ಶ್ರೀಗಳ ನಕಲಿ ಅಶ್ಲೀಲ ಸಿಡಿ ಪ್ರಕರಣ ಹಿಂಪಡೆದಿರುವುದನ್ನು ಖಂಡಿಸಿ

ಬೆಳ್ತ೦ಗಡಿ ತಾಲೂಕು ತಹಶಿಲ್ದಾರರ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ.

ಸರಕಾರದ ನಿರ್ಧಾರಕ್ಕೆ ಸಾತ್ವಿಕ ಪ್ರತಿಭಟನೆ:-

ಶ್ರೀ ರಾಮಚ೦ದ್ರಾಪುರ ಮಠದ ಪೂಜ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಮೇಲೆ ನಕಲಿ ಸಿ.ಡಿ.ಮಾಡಿ ರೆಡ್ ಹ್ಯಾ೦ಡ್ ಸಿಕ್ಘಕಿಕೊ೦ಡ ಅಪರಾಧಿಗಳ ಮೇಲಿನ ಘೋರ ಅಪರಾಧಕ್ಕೆ ಸ೦ಬ೦ಧಿಸಿದ೦ತೆ ಕೋರ್ಟ್ ಕಟ್ಟೆಯಲ್ಲಿ ಅ೦ತಿಮ ಹ೦ತದಲ್ಲಿರುವಾಗಲೇ ಏಕಾಏಕಿಯಾಗಿ ಕೇಸನ್ನು ಹಿ೦ದಕ್ಕೆ ಪಡೆದ ಸರಕಾರದ ಧೋರಣೆಯನ್ನು ಸಾತ್ವಿಕವಾಗಿ ಪ್ರತಿಭಟಿಸಿ ಬೆಳ್ತ೦ಗಡಿಯ ನೂರಾರು ಶ್ರೀ ಮಠದ ಅಭಿಮಾನಿಗಳು ಮಾನ್ಯ ರಾಜ್ಯಪಾಲರಿಗೆ ತಾಲೂಕು ತಹಶಿಲ್ದಾರ ಶ್ರೀ ಪ್ರಸನ್ನ ಮೂರ್ತಿಯವರ ಮೂಲಕ ಮನವಿಯನ್ನು ಸಲ್ಲಿಸಿದರು.ಈ ಮೂಲಕ ಸರಕಾರ ನಕಲಿ ಅಶ್ಲೀಲ ಸಿಡಿ ಪ್ರಕರಣದ ವಾಪಸ್  ಆದೇಶವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಮಾಣಿ ವಲಯದ ಅಧ್ಯಕ್ಷ ಸೊಂದಿ ಶಂಕರನಾರಾಯಣ ಭಟ್, ಕಾರ್ಯದರ್ಶಿ ಮಹಾಲಕ್ಷ್ಮೀ ಭಟ್ ಮಿತ್ತೂರು, ರಾಜಾರಾಮ ಕಾಡೂರು, ಗೋವಿಂದ ಭಟ್ ಮುದ್ರಜೆ, ಸುಬ್ರಹ್ಮಣ್ಯ ಭಟ್ ಬಡೆಕ್ಕಿಲ, ಶಿವಪ್ರಸಾದ್ ಕೈಂತಜೆ, ರಘುರಾಮ್ ಕಂಪದಕೋಡಿ, ಸೀತಾರಾಮ ಭಟ್, ಉಮಾಕಿರಣ್ ಮೊದಲಾದವರು ಸೇರಿದಂತೆ ಮಠದ ನೂರಾರು ಅಭಿಮಾನಿಗಳು ಹಾಜರಿದ್ದರು. 

 

ಬೆಳ್ತ೦ಗಡಿ ತಹಶಿಲ್ದಾರರಿಗೆ ಮನವಿ

ಬೆಳ್ತ೦ಗಡಿ ತಹಶಿಲ್ದಾರರಿಗೆ ಮನವಿ

ಶ್ರೀಗಳ ನಕಲಿ ಅಶ್ಲೀಲ ಸಿಡಿ ಪ್ರಕರಣ : ಬೆಳ್ತ೦ಗಡಿ ತಹಶಿಲ್ದಾರರಿಗೆ ಮನವಿ

ಶ್ರೀಗಳ ನಕಲಿ ಅಶ್ಲೀಲ ಸಿಡಿ ಪ್ರಕರಣ : ಬೆಳ್ತ೦ಗಡಿ ತಹಶಿಲ್ದಾರರಿಗೆ ಮನವಿ

ಸಾತ್ವಿಕ ಪ್ರತಿಭಟನೆ

ಸಾತ್ವಿಕ ಪ್ರತಿಭಟನೆ

ಸಾತ್ವಿಕ ಪ್ರತಿಭಟನೆ

Facebook Comments Box