ಪರೀಕ್ಷೆಯಿಂದ ಅಂತಸತ್ವ ಹೊರಬರುತ್ತದೆ: ಶ್ರೀಸಂಸ್ಥಾನ
ಬೆಂಗಳೂರು : ಪೂಜಿಸಬೇಕಾದ್ದನ್ನು ಪೂಜಿಸದಿದ್ದರೆ, ಗೌರವ ಸಲ್ಲಿಸಬೇಕಾದ್ದಲ್ಲಿ ಗೌರವ ಸಲ್ಲಿಸದೇ ಇದ್ದರೆ ಅನರ್ಥ ನಿಶ್ಚಿತ, ಕಾಮಧೇನುವನ್ನು ಅನಾಧರಿಸಿದ ದಿಲೀಪ ಪರಿತಪಿಸುವಂತಾಯಿತು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದ ಪರಿಸರದಲ್ಲಿ ನಡೆದ “ಗೋಕಥೆ”ಯಲ್ಲಿ ಸಾನ್ನಿಧ್ಯವಹಿಸಿದ ಶ್ರೀಗಳು, ನಂದಿನಿ ಧೇನುವಿನ ರಕ್ಷಣೆಗೆ ಸರ್ವಾರ್ಪಣೆಗೆ ಸಿದ್ದವಾಗಿ, ಗೋಭಕ್ತಿ-ಗುರುಭಕ್ತಿ ಮೆರೆದ ಆದರ್ಶ ರಾಜ ದಿಲೀಪನ ಪ್ರಕರಣವನ್ನು ಪ್ರವಚನ, ಗಾಯನ, ರೂಪಕ, ಚಿತ್ರರಚನೆಗಳಿಂದ ಕೂಡಿದ ವಿಶಿಷ್ಟವಾದ ಗೋಕಥಾ ಕಾರ್ಯಕ್ರಮದಲ್ಲಿ ನಿರೂಪಿಸಿದರು.
ನೋವು ಇಲ್ಲದಿದ್ದರೆ ಜೀವನ ಪೂರ್ಣವಾಗುವುದಿಲ್ಲ, ನೋವು-ನಲಿವು ಸೇರಿದರೆ ಜೀವನ ಪೂರ್ಣವಾಗುತ್ತದೆ. ಹಾಗೆಯೇ, ಸುಖದಿಂದ ಇದ್ದ ಆಯೋಧ್ಯೆಯ ದೊರೆಯ ಜೀವನದಲ್ಲುಮಕ್ಕಳಿಲ್ಲದ ನೋವು ಮನೆಮಾಡಿತು. ದಾರಿಕಾಣದಾದಾಗ ಗುರುವೇ ದಾರಿ ಎಂಬಂತೆ ರಾಜಗುರು ವಸಿಷ್ಠರಲ್ಲಿ ದಿಲೀಪ ತನ್ನನೋವನ್ನು ತೋಡಿಕೊಂಡ. ಸೂರ್ಯವಂಶದ ಭವಿಷ್ಯ ಕತ್ತಲಾಗ
ಲು ಗೋವಿನ ಕುರಿತಾದ ಅನಾಧರವೇ ಕಾರಣ ಎಂದು ಅರಿತ ವಸಿಷ್ಠರು, ನಂದಿನಿ ಧೇನುವಿನ ಸೇವೆಯನ್ನು ಮಾಡಲು ದಿಲೀಪನಿಗೆ ಹೇಳಿದರು.
ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೆ ಯಶಸ್ಸು ಸಾಧ್ಯ, ಅಂತೆಯೇ ದಿಲೀಪನು ಗೋಸೇವೆಯಲ್ಲಿ ತನ್ನನ್ನುಸಂಪೂರ್ಣವಾಗಿ ತೊಡಗಿಸಿಕೊಂಡ. ನಂದಿನೀ ಧೇನುವಿನ ಪ್ರಾಣಕ್ಕೆ ಸಂಚಕಾರ ಎದುರಾದಾಗ, ಹಿಂಜರಿಯದೇ ತನ್ನ ದೇಹಾರ್ಪಣೆಗೆ ಮುಂದಾಗಿ ಗೋಸೇವೆಗೆ ಪರಮಾದರ್ಶವಾದ ಎಂದು ಕಥೆ-ಉಪಕಥೆ, ಗಾಯನಗಳ ಮೂಲಕ ಮನೋಜ್ಞವಾಗಿ ವರ್ಣಿಸಿ, ಪರೀಕ್ಷೆಯಿಂದ ಅಂತಸತ್ವ ಹೊರಬರುತ್ತದೆ ಎಂದು ಶ್ರೀಗಳು ನುಡಿದರು.
ಗೋವಿಗಾದ ಅಪಮಾನದಿಂದ ಸೂರ್ಯವಂಶದ ಭವಿಷ್ಯ ಕತ್ತಲಾಗುವ ಭೀತಿಯಲ್ಲಿತ್ತು, ಎಲ್ಲಿ ತಪ್ಪಗಿರುತ್ತದೆಯೋ, ಅಲ್ಲೇ ಪರಿಹಾರ ಕಂಡುಕೊಳ್ಳಬೇಕು ಎಂಬಂತೆ ಗೋಸೇವೆಯಿಂದ ಸೂರ್ಯವಂಶ ಬೆಳೆಯಿತು. ತಪ್ಪಿಗೆ ಪ್ರಾಯಶ್ಚಿತ್ತ ಪರಿಹಾರ. ಆದರೇ ತಪ್ಪನ್ನೇ ಮಾಡದಿರುವುದು ಜಾಣತನ. ಹಾಗಾಗಿ ನಾವು ಗೋವಿಗೆ ಅನಾಧರವನ್ನು ತೋರದೇ ಗೋವನ್ನು ಸಲಹೋಣ ಎಂದು ಶ್ರೀಗಳು ಕರೆನೀಡಿದರು.
ಕಥೆಯ ನಿರೂಪಣೆಯ ಜೊತೆಜೊತೆಗೆ ಸಂದರ್ಭಕ್ಕೆ ಹೊಂದುವ ಚಿತ್ರಗಳನ್ನು ನೀರ್ನಳ್ಳಿ ಗಣಪತಿ ಹೆಗಡೆ ಮನಮೋಹಕವಾಗಿ ಚಿತ್ರಿಸಿದರು, ಶ್ರೀಪಾದ್ ಭಟ್, ಕುಮಾರಿ ದೀಪಿಕಾ ಹಾಗೂ ತಂಡದ ಗಾಯನ ಕಥೆಯ ಅಂದವನ್ನು ಹೆಚ್ಚಿಸಿತು, ನಂತರ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಸಾರಥ್ಯದಲ್ಲಿ ಮೂಡಿಬಂದ ರೂಪಕ ಜನರ ಮನತಟ್ಟಿತು.
ಗೋಕಥೆಯ ನಂತರ, ಶ್ರೀಗಳು ಹಾಗೂ ಗೋವಿನ ಸಮ್ಮುಖದಲ್ಲಿ ಸೇರಿದ ಸಾವಿರಾರು ಜನರು ಗೋರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು, ಗೋಕುಲಕ್ಕೆ ಒಳಿತಾಗಲೆಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಇದಕ್ಕೂ ಮೊದಲು ಮಧ್ಯಾಹ್ನ ನಡೆದ ಸಭೆಯಲ್ಲಿ ಶ್ರೀಭಾರತೀಪ್ರಕಾಶನವು ಹೊರತಂದಿರುವ ಸಾಧನಾಪಂಚಕ ದೃಶ್ಯಮುದ್ರಿಕೆ ಹಾಗೂ ಗೋನಮನ ಧ್ವನಿಮುದ್ರಿಕೆಯನ್ನು ಪೂಜ್ಯ ಶ್ರೀಗಳು ಲೋಕಾರ್ಪಣೆಗೊಳಿಸಿದರು. ತುಂಬಿದ ಸಭೆ ಗೋಕಥೆಯನ್ನು ಕಣ್ಣುತುಂಬಿಕೊಂಡಿತು. ಶ್ರೀ ಆರ್ ವಿ ಶಾಸ್ತ್ರೀ, ಕೆನರಾ ಬ್ಯಾಂಕ್ ಮಾಜಿ ಅಧ್ಯಕ್ಷರು, ಶ್ರೀ ನಾರಾಯಣ ರೆಡ್ಡಿ, ಸಾವಯವ ಕೃಷಿ ತಜ್ಞರು, ಶ್ರೀಮಠದ ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಚೆನ್ನೈ ವಲಯದ ಪರವಾಗಿ ಕೆನರಾ ಬ್ಯಾಂಕ್ ಮಾಜಿ ನಿರ್ದೇಶಕರಾದ ಭೀಮ ಭಟ್ ಸರ್ವಸೇವೆಯನ್ನು ಸಮರ್ಪಿಸಿದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
01.08.2016ರ ಕಾರ್ಯಕ್ರಮ::
ಬೆಳಗ್ಗೆ 7.00 ಕಾಮಧೇನು ಹವನ
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಅಪರಾಹ್ನ 3.00 : ವೈದಿಕ ಸಮಾವೇಶ
ಗೋಸಂದೇಶ : ಗೋಬ್ರಾಹ್ಮಣ ಹಿತಾಯ ಚ – ವಿದ್ವಾನ್ ಸೂರ್ಯನಾರಾಯಣ ಭಟ್ಟ, ಹಿತ್ಲಳ್ಳಿ ಲೋಕಾರ್ಪಣೆ : ಸಾಮವೇದ ಮಂತ್ರ – ಧ್ವನಿಮುದ್ರಿಕೆ
ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
ಗೋಸೇವಾಪುರಸ್ಕಾರ : ಭಾಜನರು – ವೇ. ಮೂ. ಲಕ್ಷ್ಮೀನಾರಾಯಣ ಭಟ್ಟ ಹಾಳದಕಟ್ಟಾ
ಸುವರ್ಣಾಂಗುಲೀಯಕ ಮತ್ತು ಶ್ರುತಿ ಸಾಗರ ಬಿರುದು ಪ್ರದಾನ : ವೇದಮೂರ್ತಿ ಪಳ್ಳತ್ತಡ್ಕ ಶಂಕರನಾರಾಯಣ
ಭಟ್ಟ ಘನಪಾಠಿಗಳು
ಸಂತ ಸಂದೇಶ : ಪರಮಪೂಜ್ಯ ಸ್ವಾಮಿ ಚಂದ್ರೇಶಾನಂದ ಜೀ, ಸಾಧನ ಮಠ (ರಾಮಕೃಷ್ಣ ವಿವೇಕಾನಂದ ಸಾಧನ
ಕೇಂದ್ರದ ಅಂಗಸಂಸ್ಥೆ), ಸಾಧನಧಾಮ, ಕೆ.ಅರ್. ಪುರಂ, ಬೆಂಗಳೂರು
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ: ೫.೦೦ : ಕಲಾರಾಮ – ಪಿಟೀಲು ವಾದನ : ರೋಹಿಣಿ ಭಟ್ – ತಬಲಾ : ವಿದ್ವಾನ್ ಅನಂತ
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ
Leave a Reply