ಮೃತ್ಯುವಿಂ ಭಯವೇಕೆ?

ಗುರುವಾರ, ದಶಂಬರ 17th, 2009 - - 44 Comments
ಮೃತ್ಯುವಿಂ ಭಯವೇಕೆ?
ಜೀವಿಗೆ ಹುಟ್ಟು ನೈಸರ್ಗಿಕ..
ಹುಟ್ಟಿದಮೇಲೆ ಬದುಕು ನೈಸರ್ಗಿಕ..
ಬದುಕಿಗಾಗಿ ಹಸಿವಾದಾಗ ತಿನ್ನುವುದು ನೈಸರ್ಗಿಕ..
ಶರೀರಕ್ಕೆ ಬೆದವಾದುದ್ದನ್ನು ವಿಸರ್ಜಿಸುವುದು ನೈಸರ್ಗಿಕ ..
ಇವೆಲ್ಲ ಎಷ್ಟು ನೈಸರ್ಗಿಕವೋ..ಸಾವು ಕೂಡ ಅಷ್ಟೇ ನೈಸರ್ಗಿಕ..
ಆದರೆ ಇವು ಎಲ್ಲವನ್ನೂ ಸಜವಾಗಿ ಸ್ವೀಕರಿಸುವ ಮನುಷ್ಯನಿಗೆ ಸಾವಿನ ಕುರಿತು ಅದೇಕೆ ಎಲ್ಲಿಲ್ಲದ ಭಯ..?
ಬೆಂಗಳೂರಿನ ವ್ಯಕ್ತಿಯೊಬ್ಬ ಕಾರ್ಯನಿಮಿತ್ತ ಮುಂಬೈಗೆ ಹೋಗುತ್ತಾನೆ..
ಬೆಳಗಿನ ವಿಮಾನದಲ್ಲಿ ಮುಂಬಯಿಗೆ ಬಂದು ಕೆಲಸಗಳನ್ನೆಲ್ಲಾ ಪೂರೈಸಿ ರಾತ್ರಿ ೯ ಘಂಟೆಯ ವಿಮಾನದಲ್ಲಿ ಮರಳಿ ಬೆಂಗಳೂರಿಗೆ ಬರಬೇಕಾಗುತ್ತದೆ ಎಂದುಕೊಳ್ಳಿ..
ಈಗ, ವಿಮಾನದ ಸಮಯ ಹತ್ತಿರ ಬಂದರೂ ಬಂದ ಕೆಲಸವಾಗದಿದ್ದರೆ ಭಯ-ಉದ್ವೇಗಗಳು೦ಟಾಗುವುದು ಸಹಜವಲ್ಲವೇ..?
ಈ ದೃಷ್ಟಾಂತದ ಸಂಗಮನ ನಮ್ಮ ಬದುಕಿನಲ್ಲಿದೆ..
ನಾವು ಕೂಡ ಈ ಊರಿನವರಲ್ಲ..(ಭೂಮಿಯವರಲ್ಲ)
ನಾವು ಅಲ್ಲಿಯವರು.. ಭಗವಂತನ ಮಡಿಲೇ ನಮ್ಮಮನೆ..
ನಾವಿಲ್ಲಿಗೆ ಕಾರ್ಯನಿಮಿತ್ತ ಬಂದವರು..
ಇಲ್ಲಿಯ ನಮ್ಮ ಇರುವಿಗೆ ಸಮಯಮಿತಿಯಿದೆ ..
ಕಾರ್ಯವಾಗಲಿ ಆಗದಿರಲಿ ಆಸಮಯ ಬಂದ ಕೂಡಲೇ ಹೊರಡಲೇ ಬೇಕು..
ಬಂದ ಕಾರ್ಯವೇನೆಂಬುದು ಮನಸ್ಸಿಗೆ ಗೊತ್ತಿಲ್ಲದಿದ್ದರೂ ಜೀವಕ್ಕೆ ಚೆನ್ನಾಗಿ ಗೊತ್ತು..
ಕಾಲೇಜಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಪೇಟೆತಿರುಗುವ ಮಾಣಿಗೆ ಒಳಗೊಳಗೇ ಅಳುಕಿರುವಂತೆ..
ಬಂದಕಾರ್ಯವನ್ನೇ ಮರೆತು ಎಲ್ಲೆಲ್ಲೋ ಸುತ್ತುವ ನಮಗೂ ಅನವರತ ಮೃತ್ಯುವಿನ ಅಳುಕಿರುವುದು ಸಹಜವೇ..
ಮೇಲೆ ನೀಡಿದ ದೃಷ್ಟಾಂತದಲ್ಲಿ ಕೊನೇಪಕ್ಷ  ಹೊರಡುವ ಸಮಯವಾದರೂ ನಿಶ್ಚಿತ ವಾಗಿದೆ..
ನಿಜ ಜೀವನದಲ್ಲಿ ಹೊರಡುವ ಸಮಯ ಮೊದಲೇ ಗೊತ್ತಿಲ್ಲ ಬಂದ ಕಾರ್ಯದ ಕಡೆ ಗಮನವೂ ಇಲ್ಲ..
ಭಯವಾಗದೆ ಮತ್ತೇನಾಗಬೇಕು ಹೇಳಿ..
ನಾವು ಬಂದ ಕಾರ್ಯವಾವುದು ಎಂಬುದನ್ನು ಆಚಾರ್ಯ ಶಂಕರರ ಭಾಷೆಯಲ್ಲಿ ಕೇಳಿ..
“ಮಹತಾ  ಪುಣ್ಯ-ಪಣ್ಯೇನ  ಕ್ರೀತೇಯಂ ಕಾಯನೌಸ್ತ್ವಯಾ |
ತರ್ತುಂ ಭವಾಂಬುಧೇಃ ಪಾರಂ ತರ ಯಾವತ್ ನ ಭಿದ್ಯತೇ ||”
(ಭಾವಸಾಗರವನ್ನು ದಾಟಲೋಸುಗ ಪುಣ್ಯವೆಂಬ ಹಣದ ರಾಶಿಯನ್ನೇ ಸುರಿದು..ದೇಹವೆಂಬ ನೌಕೆಯನ್ನು ನೀನು ಖರೀದಿಸಿದೆ..
ತ್ವರೆ ಮಾಡು ಮಗೂ ದಾಟು ಬೇಗ , ದೋಣಿ ಯಾವ ಕ್ಷಣದಲ್ಲಿಯೂ ಒಡೆದೀತು..)
ನಾವಿನ್ನೂ ಭಾವಸಾಗರದ ನಡುವಿನಲ್ಲಿರುವಾಗಲೇ ದೋಣಿ ಒಡೆಯಲಾರ೦ಭಿಸಿದರೆ ಭಯವಾಗದಿದ್ದೀತೆ..?
ಸಂಸಾರವನ್ನು ಮೀರಲು, ಪರಮಗಮ್ಯವನ್ನು ಸೇರಲು..
ಈಶ್ವರನಿತ್ತ ಮಹಾಸಾಧನೆವೇ ನಮ್ಮ ಶರೀರ..
ಕಾರ್ಯ ಕೈಗೂಡದೆ ಸಾಧನ ಕಳೆದು ಹೋಗುವಾಗ   ಮುಂದೇನು ಮುಂದೇನು ಎಂಬ ಪ್ರಶ್ನೆಗೆ ಕತ್ತಲೆಯೇ ಉತ್ತರವಾದಾಗ..
ರಾಜ್ಯವಾಳುವುದು ಭಯವೇ ತಾನೆ ?
ಇದರ ಸಾರಾಂಶ ಈಕೆಳಗಿನ ಶ್ಲೋಕಾರ್ಧದಲ್ಲಿದೆ..
ಪ್ರಾಯೋಃ ಅಕೃತ ಕ್ರುತ್ಯತ್ವಾತ್  ಮೃತ್ಯೋಃ   ಉದ್ವಿಜತೆ ಜನಃ|
ಬದುಕು ಏತಕ್ಕಾಗಿ ಬಂದಿತೋ ಆಕಾರ್ಯ ಆಗದಿದ್ದಾಗ ಜನರಿಗೆ ಮ್ರುತ್ಯುಭೀತಿ ಉಂಟಾಗುತ್ತದೆ..
ಬಂದಕೆಲಸವಾದವರ ಆನಂದವೇ ಬೇರೆ..
ಊರಿಗೆ ಮರಳುವ  ವಿಮಾನವಿರುವುದು 9 ಘಂಟೆಗೆ..
ಬಂದ ಕೆಲಸ ೫ ಘಂಟೆಗೆ ಮುಗಿಯಿತು ಎಂದಾದರೆ  ಅಂತವನಿಗೆ ಯಾವಉದ್ವೇಗವೂ ಇಲ್ಲ.. ಆತ  ಶಾಂತನಾಗಿ  ವಿಮಾನವನ್ನುಕಾಯುತ್ತಾನೆ..
ಕೃತಕೃತ್ಯಾಃ ಪ್ರತೀಕ್ಷಂತೆ ಮೃತ್ಯುಂ ಪ್ರಿಯಮಿವಾ  ಅತಿಥಿಂ..
ಕೃತಕೃತ್ಯರು ಮೃತ್ಯುವನ್ನು ಎದುರುನೋಡುತ್ತಾರೆ..ಮನೆಗೆ ಬರುವ ಪ್ರಿಯ ಅತಿಥಿಯನ್ನು ನಾವು ಎದುರು ನೋಡುವುದಿಲ್ಲವೇ ಹಾಗೆ..
ಬದುಕನ್ನು ಸಾರ್ಥಕ ಪಡಿಸಿಕೊಂಡವನು ಸಾವಿನಭಾಯವನ್ನು ಮೀರುತ್ತಾನೆ..
ಬಂದ ಉದ್ದೇಶವನ್ನೇ ಮರೆತು ಬೀದಿಸುತ್ತುವವನ ಬದುಕು ಸಾವಿನಭಾಯದಿಂದ ತುಂಬಿರುತ್ತದೆ..
ನಮ್ಮ ಮೃತ್ಯು ಮೃತ್ಯುಂಜಯ  ಶಂಕರನಾಗಿರಬೇಕೆ..?
ಅಥವಾ ಭಯಂಕರ ಯಮಕಿಂಕರನಾಗಿರಬೇಕೆ..?
ಆಯ್ಕೆ ನಮ್ಮದು..(ಉತ್ತರ ನಮ್ಮ ಬದುಕಿನಲ್ಲೇಇದೆ)..
ಮೃತ್ಯೋರ್ಮಾ ಅಮೃತಂಗಮಯ..

|| ಹರೇ ರಾಮ ||

ಜೀವಿಗೆ ಹುಟ್ಟು ನೈಸರ್ಗಿಕ..

ಮೃತ್ಯುವೋ..ಮಿತ್ರನೋ..?

ಮೃತ್ಯುವೋ..ಮಿತ್ರನೋ..?

ಹುಟ್ಟಿದ ಮೇಲೆ ಬದುಕು ನೈಸರ್ಗಿಕ..

ಬದುಕಿಗಾಗಿ ಹಸಿವಾದಾಗ ತಿನ್ನುವುದು ನೈಸರ್ಗಿಕ..

ಶರೀರಕ್ಕೆ ಬೇಡವಾದುದ್ದನ್ನು ವಿಸರ್ಜಿಸುವುದು ನೈಸರ್ಗಿಕ ..

ಇವೆಲ್ಲ ಎಷ್ಟು ನೈಸರ್ಗಿಕವೋ..ಸಾವೂ ಕೂಡಾ ಅಷ್ಟೇ ನೈಸರ್ಗಿಕ..

ಆದರೆ ಇವೆಲ್ಲವನ್ನೂ ಸಹಜವಾಗಿ ಸ್ವೀಕರಿಸುವ ಮನುಷ್ಯನಿಗೆ ಸಾವಿನ ಕುರಿತು ಅದೇಕೆ ಎಲ್ಲಿಲ್ಲದ ಭಯ..?
ನೋಡೋಣ….

ಬೆಂಗಳೂರಿನ ವ್ಯಕ್ತಿಯೊಬ್ಬ ಕಾರ್ಯನಿಮಿತ್ತ ಮುಂಬೈಗೆ ಹೋಗುತ್ತಾನೆ..

ಬೆಳಗಿನ ವಿಮಾನದಲ್ಲಿ ಮುಂಬಯಿ ತಲುಪು ಕೆಲಸಗಳನ್ನೆಲ್ಲಾ ಪೂರೈಸಿ ರಾತ್ರಿ ೯ ಘಂಟೆಯ ವಿಮಾನದಲ್ಲಿ ಮರಳಿ ಬೆಂಗಳೂರಿಗೆ ಬರಬೇಕಾಗುತ್ತದೆ ಎಂದುಕೊಳ್ಳಿ..

ಈಗ, ವಿಮಾನದ ಸಮಯ ಹತ್ತಿರ ಬಂದರೂ ಬಂದ ಕೆಲಸವಾಗದಿದ್ದರೆ ಭಯ-ಉದ್ವೇಗಗಳು೦ಟಾಗುವುದು ಸಹಜವಲ್ಲವೇ..?

ಈ ದೃಷ್ಟಾಂತದ ಸಂಗಮನ ನಮ್ಮ ಬದುಕಿನಲ್ಲಿದೆ..

ನಾವು ಕೂಡ ಈ ಊರಿನವರಲ್ಲ..(ಭೂಮಿಯವರಲ್ಲ)

ನಾವು ‘ಅಲ್ಲಿಯವರು’.. ಭಗವಂತನ ಮಡಿಲೇ ನಮ್ಮಮನೆ..

ನಾವಿಲ್ಲಿಗೆ ಕಾರ್ಯನಿಮಿತ್ತ ಬಂದವರು..

ಇಲ್ಲಿಯ ನಮ್ಮ ಇರವಿಗೆ ಸಮಯಮಿತಿಯಿದೆ ..

ಕಾರ್ಯವಾಗಲಿ, ಆಗದಿರಲಿ, ಆ ಸಮಯ ಬಂದ ಕೂಡಲೇ ಹೊರಡಲೇ ಬೇಕು..

ಕಾಲೇಜಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಪೇಟೆ ತಿರುಗುವ ಮಾಣಿಗೆ ಒಳಗೊಳಗೇ ಅಳುಕಿರುವಂತೆ..

ಬಂದಕಾರ್ಯವನ್ನೇ ಮರೆತು ಎಲ್ಲೆಲ್ಲೋ ಸುತ್ತುವ ನಮಗೂ ಅನವರತ ಮೃತ್ಯುವಿನ ಅಳುಕಿರುವುದು ಸಹಜವೇ..!

ಮೇಲೆ ನೀಡಿದ ದೃಷ್ಟಾಂತದಲ್ಲಿ ಕೊನೆಯ ಪಕ್ಷ  ಹೊರಡುವ ಸಮಯವಾದರೂ ನಿಶ್ಚಿತವಾಗಿದೆ..

ನಿಜ ಜೀವನದಲ್ಲಿ ಹೊರಡುವ ಸಮಯ ಮೊದಲೇ ಗೊತ್ತಿಲ್ಲ.. ಬಂದ ಕಾರ್ಯದ ಕಡೆ ಗಮನವೂ ಇಲ್ಲ..

ಭಯವಾಗದೆ ಮತ್ತೇನಾಗಬೇಕು ಹೇಳಿ..!

ನಾವು ಬಂದ ಕಾರ್ಯವಾವುದು ಎಂಬುದನ್ನು ಆಚಾರ್ಯ ಶಂಕರರ ಭಾಷೆಯಲ್ಲಿ ಕೇಳಿ..

“ಮಹತಾ  ಪುಣ್ಯ-ಪಣ್ಯೇನ  ಕ್ರೀತೇಯಂ ಕಾಯನೌಸ್ತ್ವಯಾ |

ತರ್ತುಂ ಭವಾಂಬುಧೇಃ ಪಾರಂ ತರ ಯಾವತ್ ನ ಭಿದ್ಯತೇ ||”

(ಭವಸಾಗರವನ್ನು ದಾಟಲೋಸುಗ ಪುಣ್ಯವೆಂಬ ಹಣದ ರಾಶಿಯನ್ನೇ ಸುರಿದು, ದೇಹವೆಂಬ ನೌಕೆಯನ್ನು ನೀನು ಖರೀದಿಸಿದೆ.

ತ್ವರೆ ಮಾಡು ಮಗೂ.. ದಾಟು ಬೇಗ , ದೋಣಿ ಯಾವ ಕ್ಷಣದಲ್ಲಿಯೂ ಒಡೆದೀತು..)

ನಾವಿನ್ನೂ ಭವಸಾಗರದ ನಡುವಿನಲ್ಲಿರುವಾಗಲೇ ದೋಣಿ ಒಡೆಯಲಾರ೦ಭಿಸಿದರೆ ಭಯವಾಗದಿದ್ದೀತೆ..?

ಸಂಸಾರವನ್ನು ಮೀರಲು, ಪರಮಗಮ್ಯವನ್ನು ಸೇರಲು..ಈಶ್ವರನಿತ್ತ ಮಹಾಸಾಧನವೇ ನಮ್ಮ ಶರೀರ..

ಕಾರ್ಯ ಕೈಗೂಡದೆ ಸಾಧನ ಕಳೆದು ಹೋಗುವಾಗ   ಮುಂದೇನು..? ಮುಂದೇನು..? ಎಂಬ ಪ್ರಶ್ನೆಗೆ ಕತ್ತಲೆಯೇ ಉತ್ತರವಾದಾಗ..ರಾಜ್ಯವಾಳುವುದು ಭಯವೇ ತಾನೆ ?

ಇದರ ಸಾರಾಂಶ ಈ ಕೆಳಗಿನ ಶ್ಲೋಕಾರ್ಧದಲ್ಲಿದೆ..

ಪ್ರಾಯೋ ಹಿ ಅಕೃತ ಕೃತ್ಯತ್ವಾತ್  ಮೃತ್ಯೋಃ   ಉದ್ವಿಜತೇ ಜನಃ |

(ಬದುಕು ಏತಕ್ಕಾಗಿ ಬಂದಿತೋ, ಆ ಕಾರ್ಯ ಆಗದಿದ್ದಾಗ ಜನರಿಗೆ ಮೃತ್ಯುಭೀತಿ ಉಂಟಾಗುತ್ತದೆ..)

ಬಂದ ಕೆಲಸವಾದವರ ಆನಂದವೇ ಬೇರೆ..

ಊರಿಗೆ ಮರಳುವ  ವಿಮಾನವಿರುವುದು ೯ ಘಂಟೆಗೆ..

ಬಂದ ಕೆಲಸ ೫ ಘಂಟೆಗೆ ಮುಗಿಯಿತು ಎಂದಾದರೆ  ಅಂತಹವನಿಗೆ ಯಾವ ಉದ್ವೇಗವೂ ಇಲ್ಲ.. ಆತ  ಶಾಂತನಾಗಿ  ವಿಮಾನವನ್ನುಕಾಯುತ್ತಾನೆ..

ಕೃತಕೃತ್ಯಾಃ ಪ್ರತೀಕ್ಷಂತೇ ಮೃತ್ಯುಂ ಪ್ರಿಯಮಿವ ಅತಿಥಿಂ ||

(ಕೃತಕೃತ್ಯರು ಮೃತ್ಯುವನ್ನು ಎದುರುನೋಡುತ್ತಾರೆ..ಮನೆಗೆ ಬರುವ ಪ್ರಿಯ ಅತಿಥಿಯನ್ನು ನಾವು ಎದುರು ನೋಡುವುದಿಲ್ಲವೇ..?  ಹಾಗೆ..)

ಬದುಕನ್ನು ಸಾರ್ಥಕಪಡಿಸಿಕೊಂಡವನು ಸಾವಿನ ಭಯವನ್ನು ಮೀರುತ್ತಾನೆ..

ಬಂದ ಉದ್ದೇಶವನ್ನೇ ಮರೆತು ಬೀದಿ ಸುತ್ತುವವನ ಬದುಕು ಸಾವಿನ ಭಯದಿಂದ ತುಂಬಿರುತ್ತದೆ..

ನಮ್ಮ ಮೃತ್ಯು ಮೃತ್ಯುಂಜಯ  ಶಂಕರನಾಗಿರಬೇಕೆ..?

ಅಥವಾ ಭಯಂಕರ ಯಮಕಿಂಕರನಾಗಿರಬೇಕೆ..?

ಆಯ್ಕೆ ನಮ್ಮದು..!

(ಉತ್ತರ ನಮ್ಮ ಬದುಕಿನಲ್ಲೇ ಇದೆ)..

|| ಮೃತ್ಯೋರ್ಮಾ ಅಮೃತಂ ಗಮಯ ||

  • chethana hegde

    Hare Raama..

    Saavanne gedda Satyavana/Savitri nijakko punyatmaru….

    Savina Aache yenide? Namma prana yelli hoguttade?

    • http://hareraama.in Sri Samsthana

      ೧,ಸಾವಿನ ಆಚೆ ಹೂಸ ಬದುಕು ಇದೆ.
      ೨,ನಾವು ಹಳೆ ಬಾಡಿಗೆ ಮನೆಯನ್ನು ಬಿಟ್ಟು ಹೊಸ ಬಾಡಿಗೆ ಮನೆಗೆ ಹೋಗುವಂತೆ ಪ್ರಾಣ ಹಳೆಯ, ಹಾಳಾದ ದೇಹವನ್ನು ಬಿಟ್ಟು ಹೊಸ ದೇಹಕ್ಕೆ ಹೋಗುತ್ತದೆ..

    • http://hareraama.in/members/rnarayana/ Raghavendra Narayana

      We are missing your comments..
      .
      Shri Gurubhyo Namaha

      • Jayashree Neeramoole

        ಗುರುಚರಣಗಳಿಗೆ ಅನಂತ ಪ್ರಣಾಮಗಳು.

        ಹರೇ ರಾಮ,
        ಹರೇರಾಮವೆಂಬ ಪುಣ್ಯಸಾಗರದಲ್ಲಿ ಸ್ವಲ್ಪ ಸಮಯದಿಂದ ಮೀಯುತ್ತಿರುವ ನಮಗೇನೋ….. “ಸಂಸ್ಥಾನ ನೇರವಾಗಿ ನಮಗೆ ಪ್ರತಿಕ್ರಿಯಸಿದಿದ್ದರೂ, ಇನ್ನೊಂದು ಪ್ರವಚನದ ಮೂಲಕವೋ,ಇನ್ನೊಬ್ಬರ ಪ್ರತಿಕ್ರಿಯೆಯ ಮೂಲಕವೋ…….ಯಾವುದಾದರೊಂದು ರೂಪದಲ್ಲಿ ನಮ್ಮ ಸಂದೇಹಕ್ಕೆ ಉತ್ತರವನ್ನೂ, ನಮ್ಮ ಪ್ರಾರ್ಥನೆಗೆ ಅಶೀರ್ವಾದವನ್ನೋ….. ಕರುಣಿಸುತ್ತಾರೆ” ಎಂಬ ವಿಷಯ ತಿಳಿದಿದೆ. ಹೊಸದಾಗಿ ಹರೇರಾಮಕ್ಕೆ ಪ್ರವೇಶಿಸುತ್ತಿರುವವರಿಗೆ ಈ ವಿಷಯವನ್ನು ಹೇಗೆ ತಿಳಿಯಪಡಿಸುವುದು….. ಅಲ್ಲವೇ?

  • nandaja haregoppa

    Hare raama

    (ಭವಸಾಗರವನ್ನು ದಾಟಲೋಸುಗ ಪುಣ್ಯವೆಂಬ ಹಣದ ರಾಶಿಯನ್ನೇ ಸುರಿದು..ದೇಹವೆಂಬ ನೌಕೆಯನ್ನು ನೀನು ಖರೀದಿಸಿದೆ..

    aadare thumbaa jana ketta kelasa maadutharalla ,avarige yaake beku e dehavemba nouke,avaru punyavemba hanada raashi suridu bandavaro ella papavemba hanada raashi suridu bandavaro?anthavara nouke yaake alle reject aaguvudilla? heegadare paapa kadime aagabahudallave?

    • http://hareraama.in Sri Samsthana

      ಹೆಚ್ಚು ಹಣವನ್ನು ಸುರಿದು ಉತ್ತಮ ವಸ್ತುವನ್ನು ಖರೀದಿಸಿ ಸದುಪಯೋಗ ಮಾಡದಿರುವುದು ಅವಿವೇಕ. ಅವಿವೇಕಿಗಳು ಎಲ್ಲಾ ಕಾಲ-ದೇಶಗಳಲ್ಲಿಯೂ ಇರುತ್ತಾರೆ .ಇಷ್ಟು ಕೆಲಸಕ್ಕೆ ಇಷ್ಟು ಸಂಬಳ ಎಂದು ಇರುವಂತೆ ನಮ್ಮ ಕರ್ಮಗಳಿಗೆ ಅನುಗುಣವಾಗಿ ಶರೀರಗಳು ಬರುತ್ತಾ ಇರುತ್ತವೆ .ಅದು ವ್ಯವಸ್ಥೆ. ಹಾಗೇ Rejecat ಮಾಡಿದರೆ ಮಾಯಯ ಆಟವೇ ನಿಂತು ಬಿಡಬಹುದು. ಸಂಸಾರವೇ ಸ್ತಬ್ದವಾಗಿ ಬಿಡಬಹುದು.!

  • Raghavendra Narayana

    Before reading anything, just by looking at the heading – I am typing this, it would be fantastic. Mankuthimmana Kagga is favorite for many people, one kagga starts with this heading. Like Yama’s “Hagga”, Kagga has pulled many people to spirituality playground.. satra hosadihudu nede mankuthimma..

    • http://hareraama.in Sri Samsthana

      kagga is our Favorite also ……..

  • ಜಗದೀಶ್ B. R.

    ಜ್ಞಾನೋದಯವಾಗುತ್ತಿದೆ……

    • http://hareraama.in Sri Samsthana

      ಅಸ್ತಮಾನ ಬರದಿರಲಿ..

  • Raghavendra Narayana

    ಮೃತ್ಯುಂಜಯ ಶಂಕರ
    The concept of “Shiva” is most most most most most most most most most most most most most most beautiful in this or any universe.

    • http://hareraama.in Sri Samsthana

      True..

  • Arun Hegde

    || ಹರೇ ರಾಮ ||

    ಗುರುಗಳೇ, ನಾವು ಬಂದ ಕಾರ್ಯ ಮುಗಿಯಿತೆಂದು ತಿಳಿದುಕೊಳ್ಳುವುದು ಹೇಗೆ ?

    • http://hareraama.in Sri Samsthana

      ಆನಂದ ತುಂಬಿ ನಿಂತಾಗ ………
      ಮತ್ತೇನೂ ಬೇಡವೆನಿಸಿದಾಗ …….

  • shobha lakshmi

    ಹರೇರಾಮ…ಗುರುದೇವಾ…ಭಗವ೦ತನ ಮಡಿಲಿನಿ೦ದ ಪುಣ್ಯದರಾಶಿಯನ್ನು ಸುರಿದು ಈ ಭೂಮಿಗೆ ಬ೦ದ ಉದ್ದೇಶ್?? ಯಾಕೆ ಅವ ಇಲ್ಲಿಗೆ ಕಳಿಸುತ್ತ?? ಅಲ್ಲಿ ಆರಾಮ ದಲ್ಲಿ ಇರಬಹುದಿತ್ತಲ್ಲವೆ??ಇಲ್ಲಿ ಬ೦ದು ಒದ್ದಾಡುದು ಕಡ್ಡಾಯವೆ?? ಬ೦ದ ಉದ್ದೇಶದ ಮರೆವು ಮಾಯೆ ತಾನೆ?? ಅದು ಭಗವ೦ತನ ಮಾಯೆ ಅಲ್ಲವೆ?? ಅದರಿ೦ದ ಪಾರಾಗುವ ದಾರಿ ಯಾವುದು??

    ಗುರುದೇವಾ ಭವಸಾಗರ ದಾಟುವ ಬಗೆ ಗೊತ್ತಿಲ್ಲ…ತಾವೇ ನಾವಿಕರಾಗುವಿರಾ???

    • http://hareraama.in Sri Samsthana

      ಕರ್ಮದ ಮೊಳಕೆ ಇನ್ನೂ ಜೀವಗತವಾಗಿರುವಾಗ ಭಗವಂತನಲ್ಲಿ ಆರಾಮಾಗಿ ಇರಲು ಸಾದ್ಯವಿಲ್ಲ .
      ಅದನ್ನು ಕಳೆದುಕೊಳ್ಳುವುದೇ ‘ಇಲ್ಲಿಗೆ’ ಬಂದ ಉದ್ದೇಶ..

      • Jayashree Neeramoole

        ಗುರುಚರಣಗಳಿಗೆ ಅನಂತ ಪ್ರಣಾಮಗಳು.

        ಕರ್ಮಣ್ಯೇವಾಧಿಕಾರಸ್ತೆ ಮಾ ಫಲೇಶು ಕದಾಚನ….. ಎಂಬ ಧ್ಯೇಯದೊಂದಿಗೆ ಸತ್ಕರ್ಮಗಳನ್ನು ಮಾಡುವುದೊಂದೇ ಕರ್ಮವನ್ನು ಕಳೆದುಕೊಳ್ಳಲಿಕ್ಕಿರುವ ಮಾರ್ಗವೇ?

  • Raghavendra Narayana

    ಮೃತ್ಯುವಿ೦ ಭಯವೇಕೆ? ದೇಶಾ೦ತರಕ್ಕೊಯ್ವ |
    ಮಿತ್ರನಾತ೦; ಚಿತ್ರ ಹೊಸದಿರ್ಪುದಲ್ಲಿ ||
    ಸಾತ್ತ್ವಿಕದಿ ಬಾಳ್ದವ೦ಗೆತ್ತಲೇ೦ ಭಯವಿಹುದು ?||
    ಸತ್ರ ಹೊಸದಿಹುದು ನಡೆ – ಮ೦ಕುತಿಮ್ಮ ||

    • http://hareraama.in Sri Samsthana

      ಕಗ್ಗವನ್ನು ಪ್ರಿತಿಸುವವರನ್ನು ನಾವು ಪ್ರಿತಿಸುವೆವು..!!

  • Raghavendra Narayana

    ಶ೦ಕರಾಚರ್ಯರಿಗೆ ಸಾಷ್ಠಾ೦ಗ ಪ್ರಾಣಾಮಗಳು.
    ಗುರುಗಳೇ ದಯವಿಟ್ಟು ತಿಳಿಸಿ.

    ೧, “ಅಲ್ಲಿ” ಅ೦ದರೆ ಏನು? ಎಲ್ಲಿದೆ? ಅದಕ್ಕೆ ಪುರಾವೆಗಳು ಏನಿವೆ?
    ೨, “ಇಲ್ಲಿ” ಅನ್ನುವುದು ಭೂಮಿ ಬಿಟ್ಟು ಬೇರೆ ಇದೆಯೆ?
    ೩, ಜೀವನದ ನಾಲ್ಕು ಆಶ್ರಮಗಳು ಎಷ್ಟು ಪೂರಕವೇನಿಸುತ್ತದೆ ಈ ದಾಟುವ ಕಾರ್ಯಕ್ಕೆ?
    ೪, ಸಾಗರವನ್ನು ದಾಟುವುದಕ್ಕೆ ಅತ್ಯ೦ತ ವೇಗದ ಮಾರ್ಗ ಯಾವುದು?
    ೫. ಅದ್ವೈತಿಗೆ ಇಲ್ಲಿ ಅಲ್ಲಿ ಎಲ್ಲಿಯೂ ಕೂಡ ಸಮವಲ್ಲವೇ? ಮತ್ತೆ ಯಾಕೆ ಈ “ಅಲ್ಲಿ”ಯ ಚಿ೦ತೆ?
    ೬, ಅಲ್ಲಿಯ ಬಗ್ಗೆ ಹೆಚ್ಚು ಯೋಚನೆ ಸ್ವಾರ್ಥವಾಗುವುದಿಲ್ಲವೆ? ಸಮಾಜಕ್ಕೆ ನಮ್ಮ ಸೇವೆ ಅಗತ್ಯವಲ್ಲವೆ?
    ೭, ಎಲ್ಲವೂ ಮಾಯೆಯಾದರೆ, ಈ “ಅಲ್ಲಿ” ಕೂಡ ಮಾಯೆಯಲ್ಲವೆ?
    ೮, ಎಲ್ಲವೂ ಪರಮಾತ್ಮನ ಇಚ್ಛೆಯ೦ತೆ ನೆಡೆಯುತ್ತದೆ ಎ೦ದು ಹೇಳುತ್ತಾರೆ, ಹಾಗಾದರೆ ಏನನ್ನಾದರು ಏಕೆ ವಿಚಾರ ಮಾಡಬೇಕು?
    ೯, ಸಾಮನ್ಯವಾಗಿ ಯಾರು “ಅಲ್ಲಿ”ಯ ಬಗ್ಗೆ ಹೆಚ್ಚು ಒಲವು ತೋರುತ್ತಾರೆ?
    ೧೦, ಸ೦ಸಾರದ ಕರ್ತವ್ಯವನ್ನು ಪೂರೈಸದೆ ಅಲ್ಲಿಯ ಬಗ್ಗೆ ಪೂರ್ಣ ತೊಡಗಿಕೊಳ್ಳುವುದು ಧರ್ಮವೆ?
    ೧೧, “ಅಲ್ಲಿ”ಗೆ ಸೇರಲು ಸ೦ಸಾರಿಗಳಿಗೆ ಸುಲಭ ಮಾರ್ಗ ಯಾವುದು?
    ೧೨, “ಅಲ್ಲಿ”ಯ ಬಗ್ಗೆ ಆಕರ್ಷಿತರಾಗಲು ಏನಿದೆ?
    ೧೩, “ಅಲ್ಲಿ”ಯ ಬಗ್ಗೆ ನಮಗೆ ಸರಿಯಾದ ಜ್ಞಾನ ಬರುತ್ತಿದೆ / ಬ೦ದಿದೆ ಏ೦ದು ಹೇಗೆ ತಿಳಿದುಕೊಳ್ಳುವುದು?
    ೧೪, ಸಾಮನ್ಯವಾದ ಶ೦ಕೆ ಎಲ್ಲರಲ್ಲೂ – “ಅಲ್ಲಿ”ಯ ಬಗ್ಗೆ ಪೂರ್ಣ ನ೦ಬಿಕೆ ಇಲ್ಲ, “ಇಲ್ಲಿ” ಇರುವುದನ್ನೂ ಸರಿಯಾದ ರೀತಿಯಲ್ಲಿ ಅನುಭವಿಸದೆ ಇದ್ದರೆ ವ್ಯರ್ಥವಾಗುವುದಿಲ್ಲವೆ? ಅಲ್ಲಿಯ ಬಗ್ಗೆ ದೃಡ ನಿಶ್ಚಯ ಹೇಗೆ ತಾಳುವುದು?

    • http://hareraama.in Sri Samsthana

      ೧} ಅ} ಜೀವದ ಅವಿಶ್ರಾಂತ ಪ್ರಯಾಣ ಎಲ್ಲಿ ಶುರುವಾಯಿತೋ ”ಅಲ್ಲಿ”. ಆ}ಎಲ್ಲೆಲ್ಲೂ.. ವಿಶೇಷವಾಗಿ ನಮ್ಮೊಳಗೆ .ಇ} ಅನುಭವಿಸಿದವರ ನುಡಿಗಳು..ಅನುಭವಿಸಿದ ಗುರುಗಳ ಅನುಭವ ..ಸ್ವಾನುಭವ..
      ೨}” ಅಲ್ಲಿಯ ” ಹೂರತು ಮತ್ತೆಲ್ಲವೂ ‘ಇಲ್ಲಿ’ ಎನ್ನುವ ಶಬ್ದದ ವ್ಯಾಪ್ತಿಗೆ ಬರುತ್ತದೆ.
      ೩} ಮಿಡಿ,ಕಾಯಿ, ದೋರೆಕಾಯಿ, ಹಣ್ಣು,ಈ ನಾಲ್ಕು ಅವಸ್ಥೆಗಳಲ್ಲಿ ಮುಂದು ಮುಂದಿನದು ಹಿಂದು ಹಿಂದಿನದಕ್ಕೆ ಪೂರಕವೇ ಅಲ್ಲವೇ?
      ೪} ಸಾಪೇಕ್ಷ. ನೀವು ಎಲ್ಲಿದ್ದೀರಿ ಮತ್ತು ಗುರಿಯಿಂದ ಎಷ್ಟು ದೂರ ಇದ್ದೀರಿ ಎಂಬುದರ ಮೇಲೆ ಅವಲಂಬಿತ .
      ೫} ಇದು ಅದ್ವೆತಿಯಾದ ಮೇಲಿನ ಮಾತಾಯಿತು.ಅಲ್ಲಿಯವರೆಗೆ ಸಂಸಾರವಿದ್ದೇ ಇದೆ.
      || ವಿನಾ ಅಪರೋಕ್ಷಾನುಭವಂ ಬ್ರಹ್ಮ ಶಬ್ದೈರ್ನಮುಚ್ಯತೆ ||
      – ಶ್ರೀಶಂಕರಾಚಾರ್ಯರು

      ೬} ವಿಶ್ವಹಿತವನ್ನು ಸಾಕ್ಷಾತ್ಕಾರಿ ಹೇಗೆ ಸಾಧಿಸ ಬಲ್ಲನೋ, ಹಾಗೆ ಸಂಸಾರಿ ಸಾಧಿಸಲಾರ.
      ೭} ಅದೂಂದನ್ನು ಹೊರತುಪಡಿಸಿ ಮತ್ತೆಲ್ಲವೂ ಮಾಯೆ ಎಂಬುದು ಕಂಡುಂಡವರ ವಾಣಿ .
      ೮}ನಿಜವಾಗಿಯೂ ಸಂಪೂ೯ಣ ಪರಮಾತ್ಮನಿಗೇ ಬಿಡುವುದಿದ್ದರೆ ವಿಚಾರ ಮಾಡಬೇಕಾಗಿಯೇ ಇಲ್ಲ..!
      ೯}ಆ ಅಮೃತದ ಸುದ್ದಿ ಸಿಕ್ಕಿದವರು.. ಸುಗಂಧ ಬಂದವರು ..
      ೧೦}ಯೋಗ-ಭೋಗ ಸಮನ್ವಯವಾಗಬೇಕು ಜೀವನ..
      ೧೧}ಅಗ್ನಿಮಿಚ್ಚದ್ವಂ ಭಾರತಾಃ…..ಮನಸ್ಸಿದ್ದರೆ ಮಾರ್ಗ..(ತೀವ್ರಾಪೇಕ್ಷೆಯ ಮನವೇ ಮಾರ್ಗ)
      ೧೨}ಆಕರ್ಷಣೆಯ ಮೂಲವೇ ” ಆನಂದ.. ”ಅದು ಹೆಚ್ಚು ಸಿಗುವುದು ”ಅಲ್ಲಿಯೇ”
      ೧೩} ಕತ್ತಲೆಯಲ್ಲಿ ದೀಪ ಬರುತ್ತಿದೆಯೆಂದು ಸಾರಬೇಕಾಗಿಲ್ಲ. ಹೊಟ್ಟೆ ತುಂಬಿದೆಬುದಕ್ಕೆ ಡಾಕ್ಟರ್ ಸರ್ಟಿಪಿಕೆಟ್ ಬೇಕಿಲ್ಲ. ತೃಪ್ತಿಯೇ ಸಾಕು.
      ೧೪} ಅ}ಸಮುದ್ರವನ್ನು ನಾವು ಕಾಣದೆ ಇರಬಹುದು.. ಆದರೆ ಕಂಡವರ ನುಡಿಗಳು ಸಾಕಲ್ಲವೇ ನಂಬುವುದಕ್ಕೆ..?
      ಪರಮ ಸುಖಕೆ ವಿರೋಧವಾಗದಂತೆ ಕ್ಷಣಿಕ ಸುಖವನ್ನು ಅನುಭವಿಸುವುದರಲ್ಲಿ ತಪ್ಪೇನಿಲ್ಲ.

      • Raghavendra Narayana

        ಗುರುಗಳೇ, ಅನ೦ತ ಧನ್ಯವಾದಗಳು, ಅನ೦ತ ಅನ೦ತ ಧನ್ಯವಾದಗಳು.. ಮತ್ತೆ ಮತ್ತೆ ಓದುತ್ತೇನೆ..

        ೧} ಅ} ಜೀವದ ಅವಿಶ್ರಾಂತ ಪ್ರಯಾಣ ಎಲ್ಲಿ ಶುರುವಾಯಿತೋ ”ಅಲ್ಲಿ”. ಆ}ಎಲ್ಲೆಲ್ಲೂ.. ವಿಶೇಷವಾಗಿ ನಮ್ಮೊಳಗೆ .ಇ} ಅನುಭವಿಸಿದವರ ನುಡಿಗಳು..ಅನುಭವಿಸಿದ ಗುರುಗಳ ಅನುಭವ ..ಸ್ವಾನುಭವ..

        ೨}” ಅಲ್ಲಿಯ ” ಹೂರತು ಮತ್ತೆಲ್ಲವೂ ‘ಇಲ್ಲಿ’ ಎನ್ನುವ ಶಬ್ದದ ವ್ಯಾಪ್ತಿಗೆ ಬರುತ್ತದೆ.

        ೪} ಸಾಪೇಕ್ಷ. ನೀವು ಎಲ್ಲಿದ್ದೀರಿ ಮತ್ತು ಗುರಿಯಿಂದ ಎಷ್ಟು ದೂರ ಇದ್ದೀರಿ ಎಂಬುದರ ಮೇಲೆ ಅವಲಂಬಿತ .

        ೫} ಇದು ಅದ್ವೆತಿಯಾದ ಮೇಲಿನ ಮಾತಾಯಿತು.ಅಲ್ಲಿಯವರೆಗೆ ಸಂಸಾರವಿದ್ದೇ ಇದೆ.
        || ವಿನಾ ಅಪರೋಕ್ಷಾನುಭವಂ ಬ್ರಹ್ಮ ಶಬ್ದೈರ್ನಮುಚ್ಯತೆ ||
        – ಶ್ರೀಶಂಕರಾಚಾರ್ಯರು

        ೮}ನಿಜವಾಗಿಯೂ ಸಂಪೂ೯ಣ ಪರಮಾತ್ಮನಿಗೇ ಬಿಡುವುದಿದ್ದರೆ ವಿಚಾರ ಮಾಡಬೇಕಾಗಿಯೇ ಇಲ್ಲ..!

        ೧೨}ಆಕರ್ಷಣೆಯ ಮೂಲವೇ ” ಆನಂದ.. ”ಅದು ಹೆಚ್ಚು ಸಿಗುವುದು ”ಅಲ್ಲಿಯೇ”

      • Raghavendra Narayana

        ಶ್ರೀಶಂಕರಾಚಾರ್ಯರು ಕೆಲವೊ೦ದು ಮಾತುಗಳು, ಮಹಾನ್ ಸಾಧಕರನ್ನು ಬೆತ್ತಲೆ ಮಾಡುತ್ತವೆ, ನಿಜ ಬೆಳಕಿನ ದರ್ಶನ ಮಾಡಿಸುತ್ತವೆ, ಕತ್ತಲೆಯನ್ನು ನೀಗುತ್ತವೆ..

        ಶ್ರೀಶಂಕರಾಚಾರ್ಯರಿಗೂ, ಅವರ ಎಲ್ಲಾ ಕೆಲಸಗಳಿಗೂ ನಾವೆಲ್ಲಾ ಚಿರಋಣಿಗಳು..

        ಪರಮಾತ್ಮ ಚಿ೦ತನೆ ಇಲ್ಲದ ಜೀವನ, ರುಚಿ ಇಲ್ಲದ ಬೋಜನ, ಶೃತಿ ಇಲ್ಲದ ಗಾಯನ….
        ತೃಪ್ತಿ ಇಲ್ಲದ ಮರಣ..

        ರ೦ಗು, ಮಾಯೆಯಲ್ಲಿ ಜಾಸ್ತಿಯೊ, ಪುರುಷನಲ್ಲಿ ಜಾಸ್ತಿಯೊ, ಮಾಯೆ-ಪುರುಷರ ಸಮಪಾಕದಲ್ಲಿ ಜಾಸ್ತಿಯೊ??

  • Sunil Kulkarni

    ಪೂಜ್ಯ ಗುರಗಳೇ,
    ಮೃತ್ಯು(ಸಾವು) ಎಂದರೆ ಹೇಗಿರುತ್ತೆದೆ? ಯಾವಾಗ ಬರುತ್ತದೆ? ಎಂಬುದನ್ನು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಸಾವು ಹೇಗಿರುತ್ತದೆ? ಸಾವು ಬರುವಾಗ ಆಗುವ ಅನುಭವವೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಯಾರು ಸಾಧ್ಯವಿಲ್ಲ. ಏಕೆಂದರೆ ಸಾವನ್ನು ಅನುಭವಿಸಿದವರು ಈ ಪ್ರಶ್ನೆಗೆ ಉತ್ತರಿಸಲು ನಮ್ಮ ಮುಂದೆ ಇರುವುದಿಲ್ಲ. ಆದರೆ ಸಾವಿನ ದವಡೆಗೆ ಹೋದವರ ಅನುಭವ ಚೆನ್ನಾಗಿಲ್ಲ. ಆದರೆ ಸಾವು ಬರುವುದು ನಿಶ್ಚಿತ.
    ಗುರಗಳೇ, ಮನುಷ್ಯ ಈ ಸಾವನ್ನು ಸ್ವೀಕರಿಸುವ ಮನಸ್ಸನ್ನು ಸಿದ್ಧಗೊಳಿಸುವುದು ಹೇಗೆ? ಜೀವನದಲ್ಲಿ ಎಷ್ಟು ಕೆಲಸ-ಕಾರ್ಯಗಳನ್ನು ಮಾಡಿದರೂ ಇನ್ನೂ ಮುಗಿಲಿಲ್ಲ, ಇನ್ನೂ ಮುಗಿಲಿಲ್ಲ ಎಂದೆನ್ನಿಸುತ್ತದೆ. ಹೀಗಿರುವಾಗ, ನಾವು ಬಂದ ಕೆಲಸ ಮುಗಿದಿರುವುದರ ಅನುಭವ ಹೇಗಾಗುವುದು. ಪರೀಕ್ಷೆಯಲ್ಲಿ ೧೦೦ಕ್ಕೆ ೧೦೦ ಅಂಕ ಎಲ್ಲ ವಿದ್ಯಾರ್ಥಿಗಳು ಹೇಗೆ ಪಡೆಯುವುದಿಲ್ಲವೋ, ಹಾಗೆ ಪ್ರತಿಯೊಬ್ಬ ಮನುಷ್ಯ ಈ ಬದುಕು ಎಂಬ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆಯುವುದು ಕಷ್ಟವಲ್ಲವೇ?
    ಮನೆ, ಮಕ್ಕಳು, ಬಂಧುವರ್ಗ, ಮಿತ್ರರು ಹೀಗೆ ಹತ್ತು ಹಲವು ಸಂಬಂಧಗನ್ನು ಜೀವನದುದ್ದಕ್ಕೂ ಕಟ್ಟಿ ಬೆಳಿಸಿರುವ ಮನಸ್ಸಿಗೆ, ಅವೆಲ್ಲವನ್ನು ಬಿಟ್ಟು ನಿರ್ಗಮಿಸಲು ಹೇಗೆ ಮನಸ್ಸು ಸಿದ್ಧಗೊಳಿಸಬೇಕು. ಹೀಗಿರುವಾಗ ಸಾವಿಗೆ ಮನಸ್ಸು ಭಯ ಪಡುವುದು ಸಹಜವಲ್ಲವೇ? ಆ ಮನೋಭಾವನೆಯಿಂದ ಹೊರಗೆ ಬರುವುದು ಹೇಗೆ?

    • http://hareraama.in Sri Samsthana

      ೧೦}ಜೀವನದಲ್ಲಿ ಎಷ್ಟೋ ಕೆಲಸವನ್ನು ಮಾಡಿರಬಹುದು.ಆದರೆ ಯಾವ ಉದ್ದೇಶದಿಂದ ಭೂಮಿಗೆ ಬಂದೆವೂ,ಆ {ಆತ್ಮಸಾಕ್ಷಾತ್ಕಾರದ} ಆ ಕಾರ್ಯವಾಗದಿದ್ದರೆ ಮೃತ್ಯುಭಯ ತಪ್ಪಿದ್ದಲ್ಲ..
      ಆ ಕಾರ್ಯವಾದರೆ ಮೃತ್ಯುಭಯ ಉಳಿಯದು. ಪ್ರತ್ಯೇಕ ಸಿದ್ದತೆಗಳು ಬೇಕಾಗುವುದಿಲ್ಲ.

  • Anuradha Parvathi

    ಹರೆ ರ‍ಾಮ ಗುರುಗಳೆ, ನಮಗಿರೊ ಜವಾಬ್ದಾರಿಗಳು ಮುಗಿಯೊವರೆಗೊ (ಅಥವಾ ಮುಗಿತು ಅನ್ತ ಅನಿಸುವವರೆಗೂ) ನಮಗೆ ಆ ಭಯ ಇರುತ್ತೆ ಅನ್ನಿಸುತ್ತೆ.

    ನನಗೆ ಮೊದಲು ಆ ಭಯ ಇರಲಿಲ್ಲ ಆದರೆ ಈಗ ಮದುವೆ ಆಗಿ ಮಕ್ಕಳಾದ ಮೆಲೆ ಸಾವಿನ ಭಯವಿದೆ.

    Why? Because of attachment? ಹೊರ ಬರುವ ಬಗೆ ಹೇಗೆ?

    • http://hareraama.in Sri Samsthana

      ಪ್ರೀತಿ ತಪ್ಪಲ್ಲ..ಮೋಹ ತಪ್ಪು.
      ಕೂನೆಯಲ್ಲಿ ನಾವು ಎಲ್ಲಿಗೆ ಹೋಗಿ ತಲುಪಬೇಕೋ ಅದನ್ನು ಚೆನ್ನಾಗಿ ಪ್ರೀತಿಸಿದರೆ ಇಲ್ಲಿಂದ ಬಿಟ್ಟು ಹೋಗಲು ಕಷ್ಟವೇನೂ ಆಗುವುದೇ ಇಲ್ಲ.

    • Raghavendra Narayana

      ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ |
      ಆಯಸ೦ಬಡಿಸದವೊಲ೦ತರಾತ್ಮನನು ||
      ಮಾಯೆಯೊಡನಾಡುತ್ತ, ಬೊಮ್ಮನನು ಭಜಿಸುತ್ತ |
      ಆಯುವನು ಸಾಗಿಸೆಲೊ – ಮ೦ಕುತಿಮ್ಮ ||

  • shobha lakshmi

    ಗುರುದೇವಾ…..ನನ್ನ ಬೇಡಿಕೆ…..ಅನಾಯಾಸೇನ ಮರಣ೦….ವಿನಾ ದೈನ್ಯೇನ ಜೀವನ೦…..ಅನುಗ್ರಹಿಸಬೇಕಾಗಿ ಪ್ರಾರ್ಥಿಸುತ್ತಿರುವೆ…..

    • http://hareraama.in Sri Samsthana

      MAY GOD BE WITH YOU..

  • Raghavendra Narayana

    ಮೃತ್ಯುವಿಂ ಭಯವೇಕೆ?
    ——————

    ಮಾಯೆಯ೦ಬಳ ಸೃಜಿಸಿ… ನಾಯಕ ಬ್ರಹ್ಮನ್ ಅನುಯಾಯಿಗಳು ನಾವೆಲ್ಲ.. – ಮ೦ಕುತಿಮ್ಮ
    ಏಕಾ೦ತ ಪೂರ್ಣಾನ೦ದ, ಪರಿಪೂರ್ಣಸುಖವನೆಳಸುವನು.. ಪರಸತ್ತ್ವಶಾ೦ತಿಯಲಿ – ಮ೦ಕುತಿಮ್ಮ

    ಹೆ೦ಗೆಳೆಯರ ಕಣ್ಣಿನ ಕಾ೦ತಿಯ೦ತು, ಮಲ್ಲಿಗೆಯ ಪರಿಮಳದ ಗ೦ಧವೆ೦ತು..
    ಸ೦ಗೀತದ ಗು೦ಗೆ೦ತು, ಪ್ರಿಯ ಬ೦ಧುಗಳ ಸ೦ತೋಷದ ಪರಿಯ೦ತು..
    ನವ ಸತ್ರದ ಅ೦ದ ಚೆ೦ದವೆ೦ತು..
    ಸ್ವಾಗತವೋ ಸ್ವಾಗತ, ಸಡಗರವೋ ಸಡಗರ..

    ಪ೦ಚಭೂತಗಳಲ್ಲಿ ಲೀನವಾಗುವ ಸ೦ಭ್ರಮವೆ೦ತು, ಸ್ವಯ೦ಭುವಿನ ಅನುಭಾವವೆ೦ತು..
    ಪರಮಾತ್ಮನಲ್ಲಿ ಒ೦ದಾಗುವ ಸಾರ್ಥಕತೆಯ೦ತು, ಮಡಿಲಿನ ಮಾರ್ದವತೆಯ೦ತು..
    ಚಿರನಿದ್ರೆಯ ಅನ೦ತ ಶಾ೦ತಿಯ೦ತು..
    ಸ್ವಾಗತವೋ ಸ್ವಾಗತ, ಆನ೦ದವೋ ಆನ೦ದ..

    • http://hareraama.in Sri Samsthana

      ಮೃತ್ಯುವೆಂದರೆ ”ಪುನರ್ನವ”ಅಥವಾ ” ಅಪುನರ್ಭವ ”

  • Sharada Jayagovind

    Samsthana I wonder why the yamakinkara is portrayed as a cruel wrestler riding a buffalo , holding a mace and a rope?
    Religion feeds people with such fearsome negative pictures of death. Who would like to ride on a buffalo with such a horrible guy to Yamaloka?

    sharadakka

    • http://hareraama.in Sri Samsthana

      ಯಮಕಿಂಕರ ಭೇಟಿಯಾಗುವುದು ಪಾಪಿಗಳಿಗೆ ಮಾತ್ರ ಶಾರದಕ್ಕ..
      ಪುಣ್ಯವಂತರನ್ನು ಕರೆಧ್ಯೂಯಲು ದೇವ ದೂತರು ವಿಮಾನದಲ್ಲಿ ಬರುವರು..
      ಪರಮಜ್ಞಾನಿಗಳು ಈ ಎರಡು ವಿಧವಾದ ಗತಿಗಳನ್ನೂ ಮೀರಿ ಪರಮಗತಿಯನ್ನು ಹೊಂದುವರು..

    • http://hareraama.in Sri Samsthana

      ಧರ್ಮವೆಂದರೆ ದರ್ಶನ.. ಶಾರದಕ್ಕ..ಕಲ್ಪನೆ ಅಲ್ಲ.ಮಹರ್ಷಿಗಳು ತಾವು ಕಂಡಿದನ್ನು ಜಗದ ಮುಂದೆ ಇಟ್ಟರು,ಹೊರತು ಯಾವ್ಯಾವುದೋ ಉದ್ದೇಶಗಳನ್ನಿಟ್ಟುಕೊಂಡು ಏನೇನೋ ಕಲ್ಪಿಸಿ ಹೇಳಲಿಲ್ಲ..

  • Sharada Jayagovind

    ಬೆಳಕು ಬೀರಿದ್ದಕ್ಕೆ ಧನ್ಯವಾದಗಳು ಸಂಸ್ಥಾನ.
    You have so clearly explained the difference between literature and revelations. Great!
    ಜೀವನವನ್ನು ದೇವದೂತರ ವಿಮಾನ ಪ್ರಯಾಣ ಸಿಗುವಂತೆ ಬಾಳುವುದು ನಮ್ಮ ಗುರಿ ಆಗಬೇಕು…

  • Anuradha Parvathi

    ಎಲ್ಲಾ ಪ್ರಶ್ನೆಗಳೂ ಹಾಗು ಗುರುಗಳು ಕೊಟ್ಟ ಉತ್ತರಗಳನು ಓದಿದೆ. ಇಂಥ ಗುರುಗಳನ್ಸು ಪಡೆದ ನಾವೆ ಧನ್ಯರು.

  • Nikhil Kulkarni

    Hare Rama Gurugale,

    Gurugale, When we are being sent on work to another place, we clearly know for what work we are going & we will go in that direction only. But here problem comes that we have almost forgotten for which main purpose we are sent here.
    In such a situation, Gurugale, How to know what are our main tasks for which we have been sent to this earth? So that we can with one pointedness strive towards completing those assignments.

    Hare Rama

  • http://hareraama.in/members/rnarayana/ Raghavendra Narayana

    ಆದಿಗುರುವಿನ ಅವಸರವಿ೦ದು ಅರಿವಾಗುತ್ತಿದೆ..?
    ಶಿಶಿರ ವಸ೦ತಗಳು ಕರಗುತ್ತಿವೆ, ಮರಳಾಗುತ್ತಿದೆ, ಬರಡಾಗುತ್ತಿದೆ, ಒ೦ಟಿಯಾಗುತ್ತಿರುವೆ, ಪರಮಾತ್ಮ ನಿನಗ೦ಟದೆ ದಿನ ರಾತ್ರಿಗಳು ಬಳಲುತ್ತಿವೆ, ಸೂರ್ಯ ಮುಳುಗುತ್ತಿದೆ, ಕತ್ತಲು ಕವಿಯುತ್ತಿದೆ, ಮುಟ್ಟಿಲ್ಲ ಹರಿ ಚರಣವ, ಸಿಕ್ಕಿಲ್ಲ ಹರನೊಲುಮೆ, ಬರಿದೇ ಕನಸನು ಕಾಣುತ್ತಿರುವೆ, ಚಿತ್ರ ವಿಚಿತ್ರಗಳು, ಮಾಯಾರಾತ್ರಿಯ ಕಾಲಡಿಯಲ್ಲಿರುವೆ, ಗುರುವೆ ರಕ್ಷಿಸು ಶಿಕ್ಷಿಸು, ಗುರುವೆ ಕೈ ಚಾಚಲೂ ಶಕ್ತಿ ಇಲ್ಲ, ಕಣ್ಣೊಡೆಯಲು ಜ್ಞಾನವಿಲ್ಲ, ಪರಮಾತ್ಮ ನಿನಗ೦ಟದೆ ಶವವಾಗಿಹುದು ಪ್ರಕೃತಿ..
    .
    ಶ್ರೀ ಗುರುಭ್ಯೋ ನಮಃ

  • Jayashree Neeramoole

    ಗುರುಚರಣಗಳಿಗೆ ಅನಂತ ಪ್ರಣಾಮಗಳು.

    ಒಂದು ದಿನ ಸಾವು ಬರುವುದು ಖಂಡಿತ. ಆಯುಸ್ಸಿನ ಎಷ್ಟೋ ಭಾಗವನ್ನು ಈಗಾಗಲೇ ಕಳೆದಾಯಿತು. ಬಂದ ಉದ್ದೇಶವೂ ಗೊತ್ತಿಲ್ಲ…. “ಮನ್ನಿಸಿ ಅನುಗ್ರಹಿಸಿ ದಾರಿ ತೋರಿ ಮುನ್ನಡೆಸಿ” ಎಂದು ಅನುಕ್ಷಣವೂ ಗುರುದೇವನನ್ನು ಪ್ರಾರ್ಥಿಸುತ್ತಾ ….. ಜೀವನವನ್ನು ಸಾರ್ಥಕಪಡಿಸಿಕೊಳ್ಳೋಣ …..

  • http://hareraama.in/members/rnarayana/ Raghavendra Narayana

    ಮೃತ್ಯು ಒಬ್ಬನದೆ ನಿತ್ಯ ನರ್ತನವಿಲ್ಲಿ..
    ಜ್ಞಾನದ ಕುದುರೆ ಏರಿ ಪರಮಾತ್ಮ ಚೇತನವೊ೦ದನ್ನೆ ನೆನೆಯುತ್ತ ನುಗ್ಗುತ್ತಿರುವವರು ಜಿಗಿದು ಮನೋರಥ ಏರಿ ವೇಗದ ತುದಿಯ ಮುಟ್ಟಬೇಕಿದೆ, ವೇದದ ತುದಿಯ ದಾಟಬೇಕಿದೆ..
    ದುರ್ಗೆ ನಮ್ಮನ್ನು ಮುಟ್ಟಬೇಕಿದೆ, ಶ೦ಕರರ ಪಾದ ನಾವು ತೊಳೆಯಬೇಕಿದೆ, ಶಿವನ ಅದ್ವೈತ ಆಲಿ೦ಗನ ದೊರೆಯಬೇಕಿದೆ, ನಾರಾಯಣ ತ೦ದೆಯ ಆಶೀರ್ವಾದ ಆಲಿ೦ಗನ ಸಿಗಬೇಕಿದೆ, ಪರಮಾತ್ಮನ ಚರಣ ನಮ್ಮ ಶಿರವ ಸ್ಪರ್ಶಿಸಬೇಕಿದೆ. ಮೃತ್ಯವೆ೦ಬ ಉತ್ಸವ ಸ೦ತೋಷವಾಗಬೇಕಿದೆ ಸ೦ಪೂರ್ಣವಾಗಬೇಕಿದೆ.
    .
    ಶ್ರೀ ಗುರುಭ್ಯೋ ನಮಃ

    • Jayashree Neeramoole

      ಗುರುಚರಣಗಳಿಗೆ ಅನಂತ ಪ್ರಣಾಮಗಳು

      ಪರಮಾತ್ಮನೇ ನಮ್ಮ ಬಳಿ ಬಂದು ಕಾಯುತಿರುವಾಗ ಇನ್ನೂ ತಡಮಾಡಿದರೆ ಮುಂದೊಂದು ದಿನ ನಾವು ಪಶ್ಚಾತ್ತಾಪ ಪಡಬೇಕಾದೀತು ಅಲ್ಲವೇ?

  • http://hareraama.in/members/rnarayana/ Raghavendra Narayana

    Only God is waiting, nobody else.
    Only God is waiting for me, for you, for anybody and everybody..
    Only thing is we need to be detached from body attachments..
    But body is such a lovely thing, how to detach? but nothing lovelier than God, God is waiting.. the process of detachment is also lovely.. Bless me the fun in this process God, will merge into you like a kid, will merge into you like a fire, let this body burn and become light to path..
    .
    Shri Gurubhyo Namaha

    • Jayashree Neeramoole

      Hare Rama,

      “Detach from body attachments…..”

      Actually we are detaching from unwanted things…. This situation is similar to “a kid resisting to take bath. Once it took bath it will feel the freshness and feel happy” . If we become a small kid near Guru then he will do everything what is required for us.

Powered By Indic IME