Tag ramayana

ಧಾರಾ~ರಾಮಾಯಣ – ಒಂದು ಅನನ್ಯ ಅನುಭವ: ಶ್ರೀಮತಿ ರೋಹಿಣಿ ಕಾಂಚನ ಸುಬ್ಬರತ್ನಂ

ಶ್ರೀ ಗುರುಭ್ಯೋ ನಮಃ ದಿನಾಂಕ 15 – 12 – 2019ರಂದು ಇಕ್ಷ್ವಾಕು ಕುಲದೇವನಾದ ಸೂರ್ಯನ ಆಧಿಪತ್ಯದ ದಿನ, ಭಾನುವಾರ. ಮಹಾರಾಜ ದಶರಥನೇ ಶ್ರೀರಾಮನ ಪಟ್ಟಾಭಿಷೇಕಕ್ಕೆಂದು ಉದ್ದೇಶಿಸಿ ನಿಶ್ಚಯಿಸಿದ್ದ ಮುಹೂರ್ತವಾದ ಪುಷ್ಯಾ ನಕ್ಷತ್ರವಿದ್ದ ದಿನ, ದುಷ್ಟರನ್ನು ಸಂಹಾರ ಮಾಡಿ ವನವಾಸವನ್ನು ಮುಗಿಸಿ ಸೀತಾಸಮೇತನಾಗಿ ತನ್ನ ಎಲ್ಲ ಪರಿವಾರಸಮೇತನಾಗಿ ಅಯೋಧ್ಯೆಗೆ ಹಿಂತಿರುಗಿದ ಪುಷ್ಯಾ ನಕ್ಷತ್ರವಿದ್ದ ದಿನ. ಈ… Continue Reading →

ರಾಮಾಯಣ – ಲಂಕೆ

ಬೆಂಗಳೂರಿನಲ್ಲಿ ನಡೆದ ಸರ್ವಧಾರಿ ಚತುರ್ಮಾಸ್ಯದಲ್ಲಿ ಶ್ರೀಸಂಸ್ಥಾನ ನೀಡಿದ ರಾಮಾಯಣ ಪ್ರವಚನದ ಒಂದು ಆಯ್ದ ಭಾಗ. [audio:DailyPravachana/ramayana pravachana 09-08-08.mp3]

ಕುಶಲವರೋ ? ಕುಶಲ ಕುಶೀಲವರೋ ?

ದ್ವಾರವನ್ನು ದಾಟದೆ ದೇವರನ್ನು ತಲುಪಲುಂಟೇ..?!
ತನ್ನನ್ನು ತಲುಪಲಾರದೇ ಬಳಲುವ ಜೀವಗಳನ್ನು ಕಂಡು ಕನಿಕರಿಸಿದ ಕರುಣಾಸಿಂಧುವು ಸರ್ವಕಾಲಗಳಲ್ಲಿಯೂ ಸರ್ವದೇಶಗಳಲ್ಲಿಯೂ ಸಂತರ ರೂಪದಲ್ಲಿ ತನ್ನ ದ್ವಾರಗಳನ್ನು ತೆರೆದಿಟ್ಟನಲ್ಲವೇ…!

ಮೊದಲು ಸಂತ..
ಮತ್ತೆ ಭಗವಂತ..!

ಆದುದರಿಂದಲೇ ಇರಬೇಕು..
ರಾಮಾಯಣದ ಪ್ರಸ್ತುತಿಯು ರಾಮನ ಮುಂದಾಗುವುದಕ್ಕೆ ಮುನ್ನ ಋಷಿಸಮೂಹದ ಸಮ್ಮುಖದಲ್ಲಿ ಆಯಿತು..

ಆಶ್ರಮದ ದಿವ್ಯಪರಿಸರವದು…

ರಾಮನ ಪ್ರತಿಬಿಂಬಗಳಲ್ಲಿ ರಾಮಾಯಣದ ಪ್ರತಿಬಿಂಬ…!

ಕುಶ-ಲವರನ್ನು ಕಣ್ದಣಿಯೆ ನೋಡಿದರು ಆದಿಕವಿಗಳು..
ಭೂಮಂಡಲಾಧೀಶ್ವರನ ಮಕ್ಕಳು ಮುನಿವೇಷದಲ್ಲಿ,ಅನಾಥರಂತೆ ಆಶ್ರಮವಾಸಿಗಳಾಗಿರುವುದನ್ನು ಕಂಡು ಕರಗಿ ಮರುಗಿತು ಅವರ ಹೃದಯ..
ಅನರ್ಘ್ಯವಾದ ಈ ಜೋಡಿಮುತ್ತುಗಳು ಆಶ್ರಮಕ್ಕಿಂತ ಅರಮನೆಯಲ್ಲಿ ಭೂಷಣವಲ್ಲವೇ..? ಎಂದು ಕೇಳಿತು ಅವರ ಮನಸ್ಸು..
ಕುಶ-ಲವರನ್ನು ಲೋಕಕ್ಕೆ ತಂದ, ಲೋಕದ ತಂದೆಯೊಡನೆ ಪುನರಪಿ ಬೆಸೆಯುವ ಬಗೆ ಯಾವುದೆಂದು ಚಿಂತಿಸತೊಡಗಿದ ಮುನಿಗಳಿಗೆ ಉತ್ತರ ರೂಪದಲ್ಲಿ ಹೊಳೆದಿದ್ದು ರಾಮಾಯಣವೇ..!

ತಾಯಿಯಿಂದ ತಂದೆಯೆಡೆಗೆ…
ಗುರುವಿನಿಂದ ಪ್ರಭುವಿನೆಡೆಗೆ..
ಆಶ್ರಮದಿಂದ ಅರಮನೆಯೆಡೆಗೆ.. ಈ ಮಕ್ಕಳನ್ನು ರಾಮಾಯಣವೇ ಕರೆದೊಯ್ಯಬಹುದಲ್ಲವೇ..?

ಸೇರಿದವು ದಿವಿಭುವಿಗಳು . . . !

ಹಗಲ ಮೊದಲು ರಾತ್ರಿಯಿರುವಂತೆ……!
ಹಸಿವು ತೃಪ್ತಿಗೆ ಪೀಠಿಕೆಯಾಗಿರುವಂತೆ….!
ಮುಕ್ತಿಯ ಮೊದಲು ಬಂಧನವಿರುವಂತೆ..!!
ಉತ್ತರವೊಂದು ಉದಯಿಸಬೇಕಾದರೆ ಪೂರ್ವದಲ್ಲಿ ಪ್ರಶ್ನೆಯೊಂದು ಪ್ರಾದುರ್ಭವಿಸಲೇಬೇಕಲ್ಲವೇ..?

ಆದರೆ ಮುನಿಯ ಈ ಪ್ರಶ್ನೆಗೆ ಲಭಿಸಿದ್ದು ಅಂತಿಂಥ ಉತ್ತರವಲ್ಲ…!

ಲೋಕೋತ್ತರವಾದ ರಾಮಾಯಣ…!!!

ಆ ಪ್ರಶ್ನೆಯಲ್ಲಿ ಅದೆಂಥ ಸೆಳೆತವಿತ್ತೋ..?
ಅದಾವ ಮಿಡಿತವಿತ್ತೋ..?
ಅದೇನು ತುಡಿತವಿತ್ತೋ..?
ಉತ್ತರಿಸಲು ದೇವಲೋಕವೇ ಧರೆಗಿಳಿಯಿತು..!!!

ಶ್ರೀರಾಮಾಯಣದ ಅಂಕುರ ವಲ್ಮೀಕದಲ್ಲಿ…!!

ತಮೋನಿರ್ಮುಕ್ತೆ ತಮಸೆಯ ಪರಿಶುದ್ಧಪ್ರವಾಹ..
ಮುಗಿಲು ಮುತ್ತಿಕ್ಕುವ ಗಿರಿಶಿಖರಗಳ ಅಚಲತೆ, ಗಾಂಭೀರ್ಯ, ಔನ್ನತ್ಯ…
ಝರಿಗಳ ತಂಪು, ಹಸಿರಿನ ಸೊಂಪು, ಕುಸುಮಗಳ ಕಂಪುಗಳೊಡನೆ ಕಂಗೊಳಿಸುವ ಕಾನನಮಂಡಲ…
ಅಲ್ಲೊಂದು…
ಪಾವನತೆಯೇ ಪಡಿಮೂಡಿದಂತಿದ್ದ ಪರ್ಣಕುಟಿ…
ಅಲ್ಲಿ…
ಮೈಮೇಲೆ ಹುತ್ತವೇಬೆಳೆದರೂ ಅರಿವಾಗದಂತೆ ಮೈಮರೆತ ಪರಮ ತನ್ಮಯತೆಯ ಮಹಾಮುನಿ…
ಆ ಮುನಿಯ ಮಹಾಮನದಲ್ಲಿ ಮೂಡಿಬಂದಿತ್ತೊಂದು ಮಹಾಪುರುಷನ ದಿವ್ಯ ಮೂರ್ತಿ…
ತಮಸೆಯ ಪರಿಶುದ್ಧಿ..
ಗಿರಿಶಿಖರಗಳ ಅಚಲತೆ,ಉನ್ನತಿ,ಗಾಂಭೀರ್ಯ..
ಕಾನನಗಳ ಸೌಂದರ್ಯ,ಸೌಮ್ಯತೆ..
ಆಶ್ರಮದ ಪವಿತ್ರತೆ..
ಮುನಿಯತ್ಯಾಗ..
ಇವೆಲ್ಲವೂ ಮೇಳೈಸಿದ್ದವು ಆ ಮೂರ್ತಿಯಲ್ಲಿ..
ಕೋಟಿಸೂರ್ಯ ಪ್ರಕಾಶ..!!!
ಆದರೆ ಕೋಟಿ ಚಂದ್ರರ ತಂಪು..!!!!!
ಆ ಮೂರ್ತಿಯ ಮೂಲದ್ರವ್ಯ ಶಿಲೆಯಾಗಿರಲಿಲ್ಲ – ಚೈತನ್ಯದ ಸೆಲೆಯಾಗಿತ್ತು..!!
ಮರದ ಮೂರ್ತಿಯದಲ್ಲ – ಅಮರ ಮೂರ್ತಿ..!!
ಮೃಣ್ಮಯವಲ್ಲ – ಚಿನ್ಮಯಮೂರ್ತಿ..!!
ಒಂದೇ ಒಂದೂ ಕುಂದೂ ಇಲ್ಲದ ಚಂದದ ಮೂರ್ತಿ…

© 2021 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑