ಅರಿವು, ಭಾವ ಹಾಗೂ ಸಾಹಸಕ್ಕೆ ಶ್ರೀರಾಮಚಂದ್ರಾಪುರಮಠದ ಸನ್ಮಾನ ಕಾಲ: 27/02/2016 ದೇಶ: ಶ್ರೀರಾಮಾಶ್ರಮ,ಬೆಂಗಳೂರು ನಮ್ಮ ಕಣ್ಣಮುಂದೆ ಅನ್ಯಾಯವಾಗುತ್ತಿದ್ದಾಗ ಸುಮ್ಮನೇ ಇರಬಾರದು, ಅನ್ಯಾಯವನ್ನು ತಡೆಯಬೇಕು, ಈ ದಿಶೆಯಲ್ಲಿ ಅಕ್ರಮವಾಗಿ ಸಾಗಾಟಮಾಡಲಾಗುತ್ತಿದ್ದ ಗೋವುಗಳನ್ನು ದಿಟ್ಟತನದಿಂದ ಸಂರಕ್ಷಿಸಿದ ರಿತಿಕಾಳ ಹೋರಾಟ ಸಮಾಜಕ್ಕೆ ಮಾದರಿ, ಹಾಗೆಯೇ ನಮ್ಮ ಸಂಸ್ಕತಿಯನ್ನು ಮರೆಯುತ್ತಿರುವ ಕಾಲಗಟ್ಟದಲ್ಲಿ ಇಸ್ಲಾಂ ಮತದ ಫಾತಿಮತ್ ರಾಮಾಯಣ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಪಡೆದಿರುವುದು… Continue Reading →
Watch: Samskruta Asheervachana by Sri Sri Raghaveshwara Bharati Maha Swamiji youtu.be/xNbOhroIjnI Sri Sri Raghaveshwara Bharati MahaSwamiji blessing with Video-Asheervachana for “Samskruta Vāgvarďhana Kāryāgāra” held at SriBharati Vidyapeetha, Mujungavu on 19-Jan-2016. Video Link: youtu.be/xNbOhroIjnI
ಬೇಕೇ ಈ ಕೆಲಸ ?
ನಿರಂತರ ಪರಿಭ್ರಮಣ..
ದಿನಕ್ಕೊಂದು ಊರು..
ಹೊತ್ತಿಗೊಂದು ಸೂರು..
ಹತ್ತಾರು ಬಗೆಯ ನೀರು..!
ನಿನ್ನೆ ಇಲ್ಲಿರಲಿಲ್ಲ; ನಾಳೆ ಇನ್ನೆಲ್ಲಿಯೋ?….
ಇಂದು ಬಯಲುಸೀಮೆಯೆಡೆ..ನಾಳೆ ಮಲೆನಾಡ ಕಡೆ.
ಇಂದು ಆಗಸ ಹರಿದು ಬೀಳುವಂತೆ ಮಳೆ..ನಾಳೆ ಮೈಯೆಲ್ಲ ಬೆವರ ಹೊಳೆ..
ಮಾನವನ ಮೊದಲ ಬೇಕುಗಳು ಊಟ-ನಿದ್ರೆಗಳು..
ಊಟವೋ ಅದೃಷ್ಟದಾಟ..!
ಒಮ್ಮೊಮ್ಮೆ ಇಲ್ಲವೇ ಇಲ್ಲ..
ಇದ್ದರೂ ಬೇಕಾದಷ್ಟು ಇಲ್ಲದಿರಬಹುದು..
ಬೇಕಾದ ಬಗೆಯಲ್ಲಿ ಇಲ್ಲದಿರಬಹುದು..
ಇದ್ದರೂ ಪ್ರೀತಿಪೂರ್ವಕವಲ್ಲದಿರಬಹುದು..
ತಲುಪುವಾಗ ತಿನ್ನಲು ಸಮಯವೇ ಇಲ್ಲದಿರಬಹುದು..
ಇಂದು ಸೊಗಸಿಲ್ಲದ ಸಪ್ಪೆ..ನಾಳೆ ಕಿವಿಯಲ್ಲಿ ಹೊಗೆಯೇಳುವ ಖಾರ..!