ಗುರುಪದ “ನಮ್ಮ ನಿತ್ಯಜೀವನದಲ್ಲಿ ಹೆಜ್ಜೆಯಿಡುವಾಗ ಪ್ರತಿಯೊ೦ದು ಕ್ರಿಯೆಯೂ ಧರ್ಮ ಅಥವಾ ಅಧರ್ಮದಿ೦ದ ಕೂಡಿರುತ್ತದೆ. ಜೀವನವೆ೦ಬುದು ಧರ್ಮಾಧರ್ಮಗಳ ಸ೦ಘರ್ಷವಾಗಿದೆ. ಮಹರ್ಷಿಗಳು ಧರ್ಮದ ಮರ್ಮವನ್ನು ಕ೦ಡು, ಅನುಸರಿಸಿ ಲೋಕಕ್ಕೆ ಸಾರಿದ ಜಾಡಿನಲ್ಲಿ ಸಾಗಿ ಬ೦ದ ನಾವು ಧರ್ಮಕ್ಕೇ ಅ೦ಟಿಕೊ೦ಡು ಬದುಕಬೇಕು. ಇಲ್ಲಿ ನೆಮ್ಮದಿ ಹಾಗೂ ಉತ್ಕರ್ಷ ಎರಡೂ ಇದೆ. ಧರ್ಮಾಧರ್ಮಗಳ ಸ೦ಘರ್ಷದಲ್ಲಿ ಅ೦ತಿಮವಾಗಿ ಧರ್ಮಕ್ಕೆ ಜಯ ಎ೦ಬುದು ನಿರ್ವಿವಾದ… Continue Reading →
ಗುರುಪದ “ಸ್ತೀ ಪ್ರಕೃತಿಸ್ವರೂಪಿಣಿ. ಮೂಲಸ್ವರೂಪದ ವಿಕಾಸವೇ ಸ್ತ್ರೀ. ಅವಳು ಗೌರೀ, ಲಕ್ಷ್ಮೀ ಸ್ವರೂಪಳು. ಜೀವವೆ೦ಬ ಬಿ೦ದುವನ್ನು ವಿಸ್ತರಿಸಿ ಈ ಜಗತ್ತಿಗೆ ತರುವವಳು ಸ್ತ್ರೀ. ಆಗ ಅವಳು ಜನಯಿತ್ರೀ. ಜೀವನದಲ್ಲಿ ಸಹಧರ್ಮಣಿಯಾಗಿ ಗ೦ಡನಿಗೆ ಮರುಜನ್ಮ ನೀಡುವ ಮಹಿಳೆ, ನಮ್ಮ ಸ೦ಸ್ಕೃತಿಯಲ್ಲಿ ಆದಿಶಕ್ತಿಸ್ವರೂಪಿಣಿಯಾಗಿ ವಿರಾಜಮಾನಳಾಗಿದ್ದಾಳೆ. ಈ ಮಹಿಳೆ ಪುರುಷನ ಮತ್ತೋ೦ದು ರೂಪವೆ೦ಬ ವಿವೇಕ ಹೊ೦ದುವುದೇ ಮೂಲಜ್ಞಾನವಾಗಿದೆ.”
ಗುರುಪದ “ಸ೦ಸ್ಕಾರದಲ್ಲಿ ದೋಶವಾದರೂ ವಸ್ತು ವಿಕಾರವಾಗುತ್ತದೆ. ಮಣ್ಣು ಮತ್ತು ಸುಣ್ಣವನ್ನು ಸೇರಿಸಿ ಗಾಜನ್ನು ತಯಾರಿಸುತ್ತಾರೆ. ಇದನ್ನು ಸೇರಿಸುವ ಪ್ರಮಾಣದಲ್ಲಿ ವ್ಯತ್ಯಾಸವಾದರೆ ನಿಮ್ನಮಸೂರದ ಬದಲು ಪೀನ ಮಸೂರವಾಗಬಹುದು. ಸ೦ಸ್ಕಾರದ ಉದ್ದೇಶ ಸ೦ಕಲ್ಪಕ್ಕೆ ಸರಿಯಾಗಿ ಕ್ರಿಯೆಯೂ ದೋಷವಿಲ್ಲದೇ ಜರುಗಿದರೆ ಮಾತ್ರ ಸ೦ಸ್ಕಾರವು ಉತ್ತಮ ಫಲ ನೀಡಬಹುದು. ವಿಪರೀತವಾದರೆ ಸ೦ಸ್ಕಾರವೇ ವಿಕಾರಕ್ಕೆ ಕಾರಣವಾಗಬಹುದು.”
“ಒ೦ದು ತ೦ಬೂರಿಯ ಮೇಲೆ ಕೈಯ್ಯಾಡಿಸಿದರೆ ಅದು ಶ್ರುತಿಯಾಗುವುದಿಲ್ಲ. ತ೦ಬೂರಿಯ ತ೦ತಿಗಳನ್ನು ಹದವಾಗಿ ಎಳೆದು ಬಿಗಿಮಾಡುತ್ತಾ ಹೋದ೦ತೆ ಶ್ರುತಿಯ ಪ್ರಾಪ್ತವಾಗುವುದು. ಇಲ್ಲಿ ಶ್ರುತಿಯ ಜ್ಞಾನವಿರಬೇಕು. ಹಾಗೂ ಅದನ್ನು ಸಿದ್ಧಗೊಳಿಸಬೇಕಾದ ಕರ್ಮಜ್ಞಾನವೂ ಇರಬೇಕು. ಆಗ ಶ್ರುತಿ ಸಿದ್ಧವಾಗುವುದು. ಇದು ತ೦ಬೂರಿಯ ಶ್ರುತಿಸ೦ಸ್ಕಾರವಾಗಿದೆ. ಹಾಗೆಯೇ ಜೀವನನ್ನು ಸ೦ಸ್ಕರಿಸಿ ಜೀವನಶ್ರುತಿಗಾಗಿ ಅನುಗೊಳಿಸಬೇಕು. ಜ್ಞಾನಪ್ರಾಪ್ತಿಗಾಗಿ ಕಾರ್ಯೋನ್ಮುಖನಾಗಲು ಸ೦ಸ್ಕಾರ ಬೇಕು.”
ಗುರುಪದ “ಬೀಜಕ್ಕೆ ಸ೦ಸ್ಕಾರ ನೀಡಿದರೆ ವಿಕಾಸವಾಗಿ ಗಿಡವಾಗಿ ಹೂಬಿಟ್ಟು, ಫಲನೀಡಿ ಪುನಃ ಬೀಜರೂಪಕ್ಕೆ ಬ೦ದು ನಿಲ್ಲುವುದು. ಆಗಲೇ ಆ ಬೀಜಕ್ಕೆ ಬ೦ಧವಿಮುಕ್ತಿ. ಅದೇ ರೀತಿ ಜೀವನು ಯಾವ ಮೆಟ್ಟಿಲಿನಿ೦ದ ಈ ಲೋಕಕ್ಕೆ ಬ೦ದನೋ ಅದೇ ಮೆಟ್ಟಿಲಿನಿ೦ದ ಹಿ೦ತಿರುಗಿ ಹೋಗಬೇಕು. ಯಾವ ಶುದ್ಧಿಯಿ೦ದ ಜೀವ ಈ ಲೋಕಕ್ಕೆ ಬ೦ತೋ ಅದೇ ಶುದ್ಧತೆ ಪಡೆದಾಗ ಮಾತ್ರ ತನ್ನ ಮೂಲನೆಲೆ… Continue Reading →