Category Blog/Raama~Rashmi

Sri Samsthana will narrate Ramayana here.

ಶ್ರೀರಾಮಾಯಣದ ಅಂಕುರ ವಲ್ಮೀಕದಲ್ಲಿ…!!

ತಮೋನಿರ್ಮುಕ್ತೆ ತಮಸೆಯ ಪರಿಶುದ್ಧಪ್ರವಾಹ..
ಮುಗಿಲು ಮುತ್ತಿಕ್ಕುವ ಗಿರಿಶಿಖರಗಳ ಅಚಲತೆ, ಗಾಂಭೀರ್ಯ, ಔನ್ನತ್ಯ…
ಝರಿಗಳ ತಂಪು, ಹಸಿರಿನ ಸೊಂಪು, ಕುಸುಮಗಳ ಕಂಪುಗಳೊಡನೆ ಕಂಗೊಳಿಸುವ ಕಾನನಮಂಡಲ…
ಅಲ್ಲೊಂದು…
ಪಾವನತೆಯೇ ಪಡಿಮೂಡಿದಂತಿದ್ದ ಪರ್ಣಕುಟಿ…
ಅಲ್ಲಿ…
ಮೈಮೇಲೆ ಹುತ್ತವೇಬೆಳೆದರೂ ಅರಿವಾಗದಂತೆ ಮೈಮರೆತ ಪರಮ ತನ್ಮಯತೆಯ ಮಹಾಮುನಿ…
ಆ ಮುನಿಯ ಮಹಾಮನದಲ್ಲಿ ಮೂಡಿಬಂದಿತ್ತೊಂದು ಮಹಾಪುರುಷನ ದಿವ್ಯ ಮೂರ್ತಿ…
ತಮಸೆಯ ಪರಿಶುದ್ಧಿ..
ಗಿರಿಶಿಖರಗಳ ಅಚಲತೆ,ಉನ್ನತಿ,ಗಾಂಭೀರ್ಯ..
ಕಾನನಗಳ ಸೌಂದರ್ಯ,ಸೌಮ್ಯತೆ..
ಆಶ್ರಮದ ಪವಿತ್ರತೆ..
ಮುನಿಯತ್ಯಾಗ..
ಇವೆಲ್ಲವೂ ಮೇಳೈಸಿದ್ದವು ಆ ಮೂರ್ತಿಯಲ್ಲಿ..
ಕೋಟಿಸೂರ್ಯ ಪ್ರಕಾಶ..!!!
ಆದರೆ ಕೋಟಿ ಚಂದ್ರರ ತಂಪು..!!!!!
ಆ ಮೂರ್ತಿಯ ಮೂಲದ್ರವ್ಯ ಶಿಲೆಯಾಗಿರಲಿಲ್ಲ – ಚೈತನ್ಯದ ಸೆಲೆಯಾಗಿತ್ತು..!!
ಮರದ ಮೂರ್ತಿಯದಲ್ಲ – ಅಮರ ಮೂರ್ತಿ..!!
ಮೃಣ್ಮಯವಲ್ಲ – ಚಿನ್ಮಯಮೂರ್ತಿ..!!
ಒಂದೇ ಒಂದೂ ಕುಂದೂ ಇಲ್ಲದ ಚಂದದ ಮೂರ್ತಿ…

ಏಕಃ ಸ್ವಾದು ನ ಭುಂಜೀತ..!

ಸಾಗರದಾಳದ, ಹಿಮಾಲಯದೆತ್ತರದ, ಆಗಸದಗಲದ ಶ್ರೀರಾಮನ ವ್ಯಕ್ತಿತ್ವವನ್ನು ವಾಲ್ಮೀಕಿಗಳೂ ಸಂಪೂರ್ಣವಾಗಿ ನೋಡಿರಲಾರರು..!

ಅವರ ಅರಿವಿಗದೆಷ್ಟು ಬಂದಿತೋ, ಅದಷ್ಟನ್ನೂ ಶಬ್ದಗಳಲ್ಲಿ ತರಲು ಅವರಿಗೆ ಸಾಧ್ಯವಾಗಿರಲಾರದು..!

ವಾಲ್ಮೀಕಿಗಳ ಶಬ್ದಗಳಲ್ಲಿ ತುಂಬಿರುವ ಭಾವವೆಲ್ಲವನ್ನೂ ಭಾವಿಸಲು ನಮ್ಮಿಂದ ಸಾಧ್ಯವಾಗಿರಲಾರದು..!

ರಾಮಾಯಣವು ನಮ್ಮಲ್ಲಿ ಮೂಡಿಸಿದ ಭಾವಗಳೆಲ್ಲವೂ ಹೇಗೂ ನಮ್ಮ ಶಬ್ದಗಳಲ್ಲಿ ಬರಲಾರವು..!!

ನಮ್ಮ ಶಬ್ದಗಳಲ್ಲಿ ಹುದುಗಿರಬಹುದಾದ ಭಾವಗಳೆಲ್ಲವೂ ನಿಮ್ಮನ್ನು ತಲುಪಲಾರವು..!

ಓದುಗನ ಹೃದಯವನ್ನು ತಲುಪಿದ ಭಾವಗಳಲ್ಲಿಯೂ ಕೂಡಾ ಎಲ್ಲವೂ ಬದುಕಿನಲ್ಲಿ ಅನುಷ್ಠಾನಕ್ಕೆ ಬರಲಾರವು..!

ಇಷ್ಟೆಲ್ಲ ಮಿತಿಗಳ ಮಧ್ಯದಲ್ಲಿಯೂ ರಾಮಾಯಣದಲ್ಲಿ ನಾವು ಅನುಭವಿಸಿದ ಸವಿಯನ್ನು ಈ ವಾರದಿಂದ ನಿಮ್ಮೊಡನೆ ಹಂಚಿಕೊಳ್ಳ ಬಯಸುವೆವು….!

ಹೀಗೊಂದು ನಾಟಕದ ಜಾಹಿರಾತು..!

ಅತ್ಯಂತ ಪುರಾತನ ನಾಟಕ ಕಂಪನಿಯೊಂದರ ಹಳೆಯ – ಒಳ್ಳೆಯ ಒಂದು ನಾಟಕದ ಪರಿಚಯ ಪತ್ರ. . :

ಕಂಪನಿಯ ಹೆಸರು: ಬ್ರಹ್ಮಾಂಡ . .
ಕಂಪನಿಯ ಕೇಂದ್ರ ಕಛೇರಿ: ವೈಕುಂಠ..
ಕಂಪನಿಯ ಯಜಮಾನರು : ನಾರಾಯಣಪ್ಪ..
ಕಂಪನಿಯ ಯಜಮಾನಿ: ಮಹಾಲಕ್ಷ್ಮಮ್ಮ . .
ಕಂಪನಿಯ ಇತಿಹಾಸ: ಎಷ್ಟು ಹಿಂದಿನದೆಂಬುದು ಯಾರಿಗೂ ಗೊತ್ತಿಲ್ಲ…!!
ನಾಟಕ ಪ್ರದರ್ಶನ ಸಮಯ: ಪ್ರತಿ ಕ್ಷಣ. .!
ನಾಟಕ ಪ್ರದರ್ಶನ ಸ್ಥಳ: ಎಲ್ಲೆಲ್ಲಿಯೂ. .!!

ಲೆಖ್ಖವೇ ಇಲ್ಲದಷ್ಟು ನಾಟಕಗಳು ಈ ಕಂಪನಿಯ ಕಡೆಯಿಂದ ಪ್ರದರ್ಶಿತಗೊಂಡಿವೆ,
ಆದರೆ, ಯುಗಗಳ ಹಿಂದೆ ಪ್ರದರ್ಶಿತಗೊಂಡ ರಾಮಾಯಣದಂಥ ನಾಟಕ ಮತ್ತೊಂದಿಲ್ಲ…!

ವಿರಾಧ ವಧ ಪಂಡಿತನೆಂದರೆ..??

ಅದೊಂದು ಕಾಡು. . !
ಕಾಡೆಂದರೆ ಪ್ರಕೃತಿಮಾತೆಯ ಮುಗುಳ್ನಗು..
ಆದರೆ ಈ ಕಾಡು ಹಾಗಿರಲಿಲ್ಲ..!!
ಬರ್ಬರ ಆಕ್ರಮಣಕ್ಕೀಡಾದ ಮಾತೃತ್ವದ ಭಯ – ಸಂಕಟಗಳ ಪ್ರತೀಕದಂತಿತ್ತದು..!!
ಅಲ್ಲಿ ಸೌಮ್ಯ ಮೃಗಗಳ ಸುಳಿವಿರಲಿಲ್ಲ..
ಎತ್ತೆತ್ತಲೂ ಕ್ರೂರ – ಘೋರ ಮೃಗಗಳೇ..!!!
ಮುರಿದ ಮರಗಳು..!!
ಬಿದ್ದು ಬಾಡಿ ಬಿಸುಡಿದ ಬಳ್ಳಿಗಳು..!!
ಸಂಕಟ ಮಿತಿಮೀರಿದರೆ ಕಣ್ಣೀರೂ ಬತ್ತಿಹೋಗುವಂತೆ….
ಆ ಕಾಡಿನಲ್ಲಿ ಅದೆಷ್ಟು ನೋಡಿದರೂ . . . ಅದೆಷ್ಟು ನಡೆದರೂ . . ಜೀವಜಲದ ಸುಳಿವಿಲ್ಲ. .!!
ಹಾಡುವ ಹಕ್ಕಿಗಳಿಲ್ಲ..!
ಎಲ್ಲಿನೋಡಿದರಲ್ಲಿ ರಣಹದ್ದುಗಳು, ಗಿಡುಗ, ಗೂಬೆಗಳು..!!!
ಕಾಡಿಗೆ ಕಾಡೇ ಮೊಳಗುವಂತಿದ್ದ ಮಿಡತೆ- ಜೀರುಂಡೆಗಳ ಕಿವಿ ಸೀಳುವ ಕರ್ಕಶ ಕೂಗುಗಳು..!!

ಯಾಕೆ ಹೀಗಾಯಿತು ಈ ಕಾಡು..!?

ಆಧ್ಯಾತ್ಮಕ್ಕಿಂತ ದೊಡ್ಡ ವ್ಯಾಪಾರವುಂಟೇ?

ಬಂಡವಾಳ ಚಿಕ್ಕದು, ಲಾಭ ದೊಡ್ಡದು.
ಇದು ತಾನೇ ಆದರ್ಶ ವ್ಯಾಪಾರ?
ಅಧ್ಯಾತ್ಮವೇನೂ ಇದಕ್ಕೆ ಹೊರತಲ್ಲ. ಹಾಗೆ ನೋಡಿದರೆ, ವ್ಯಾಪಾರದ ವ್ಯಾಖ್ಯಾನ ಚೆನ್ನಾಗಿ ಹೊಂದಿಕೊಳ್ಳುವುದು ಅಧ್ಯಾತ್ಮಕ್ಕೇ ಸರಿ..!
ನಂಬಲಸಾಧ್ಯವೆನಿಸುತ್ತದೆಯೇ?
ನಂಬಲೇಬೇಕಾದ ಬದುಕಿನ ಪರಮಸತ್ಯವಿದು..

ಒಂದು ಬಾರಿ ಸ್ಮರಣೆ ಸಾಲದೇ?

ಸೀತೆಯ ಚಾರಿತ್ರ್ಯ ದೊಡ್ಡದು. ತನ್ನ ಬಾಲದ ಬೆಂಕಿಯಿಂದ ಸಂಪೂರ್ಣ ಲಂಕೆಯೇ ಹೊತ್ತಿ ಉರಿದರೂ ಅಬಾಧಿತಳಾಗಿಯೇ ಉಳಿದ ಆಕೆಯನ್ನು ಕಂಡು ಹನುಮಂತ ಉದ್ಗರಿಸುತ್ತಾನೆ.. ಅಪಿ ಸಾ ನಿರ್ದಹೇತ್ ಅಗ್ನಿಂ ನ ತಾಂ ಅಗ್ನಿಃ ಪ್ರಧಕ್ಷ್ಯತಿ || (ತನ್ನ ಚಾರಿತ್ರ್ಯ ಬಲದಿಂದ ಸೀತೆಯೇ ಅಗ್ನಿಯನ್ನು ಸುಟ್ಟು ಬಿಡಬಹುದೇ ಹೊರತು, ಅಗ್ನಿ ಸೀತೆಯನ್ನು ಮುಟ್ಟಲಾರ – ವಾಲ್ಮೀಕಿ ರಾಮಾಯಣ) ರಾವಣನ… Continue Reading →

ದಿವಿ-ಭುವಿಗಳ ಸಂಗಮ “ಹರೇರಾಮ”

‘ಹರಿ’ ಎಂದರೆ ದಿವಿಯಲ್ಲಿ ನಿತ್ಯ ಬೆಳಗುವ “ನಾರಾಯಣ-ತತ್ವ”
ಅದು ನರನಾಗಿ ಭುವಿಗಿಳಿದು ಬಂದಾಗ ‘ರಾಮ’ನೆಂಬ ಅಭಿಧಾನ..
ದಿವಿಯಿಂದ ಭುವಿಗಿಳಿದು ಬಂದು ಭುವಿಯನ್ನು ದಿವಿಯಾಗಿಸಿದ ಮಹಾಚೇತನದ ಉಭಯರೂಪಗಳನ್ನು ಕಂಡ ಪುಣ್ಯ ಚಕ್ಷುಗಳ ಉದ್ಗಾರವೇ ” ಹರೇರಾಮ “

Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑