ಈಗ ಹೆಚ್ಚಾಗಿ ಲಭ್ಯ ಇರುವ ಯಾವುದೇ ಕಂಪನಿಯ ಪ್ಯಾಕೆಟ್ ಹಾಲು, ಮೊಸರು ಮಿಶ್ರತಳಿಗಳದ್ದು, ಹಸು ಮತ್ತು ಎಮ್ಮೆ ಹಾಲು ಮಿಶ್ರವಾಗಿರುವಂಥದ್ದು. ಆರೋಗ್ಯ ಬೇಕೆಂದರೆ ಇಂಥವನ್ನು ಬಳಸಬಾರದು. ಯಾಕೆ ದೇಶೀ ಗೋ ಉತ್ಪನ್ನಗಳನ್ನೇ ಬಳಸಬೇಕು ಎಂಬುದನ್ನು ವೈಜ್ಞಾನಿಕ ವಾಗಿ ಜನರಿಗೆ ಮನದಟ್ಟು ಮಾಡಿಕೊಡುವ ಕೆಲಸ ಆಗಬೇಕು ಎನ್ನುತ್ತಾರೆ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.
ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in )
ದೇಶೀ ಗೋ ಉತ್ಪನ್ನ ಆರೋಗ್ಯಕ್ಕೆ ಸೋಪಾನ
1. ಮಿಶ್ರ ತಳಿಯ ಹಾಲು ಮತ್ತು ಹಾಲಿನುತ್ಪನ್ನಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇದನ್ನು ಅಚಾನಕ್ಕಾಗಿ ನಿಲ್ಲಿಸುವುದು ಹೇಗೆ?
ಅಪ್ಪ ವಿಷ ಕುಡಿತಾ ಇದ್ದರು ಅಂತ ನಾವೂ ಕುಡಿಯಲು ಸಾಧ್ಯವಾ? ಅಥವಾಕೆಲವಾರು ವರ್ಷಗಳಿಂದ ಅನಾರೋಗ್ಯ ಕರ ಆಹಾರ ಸೇವನೆ ಮಾಡುತ್ತಿದ್ದೆ ಅಂತ ಈಗಲೂ ಮಾಡಲು ಸಾಧ್ಯವಾ? ಅದು ಇವತ್ತಿಂದ ಸುರುಮಾಡಲಿ, ಯಾವತ್ತಿಂದ ಸುರು ಮಾಡಲಿ, ಎಷ್ಟು ವರ್ಷದಿಂದಲೇ ನಡೆಯುತ್ತಿರಲಿ. ಒಂದು ಆಹಾರ ಆರೋಗ್ಯಕ್ಕೆ ಹಾಣಿಕರ ಅಂದರೆ ಬಿಡಬೇಕು ಅದನ್ನಾ. ಹಾಗಾಗಿಯೇ ಅದು ಮಿಶ್ರ ತಳಿಯ ಹಾಲಿಗೆ ಕೂಡಲೇ ಅನ್ವಯಸುವಂತಹದು. ಅದು ನಮಗೆ ಆರೋಗ್ಯಕ್ಕೆ ಅತ್ಯಂತ ಹಾನಿಕರ.
2. ಮಿಶ್ರ ತಳಿಗಳಿಂದ ಪರಿಸರದ ಮೇಲಾಗುತ್ತಿರುವ ಪ್ರಭಾವ ಏನು? ಇದನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಹೇಗೆ?
ಜನರಿಗೆ ವೈಜ್ಞಾನಿಕ ಭಾಷೆಯಲ್ಲಿ ತಿಳಿ ಹೇಳಬೇಕು. ಅಂಕಿ ಅಂಶಗಳ ಮೂಲಕವಾಗಿ ವೈಜ್ಞಾನಿಕ ಶೋಧನೆಗಳ ಮೂಲಕವಾಗಿ ರಿಸರ್ಚ್ ಪೇಪರ್ಸ್ ಏನು ಪಬ್ಲಿಷ್ಡ್ ಇದೆ ಅದರ ಮೂಲಕವಾಗಿ ಜನರಿಗೆ ತಿಳಿಸಿ ಹೇಳಬೇಕು. ಮಿಶ್ರ ತಳಿಗಳಿಂದ ಪರಿಸರದ ಮೇಲೆ ಆಗುತ್ತಿರುವ ಪ್ರಭಾವ ಅಂದರೆ ಬಹಳ ಮುಖ್ಯವಾಗಿ ದೇಶೀಯ ತಳಿಗಳನ್ನ ರೀಪ್ಲೆಸ್ ಮಾಡಿ ಬರ್ತಾ ಇರೋದ್ರಿಂದ, ದೇಶೀ ತಳಿಗಳು ಇಲ್ಲ ಅಂತ ಮಾಡಿ ಬರ್ತಾ ಇರೋದ್ರಿಂದ ದೇಶೀ ತಳಿಗಳ ಅಪಾರ ಕೊಡುಗೆಯನ್ನ ಅದು ಧ್ವಂಸ ಮಾಡ್ತಾ ಇದೆ. ನಾಶ ಮಾಡ್ತಾ ಇದೆ. ಮತ್ತೆ ಈ ಬಾಟಲ್ ಹಾಲು ಈ ಪ್ಲಾಸ್ಟಿಕ್ ತೊಟ್ಟೆಗಳ ಹಾಲು ಇದ್ಯಲ್ಲ ಅದು ಮೂಲವಾಗಿ ಮಿಶ್ರ ತಳಿಗಳೇ. ಹಾಗಾಗಿ ಅದು ಇನ್ನೊಂದು ರೀತಿಯಿಂದ. ಇನ್ನೊಂದು ರೀತಿಯಿಂದ ಯೋಚನೆ ಮಾಡಿದ್ರೆ ಪರಿಸರದಿಂದಲೇ ಅವುಗಳಿಗೂ ತುಂಬಾ ತೊಂದರೆ ಆಗ್ತಾ ಇದೆ. ಇಲ್ಲಿಯ ಪರಿಸರ ಅವಕ್ಕೆ ಸೂಟ್ ಆಗುವಂತಹದಲ್ಲ. ಹಾಗಾಗಿ ಈ ಪರಿಸರ ನಮ್ಮ ದೇಶದ ಪರಿಸರ ಆ ಹಸುಗಳಿಗೂ ತೊಂದರೆ ತುಂಬಾ ಅಂತ.
3. ಕ್ಷೀರಕ್ರಾಂತಿಯ ಸಮಯದಿಂದಲೂ ಸರ್ಕಾರಗಳು ಮಿಶ್ರತಳಿಗಳಿಗೆ ಹೆಚ್ಚು ಒತ್ತು ಕೊಟ್ಟು ಇಂದು, ದೇಶಿ ತಳಿಗಳಿಗಿಂತ ಹೆಚ್ಚು ಮಿಶ್ರ ತಳಿಗಳು ನಮ್ಮ ದೇಶದಲ್ಲಿವೆ. ಹೀಗಿರುವಾಗ, ಅದನ್ನು ಬಿಡುವುದಾದರೆ, ಆ ಸಂಕರ ತಳಿಗಳ ಬಳಕೆ/ವ್ಯವಸ್ಥೆ ಹೇಗೆ?
ಈಗಲೂ ಎಲ್ಲಾ ಮಿಶ್ರ ತಳಿಗಳೂ ಕಸಾಯಿಖಾನೆಗೆ ಹೋಗುತ್ತವೆ. ಗಂಡು ಕರು ಹುಟ್ಟಿದ ಕೂಡಲೇ ಕಸಾಯಿಖಾನೆಗೆ ಹೋಗುತ್ತದೆ. ಹೆಣ್ಣು ಕರು ನಾಲ್ಕೈದು ಕರು ಹಾಕಿದ ಮೇಲೆ ಕಸಾಯಿಖಾನೆಗೆ ಹೋಗ್ತದೆ. ನಮ್ಮ ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಅದೇನೆಂದರೆ ನಾಲ್ಕು ಕರು ಹಾಕಿದ ಮೇಲೆ ಆ ಹಸುವನ್ನು ಕಲ್ ಮಾಡಬೇಕು. ಅಂದರೆ ಅದನ್ನು ಕಸಾಯಿಖಾನೆಗೆ ಕಳುಹಿಸಬೇಕು. ಇವುಗಳ ಪರಿಸ್ಥಿತಿ ಏನು ಬದಲಾಗುತ್ತದೆ ಎಂದು ಅನ್ನಿಸುವುದಿಲ್ಲ. ಆದರೂ ನಮ್ಮ ದೃಷ್ಠಿಕೋನದಿಂದ ಮಾನವೀಯ ದೃಷ್ಠಿಕೋನದಿಂದ ನಮ್ಮ ಭಾವದಿಂದ ನೋಡಿದಾಗ ಅವುಗಳನ್ನು ಬಳಕೆ ಮಾಡಬಹುದು. ಉದಾಹರಣೆಗೆ ಅವುಗಳನ್ನು ಇಂಧನ ಉತ್ಪಾದನೆಗೆ ಬಳಕೆ ಮಾಡಬಹುದು. ದೊಡ್ಡ ಪ್ರಮಾಣದಲ್ಲಿ ಇಂಧನವನ್ನು ಉತ್ಪಾದನೆ ಮಾಡುವುದಾದರೆ, ಅವುಗಳನ್ನು ಒಂದು ಅಕಡೆ ಇಟ್ಟು, ಇರುವಷ್ಟನ್ನು ಹೊಸದಾಗಿ ಉತ್ಪಾದನೆ ಮಾಡದೆ, ಇರುವಷ್ಟನ್ನು ಇರುವಲ್ಲಿವರೆಗೆ ಅವುಗಳ ಗೊಬ್ಬರ ಇದರ ಮೂಲಕ ಇಂಧನ ಉತ್ಪಾದನೆ ಮಾಡಬಹುದು. ಅಥವಾ ಅವುಗಳ ಚಲನೆಯ ಮೂಲಕವೂ ವಿದ್ಯುತ್ ಉತ್ಪಾದನೆಗೆ ಪ್ರಯತ್ನ ಮಾಡಬಹುದು.
4. ಗೋರಕ್ಷಣೆಗೆ ಹೊರಟ ಸಂತರನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಸಂತರಿಗೆ ನಿಮ್ಮ ಕರೆ ಏನು ?
ಹೆದರಬೇಡಿ.. ಯಾವುದೇ ಕಾರಣಕ್ಕೂ ಭಯ ಪಡಬೇಡಿ. ಎಂದಿಗೂ ಪ್ರಭು ಶಕ್ತಿಗಿಂತ ಗುರು ಶಕ್ತಿ, ಸಂತ ಶಕ್ತಿ ದೊಡ್ಡದು. ಹಾಗಾಗಿ ಸರ್ಕಾರದ ಗೊಡ್ಡು ಬೆದರಿಕೆಗೆ ಜಗ್ಗದೇ ಗಟ್ಟಿ ನಿಲ್ಲಿ. ಕೊನೆಗೆ ಜಯ ನಿಮ್ಮದೇ.
5. ದೇಶದ ಭವಿಷ್ಯವನ್ನು ರೂಪಿಸುವ ಶ್ರದ್ದೆಯ ವಿದ್ಯಾಲಯಗಳು ಗೋವಿನ ವಿಚಾರಗಳ ಕುರಿತು ಅಸಡ್ಡೆ ಆಲಸಿಕೆ ತೋರುತ್ತಿರುವಲ್ಲಿ ಶಿಕ್ಷಕರಿಗೆ ನಿಮ್ಮ ಸಂದೇಶವೇನು?
ಯಾರದರೂ ವಿದ್ಯಾರ್ಥಿ ಚೆನ್ನಾಗಿ ಓದದಿದ್ದರೆ, ದಡ್ಡನಾದರೆ ಅವನಿಗೆ ದನ ಕಾಯಲು ಹೋಗು ಎಂದು ಬೈಯುವ ಪದ್ದತಿ ಇದೆ. ನಿಜವಾಗಿ ಬೈಗುಳಲ್ಲ ಆಶೀರ್ವಾದ ಅದು. ಅದರ ಅರ್ಥ ಏನೆಂದರೆ ಗೋವಿನ ಸಾನಿಧ್ಯ ಮಾಡಿದರೆ, ಗೋವಿನ ಸೇವೆ ಮಾಡರೆ ಬುದ್ಧಿ ವೃದ್ಧಿಯಾಗುತ್ತದೆ ಅಂತ. ಇದಕ್ಕೆ ಸರಿಯಾದ ಆದಾರಗಳೂ ಉಂಟು. ಸತ್ಯಕಾಮ ಜಾಬಾಲನ ಕಥೆ ಹೇಳ್ತಾರೆ. ಅವನಿಗೆ ಅವನ ಗುರು ಏನೂ ಹೇಳಿಕೊಡಲಿಲ್ಲ. ಅದರ ಬದಲಿಗೆ ಹಸುಗಳನ್ನು ಕೊಟ್ಟು ಒಂದಷ್ಟು, ಒಂದು ಸಾವಿರ ಮಾಡಿ ತಗೊಂಡು ಬಾ ಅಂತ. ಒಂದು ಸಾವಿರ ಮಾಡಿ ಬರುವ ಒಳಗೆ ಗೋವುಗಳೇ ಅವನಿಗೆ ಆಶೀರ್ವಾದ ಮಾಡಿ ಪರಮ ಜ್ಞಾನಿಯಾಗಿ ಮಹಾ ಜ್ಞಾನಿಯಾಗಿ ಮರಳುತ್ತಾನೆ. ಅಂದರೆ ಗೋ ಸೇವೆ ಗೋ ಸಾನಿಧ್ಯ ಮಕ್ಕಳ ಶಿಕ್ಷಣ ವೃದ್ಧಿಗೆ ಕಾರಣ. ಅಂದರೆ ತುಪ್ಪ ಗೋವಿನ ತುಪ್ಪ ಇದೆ. ಆ ತುಪ್ಪ ನೇರವಾಗಿ ಮೇಧಿಯಾಗಿ ಕನ್ವರ್ಟ್ ಆಗುತ್ತದೆ. ಹಾಗಾಗಿ ಅದು ನಮಗೆ ತುಂಬ ನಮ್ಮ ಬುದ್ದಿಮತ್ತೆಯನ್ನು, ಮೇಧಿಯನ್ನು, ಐಕ್ಯುವನ್ನು ಬೆಳೆಸುತ್ತದೆ. ಹಾಗಾಗಿ ನೇರವಾಗಿ ವಿಧ್ಯಾಬ್ಯಾಸಕ್ಕೆ ಗೋ ಸೇವೆ ಸಂದರ್ಭಗಳು ಇದ್ದಾವೆ. ಇನ್ನು ಗೋವಿಲ್ಲದೆ ಬದುಕೇ ಪೂರ್ಣವಲ್ಲ ಯಾವ ಅಂಗವೂ ಪೂರ್ಣವಲ್ಲ. ಹಾಗಾಗಿ ಶಿಕ್ಷಣ ಪೂರ್ಣ ಆಗ್ಲಿಕೆ ಸಾಧ್ಯವೇ ಇಲ್ಲ.
Read Gouvaani E-Magazine: www.gouvaani.in

www.gouvaani.in
Leave a Reply