ಬೇಕೇ ಈ ಕೆಲಸ ?
ನಿರಂತರ ಪರಿಭ್ರಮಣ..
ದಿನಕ್ಕೊಂದು ಊರು..
ಹೊತ್ತಿಗೊಂದು ಸೂರು..
ಹತ್ತಾರು ಬಗೆಯ ನೀರು..!
ನಿನ್ನೆ ಇಲ್ಲಿರಲಿಲ್ಲ; ನಾಳೆ ಇನ್ನೆಲ್ಲಿಯೋ?….
ಇಂದು ಬಯಲುಸೀಮೆಯೆಡೆ..ನಾಳೆ ಮಲೆನಾಡ ಕಡೆ.
ಇಂದು ಆಗಸ ಹರಿದು ಬೀಳುವಂತೆ ಮಳೆ..ನಾಳೆ ಮೈಯೆಲ್ಲ ಬೆವರ ಹೊಳೆ..
ಮಾನವನ ಮೊದಲ ಬೇಕುಗಳು ಊಟ-ನಿದ್ರೆಗಳು..
ಊಟವೋ ಅದೃಷ್ಟದಾಟ..!
ಒಮ್ಮೊಮ್ಮೆ ಇಲ್ಲವೇ ಇಲ್ಲ..
ಇದ್ದರೂ ಬೇಕಾದಷ್ಟು ಇಲ್ಲದಿರಬಹುದು..
ಬೇಕಾದ ಬಗೆಯಲ್ಲಿ ಇಲ್ಲದಿರಬಹುದು..
ಇದ್ದರೂ ಪ್ರೀತಿಪೂರ್ವಕವಲ್ಲದಿರಬಹುದು..
ತಲುಪುವಾಗ ತಿನ್ನಲು ಸಮಯವೇ ಇಲ್ಲದಿರಬಹುದು..
ಇಂದು ಸೊಗಸಿಲ್ಲದ ಸಪ್ಪೆ..ನಾಳೆ ಕಿವಿಯಲ್ಲಿ ಹೊಗೆಯೇಳುವ ಖಾರ..!