18-01-2015 : ಕೆಕ್ಕಾರು ಶ್ರೀರಘೂತ್ತಮಮಠದಲ್ಲಿ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಹಸ್ರಾಧಿಕಸತ್ಯನಾರಾಯಣ ಪೂಜೆ ಮತ್ತು ದೇಶಭಂಡಾರಿ ಸಮಾಜದ ಸಮಾವೇಶ. ಶ್ರೀಶ್ರೀಗಳ ಆಶೀರ್ವಚನ: Title Play Download ಆಶೀರ್ವಚನ Link ಚಿತ್ರಕೃಪೆ: ಗೌತಮ್ ಬಿ.ಕೆ
ಹರೇರಾಮ. ದಿನಾಂಕ 9.1.2015 ರಂದು ಹೊಸನಗರದ ಶ್ರೀರಾಮಚಂದ್ರಾಪುರಮಠದಲ್ಲಿ ನಡೆದ ಶ್ರೀಸೌಂದರ್ಯಲಹರೀ ಹವನ ಹಾಗೂ ಶ್ರೀಚಕ್ರಆರಾಧನಾಂಗ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಶ್ರೀಗುರುಗಳ ಅಮೃತಸಿಂಚನ. ~ ಶ್ರೀಶ್ರೀ ಆಶೀರ್ವಚನ: Embed:
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ ಇಂದು ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ಶ್ರೀಚಕ್ರ ಆರಾಧನೆ, ಸೌಂದರ್ಯ ಲಹರೀ ಪಾರಾಯಣ, ಹವನ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳು ಜರುಗಿದವು.
ಮಹಾ ಮಂಡಲ ಅಧ್ಯಕ್ಷ ಡಾ || ವೈ.ವಿ.ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಕೀಲರಾದ ಶ್ರೀ ಜಯಾನಂದ ಸೋಂದಿ, ಪುತ್ತೂರು ಇವರು – ಶ್ರೀ ರಾಮಚಂದ್ರಾಪುರ ಮಠದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳ – ಮಾಹಿತಿಗಳನ್ನು ವಿವರಿಸಿದರು.
ಕಳೆದೆರಡು ದಶಕಗಳಿಂದ ಸಮಾಜದ ಉನ್ನತಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರ ತೇಜೋವಧೆಗೆ ನಡೆಯುತ್ತಿರುವ ಷಡ್ಯಂತ್ರದ ಕುರಿತು ಜನಜಾಗೃತಿಗಾಗಿ ಕುಮಟಾದ ಗಿಬ್ ಹೈಸ್ಕೂಲಿನ ರಾಜೇಂದ್ರ ಪ್ರಸಾದ್ ಸಭಾಭವನದಲ್ಲಿ ಗುರುಭಕ್ತ ಸಮಾವೇಶವು ಜರುಗಿತು.