ಸಲ್ಲದ ಆಸೆಯೊಂದು ಏನೆಲ್ಲ ಅನಾಹುತಗಳನ್ನು ಮಾಡಿಬಿಡಬಹುದು..!
ಸಲ್ಲದ ಆಸೆಯೊಂದು ಮನದಲ್ಲಿ ಮೂಡಿದರೆ, ಆ ವ್ಯಕ್ತಿ…
ಉಂಡ ಮನೆಗೆ ಎರಡೆಣಿಸಬಹುದು..!
ಮಮತೆಯ ಮಾತೆಯ ಮೇಲೆಯೇ ದುಂಡಾವೃತ್ತಿಗೆ ಮುಂದಾಗಬಹುದು..!
ಗೌರವದ ಗುರುವನ್ನೇ ಕೊಲ್ಲಲೆಳೆಸಬಹುದು..!
ರಕ್ಷಿಸಬೇಕಾದ ರಾಜನಾಗಿದ್ದರೂ ಚೋರನಂತೆ, ದರೋಡೆಕೋರನಂತೆ ವರ್ತಿಸಬಹುದು…!
ತಪೋಭೂಮಿಯನ್ನು ರಣಭೂಮಿಯನ್ನಾಗಿಸಬಹುದು..!
ಪ್ರೇಮದ ಗಂಗಾಧಾರೆ ಹರಿಯುವಲ್ಲಿ ದ್ವೇಷದ ವಿಷಜ್ವಾಲೆಯಾಗಿ ಉರಿಯಬಹುದು..!
ತನ್ನವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಬಲಿ ಕೊಡಬಹುದು.!!
|| ಹರೇರಾಮ || ಶತಮಾನಗಳ ಹಿಂದಿನ ಮಾತು.. ಇಂದೋರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಭಾರತದ ಹೃದಯ ಪ್ರದೇಶವನ್ನು ಆಳುತ್ತಿದ್ದ ಕಾಲ.. ತನ್ನ ನಡೆ ನುಡಿಗಳಿಂದ ಆಕೆ ದೇವತುಲ್ಯಳಾಗಿದ್ದುದರಿಂದಲೋ ಏನೋ ಜನತೆ ಆಕೆಯನ್ನು ‘ದೇವಿ’ ಎಂದೇ ಸಂಬೋಧಿಸುತ್ತಿದ್ದಿತು..! ಆಕೆ ಮಾಡಿದ ಸತ್ಕಾರ್ಯಗಳಿಗೆ ಲೆಖ್ಖವೇ ಇಲ್ಲ..! ಮಾಲೋಜಿರಾವ್ ಆಕೆಯ ಏಕಮಾತ್ರ ಪುತ್ರ… ಆದರೆ ಅವರೀರ್ವರ ಸ್ವಭಾವದಲ್ಲಿ… Continue Reading →
ಇದು ವ್ಯಕ್ತಿ ಸಂತೋಷವಲ್ಲ. ಇದು ಮನೆಯ ಸಂಭ್ರಮವಲ್ಲ. ಇದು ಊರ ಹಬ್ಬವಲ್ಲ. ಇದು ರಾಜ್ಯೋತ್ಸವ… ಸಮಸ್ತ ಕನ್ನಡ ನಾಡಿನ ಮಹೋತ್ಸವ… ಇದಕ್ಕೆ ಆತ್ಮ ವಿಸ್ತಾರವೆಂದು ಹೆಸರು. ಶರೀರ ಒಂದಕ್ಕೇ ಆತ್ಮ ಸೀಮಿತವಾಗಿದ್ದರೆ ಕೇವಲ ಒಂದು ಶರೀರದ ಸುಖ ದುಖಃಗಳು ಮಾತ್ರವೇ ವೇದ್ಯವಾಗುತ್ತದೆ. ಆತ್ಮ ಒಂದು ಶರೀರದ ಸೀಮೆಯನ್ನು ಮೀರಿದರೆ… ಅಪ್ಪ ಅಮ್ಮ ಅಣ್ಣತಮ್ಮಂದಿರಲ್ಲಿ ವಿಸ್ತರಿಸಿದರೆ… “ನಾನು”ವಿನ… Continue Reading →