Page 271 of 292

2-1-2010 – ರಾಜಸ್ಥಾನದಿಂದ ಮಧ್ಯಪ್ರದೇಶ – ಉದಯಪುರದಿಂದ ರತ್ಲಾಮಿಗೆ ಯಾತ್ರೆ

ಜ.೨ – ಇಂದು ಯಾತ್ರೆ ಉದಯಪುರದಿಂದ ಹೊರಟು ಸಲುಂಬರ್, ಆಶ್ಪುರ್, ಬಾಂಸವಾಡಾ ಮೂಲಕ ರತ್ಲಾಮ್ ನಗರವನ್ನು ಬಂದು ಸೇರಿತು. ಸಲುಂಬರಿನಲ್ಲಿ ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ವೇದಿಕೆಯಲ್ಲಿ ಸಂತರಾದ ನಿರಂಜನನಾಥ ಅವಧೂತ ಜೀ, ಪ್ರಕಾಶಾ ಶಾಸ್ತ್ರೀ ಜೀ ಮಹಾರಾಜ್, ಪೂ. ಮೀರಾಮಾತಾ ಜೀ, ಇವರು ದಿವ್ಯ ಉಪಸ್ಥಿತಿ ನೀಡಿದ್ದರು. ಹುಕುಂಚಂದ್ ಸಾವ್ಲಾ ಅವರು ಗೋವಿನ ಭಾವನಾತ್ಮಕ… Continue Reading →

1-1-2010 – ರಾಜಸ್ಥಾನದ ಯಾತ್ರೆ – ಭೀಲ್ವಾಡದಿಂದ ಉದಯಪುರದ ವರೆಗೆ

ಜ.೧ – ಇಂದು ಯಾತ್ರೆ ಭಿಲ್ವಾಡಾದಿಂದ ಸಹಾಡಾ, ರಾಜಸಮಂದ (ಕಂಕ್ರೋಲಿ), ನಾಥದ್ವಾರ – ಉದಯಪುರಕ್ಕೆ ಬಂದು ತಲುಪಿತು. ಸಹಾಡಾದಲ್ಲಿ ಒಳ್ಳೆಯ ಸ್ವಾಗತ ಕಾರ್ಯಕ್ರಮ ನಡೆಯಿತು. ಮುಂದೆ ಕುಂವರಿಯಾದಲ್ಲೂ ಒಳ್ಳೆಯ ರೀತಿಯ ಸ್ವಾಗತ ನಡೆಯಿತು. ಯಾತ್ರೆ ಮುಂದುವರೆದು ರಾಜಸಮುಂದ (ಹಿಂದಿನ ಹೆಸರು ಕಂಕರೋಲಿ)ವನ್ನು ಸೇರಿತು. ನಗರದಲ್ಲಿ 4 ರಿಂದ 5 ಸಾವಿರ ಜನ ಸ್ವಾಗತ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು…. Continue Reading →

ವಿಶ್ವಮಂಗಲ ಗೋಗ್ರಾಮಯಾತ್ರೆಯೂ ಮುಸಲ್ಮಾನರೂ….

ಮೊಹರಂ’ನ ದಿನ ವಿಶ್ವಮಂಗಲ ಗೋಗ್ರಾಮಯಾತ್ರೆಯ ಕಾರ್ಯಕ್ರಮ ರಾಜಸ್ಥಾನದ ಕಿಶನ್ ಗಢದಲ್ಲಿ ನಿಶ್ಚಯವಾಗಿತ್ತು..ಆರಕ್ಷಕರು ಕಾರ್ಯಕ್ರಮಕ್ಕೆ ಅನುಮತಿ ನೀಡಲಿಲ್ಲ..
ಕಾರ್ಯಕ್ರಮ-ಸಂಘಟಕರು ಆರಕ್ಷಕರಿಗೆ ಹೇಳಿದ್ದು ‘ ನೀವು ಮುಸಲ್ಮಾನರನ್ನು ಕೇಳಿ ನಿರ್ಣಯ ಕೊಡಿ ‘ ಎಂಬುದಾಗಿ..ಹೃದಯ ತಟ್ಟುವ ಸಂಗತಿಯಂದರೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಲೇಬೇಕೆಂದು ಮುಸಲ್ಮಾನರೇ ಆರಕ್ಷಕರನ್ನು ಆಗ್ರಹಿಸಿದರು..
ಈ ಪ್ರದೇಶದಲ್ಲಿ ಮುಸಲ್ಮಾನರ ಮನೆ-ಮನೆಗಳಲ್ಲಿ ಗೋವುಗಳಿವೆ..ಹಿಂದುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರಲ್ಲಿಯೇ ಗೋಪಾಲಕರಿದ್ದಾರೆ..!
ವೇದಿಕೆಯ ಮೇಲೆ ಉಪಸ್ಥಿತನಿದ್ದ ಕೃಷಿಕ ‘ ರಹಮತುಲ್ಲಾ ‘ ಹೇಳಿದ ಮಾತು :
” ನಾವು ನಿಜವಾಗಿ ಹಿಂದುಗಳೇ….ಮುಸಲ್ಮಾನರಾಗಿ ಪರಿವರ್ತನೆಯಾದವರು..ನಮ್ಮ ಪೂರ್ವ ಸಂಸ್ಕಾರವನ್ನು ನಾವು ಮರೆತಿಲ್ಲ..ಮರೆಯುವ ಮನವೂ ಇಲ್ಲ…!! “

ಡಿ.೩೧ – ರಾಜಸ್ಥಾನದ ಯಾತ್ರೆ – ಕೋಟಾದಿಂದ ಭೀಲವಾಡಾಕ್ಕೆ

ಡಿ.೩೧ – ಕ್ರಿಸ್ತಶಕ ೨೦೦೯ರ ಕೊನೆಯ ದಿನ ಇಂದು ರಾತ್ರಿ ಚಂದ್ರಗ್ರಹಣವೂ ಇರುವುದೊಂದು ವಿಶೇಷ. ಹೊಸವರ್ಷ ಪ್ರಾರಂಭವಾದ ಕೂಡಲೇ ಗ್ರಹಣ ಸಮಾಧಾನವೆಂದರೆ ಹೊಸವರ್ಷದ ಸೂರ್ಯೋದಯವಾಗುವಾಗ ಚಂದ್ರ ಗ್ರಹಣ ಮುಕ್ತನಾಗಿರುತ್ತಾನೆ. ಇಂದು ಯಾತ್ರೆ ಕೋಟಾ ನಗರದಿಂದ ಹೊರಟು ಡಾಬೀ, ಬಿಜೋಲಿಯಾ, ಚಿತ್ತೋಡಗಢದ ಮೂಲಕ ಭೀಲವಾಡಾ ನಗರವನ್ನು ಪ್ರವೇಶಿಸಿತು. ಬಿಜೋಲಿಯಾದಲ್ಲಿ ಅಂದಾಜು ೨೦೦೦ ಜನರು ಮಧ್ಯಾಹ್ನದ ಬಿಸಿಲಿನಲ್ಲೂ ಸಭೆಯಲ್ಲಿ… Continue Reading →

ಕಣ್ಣು ಬೇಕಣ್ಣಾ ಕಣ್ಣು – ಎರಡನೇ ಕಣ್ಣು..!!

ಕಣ್ಣೆಂದರೆ ಭಾವಸಾಗರ..!
ತೀರದಲ್ಲಿ ನಿಂತವನಿಗೆ ಕೆಲವು ತರಂಗಗಳನ್ನು ಎಣಿಸಲು ಮಾತ್ರ ಸಾಧ್ಯವಷ್ಟೆ..!
ಮುಂದುವರೆಯಲಿ ಕಣ್ಣೆಂಬ ಕಣ್ಣಿಗೆ ಮಾತೆಂಬ ಮಾತಿನ ಸೇವೆ..!!
ಸೂರ್ಯಚಂದ್ರಾಗ್ನಿಗಳೆಂಬ ಮೂರು ಕಣ್ಣುಗಳಿಂದ ಮೆರೆಯುವ ಮುಕ್ಕಣ್ಣನ ಎರಡನೆಯ ಕಣ್ಣೇ ಚಂದ್ರ..

ಚಂದ್ರ-ಗ್ರಹಣದಲ್ಲಿ ಸೃಷ್ಟಿಯೇ ತನ್ಮಯವಾಗುವ ಮುನ್ನ ನಮ್ಮ ಚಿತ್ತ ಸರಿಯಲಿ ವಿಚಾರ-ಗ್ರಹಣದತ್ತ . . .

ಡಿ.೩೦ – ರಾಜಸ್ಥಾನ – ಜಯಪುರದಿಂದ ಕೋಟಾಕ್ಕೆ ಯಾತ್ರೆ

ಡಿ.೩೦ – ಇಂದು ಯಾತ್ರೆ ತನ್ನ ಪರಿಭ್ರಮಣದ ೯೧ನೆಯ ದಿನ ಜಯಪುರದಿಂದ ಹೊರಟು ಟೊಂಕ್, ದೇವಲಿ, ಬೂಂದೀ ಮಾರ್ಗವಾಗಿ ಕೋಟ ಪಟ್ಟಣವನ್ನು ಪ್ರವೇಶಿಸಿತು. ಮೊದಲಿಗೆ ದಾರಿಯಲ್ಲಿ ಚಾಕಸೂ ಮತ್ತು ನಿವಾಯಿಗಳಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಿತು. ನಿವಾಯಿಯಲ್ಲಿ ಒಂದು ಉತ್ತಮ ಗೋಶಾಲೆಯನ್ನು ಯಾತ್ರೆ ಸಂದರ್ಶಿಸಿತು. ಆ ಗೋಶಾಲೆಯ ಸಾಂಪ್ರದಾಯಿಕ ಉದ್ಘಾಟನೆಯೂ ಇಂದೇ ನಡೆಯಿತು ಎಂದೂ ತಿಳಿಯಿತು. ಅಂದಾಜು… Continue Reading →

ಡಿ.೨೯ – ರಾಜಸ್ಥಾನದಲ್ಲಿ ಯಾತ್ರೆ – ಅಲ್ವರಿನಿಂದ ಜೈಪುರ

ಡಿ.೨೯ – ಇಂದು ಯಾತ್ರೆ ಅಲ್ವರಿನಿಂದ ಹೊರಟು, ರಾಜಗಢ, ಬಾಂದೀ, ಕುಂಯೀ, ದೌಸಾ ಮಾರ್ಗವಾಗಿ ರಾಜಸ್ಥಾನದ ರಾಜಧಾನಿ ಜೈಪುರವನ್ನು ತಲುಪಿತು. ರಾಜಗಢದಲ್ಲಿ ಸಂತ ಹರಿಹರಾನಂದ ಜೀ ಬ್ರಹ್ಮಚಾರಿ, ಪೂ. ರಾಮಭಾರತೀ ಮಹಾರಾಜ್ ಮತ್ತು ಪೂ. ನಿರಂಜನನಾಥ ಅವಧೂತ ಜೀ ಇವರು ವೇದಿಕೆಯಲ್ಲಿ ದಿವ್ಯ ಉಪಸ್ಥಿತಿ ನೀಡಿದ್ದರು. ಮೂಲತಃ ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು, ಭಾರತದ… Continue Reading →

|| ಪಶ್ಯೇಮ ಶರದಃ ಶತಮ್ ||

ಹೃದಯಬಂಧು,

ಸಪ್ರೇಮ ಭಗವತ್ ಸ್ಮರಣೆಗಳು..

ವಿಶ್ವಮಂಗಳ ಗೋಗ್ರಾಮಯಾತ್ರೆ ರಾಜಸ್ಥಾನದಲ್ಲಿ ಸಂಪನ್ನಗೊಳ್ಳುತ್ತಿದೆ..ನಿನ್ನೆ ಕಿಶನ್ ಗಢದ ಕಾರ್ಯಕ್ರಮದಲ್ಲಿ ನಮಗೊಂದು ಅಚ್ಚರಿ ಕಾದಿತ್ತು..

ವೇದಿಕೆಯ ಮೇಲೆ ಸಂತರೊಬ್ಬರು ಉಪಸ್ಥಿತರಿದ್ದರು..ಅವರು ವಯಸ್ಸೆಷ್ಟು ಗೊತ್ತೇ..?

ಒಮ್ಮೆ ಉಸಿರು ಬಿಗಿ ಹಿಡಿಯಿರಿ..!
೧೧೩..!!

ಡಿ.೨೮ – ದೆಹಲಿಯಿಂದ ಅಲ್ವರಿಗೆ ಯಾತ್ರೆ

ಡಿ.೨೮ – ಇಂದು ಪುತ್ರತಾ ಏಕಾದಶೀ ತಿಥಿ, ಇಂದು ಗೋಸೇವೆ ಮಾಡಿ ಭಗವಂತನ ’ಉಪವಾಸ’ (ಸಮೀಪವಾಸ) ಮಾಡಿದಲ್ಲಿ ಪುತ್ರ ಪ್ರಾಪ್ತಿ ನಿಶ್ಚಿತವೆಂಬುದು ಸಂತರ ನುಡಿ. ಇಂದು ಯಾತ್ರೆ ದಿಲ್ಲಿ ಮಹಾನಗರಿಯಿಂದ ಬೀಳ್ಕೊಂಡು, ಹರಿಯಾಣದ ಗುರುಗಾಂ, ರಾಜಸ್ಥಾನದ ಭಿವಾಡಿ, ಕಿಶನ್ ಗಢ್ ಮೂಲಕ ಅಲ್ವರ್ ಜಿಲ್ಲಾ ಕೇಂದ್ರವನ್ನು ಪ್ರವೇಶಿಸಿತು. ಗುರುಗಾಂ (ಗುರುಗ್ರಾಮ) ನೇರವಾಗಿ ನಮ್ಮ ಯಾತ್ರೆಯ ಜತೆಗೆ… Continue Reading →

ಸಾಮ್ರಾಜ್ಯ ಪಟ್ಟಾಭಿಷೇಕ..!

ಹೃದಯಬಂಧು,

ಸಪ್ರೇಮ ನಾರಾಯಣ ಸ್ಮರಣೆಗಳು..

ಬಹಳ ದಿನಗಳಿಂದಲೇ ಬರಯಬೇಕೆ೦ದಿದ್ದೆವು..ನಮ್ಮ ಬದುಕನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಬೇಕೆ೦ದಿದ್ದೆವು..ಆದರೆ ಕಾಲದ ಅನುಮತಿ ಸಿಕ್ಕಿರಲಿಲ್ಲ..ಇಂದು ಸಿಕ್ಕಿದೆ..!

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑