ಗುರುಪದ
“ಕೇವಲ ಆಚಮನಾದಿಗಳು ಸ೦ಸ್ಕಾರವಲ್ಲ. ಅವು ದಾರಿ ಮಾತ್ರ. ಕಾಲಕಾಲಕ್ಕೆ ಸ೦ಸ್ಕಾರ ಎ೦ದರೆ ಪರಿಷ್ಕಾರ ಬೇಕು. ಇದು ಗರ್ಭದಿ೦ದಲೇ ಪ್ರಾರ೦ಭವಾಗಬೇಕು. ಉತ್ತಮ ಪ್ರಜಾಸ೦ಪತ್ ಪ್ರಾಪ್ತಿಯೇ ಮನುಷ್ಯಸ೦ಸ್ಕಾರದ ಉದ್ದೇಶ. ಉತ್ತಮ ಸ೦ಸ್ಕಾರದಿ೦ದ ಜೀವಭಾವವಳಿದು ಬ್ರಹ್ಮಭಾವ ಪಡೆಯಲು ಸಾಧ್ಯವಿದೆ. ದೋಷನಿವೃತ್ತಿ ಹಾಗೂ ಗುಣವೃದ್ಧಿಯೇ ಸ೦ಸ್ಕಾರದ ಉದ್ದೇಶ.”
Facebook Comments Box
December 18, 2011 at 12:53 PM
HARERAAMAA,,,,,
GURUDEVAA,,,,,
E SAMSKAARA GARBHANDALE ,,,,,,
INNU ADELLA PADAVA SAMSKARA YAVUDU?
THILSUVIRAAAA
December 18, 2011 at 2:25 PM
ಸಂಸ್ಕಾರದ ಅವಶ್ಯಕತೆ ಶುದ್ಧವಾಗುವುದಕ್ಕೋಸ್ಕರ ಇರುವುದಲ್ಲವೇ?
ಹಾಗಾದರೆ ‘ಆತ್ಮಕ್ಕೆ ಸಂಸ್ಕಾರ ಕೊಡುವುದು’ ಎಂಬ ಮಾತಿದೆ. ಸದಾ ಶುದ್ಧವಾಗಿರುವ ಆತ್ಮಕ್ಕೆ ಸಂಸ್ಕಾರದ ಅವಶ್ಯಕತೆ ಇದೆಯೇ??
ಇದ್ದರೆ, ಅದಕ್ಕೆ ಯಾವ ರೀತಿ ಸಂಸ್ಕಾರ ಕೊಡಬೇಕು?
December 18, 2011 at 6:09 PM
ಹರೇ ರಾಮ !
ವೇದೋಕ್ತ ಪ್ರಧಾನ ವಾದ ಸಂಸ್ಕಾರ ಗಳು ೧೬. ಷೋಡಶ ಸಂಸ್ಕಾರವೆಂದೇ ಪರಿಚಿತ. ಗರ್ಭ, ಶಿಶು ಅಲ್ಲಿಂದ ಆರಂಭ ವಾಗಿ ಅಂತ್ಯಕ್ಕೆ ಸೇರುವ ಮೊದಲು ಕೊಡುವ / ಪಡೆವ ಈ ಸಂಸ್ಕಾರ ಗಳು ಶಶೀರಕ್ಕೆ ಯಾ ಜೀವಕ್ಕೆ ಸೀಮಿತ….ಜ್ನಾನಕ್ಕಾವರಿಸಿರುವ ಮಲ, ವಿಕ್ಷೇಪ ಮತ್ತು ಆವರಣ ಗಳ ಕೊಳೆ ಕಳೆಯಲು ಸಂಸ್ಕಾರಗಳೂ ಸಹಕಾರಿ… ಅಜ್ನಾನ ಕಳಕೊಂಡ, ಜ್ನಾನಾಗ್ನಿ ಕರ್ಮಲೇಪ ವನ್ನು ಭಸ್ಮಮಾಡಿದಾಗ , ಶುಧ್ದವಾದ ಜೀವಾತ್ಮನೇ …. ಶುದ್ಧಾತ್ಮ ..ಪರಮಾತ್ಮ…ಚೈತನ್ಯ… ಸ್ವರೂಪ….ಸಾಕ್ಷಿ….ಏಕ ವಿಶುದ್ಧ ಬೊಧ….ನಿತ್ಯ..ಸನಾತನ…ಸರ್ವವೂ…..
December 19, 2011 at 3:53 PM
Hareraama… dhanyavadagalu
December 18, 2011 at 6:31 PM
ಧನ್ಯವಾದ
December 18, 2011 at 8:04 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಅನನ್ಯ ಭಕ್ತಿ…ನಿಷ್ಕಲ್ಮಶ ಪ್ರೇಮ… ಇವುಗಳೂ ಸಂಸ್ಕಾರವನ್ನು ಪಡೆಯಲಿರುವ ಮಾರ್ಗಗಳಲ್ಲವೇ?
December 19, 2011 at 7:09 PM
ಹರೆರಾಮ
December 21, 2011 at 11:14 AM
ಗುರು ತೋರುವ ದಾರಿಯಲ್ಲಿ ನಡೆದರೆ, ಸದ್ಗುರುವಿಗೆ ಸಂಪೂಣ೯ ಶರಣಾದರೆ ಸಂಸ್ಕಾರಗಳು ಪರಿಷ್ಕಾರಗೊಂಡು ದೋಷನಿವೃತ್ತಿ ಹಾಗೂ ಗುಣವೃದ್ಧಿಯಾಗಿ ಜೀವಭಾವವಳಿದು ಬ್ರಹ್ಮಭಾವ ಪಡೆಯಲು ಸಾಧ್ಯವೆಂದು ನಮ್ಮ ಅಚಲವಾದ ನಂಬಿಕೆ.
December 24, 2011 at 10:00 AM
ಹಳೆಯ ಸಂಸ್ಕಾರಗಳು ಹೊಸತನಕ್ಕೆ ಸಂಸ್ಕಾರಗೊಳ್ಳಲು ಕಾಲಮಾನ ಯಾವುದು ಗುರುಗಳೇ?
December 25, 2011 at 5:49 PM
ಹರೇ ರಾಮ ತಂಡಕ್ಕೆ,
ಹರೇ ರಾಮದ ಹೊಸನೋಟ ಪ್ರಿಯವೆನಿಸಿತು..
ಹುಡುಕಾಡಿ ಹಿದಿಯಲು ಇನ್ನೂ ಸ್ವಲ್ಪ ಹೊತ್ತು ತೆಗೆದುಕೊಳ್ಳಬಹುದೇನೋ? ಚಿಂತೆಯಿಲ್ಲ, ಚೆನ್ನಾಗಿದೆ 🙂
ಇದರಲ್ಲಿ ನನ್ನ account ಕಾಣುತ್ತಿಲ್ಲ.. ಕನ್ನಡದಲ್ಲಿ ಬರೆಯಲೂ ಕಷ್ಟವಾಗುತ್ತಿದೆ.. ಏಕೆ?
December 25, 2011 at 5:56 PM
ಹರೇ ರಾಮ ತಂಡಕ್ಕೆ,
ಹರೇ ರಾಮದ ಹೊಸನೋಟ ಪ್ರಿಯವೆನಿಸಿತು..
ಹುಡುಕಾಡಿ ಹಿದಿಯಲು ಇನ್ನೂ ಸ್ವಲ್ಪ ಹೊತ್ತು ತೆಗೆದುಕೊಳ್ಳಬಹುದೇನೋ? ಚಿಂತೆಯಿಲ್ಲ, ಚೆನ್ನಾಗಿದೆ 🙂
ಇದರಲ್ಲಿ ನನ್ನ account ಕಾಣುತ್ತಿಲ್ಲ.. ಕನ್ನಡದಲ್ಲಿ ಬರೆಯಲೂ ಕಷ್ಟವಾಗುತ್ತಿದೆ.. ಏಕೆ?
December 26, 2011 at 10:31 PM
ತುಂಬಾ ಇಷ್ಟವಾಯಿತು…
January 18, 2012 at 11:40 AM
You are the truth, my ear, eye and my mind,
You are the truth, my love, breath and so on as
I was listening to a song sung by great M S Subbulakshmi
ನಿಜದ ನಿಜ ನೀನಂತೆ
ನಿಜವೆನಗೆ ತೋರ ಬಾರದೆ
ಅಜ ಜನಕ ವಿಜಿತ ಮಾಯ||
ಕಿವಿಯ ಕಿವಿ ನೀನಂತೆ
ಕಂಡಿಲ್ಲ ಮೊರೆ ಕೇಳಿದಂತೆ
ಕವಿವಿನುತ ಗಗನ ಸದೃಷ||
ಕಣ್ಣಿನಾ ಕಣ್ಣಂತೆ
ಕಂಡಿಲ್ಲ ಪರಿಕಂಡ ಭಾವ
ತನುಜಾಕ್ಷ ಲೋಕ ಸಾಕ್ಷಿ||
ಮನದ ಮನ ನೀನಂತೆ
ಅನಿಸಿಲ್ಲ ಮನಕೆ
ನಾ ಬಂದಂತೆ
ಮನದಿನಯ ಅಮಿತ ಮಹಿಮ||
ಪ್ರಾಣದೊಳಗಣ ಪ್ರಾಣ
ಪ್ರಿಯದೊಳಗೆ ಪ್ರಿಯವಂತೆ
ಪ್ರೇಮದ ಕುರುಹೆಲ್ಲಿ ಪ್ರಾಣನಾಥ||
ಕಿವಿಗೊಟ್ಟು ಕಣ್ಣಿಟ್ಟು
ಮನಗೊಂಡು ಮಮಕರಿಸಿ
ಕನಿಕರಿಸು ಸಿರಿದೇವ ನೆನು ಕೇಶವ||
ನಿಜದ ನಿಜ ನೀನಂತೆ
ನಿಜವೆನಗೆ ತೋರ ಬಾರದೆ
ಅಜ ಜನಕ ವಿಜಿತ ಮಾಯ||