Tag ರಾಮರಶ್ಮಿ

ನಿರ್ಮೋಹವ ಸೆಳೆದೊಯ್ಯಲು ಸಜ್ಜಾಯಿತು ಮೋಹ..

ಋಷ್ಯಶೃಂಗನಿರುವ ಕಾನನವನ್ನು, ಮತ್ತು ಅಂಗರಾಜ್ಯವನ್ನು ಸೇರುವ ಮಾರ್ಗವನ್ನು ಸುಸೂಕ್ಷ್ಮವಾಗಿ ಪರಿಶೀಲಿಸಿದಳವಳು. ಆಶ್ರಮಕ್ಕೆ ಅನತಿದೂರದಲ್ಲಿಯೇ ನದಿಯೊಂದು ಹರಿಯುತ್ತಿದ್ದಿತು. ನದಿಯನ್ನು ದಾಟಿ, ಅಂಗರಾಜ್ಯವನ್ನು ಸೇರಲು ಸಮೀಪದ ದಾರಿಯೂ ಇದ್ದಿತು. ಋಷ್ಯಶೃಂಗನನ್ನು ಕರೆದೊಯ್ಯಲು ಅದೇ ಮಾರ್ಗವು ಸೂಕ್ತವೆಂದು ನಿಶ್ಚಯಿಸಿದಳು.. ಮುಂದೆ ಓದಿ >>

ಜಲವರ್ಷವ ಬರಿಸಲು ಅಗ್ನಿವರ್ಷವ ಭರಿಸುವರಾರು..?

ಋಷ್ಯಶೃಂಗನನ್ನು ಅಂಗನೆಯರು ಅಂಗರಾಜ್ಯಕ್ಕೆ ಕರೆತರುವ ಯೋಜನೆಯು ಹೇಳುವುದಕ್ಕೆ-ಕೇಳುವುದಕ್ಕೇನೋ ಸೊಗಸಾಗಿಯೇ ಇತ್ತು. ಆದರೆ ಆ ಯೋಜನೆಯನ್ನು ಕೃತಿಗಿಳಿಸಬೇಕಾದವರು ಕಂಗಾಲಾಗಿಹೋಗಿದ್ದರು! ಪಾಪ, ವಾರಾಂಗನೆಯರದೂ ಜೀವವೇ ಅಲ್ಲವೇ!? ಜೀವದಾಸೆ-ಜೀವನದಾಸೆಗಳನ್ನು ಮೀರಲು ಅವರೇನು ಮುನಿಗಳೇ? ಮುಂದೆ ಓದಿ >>

ನಾಲಿಗೆಯು ನಾಡಿಗೇ ನರಕ ತಂದಾಗ..

ಇಂದಿನ ಮಾತು : ‘ನೀನು ಕೇಳಿದ್ದನ್ನು ಕೊಡುವೆ!’ ನಾಳೆಯ ಮಾತು :‘ನಾನು ಹಾಗೆ ಹೇಳಿಯೇ ಇಲ್ಲ!’ ಸಾಮಾನ್ಯ ಪ್ರಜೆಯು ಹೀಗೆ ಮಾಡಿದರೆ ಅವನ ಬದುಕು ಬರಡಾದೀತು; ನಾಡೇ ಮನೆಯಾದ ದೊರೆಯ ನುಡಿಯು ಎರಡಾದರೆ ನಾಡಿಗೆ ನಾಡೇ ಬರಡಾದೀತು! ಅಂಗರಾಜ್ಯದ ದೊರೆ ರೋಮಪಾದನಿಗೆ ಇದು ಅರ್ಥವಾಗುವಾಗ ಅನರ್ಥವಾಗಿತ್ತು! ತಪಸ್ವೀ ವಿಪ್ರನೋರ್ವನಿಗೆ ಕೇಳಿದ್ದನ್ನು ಕೊಡುವೆನೆಂದು ನುಡಿದ ಅಂಗರಾಜ, ಕೇಳಿದಾಗ… Continue Reading →

ನಾಲ್ಕು ದಿವ್ಯಗಳು ಸೇರಿ, ನಾಕವ ಇಳೆಗಿಳಿಸಿದವು!

ಋಷ್ಯಶಂಗರು ದಿವಿಯಿಂದ ಭುವಿಗಿಳಿದರು;
ತನ್ಮೂಲಕ ಅಂಗರಾಜ್ಯದ ಬಹುಕಾಲದ ಬರ ನೀಗಿ, ಜೀವಚೈತನ್ಯವು ಮಳೆಯಾಗಿ ಇಳೆಗಿಳಿಯಿತು.
ದಶರಥನ ಬಹುಕಾಲದ ಸಂತತಿಯ ಬರ ನೀಗಿ, ರಾಮನೆಂಬ ವರ ಲಭಿಸಿತು. ಮುಂದೆ ಓದಿ >>

ದೊರೆಯ ಎದೆಯೊಳಗೆ ದಿವ್ಯವು ಮಾತಾಡಿತೇ!?

ವಸಿಷ್ಠರಂಥ ಗುರುಗಳು, ಸುಮಂತ್ರನಂಥ ಮಂತ್ರಿ, ಕೌಸಲ್ಯೆಯಂಥ ರಾಣಿ, ಕೋಸಲದಂಥ ರಾಜ್ಯ, ಅಯೋಧ್ಯೆಯಂಥ ರಾಜಧಾನಿಗಳನ್ನು ಹೊಂದಿದ ದಶರಥನಿಗೆ ರಾಮನಂಥ ಸುತ ಬೇಡವೇ?
ಮುಂದೆ ಓದಿ >>

Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑