ಗೋಕರ್ಣ: ನಾವು ಬದುಕಿನಲ್ಲಿ ಬೇಡಿದ್ದನ್ನೆಲ್ಲ ಭಗವಂತ ನೀಡುವುದಿಲ್ಲ. ಪರಮಾತ್ಮ ವಾತ್ಸಲ್ಯಮಯಿಯಾದ ತಾಯಿಯಂತೆ. ನಮ್ಮ ಒಳಿತನ್ನು ನಮಗಿಂತಲೂ ಚೆನ್ನಾಗಿ ಬಲ್ಲವನಾತ. ಆದ್ದರಿಂದಲೇ ನಮಗೆ ನಾವು ಕೇಳಿದೆವೆಂದು ಪ್ರಿಯವಾದುದನ್ನು ನೀಡದೆ ಹಿತವಾದುದನ್ನೇ ಕೊಡುತ್ತಾನೆ. ಹೀಗೆ ಪರಮಾತ್ಮನ ಪ್ರಸಾದರೂಪವಾದ ಜೀವನದಲ್ಲಿ ನಮಗೆ ಸಿಕ್ಕಿದ್ದಷ್ಟಕ್ಕೇ ತೃಪ್ತರಾದರೆ ನಮ್ಮ ಬದುಕು ಆನಂದಮಯವಾಗುತ್ತದೆಯೆಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ. ಇಂದು ಅಶೋಕೆಯಲ್ಲಿ… Continue Reading →
ಸೂರ್ಯೋದಯ ೬-೨೦ ಸೂರ್ಯಾಸ್ತ ೬-೪೭ ಪಕ್ಷ-ಕೃಷ್ಣ ಭಿಕ್ಷಾಸೇವೆ-ಹವ್ಯಕ ಮಹಾಸಭಾ ಬೆಂಗಳೂರು ಇದರ ಪರವಾಗಿ ಪಾದಪೂಜಾಸೇವೆಗಳು- ೧]ಶ್ರೀಕಂಠ ಶ್ಯಾಮಜೊಷಿ ೨]ಶ್ರೀನಿವಾಸ ಬೊಮ್ಮಯ್ಯ ನಾಯಕ ತಲಗೇರಿ ೩]ವಿಶ್ವಕರ್ಮ ಸಮಾಜದ ಪರವಾಗಿ ೧೨-೩೦ ರಿಂದ ೧-೪೫ ಯಾಗದ ಪೂರ್ಣಾಹುತಿ, ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ. ೨-೦೦ ರಿಂದ ೨-೩೦ ಗೋಕರ್ಣ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣವಾಗುವ ಗೋಕರ್ಣದಿಂದ ಅಶೋಕೆಗೆ… Continue Reading →
ಗೋಕರ್ಣ: ದನವೇ ಧನವಾಗಿದ್ದ ಕಾಲವೊಂದಿತ್ತು. ಗೋವುಗಳ ಮೂಲಕವೇ ವ್ಯಕ್ತಿಯೋರ್ವನ ಆರ್ಥಿಕಸ್ಥಿತಿಯನ್ನು ಅಳೆಯುವ ಕಾಲವೂ ಇತ್ತು. ಆದರೆ ಭಾರತೀಯರಾದ ನಾವು ವಿಶ್ವಜನನಿಯಾದ ಗೋಮಾತೆಯನ್ನು ಮರೆತಿದ್ದೇವೆ. ನಮ್ಮ ಬದುಕಿನಲ್ಲಿ ಹೆತ್ತ ತಾಯಿಯಷ್ಟೇ ಶ್ರೇಷ್ಠಸ್ಥಾನವನ್ನು ಹೊಂದಿದ ಗೋವಿಗೆ ನಮ್ಮ ಸೇವೆಯನ್ನು ಸಲ್ಲಿಸುವುದು ಮಕ್ಕಳಾದ ನಮ್ಮ ಕರ್ತವ್ಯವಾಗಿದೆಯೆಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ. ಚಾತುರ್ಮಾಸ್ಯದ ನಿಮಿತ್ತ ಇಂದು ಅಶೋಕೆಯಲ್ಲಿ… Continue Reading →
ಸೂರ್ಯೋದಯಃ ೬-೩೦ ಸೂರ್ಯಾಸ್ತಃ ೬-೪೮ ಪಕ್ಷ-ಕೃಷ್ಣ ತಿಥಿ-ಪಾಡ್ಯ ಭಿಕ್ಷಾಸೇವೆ-ಭಾರತ ಮಂಡಲಾಂತರ್ಗತ ಮೈಸೂರು ವಲಯದ ಪರವಾಗಿ ಪಾದಪೂಜಾಸೇವೆಗಳು-೧]ವಂಕಟರಮಣ ಚಂದ್ರಶೇಖರ ಹೆಗಡೆ ಹೆಬ್ಬಾನಕೆರೆ ೨]ಕೇಶವ ಭಟ್ಟ ಮಿತ್ತೂರು ೩]ದಂಬೆಮೂಲೆ ಸುಬ್ಬಣ್ಣ ಚನ್ನೈ ೪]ಖಾರ್ವಿ ಸಮಾಜ ದ ಪರವಾಗಿ ೧೨-೩೦ ರಿಂದ ೨-೧೫ ಯಾಗದ ಪೂರ್ಣಾಹುತಿ, ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ ,ಮಂತ್ರಾಕ್ಷತೆ. ೩-೦೦ ರಿಂದ ೫-೦೦ ಶ್ರೀರಾಮಕಥೆ ಮೀಟಿಂಗ್… Continue Reading →
ಗೋಕರ್ಣ: ಮಾನವರಾದ ನಮಗೆ ಹುಟ್ಟು, ಸಾವುಗಳು ತಪ್ಪಿದ್ದಲ್ಲ. ನಿರಂತರವಾಗಿ ಒಂದಾದ ನಂತರ ಮತ್ತೊಂದು ಸಾಗರದ ಅಲೆಗಳಂತೆ ಬಂದೆರಗುತ್ತಲೇ ಇರುತ್ತದೆ. ಸಾವಿನಷ್ಟೇ ಹುಟ್ಟೂ ಸಹ ದುಃಖಕರ. ಶ್ರೀಮದಾಚಾರ್ಯ ಶಂಕರ ಭಗವತ್ಪಾದರೂ ಕೂಡಾ ಪುನರಪಿ ಜನನಂ ಪುನರಪಿ ಮರಣಂ ಎಂಬ ಮಾತಿನ ಮೂಲಕ ಸತ್ಯವನ್ನು ಹೇಳಿ ನಮ್ಮನ್ನು ಎಚ್ಚರಿಸುತ್ತಾರೆ. ಜೀವನದ ಅಸ್ಥಿರತೆಯ ಅರಿವಿದ್ದರೆ ಮಾತ್ರ ಸ್ವಲ್ಪಮಟ್ಟಿಗಿನ ನೆಮ್ಮದಿಯನ್ನು ಕಾಣಬಹುದು…. Continue Reading →
ಗೋಕರ್ಣ: ನಮ್ಮ ಬದುಕಿನ ಮಾರ್ಗದರ್ಶನಕ್ಕೆ ಗುರು ಬೇಕು. ಗುರು ಎಂದರೆ ಕೇವಲ ವ್ಯಕ್ತಿಯಲ್ಲ. ಅದೊಂದು ತತ್ವ. ಶಿಷ್ಯಸಮುದಾಯವು ಪರಂಪರೆಯಿಂದ ಗುರುವನ್ನು ಆರಾಧಿಸುತ್ತ ಜೀವನದ ಸಾರ್ಥಕತೆಗೆ ಗುರುವನ್ನು ಅವಲಂಬಿಸಿದಂತೆ ಸ್ವತಃ ಗುರುವೂ ತನ್ನ ಗುರುಪರಂಪರೆಯನ್ನು ಅರ್ಚಿಸುತ್ತಾನೆ. ಆದಿಗುರುವಿನಲ್ಲಿ ಈ ಪಂಕ್ತಿ ಕೊನೆಗೊಳ್ಳುತ್ತದೆ. ಕೋಣೆಯಲ್ಲಿ ಎಷ್ಟೋ ವಸ್ತುಗಳು ತುಂಬಿರುತ್ತವೆ. ಅದರಲ್ಲಿ ಅತ್ಯಮೂಲ್ಯವಾದ ಪದಾರ್ಥಗಳೂ ಇರಬಹುದು. ಆದರೆ ಅದರ ಸಮ್ಯಗ್ದರ್ಶನಕ್ಕೆ… Continue Reading →
ಸೂರ್ಯೋದಯ ೬-೨೦ ಸೂರ್ಯಾಸ್ತ ೬-೪೯ ಪಕ್ಷ-ಶುಕ್ಲ ತಿಥಿ- ಚತುರ್ದಶಿ ಭಿಕ್ಷಾಸೇವೆ- ರಾಮಚಂದ್ರಾಪುರ ಮಂಡಲಾಂತರ್ಗತ ಸಂಪ್ಪೆಕಟ್ಟೆ, ನಿಟ್ಟೂರು,ತುಮರಿ ವಲಯಗಳ ಪರವಾಗಿ ೧೨-೩೦ ರಿಂದ ೨-೦೦ ಯಾಗದ ಪೂರ್ಣಾಹುತಿ, ಪಾದಪೂಜಾಮಂಗಳಾರತಿ, ಫಲಸಮರ್ಪಣೆ, ಸನ್ಮಾನ ಸಭೆ, ಆಶೀರ್ವಚನ, ಮಂತ್ರಾಕ್ಷತೆ. ೩- ೦೦ ರಿಂದ ೫-೩೦ ಯಕ್ಷಗಾನ ಸೇವೆಯಲ್ಲಿ ದಿವ್ಯಸಾನ್ನಿದ್ಯ [ಕೊಂಡದಕುಳಿ ಮೇಳದವರಿಂದ ವಾರ್ಷಿಕ ಸೇವೆಯಾಟ] Facebook Comments Box
ಹರೇರಾಮ ಪದ್ಮನಾಭ ಪ್ರಿಯಾಂ ದೇವೀಂ ಪದ್ಮಾಕ್ಷೀ ಪದ್ಮವಾಸಿನೀಮ್ | ಪದ್ಮವಕ್ತ್ರಾಂ ಪದ್ಮಹಸ್ತಾಂ ವಂದೇ ಪದ್ಮಾಮಹರ್ನಿಶಂ | ಪೂರ್ಣೇಂದುವದನಾಂ ದಿವ್ಯರತ್ನಾಭರಣಭೂಷಿತಾಮ್ | ವರದಾಭಯಹಸ್ತಾಢ್ಯಾಂ ಧ್ಯಾಯೇಚ್ಚಂದ್ರ ಸಹೋದರೀಮ್ || ಇಚ್ಛಾರೂಪಾಂ ಭಗವತಃ | ಸಚ್ಚಿದಾನಂದ ರೂಪಿಣೀಮ್ | ಸರ್ವಜ್ಞಾಂ ಸರ್ವಜನನೀಂ ವಿಷ್ಣು ವಕ್ಷಃಸ್ಥಲಾಲಯಾಮ್|| ದಯಾಲುಮನಿಶಂ ಧ್ಯಾಯೇತ್ಸುಖಸಿದ್ಧಿಸ್ವರೂಪಿಣೀಮ್ || Facebook Comments Box
ಗೋಕರ್ಣ : ಗೋಕರ್ಣದ ಸಮೀಪದ ಅಶೋಕೆಯಲ್ಲಿ ಶ್ರೀಮದಾಚಾರ್ಯ ಶಂಕರ ಭಗವತ್ಪಾದರಿಂದ ಸಂಸ್ಥಾಪಿತವಾಗಿ ಶ್ರೀ ವಿದ್ಯಾನಂದಾಚಾರ್ಯರಿಂದ ಪ್ರವರ್ತಿತವಾದ ನಮ್ಮ ಈ ಅವಿಚ್ಛಿನ್ನ ರಾಜಗುರುಪರಂಪರೆಯ ಶ್ರೀಮಠದ ಆರಾಧ್ಯದೈವನಾದ ಪ್ರಭು ಶ್ರೀರಾಮಚಂದ್ರ ಈ ಪೀಠದ ಹನ್ನೆರಡನೆಯ ಧರ್ಮಾಚಾರ್ಯರಾದ ಶ್ರೀರಾಮಚಂದ್ರ ಭಾರತೀ ಶ್ರೀಗಳವರ ಕಾಲದಲ್ಲಿ ಇಲ್ಲಿಂದ ಹೊಸನಗರದ ಅಗಸ್ತ್ಯಾಶ್ರಮ ಪರಿಸರಕ್ಕೆ ಹೋಗಿ ಅಲ್ಲಿ ನೆಲೆನಿಂತ. ಅದೂ ಶ್ರೀರಾಮನ ಶರದಿಂದಲೇ ಜನ್ಮ ತಳೆದು ಶರಾವತೀ… Continue Reading →