಲ್ಲ, ಅದು ಪಾರಮಾರ್ಥ ಕಾಣುವುದು. ಹಾಗೆಂದು ನಾವು ನಿಮಗೆ ಮದ್ಯಾಹ್ನ ಮಲಗಿ ನಿದ್ದೆ ಮಾಡಿ ಎನ್ನುತ್ತಿಲ್ಲ. ನಿದ್ದೆಯಲ್ಲಿರುವಾಗ ಏನೂ ಗೊತ್ತಾಗದಿದ್ದರೆ ಆ ನಿದ್ದೆ ದೇಹಕ್ಕೆ ವಿಶ್ರಾಂತಿ ಕೊಡ ಬಹುದಷ್ಟೇ ವಿನಃ ಸಾಧನೆಯ ಮೆಟ್ಟಿಲಾಗದು. ಮುಕ್ತಿ ಪಡೆಯ ಬೇಕಾದರೆ ಮಾನವ ಜನ್ಮವೇ ಆಗಬೇಕಷ್ಟೆ! ಬೇರೆ ಯಾವ ಜನ್ಮದಿಂದ ಲೂ ಸಾಧ್ಯವಿಲ್ಲ.

ವಿವಾಹಕ್ಕೋಸ್ಕರ ಕರ್ಧಮ ಘೋರ ತಪಸ್ಸು ಮಾಡಿಯೊಂಡಿತ್ತಿದ್ದನು. ಅದು ಹತ್ತುಸಾವಿರ ವರ್ಷದ ತಪಸ್ಸು, ಯಾವ ಬಾಹ್ಯ ತೊಂದರೆಗೊಕ್ಕೆವಿಚಲಿತನಾಗದ್ದೇ ಮಾಡಿದ ತಪಸ್ಸು. ಕರ್ಧಮನ ತಪಸ್ಸಿಂಗೆ ಒಲಿದ ದೇವರು ಅವನ ಆಶಯದಂತೆ ಯೋಗ್ಯೆ ಕನ್ಯೆಯಾಗಿ ಸ್ವಯಂಭೂ ಮನುವಿನ ಮಗಳು ದೇವಹೂತಿ ಸಿಗುತ್ತಾಳೆ. ನಾರದ ದೇವಹೂತಿಗೆ ಕರ್ಧಮನ ವಿಚಾರ ಹೇಳಿ, ಸ್ವಯಂಭೂ ಮನು ಕರ್ಧಮನಲ್ಲಿಗೆ ಪತ್ನೀ ಮಗಳೂ ಸಹಿತ ಬರುವ ಹಾಗೆ ಮಾಡಿದನು. ಕರ್ಧಮ ಎಲ್ಲಾ ರೀತಿಯ ಉಪಚಾರ ಮಾಡಿ ನನ್ನಿಂ ದೇ ನಾಗಬೇಕು ಎಂದು ಕೇಳುವಾಗ ಮನು, ನನ್ನ ಮಗಳ ಮದುವೆ ಆಗಬೇಕು ಎನ್ನುತ್ತಾನೆ. ಅಗ ಕರ್ಧಮನಿಗೆ ಇಂತಾ ಹುಡುಗಿಯನ್ನು ಒಪ್ಪದಿರಲು ಕಾರಣ ಇಲ್ಲದಾಗಿ, ದೇವಹೂತಿಯ ಸೌಂದರ್ಯಕ್ಕೆ ವಿಶ್ವವಸು ವಿಮಾನಂದ ಬಿದ್ದ ಕಥೆಯನ್ನು ಹೇಳುತ್ತಾನೆ. ಮದುವೆ ಆಗಬೇಕಾದರೆ ಕರ್ಧಮ ಒಂದು ಶರ್ತ ಹಾಕುತ್ತಾನೆ. ನಾನು ಮದುವೆ ಆಗುವುದು ಸುಖಕ್ಕಾಗಿ ಅಲ್ಲ. ಸಂತಾನಕ್ಕಾಗಿ. ಒಳ್ಳೆ ಸಂತಾನ ದೊರಕುವಾಗ ನಾನು ಮುಕ್ತಿ ಮಾರ್ಗವನ್ನು ಕಂಡುಕೊಳ್ಳುತ್ತೇನೆ ಎಂದು ಹೇಳಿ, ಅದಕ್ಕೆ ಒಪ್ಪಿದ ಮೇಲೆ ಮದುವೆ ಆಗಿ ಸಂತಾನವೂ ಆಗುತ್ತದೆ. ಮತ್ತೆ ತಪಸ್ಸಿಗೆ ಕೂದ ಕರ್ಧಮನ ಸೇವೆ ಮಾಡ್ತ ಎಷ್ಟೋ ಸಮಯ ಕಳುದ ಮೇಲೆ, ಒಂದು ದಿನ ದೇವಹೂತಿಯ ನೆನಪಾಗಿ ಅವಳು ಬೇಸರ ದಲ್ಲಿರುವುದು ತಿಳಿದು ಬಿಂದುಸಾಗರಲ್ಲಿ ಮಿಂದು ಬರಲು ಹೇಳುತ್ತಾನೆ. ಮಿಂದೆದ್ದು ಬರುವಾಗ ಸಾವಿರ ದಾಸಿಯರು ಕಾಣು ತ್ತಾರೆ. ಅವರೆಲ್ಲ ಅವಳಿಗೆ ಬೇಕಾದ ಪ್ರತಿಕರ್ಮಗಳನ್ನುಮಾಡಿ ಆಕೆಯನ್ನು ಸುಂದರಿ ಯಾಗಿಸುತ್ತಾರೆ. ಅದಾದ ನಂತರ ಕೇವಲ ದೃಷ್ಟಿ ಮಾತ್ರದಿಂದ ಆ ದಂಪತಿಗಳು ಸಂತಾನ ಭಾಗ್ಯ ಪಡೆಯುತ್ತಾರೆ. ಒಂಭತ್ತು ಪುತ್ರಿಯರು, ಜಯ ವಿಜಯಾದಿ ಗಂಡು ಮಕ್ಕಳು. ಆಗ, ದೇವಹೂತಿಗೆ ಶರತ್ತು ನೆನಪಾಗಿ ಬೇಸರಗೊಳ್ಳುತ್ತಾಳೆ. ಅವಳನ್ನು ಸಮಾಧಾನ ಪಡಿಸಲು ಕರ್ಧಮನು ತಾನೀಗ ಹೋಗುವುದಿಲ್ಲ ವೆನ್ನುತ್ತಾನೆ. ಹೋಗುವ ಮೊದಲು ತನ್ನ ಅನುಪಸ್ಥಿತಿಯನ್ನು ತುಂಬಲು ಸಮರ್ಥ ಜನವನ್ನು ಕೊಡುತ್ತೇನೆ ಎನ್ನುತ್ತಾನೆ. ಹಾಗೆ ಹುಟ್ಟಿದವನೇ ಕಪಿಲ. ಕಪಿಲ ಮಹರ್ಷಿಯ ಅಣ್ಣಂದ್ರೇ ಜಯ ವಿಜಯರು. ಒಳ್ಳೆತನ ಒಳ್ಳೆಯ ಮನಸ್ಸು, ಒಳ್ಳೆಯ ಗುರಿ ಯಾವಗಲೂ ಹಾಗೇ ಇರಬೇಕು. ನಮ್ಮ ಗುರಿ ಒಂದೇ ಆಗಿದ್ದರೆ ಮಾತ್ರ ನಾವು ಹಿಮಾಲಯಲ್ಲಿ ಹುಟ್ಟಿ ಸುಮಾರು 2400 ಕಿಮೀ ಹರಿದು ಅದಕ್ಕೆ ಎಷ್ಟೋ ಹೊಳೆಗೊ ಸೇರಿದರೂ ಒಟ್ಟು ಸೇರ್ಸಿಗೊಂಡು, ಸಾಗರವನ್ನು ಸೇರುವ ಗಂಗೆಯ ನೀರಿನ ಹಾಗೆ ಆಗಬೇಕು. ಒಡಹುಟ್ಟಿದವರನ್ನು ದಡ ಮುಟ್ಟಿಸಲು ಮುಕ್ತಿ ಪಡೆಯಲು ಸಹಾಯ ಮಾಡಿದನು. ದಿನಲೂ ಹರಿಯ ಸೇವೆ ಮಾಡುವ ಹಾಗೆ ಮಾಡಿದರು ಕಪಿಲ ಮುನಿ. ನಮ್ಮ ಮನಸ್ಸು ದೇವರನ್ನು ಕಾಣಲು ಎಷ್ಟು ತೀವ್ರವಾಗಿರಬೇಕೆಂದರೆ ಹೇಗೆ ನಿರಂತರ ಪ್ರಯತ್ನ ಮಾಡಬೇಕು ಎಂದರೆ ದೇವರನ್ನು ತೋರಿಸಲು ಪೀಡಿಸಿಕೊಂಡಿದ್ದ ಶಿಷ್ಯನನ್ನು ಗುರುಗಳು ನೀರಿನಲ್ಲಿ ಮುಳುಗಿಸಿ ದರು. ಶಿಷ್ಯನಿಗೆ ಉಸಿರಾಡಲು ಕಷ್ಟ ಆದಾಗ ಅವನು ತನ್ನ ಎಲ್ಲಾ ಶಕ್ತಿಯನ್ನು ಒಟ್ಟು ಮಾಡಿ ಗುರುಗಳನ್ನು ದೂಡಿ ಮೇಲೆ ಬಂದನಂತೆ ಹಾಂಗಿರುವ ತೀರ್ವತೆ ಇದ್ದರೆ ಮಾತ್ರಶಕ್ತಿಯ ಕಾಣಲು ಸಾಧ್ಯ. ನಿರಂತರತೆಯೂ ತೀರ್ವತೆಯೂ ಸಿದ್ದಿಯ ದಾರಿ. ದೇವರ ದೃಷ್ಟಿ ನಮ್ಮ ಮೇಲೆ ಸದಾ ಇರುತ್ತದೆ. ಆದರೆ ನಮ್ಮ ದೃಷ್ಟಿ ಅವನ ಮೇಲೆ ಸರಿಯಾಗಿ ಬಿದ್ದರೆ ಮಾತ್ರ ದೇವ ಸಮಾಗಮ ಆಗಲು ಸಾಧ್ಯ. ನಾವು ಅದನ್ನು ಮಾಡುವುದಿಲ್ಲ. ಹಾಗಾದ ಕಾರಣ ಅದು ನಮ್ಮಿಂದಾಗುವುದಿಲ್ಲ. ಜಯವಿಜಯರಿಗೆ ದೈವ ಭಕ್ತಿ ಕೃಪೆಯೊಂದಿಗೆ ಸ್ಥಾನಮಾನಗಳೂ ಸಿಗುತ್ತವೆ. ಆಗ ಅವರು ಮಾಯೆಯ ದೃಷ್ಟಿಗೆ ಬೀಳುತ್ತಾರೆ. ಧನದ ಆಸೆಗೆ ಬಿದ್ದು ಜಗಳ ಮಾಡಿಕೊಳ್ಳುತ್ತಾರೆ. ಆಗ ಕೋಪದಲ್ಲಿ ಜಯ, ವಿಜಯಂಗೆ ನೀನು ಮೊಸಳೆ ಆಗು ಎಂದು ಶಾಪ ಕೊಡುತ್ತಾನೆ. ಆ ಶಾಪ ನಿಜ ಆಗಬೇಕಾದರೆ ಮೊದಲು ವಿಜಯ, ಜಯನಿಗೆ ನಿನಗೆ ಅಹಂಕಾರದ ಮದ ಹೆಚ್ಚಾಯಿತು ಎಂದು ಹೇಳಿ ನೀನು ಆನೆ ಆಗು ಎಂದು ಶಾಪ ಕೊಡುತ್ತಾನೆ. ಮುಂದಿನ ಕಥೆಯನ್ನು ನಾಳೆ ಮುಂದುವರಿಸುತ್ತೇವೆ.”

ಶ್ರೀ ಗುರುಗಳ ಪ್ರವಚನಕ್ಕೆ ಪೂರಕವಾಗಿ ಹಾಡುಗಳನ್ನು ಶ್ರೀಮತಿ ಪ್ರೇಮಲತಾ ದಿವಾಕರ್, ಗೋಪಾಲಕೃಷ್ಣ ಹೆಗಡೆ ತಬಲ, ಶ್ರೀಪಾದ ಹೆಗಡೆ ಹಾರ್ಮೋನಿಯಂ ನಡೆಸಿ ಕೊಟ್ಟರು. ಜಯ ವಿಜಯರ ಕರಿ-ಮಕರದ ರೂಪಕವನ್ನು ಶ್ರೀಧರ ಹೊಳ್ಳರು,ವಿಶ್ವೇಶ್ವರ ಹೆಗಡೆ ಭರತನಾಟ್ಯ ನಡೆಸಿ ಕೊಟ್ಟರು. ನೀರ್ನಳ್ಳಿ ಗಣಪತಿ ಭಟ್ ಶ್ರೀ ಗುರುಗಳ ಪ್ರವಚನದ ವಾಣಿಗೆ ಬಣ್ಣದ ಚಿತ್ರಣವನ್ನು ಕೊಟ್ಟರು. ಜೈ ಜೈ ರಾಮಕಥಾದೊಂದಿಗೆ ಎಲ್ಲರೂ ನಲಿದು, ಶ್ರೀ ಗುರುಗಳು ಗ್ರಂಥಕ್ಕೆ ಪುಷ್ಪಾರ್ಚನೆಗೈದು ಮಂಗಳಾರತಿಯೊಂದಿಗೆ ರಾಮಕಥೆಯ ದ್ವಿತೀಯ ದಿನದ ಪ್ರವಚನ ಸಂಪನ್ನಗೊಂಡಿತು.

Facebook Comments