|| ಹರೇರಾಮ ||
ಋತುರಾಜ ವಸಂತನ ವಿಲಾಸ…!
ಚಿಗುರು ಚೆಲುವಿನ ಚೈತ್ರಮಾಸ…!
ಬೆಳದಿಂಗಳು ಬೆಳೆಯುವ ಶುಕ್ಲಪಕ್ಷ…!
ಇಂದು ನವಮೀ…!
ಅಂತಿಂಥಾ ನವಮಿಯಲ್ಲ…ಶ್ರೀರಾಮನವಮೀ…!
ಸ್ವಯಂ ನಾರಾಯಣನೇ ನರನಾದ ದಿನ…!
ದೊರೆಯ ರೂಪದಲ್ಲಿ ಧರೆಗಿಳಿದ ದೇವರು ಧರೆಯಿಂದ ಸ್ವರ್ಗಕ್ಕೆ ಸೇತುವೆ ಕಟ್ಟಲಾರಂಭಿಸಿದ ದಿನ…!
ಪ್ರಭು ಬರುವುದು ಯುಗಕ್ಕೊಮ್ಮೆ…!
ಈ ದಿನ ಬರುವುದು ವರುಷಕ್ಕೊಮ್ಮೆ…!
ನಿನ್ನೆ ಇರದ, ನಾಳೆ ಬರದ ಈ ದಿನವನ್ನು ಸಾರ್ಥಕಪಡಿಸೋಣ…
ಕಣ್ಮನಗಳನ್ನು ಕದಲದಂತೆ ಕರುಣಾಮೂರ್ತಿಯ ಶ್ರೀಚರಣದಲ್ಲಿರಿಸೋಣ…
|| ಹರೇರಾಮ ||
Facebook Comments Box
March 24, 2010 at 7:48 AM
ಶ್ರೀರಾಮ ನವಮಿಯ೦ದು, ಶ್ರೀರಾಮನ ಜನ್ಮ ದಿನದ೦ದು, ಶ್ರೀರಾಮನಿಗೆ ಹುಟ್ಟಿದ ಹಬ್ಬಕ್ಕೆ ಉಡುಗೊರೆ – ಗು೦ಡಪ್ಪ (ಗಟ್ಟಿಯಪ್ಪ) ಅವರ ಕಗ್ಗದ ಮೂಲಕ.
.
ಪ್ರೀತಿಮಹಿಮೆಯ ಚಿತ್ರರೀತಿಯ೦ ವಾಲ್ಮೀಕಿ |
ನೀತಿಸೂಕ್ಷ್ಮದ ಗಹನಮಾರ್ಗಮ೦ ವ್ಯಾಸರ್ ||
ಗೀತೆಯಲಿ ವಿಶ್ವಜೀವನರಹಸ್ಯ್ವನವರ್ |
ಖ್ಯಾತಿಸಿಹರದು ಕಾವ್ಯ – ಮ೦ಕುತಿಮ್ಮ ||
.
ರಾಮನು೦ ಭರತನು೦ ತಬ್ಬಿಕೊ೦ಡತ್ತ೦ದು |
ಪ್ರೇಮಾಶ್ರುವುಕ್ಕಿ ನದಿಯಾಗಿ ಪರಿದ೦ದು ||
ಸೀಮೆಯ೦ ಮುಟ್ಟಿತಲ ಬಾ೦ದವ್ಯಸೌ೦ದರ್ಯ |
ಕ್ಷೇಮವದು ಜೀವಕ್ಕೆ – ಮ೦ಕುತಿಮ್ಮ ||
.
ತನ್ನ ರುಚಿ ರಾಮರುಚಿ; ತನ್ನ ಸ೦ತುಷ್ಟಿ ಪರಿ- |
ಪೂರ್ಣವಪ್ಪುದು ರಾಮಸ೦ತುಷ್ಟಿಯಿ೦ದೆ ||
ಎನ್ನುವಾ ಸಾಜದಾ ದೈವಾತ್ಮಭಾವದಲಿ |
ಧನ್ಯಳಾದಳು ಶಬರಿ – ಮ೦ಕುತಿಮ್ಮ ||
.
ಜನಕಜೆಯ ದರುಶನದಿನಾಯ್ತು ರಾವಣ ಚಪಲ |
ಕನಕಮೃಗದರುಶನದೆ ಜಾನಕಿಯ ಚಪಲ ||
ಜನವವನ ನಿ೦ದಿಪುದು, ಕನಿಕರಿಪುದಾಕೆಯಲಿ |
ಮನ ಬಗೆಯರಿಯದದು – ಮ೦ಕುತಿಮ್ಮ ||
.
ರಾಮನಿರ್ದ೦ದು ರಾವಣನೊಬ್ಬನಿರ್ದನಲ |
ಭೀಮನಿರ್ದ೦ದು ದುಶ್ಯಾಸನನದೊರ್ವನ್ ||
ಈ ಮಹಿಯೊಳನ್ಯಾಯಕಾರಿಯಿಲ್ಲದುದೆ೦ದು? |
ರಾಮಭಟನಾಗು ನೀ೦ – ಮ೦ಕುತಿಮ್ಮ ||
.
ಘನತತ್ತ್ವವೊ೦ದಕ್ಕೆ ದಿನರಾತ್ರಿ ಮನಸೋತು |
ನೆನೆಯದಿನ್ನೊ೦ದನೆಲ್ಲವ ನೀಡುತದರಾ ||
ಅನುಸ೦ಧಿಯಲಿ ಜೀವಭಾರವನು ಮರೆಯುವುದು |
ಹನುಮ೦ತನುಪದೇಶ – ಮ೦ಕುತಿಮ್ಮ ||
.
ಶ್ರೀರಾಮನಿ೦ದಾಗಿ ಆನೇಕ ಭಕ್ತರು ಹುಟ್ಟಿದರು, ಅನೇಕ ಸಾಧಕರು ಸತ್ತರು (ಮೋಕ್ಷವನ್ನು ಗಳಿಸಿದರು).
ಕದ್ದರೆ ಆನೆಯನ್ನು ಕದಿಯಬೇಕು, ಪಡೆದರೆ ಮೋಕ್ಷವನ್ನು ಪಡೆಯಬೇಕು..
.
ಸರ್ವ ಶಿವ೦.
ಹಬ್ಬದ ಶುಭಾಶಯಗಳು, “ಶಿವರಾಮ” ಎ೦ಬ ಹೆಸರಿರುವವರಿಗೆ ವಿಶೇಷ ಶುಭಾಶಯಗಳು.
ಶಿವ ತತ್ವ ಬೇರೆಯಲ್ಲ, ರಾಮ ತತ್ವ ಬೇರೆಯಲ್ಲ, ಕೃಷ್ಣ ತತ್ವ ಬೇರೆಯಲ್ಲ, ನಾರಾಯಣ ತತ್ವ ಬೇರೆಯಲ್ಲ, ಶ೦ಕರ ತತ್ವ ಬೇರೆಯಲ್ಲ..
ಬೇರೆ ಎ೦ದು ಬಣ್ಣ ಬಳಿದುಕೊ೦ಡು ಕುಣಿದು ಬಸವಿಳಿಯುತ್ತಿರುವ ವೇಷದಾರಿಗಳಿಗೆ – ಶ್ರೀರಾಮ ನಾಮದ ಪಾನಕ, ಮಜ್ಜಿಗೆ, ಕೋಸ೦ಬರಿ ಸ್ವಲ್ಪ ತ೦ಪು ನೀಡಲಿ.
ಸರ್ವ ಶಿವ೦. ಶಿವನೊ ರಾಮನೊ ಶಿವರಾಮನೊ ಸೀತಾರಾಮನೊ ಲಕ್ಷಣರಾಮನೊ ರಾವಣರಾಮನೊ ಶಬರಿರಾಮನೊ ದಶರಥರಾಮನೊ ಸುಗ್ರೀವರಾಮನೊ ಜಟಾಯುರಾಮನೊ ಕೈಕೆರಾಮನೊ ಹನುಮರಾಮನೊ ಕೌಸಲ್ಯರಾಮನೊ ಕೊದ೦ಡರಾಮನೊ ವಾಲ್ಮಿಕಿರಾಮನೊ ಆವರಿಸಲಿ ಮನದಲಿ.
.
ಚೈತ್ರವಾಗಲಿ ಮನದ ಜಗ, ನವಮಿಯ೦ದು ನವ ಚೈತನ್ಯ ಮೂಡಲಿ ಜಗದಿ.
ಸರ್ವ ಶಿವ೦.
March 24, 2010 at 8:57 AM
ಸೌಲಭ್ಯ ಪರಿಪೂರ್ಣಾಯ ಸತ್ವೋದ್ರಿಕ್ತಾಯ ಮಂಗಳಂ……
ಶ್ರೀರಾಮಚಂದ್ರ ಚರಣೌ ಶಿರಸಾ ನಮಾಮಿ.
March 24, 2010 at 9:31 AM
ಶ್ರೀ ರಾಮ ಜಯ ರಾಮ ಜಯ ಜಯ ರಾಮ
March 24, 2010 at 12:58 PM
ಹೇ ರಾಮಾ ….
ನೆಲೆಸು ನೀ ಬೀಜವಾಗೆನ್ನ ಮನದೊಳಗೆ
ಅರಳುವಂತೆ ಭಾವ ಶುದ್ಧ
ಹೂವುಗಳು ನಿನ್ನರ್ಚನೆಗಾಗಿ….
March 25, 2010 at 6:55 AM
“ವಾಕ್ಸಿದ್ದಿಯುಳ್ಳವರು ಕೋಟ್ಯಾನುಕೋಟಿ
ಮನೋರಥ ಸಿದ್ದಿಯುಳ್ಳವರು ಕೋಟ್ಯಾನುಕೋಟಿ
ಭಾವಸಿದ್ದಿಯುಳ್ಳವರು ಕೋಟ್ಯಾನುಕೋಟಿ
ನಿಮ್ಮ ಸಿದ್ದಿಯುಳ್ಳವರು ಇಲ್ಲ ಕ೦ಡಯ್ಯಾ
ಕಪಿಲಸಿದ್ದ ಮಲ್ಲಿಕಾರ್ಜುನಾ !”